ದೇಶ ಹಾಳಾದರೂ ‘ಅವರಿಗೆ’ ನೋವಾಗಬಾರದು ನೋಡಿ
– ಅಜಿತ್ ಶೆಟ್ಟಿ ಹೆರಂಜೆ
ಇವತ್ತು ಇಡೀ ವಿಶ್ವ ಕೊರೋನಾ ಮಹಾ ಮಾರಿಯ ವಿರುದ್ಧ ಯುದ್ಧ ಮಾಡುತ್ತಿದೆ.ವಿಶ್ವದ ದಿಗ್ಗಜ ರಾಷ್ಟ್ರಗಳೇ ಇದರ ವಿರುದ್ದ ಮಂಡಿಯೂರಿ ಕುಳಿತಿವೆ. ರೋಗದ ಪಸರುವಿಕೆ ಮತ್ತು ರೋಗದಿಂದ ಆಗುತ್ತಿರುವ ಸಾವು ಇವೆರಡನ್ನು ತಹಬಂದಗಿ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹಾ ಸಮಯದಲ್ಲಿ ಭಾರತ ಈ ಮಹಾಮಾರಿಯ ವಿರುದ್ಧ ಸಮರ್ಥವಾಗಿ ಸೆಣಸುತ್ತಿದೆ. ಇದು ಸಾಧ್ಯವಾಗಿದ್ದು ಮೋದಿಯವರ ಸಮರ್ಥ ನಾಯಕತ್ವದ ಜೊತೆಗೆ ಮೋದಿಯಂತಹ ನಾಯಕನಿಗೆ ಹೆಗಲಿಗೆ ಹೆಗಲು ಕೊಟ್ಟು ನೆಡೆಯುತ್ತಿರುವ ಬಹುಸಂಖ್ಯಾತ ಭಾರತಿಯರು ಸಹಕಾರದಿಂದ, ಇವರು ಪ್ರದರ್ಶನ ಮಾಡತ್ತಿರುವ ಸಾಮಾಜಿಕ ಬದ್ದತೆಯಿಂದಾಗಿ ಇದು ಸಾಧ್ಯವಾಗಿದ್ದು. ಎಲ್ಲದರಲ್ಲೂ ತಾನು ದೊಡ್ಡವ ಎನ್ನುವ ಅಮೇರಿಕಾದಲ್ಲಿ ಜನ ಲಾಕ್ ಡೌನ್ ಗೆ ಸಮ್ಮತಿಸುತ್ತಿಲ್ಲ. ಅಲ್ಲಿಯ ನಾಗರೀಕರಿಗೆ ತಮ್ಮ ಉದ್ಯೋಗ ಮತ್ತು ಹಣದ ಚಿಂತೆ ಬಿಟ್ಟರೆ, ಸಮಾಜ ಹಾಗು ದೇಶದ ಬಗ್ಗೆ ಯಾವುದೆ ಬದ್ದತೆ ಇದ್ದಂತೆ ತೋರುತ್ತಿಲ್ಲ. ಬಹುಶಃ ಇದೆ ಕಾರಣಕ್ಕೆ ಇವತ್ತು ಅಮೇರಿಕಾದಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಇರುವುದು ಮತ್ತು ಸಾವು ಆಗಿರೋದು.
ತಬ್ಲಿಕಿ ಜಮಾತ್ ಕೊಟ್ಟ ಉಪಟಳದ ಮಧ್ಯೆಯೂ, ಕೊರೋನಾ ಸಮಸ್ಯೆಯನ್ನು ಭಾರತ ಇಲ್ಲಿಯ ತನಕ ಸಮರ್ಥವಾಗಿಯೇ ಎದುರಿಸುತ್ತಿದೆ. ಭಾರತದ ಬಹುಸಂಖ್ಯಾತ ಹಿಂದುಗಳೇ ಇರಲಿ ಅಥವ ಅಲ್ಪಸಂಖ್ಯಾತರಾದ ಸಿಖ್,ಜೈನ,ಬೌದ್ಧ,ಕ್ರೈಸ್ತರೇ ಇರಲಿ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಸರ್ಕಾರ ಪ್ರಸ್ತುತ ಹೊರಡಿಸಿರುವ ಆದೇಶದ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಹೌದು ಮೊದಮೊದಲಿಗೆ ಇದು ಕೊಂಚ ಕಷ್ಟ ಅನಿಸಿದರೂ ಬರಬರುತ್ತ ಇದನ್ನು ಬಹುತೇಕರು ರೂಢಿಸಿಕೊಂಡರು.ಈ ಸಂಬಂಧ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದನ್ನೇ ಇವರೆಲ್ಲ ಪಾಲಿಸಿದರು. ಅಂದ ಹಾಗೆ ಈ ಸಂದರ್ಭದಲ್ಲಿ ಸಮುದಾಯ ನೆಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಯಾವುದೇ ಸಮುದಾಯದ ಮುಖಂಡರ ಮುಖಾಂತರ ಸರ್ಕಾರ ಮಾರ್ಗಸೂಚಿಗಳನ್ನೇನು ತಲುಪಿಸಲಿಲ್ಲ. ಅಥವ ಅವರ ಸಮಾಜದ ಮುಂಡರನ್ನು ವಿಶೇಷವಾಗಿ ಕರೆದು ಮಾತಾಡಿಸಿ ದೇಶ ಇರುವ ಈ ಸಂದಿಗ್ದ ಸಮಯದಲ್ಲಿ ನಿಮ್ಮ ಸಮಾಜದ ಸಹಕಾರ ಬೇಕು ಎಂದ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಲಿಲ್ಲ.
