ವಿಷಯದ ವಿವರಗಳಿಗೆ ದಾಟಿರಿ

Posts tagged ‘ಟಿಪ್ಪು ಜಯಂತಿ’

7
ನವೆಂ

ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ

– ಸಂತೋಷ್ ತಮ್ಮಯ್ಯ

ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ. ಮತ್ತಷ್ಟು ಓದು »

27
ಆಕ್ಟೋ

ಕ್ರೂರಿಯೇ ನಮ್ಮ ನಾಡಿನ ಆದರ್ಶ ವ್ಯಕ್ತಿಯಾಗಬೇಕೆ ?

– ಡ್ಯಾನಿ ಪಿರೇರಾ

ಭಾರತದ ಇತಿಹಾಸದುದ್ದಕ್ಕೂ ವಿವಾದಾತ್ಮಕ ವ್ಯಕ್ತಿಗಳನ್ನು ಈ ರಾಷ್ಟ್ರದ ಜನಮಾನಸದಲ್ಲಿ ಸರ್ವಮಾನ್ಯ ಮಾಡಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಬದಲಾದ ವ್ಯವಸ್ಥೆಯಲ್ಲಿ ಆಳುವವರ ಮರ್ಜಿಗೆ ಸಿಲುಕಿದ ಇತಿಹಾಸಕಾರರು ಮಿಥ್ಯೆಯನ್ನು ಸತ್ಯವೆಂದು ತುರುಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಿದ್ಧಾಂತಗಳ ಮೂಸೆಯಲ್ಲಿ ದೇಶಭಕ್ತರು ಖಳನಾಯಕರಾದರೆ, ಖಳನಾಯಕರು ಬೆಳಗಾಗುವದರೊಳಗೆ ದೇಶಭಕ್ತರಾಗಿ ರೂಪಾಂತರಗೊಂಡಿದ್ದಾರೆ! ಈ ಹಿನ್ನೆಲೆಯಲ್ಲಿ ಎಂದಿನಂತೆ ಟಿಪ್ಪು ಜಯಂತಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಲವರಿಗೆ ಟಿಪ್ಪು ಜಾತ್ಯತೀತ ಮತ್ತೆ ಕೆಲವರಿಗೆ ಮತಾಂಧನಾಗಿ ಗೋಚರಿಸುತ್ತಿದ್ದಾನೆ. ಈ ದೇಶದ ವಿಚಿತ್ರವೇನೆಂದರೆ ಈ ದೇಶದಲ್ಲಿ ಮುಸಲ್ಮಾನರಲ್ಲೇ ಈ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟ ಮಹನೀಯರಿದ್ದಾರೆ. ಅವರ್ಯಾರನ್ನೂ ಈ ಸಮಾಜ ಧರ್ಮದ ಹೆಸರಲ್ಲಿ ಗುರುತಿಸುವುದಿಲ್ಲ. ಅವರು ಇಸ್ಲಾಂ ಚಿಂತನೆಗಳೊಂದಿಗೆ ಬೆಳೆದರೂ ಬೆಳೆ ಬೆಳೆದಂತೆ ಅವರ ವಾಸ್ತವ ಬದುಕಿನ ತಮ್ಮ ಪ್ರಪಂಚವನ್ನು ವಿಶಾಲಗೊಳಿಸಿದ್ದರಿಂದ ಮುಸ್ಲೀಮೇತರರಲ್ಲೂ ಅವರು ಆದರಣೀಯರಾಗಿದ್ದಾರೆ. ದುರ್ದೈವವೆಂದರೆ ಅವರು ಹುಟ್ಟಿದ ಸಮಾಜದಲ್ಲೇ ಕಡೆಗಣಿಸಲ್ಪಟ್ಟಿರುವುದರಿಂದ ಈ ದೇಶದ ಸೆಕ್ಯುಲರ್ ಪಟ್ಟಿಯಲ್ಲಿ ಅವರಿಗೆ ಮಹತ್ವದ ಸ್ಥಾನವಿಲ್ಲ. ಮತ್ತಷ್ಟು ಓದು »

7
ನವೆಂ

ಟಿಪ್ಪು ಜಯಂತಿ ಬೇಕಿರುವುದು ಯಾರಿಗೆ ?

