ವಿಷಯದ ವಿವರಗಳಿಗೆ ದಾಟಿರಿ

Posts tagged ‘ಟಿಪ್ಪು’

25
ಮಾರ್ಚ್

ಕೇರಳ ವರ್ಮ ಪಳಸಿ ರಾಜ.

– ವರುಣ್ ಕುಮಾರ್

(ವಾರಕ್ಕೊಂದು ವೀರರು)

220px-Veera_Kerala_Varma_Pazhassi_Raja೧೭೯೭, ಕೇರಳದ ವಯನಾಡಿನ ಪೆರಿಯಪಾಸ್ ಎಂಬ ಪ್ರದೇಶವನ್ನು ಬ್ರಿಟೀಷ್ ಕರ್ನಲ್ ಡೋ ಮತ್ತು ತುಕಡಿಯು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಕಾಡಿನ ಮಧ್ಯೆ ಪಯಣವನ್ನು ಮುಂದುವರೆಸಿದರು. ಆದರೆ ಅಂತಹ ದಟ್ಟ ಅರಣ್ಯವಾದಲ್ಲಿ ಒಂದು ಸಣ್ಣ ಶಬ್ದ ಕೇಳಿ ಬಂದರೂ ಎಂತಹವರ ಎದೆಯನ್ನು ಒಂದು ಕ್ಷಣ ನಡುಗಿಸದೇ ಬಿಡದು. ಅಂತಹ ಭಯ ಕರ್ನಲ್ ಡೋ ಅವನಲ್ಲಿಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಕೇರಳದ ಸಿಂಹದ ಬಗ್ಗೆ ಭಯವಿತ್ತು. ಇಂತಹ ಭಯದಲ್ಲಿ ಮುಂದುವರೆಯುತ್ತಿರುವಾಗ ಅನಿರೀಕ್ಷಿತವಾದ ದಾಳಿ ತನ್ನ ತಂಡದ ಮೇಲೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ನೂರಕ್ಕೂ ಅಧಿಕ ತನ್ನ ಸೈನಿಕರನ್ನು ಕರ್ನಲ್ ಕಳೆದುಕೊಂಡನು. ‌ಈ ಭಯಂಕರ ಕಾದಾಟದಲ್ಲಿ ೩೦೦ಕ್ಕೂ ಮಿಕ್ಕಿ ಸೈನಿಕರು ಗಾಯಾಳಾದರು. ದಾಳಿ ನಡೆಸಿದ ತಂಡ ಬ್ರಿಟೀಷರಿಗೆ ದಾಳಿ ಎಲ್ಲಿಂದ ನಡೆಯುತ್ತಿದೆ ಎಂಬ ಸಣ್ಣ ಊಹೆಯೂ ಸಿಗದ ರೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿದ್ದರು. ದೇಶಾದ್ಯಂತ ಆನೆ ನಡೆದಿದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯಕ್ಕೆ ದೊರೆತ ದೊಡ್ಡ ಮರ್ಮಾಘಾತವಾಗಿತ್ತು. ಈ ರೀತಿ ಗೆರಿಲ್ಲಾ ಮಾದರಿ ದಾಳಿಯನ್ನು ರೂಪಿಸಿ ಬ್ರಿಟೀಷರ ಬೆನ್ನೆಲುಬಲ್ಲಿ ಚಳುಕು ಹುಟ್ಟಿಸಿದ ವೀರ ಕೇರಳದ ಸಿಂಹ ಕೇರಳ ವರ್ಮ ಪಳಸಿ ರಾಜ. ಮತ್ತಷ್ಟು ಓದು »

7
ನವೆಂ

ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈಬಿಡಲಿದೆಯೋ…?

– ಸಂತೋಷಕುಮಾರ ಮೆಹೆಂದಳೆ. ಕೈಗಾ 

dsc8476_tipu_sultan_m
( ನಾನು ನನ್ನ ಸಮಾಜ ಮತ್ತು ಧರ್ಮಾಧಾರಿತ ವೃತ್ತದಲ್ಲಿ ನನ್ನ ಹಿರಿಮೆಯನ್ನು ಸ್ಥಾಪಿಸಿಕೊಳ್ಳುವುದು ಹೇಗೆ..? ಇನ್ನೊಂದು ಧರ್ಮವನ್ನು ಮುಗಿಸಿ ಹಾಕುವುದರ ಮೂಲಕ. ಇದು ಸುಲಭದ ದಾರಿ ಮತ್ತು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಟಿಪ್ಪು ಮಾಡಿದ್ದೂ ಅದೇ. ಅನಾಮತ್ತಾಗಿ ಲಕ್ಷಗಟ್ಟಲೇ ಹಿಂದೂಗಳನ್ನು ವರ್ಷವಧಿಯೊಳಗೆ ಮುಗಿಸಿ ಹಾಕಿ, ಕೊಡವರ ಒಂದು ತಲೆಮಾರನ್ನೇ ನಿರ್ನಾಮ ಮಾಡಿ, ಅದನ್ನು ಸಾಧನೆ ಎಂಬಂತೆ ಪತ್ರಗಳ ಮೂಲಕ ಪ್ರಚುರಪಡಿಸಿದ ಕೂಡಾ. ಆದರೆ ಇವತ್ತಿಗೂ ಅವನ ಭಜನೆ ಮಾಡುತ್ತಿರುವ ಭಟ್ಟಂಗಿಗಳಿಗೆ ತಾವೂ ಮುಂದೊಮ್ಮೆ ಇಂತಹದ್ದೇ ಪರಿಸ್ಥಿತಿಗೆ ಈಡಾಗಲಿದ್ದೇವೆ ಎನ್ನುವ ಅರಿವಾದರೂ ಬೇಡವಾ…? )   ಮತ್ತಷ್ಟು ಓದು »

30
ಆಕ್ಟೋ

ದೀಪಾವಳಿಯ ಬೆಳಕಿಗೆ ಶಾಶ್ವತ ಕತ್ತಲೆ ತುಂಬಿದ ಸೈತಾನ

– ಸಂತೋಷ್ ತಮ್ಮಯ್ಯ

dsc8476_tipu_sultan_mಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮತ್ತಷ್ಟು ಓದು »

14
ಮಾರ್ಚ್

ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ

– ಸಂತೋಶ್ ತಮ್ಮಯ್ಯ

Pratap Simha's bookಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.

ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.

ಮತ್ತಷ್ಟು ಓದು »