ಆದರೆ ಆ ಒಂದು ಸಮಾಜ.., ಹೌದು ಅದನ್ನ ಇವತ್ತು ನಾನು ಹಾಗೆಯೇ ಕರೆಯಬೇಕಾಗಿದೆ. ಕಾರಣ, #ಅವರ ಹೆಸರು ಹೇಳಿದರೆ ಬಹಳಷ್ಟು ಜನರಿಗೆ ಬಹಳ ಜಾಗದಲ್ಲಿ ಉರಿ ಹತ್ತುತ್ತದೆ. ಅಂತಹಾ ಆ ಒಂದು ಸಮಾಜ ಮಾತ್ರಾ ಯಾಕೋ ನಾವು ಭಾರತದಲ್ಲಿ ತಮ್ಮನ್ನ ತಾವು ಅತಿ ವಿಶಿಷ್ಟರು, ನಾವು ಈ ದೇಶದ ಮಕ್ಕಳಲ್ಲ #ಅಳಿಯಂದಿರು ಅಂದುಕೊಂಡಿದ್ದಾರೆ. ನಮಗೆ ದೇಶದ ಎಲ್ಲಾ ಸವಲತ್ತು ಸಿಗಬೇಕು ಬಿಟ್ರೆ ನಾವು ದೇಶಕ್ಕೆ ಏನೂ ಕೊಡೋದಿಲ್ಲ. ಎಲ್ಲಿಯ ತನಕ ಕೊಡೋದಿಲ್ಲ ಅಂದ್ರೆ ನೀವು ದೇಶದ ನಾಗರೀಕರೋ ಅಂತ ಕೇಳಿದರೆ ಅದಕ್ಕೆ ದಾಖಲೆಯನ್ನೂ ಕೊಡೋದಿಲ್ಲ ಅನ್ನುವಷ್ಟರಮಟ್ಟಿಗಿನ ಉದ್ದತಟತನ ಪ್ರದರ್ಶನ ಮಾಡುತ್ತದೆ. (ಇವರಲ್ಲಿ ಇರುವ ಒಂದಷ್ಟು ರಾಷ್ಟ್ರ ಭಕ್ತರನ್ನು ಹೊರತುಪಡಿಸಿ) ಇವರಲ್ಲೂ ಈ ತಬ್ಲಿಗಿಗಳು ಅನ್ನುವ ವರ್ಗವೋ..ಇವುಗಳ ಉಪಟಳ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ ಇವರ ಹಾವಳಿಯಿಂದ ಇಡೀ ದಕ್ಷಿಣ ಏಶ್ಯಾದ ರಾಷ್ಟ್ರಗಳೇ ಕಂಗೆಟ್ಟಿವೆ.ಇವರನ್ನು ನಿಯಂತ್ರಿಸಲು ದೇಶದ ಬಹುತೇಕ ರಾಜ್ಯ ಸರ್ಕಾರಗಳು ಇವರ ಸಮುದಾಯದ ಮುಖಂಡರ ಜೊತೆ ಸಭೆ ಮಾಡಿ ನಿಮ್ಮ ಸಮುದಾಯದ ಸಹಕಾರ ದೇಶಕ್ಕೆ ಕೊರೋನಾ ನಿಯಂತ್ರಣ ಮಾಡೋದಕ್ಕೆ ಬೇಕು ಅಂತ ಕೇಳಿಕೊಳ್ಳುವ ಪ್ರಸಂಗ ಎದರಾಯಿತು.