– ರೋಹಿತ್ ಚಕ್ರತೀರ್ಥ

dsc8476_tipu_sultan_mಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು ಸಂದಾಯವಾಗಿದ್ದವು. ಆ ಕಚೇರಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ; ಇದ್ದೊಂದು ಕೊಳ ಒಡೆದುಹೋಗಿ ಆರು ತಿಂಗಳ ಮೇಲಾಯಿತು; ಗೋಡೆಗೆ ಸುಣ್ಣಬಣ್ಣ ಹೊಡೆಸದೆ ನಾಲ್ಕು ವರ್ಷಗಳಾಗುತ್ತ ಬಂತು; ಊರಿನಲ್ಲೊಂದು ಸಣ್ಣ ಸಂಕ ಕಟ್ಟಿಸಬೇಕೆಂದು ಬೇಡಿಕೆ ಇಟ್ಟೂ ಇಟ್ಟೂ ಅರ್ಜಿ ಕೊಟ್ಟೂ ಕೊಟ್ಟೂ ಬೇಸತ್ತು ಕೊನೆಗೆ ಊರವರೇ ಒಂದಷ್ಟು ದುಡ್ಡು ಹಾಕಿ ಏನೋ ತಮ್ಮ ಸಂಕ ತಾವೇ ಕಟ್ಟಿಕೊಂಡಿದ್ದಾರೆ. ಆ ತಾಲೂಕಿನ ಕೆಲವು ರಸ್ತೆಗಳಿಗೆ ಒಂದೊಮ್ಮೆ ಓಬೀರಾಯನ ಕಾಲದಲ್ಲಿ ಜಲ್ಲಿ ಹೊಡೆಸಿದ್ದು, ಅದೀಗ ಡಾಂಬರಿಗೆ ಅನುದಾನ ಸಿಗದೆ ಮತ್ತೆ ಮಣ್ಣಿನ ರಸ್ತೆಯಾಗುವ ಸ್ಥಿತಿಗೆ ಬಂದಿದೆ. ಮತ್ತಷ್ಟು ಓದು »

3
ನವೆಂ

ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ…?

– ಸಂತೋಷಕುಮಾರ ಮೆಹೆಂದಳೆ.

dsc8476_tipu_sultan_m( ಬುದ್ಧಿಜೀವಿಗಳು ಆಳುವವರನ್ನು ಮೆಚ್ಚಿಸಲು ಬರೆದ ಲೇಖನಗಳನ್ನು ನಾನು ನೋಡಿದ್ದೇನೆ. ಟಿಪ್ಪು ರಾಕೇಟ್ ಹಾರಿಸಿದ, ಟಿಪ್ಪು ತನ್ನ ಮಕ್ಕಳನ್ನು ಬಲಿಕೊಟ್ಟ ಎನ್ನುವವರಿಗೆ, ಸಾಲುಸಾಲಾಗಿ ತಮ್ಮ ಗಂಡಂದಿರನ್ನೇ ಇವತ್ತು ಕಾಶ್ಮೀರ ಗಡಿಯಲ್ಲಿ ನಮ್ಮ ಮಹಿಳೆಯರು ತ್ಯಾಗಮಾಡುತ್ತಿದ್ದರೆ, ಅವರ ಮಕ್ಕಳು ಅಪ್ಪನ ಹೆಣಕ್ಕೆ ಸೆಲ್ಯೂಟ್ ಹೋಡೆದು `..ಜೈ ಹಿಂದ್..’ ಎಂದು ಕಿರುಚುತ್ತಾ ಕಣ್ಣೀರು ಹಾಕುತ್ತವಲ್ಲ ಅದು ಯಾವನಿಗೂ ಕಾಣುತ್ತಲೇ ಇಲ್ಲವಲ್ಲ. )

ಇಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ ಸಿಹಿ, ಮಾಂಸಾಹಾರಿಗಳಾಗಿದ್ದರೆ ಕೊನೆಯ ದಿನ ಬಾಡೂಟ ಹಾಕಿಸಿ ಹಿಂದಿನ ಇದ್ದಬದ್ದ ಕಹಿಯನ್ನೂ ಮರೆಯುವ ಸಂಪ್ರದಾಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಗಮನಿಸಿಯೇ ನಮ್ಮ ನಮ್ಮಲ್ಲಿ ಆಯಾ ಕಾಲವಾರು ಮತ್ತು ಸಾಮಾಜಿಕ ನಡವಳಿಕೆ ಜಾತಿ ಧರ್ಮಾಧಾರಿತ ಆಚರಣೆಗಳು ಬೆಳಕಿಗೆ ಬಂದವು. ಮತ್ತಷ್ಟು ಓದು »

25
ಫೆಬ್ರ

ಟಿಪ್ಪು ಜಯಂತಿಗೆ ಕೊಡವರ ಭರ್ಜರಿ ಗಿಫ್ಟ್ “ಕಾಂಗ್ರೆಸ್ ಮುಕ್ತ ಕೊಡಗು”

– ಅನಿರುದ್ಧ ಎಸ್.ಆರ್ , ಭದ್ರಾವತಿ

BJP Wಕೋಮುವಾದಿ”ಗಳಿಗೆ ಕೊಡವರ ಗಿಫ್ಟ್ – ಓಲೈಕೆ ರಾಜಕಾರಣವೆಂಬ ರಕ್ತ ಬೀಜಾಸುರನ ಸಂಹಾರ ಆರಂಭ

ಓಲೈಕೆ ರಾಜಕಾರಣ ಎಂಬ ರಕ್ತಬೀಜಾಸುರನನ್ನು ಸ್ವಚ್ಛಂದವಾಗಿ ಬೆಳೆಸಿ, ಒಡೆದಾಳುವ ನೀತಿಯೇ ತಮ್ಮ ಧ್ಯೇಯವೆಂಬಂತೆ ನಡೆದುಕೊಂಡು ಬರುತ್ತಿರುವ ನೆಹರೂ ಕುಟುಂಬ ಅಂದರೆ ಸೋ ಕಾಲ್ಡ್ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ರಾಷ್ಟ್ರ ರಾಜಕಾರಣದಲ್ಲಿ ಎಬ್ಬಿಸಿರುವ ಹೊಲಸನ್ನು ತೊಳೆಯಲು ಇನ್ನೆಷ್ಟು ದಶಕಗಳು ಬೇಕೋ. ಆದರೆ, ತನ್ನ ಸ್ವಾರ್ಥಕ್ಕಾಗಿ ಅಮಾಯಕರನ್ನು ಬಲಿ ಕೊಡುವ, ಅಸಹಾಕಯಕರನ್ನೇ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಇವರ ಪರಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಮಾನ ಮೂರಾಬಟ್ಟೆಯಾಗಿದೆ.

ಆರಂಭದಲ್ಲಿ ಹೇಳಿದ ರಕ್ತಬೀಜಾಸುರನ ಪ್ರಸ್ತಾಪಕ್ಕೆ ಉದಾಹರಣೆ ಟಿಪ್ಪು ಜಯಂತಿಯ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಮೆರವಣಿಗೆ ಹಾಗೂ ಅದರ ಮೂರ್ತ ರೂಪ ಗಲಭೆ. ಹಿಂದೂ ಸಂಘಟನೆ ಹಾಗೂ ರಾಜ್ಯದ ನಾಗರಿಕರ ತೀವ್ಯ ವಿರೋಧದ ನಡೆವೆಯೂ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿಗೆ ಅನುಮತಿ ನೀಡಿದ ಸಿದ್ಧರಾಮಯ್ಯ ಸರ್ಕಾರದ ನೀಚ ಕೃತ್ಯಕ್ಕೆ ವಿಎಚ್ ಪಿ ಮುಖಂಡ ದೇವದಂಡ ಕುಟ್ಟಪ್ಪ ಬಲಿಯಾಗಿದ್ದರು. ಅಂದು ನಡೆದ ಗಲಭೆಯಲ್ಲಿ ಎಲ್ಲಿಂದಲೋ ಬಂದವರು ಅಟ್ಟಹಾಸ ಮೆರೆದು, ತಮ್ಮ ವಿಕೃತ ಮನಸ್ಥಿತಿಯ ಸುಖಕ್ಕಾಗಿ ಅಮಾಯಕನನ್ನು ಕೊಂದರು. ಪ್ರಕರಣ ಕುರಿತಂತೆ ಇತ್ತೀಚಿಗೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಕುಟ್ಟಪ್ಪ ಸಾವು ಆಕಸ್ಮಿಕವಲ್ಲ ಕೊಲೆ ಎನ್ನುವುದನ್ನು ಸ್ಪಷ್ಟೀಕರಿಸಿದ್ದರು.

ಮತ್ತಷ್ಟು ಓದು »

28
ನವೆಂ

ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ

– ರಾಕೇಶ್ ಶೆಟ್ಟಿ

ಸಿ(ನಿ)ದ್ರಾಮಯ್ಯ೨೦೧೩ರಲ್ಲಿ ಕೇಂದ್ರದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತಿದ್ದ ಯುಪಿಎ ಸರ್ಕಾರ,ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಶುರು ಮಾಡುತ್ತೇವೆ ಎಂಬ ಪುಡಿ ಓಟ್ ಬ್ಯಾಕ್ ರಾಜಕೀಯ ಶುರು ಮಾಡಿತ್ತು.ಅದಕ್ಕೆ ಪ್ರಬಲವಾದ ವಿರೋಧದ ಅಲೆಯೆದ್ದಿತ್ತು.ಆ ಸಮಯದಲ್ಲಿ  “ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?” ಎಂದು ಲೇಖನವೊಂದನ್ನು ಬರೆದಿದ್ದೆ. ೨೦೧೪ರ ಚುನಾವಣೆಯ ನಂತರ ಯುಪಿಎ ಸರ್ಕಾರದಂತೇ,ಅವರ ಸಮಾಜ ವಿಭಜನೆಯ ಯೋಜನೆಗಳೂ ಕಸದ ಬುಟ್ಟಿ ಸೇರಿದ್ದು ಇತಿಹಾಸ.

ಆಗ ಟಿಪ್ಪುವಿನ ಮೂಲಕ ಕರ್ನಾಟಕದಲ್ಲಿ ಅಶಾಂತಿಯೆಬ್ಬಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿರಲಿಲ್ಲ.ಆದರೆ ಇತ್ತೀಚೆಗೆ ಸರ್ಕಾರವೇ ಮುಂದೆ ನಿಂತು ಟಿಪ್ಪುಸುಲ್ತಾನನ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತಂದಿತು. ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು.ಈ ಹಿಂದೆ ನಾವೆಲ್ಲ ತುಘಲಕ್ ದರ್ಬಾರಿನ ಬಗ್ಗೆ ಓದಿದ್ದೆವು,ಈಗ ಕಣ್ಣಾರೆ ನೋಡುವಂತಾಗಿದೆಯಷ್ಟೇ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಹಳಷ್ಟು ನಿರೀಕ್ಷೆಗಳಿದ್ದವು.ಆ ನಿರೀಕ್ಷೆಗಳಿಗೆಲ್ಲ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಸಾಕ್ಷಿಯಾಗಿದ್ದವು.ಈ ಬಾರಿ ಮುಖ್ಯಮಂತ್ರಿಯಾಗುವ ಮೊದಲೇ ತಮ್ಮ ಸುತ್ತ ಪರಾವಲಂಬಿ ಸೆಕ್ಯುಲರ್ ಬುದ್ಧಿಜೀವಿಗಳ ಸಮೂಹವೊಂದನ್ನು ಕಟ್ಟಿಕೊಂಡೇ ಪಟ್ಟಕ್ಕೇರಿದರು.ಪಟ್ಟಕ್ಕೇರಿದ ದಿನವೇ ಅನ್ನಭಾಗ್ಯದ ಘೋಷಣೆ ಮಾಡಿದರು.ಆ ಯೋಜನೆಯಿಂದ ಬಡವರಿಗೇನೋ ಅನ್ನ ಸಿಕ್ಕುತ್ತಿರುವುದು ನಿಜವೇ.ಆದರೆ,ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಆಗಿರುವ ಅನಾಹುತಗಳೇ ಹೆಚ್ಚು.ಸುಲಭವಾಗಿ ಸಿಗುವಾಗ ಕಷ್ಟವೇಕೆ ಪಡಬೇಕು ಎಂಬುದು ಜನರ ಸ್ವಾಭಾವಿಕ ನಿಲುವಾಗಿರುತ್ತದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾಗಿದ್ದ ಸರ್ಕಾರ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವಂತೆ ಮಾಡುತ್ತಿದೆ.
ಮತ್ತಷ್ಟು ಓದು »