ವಿಷಯದ ವಿವರಗಳಿಗೆ ದಾಟಿರಿ

Posts tagged ‘ತರುಣಶಕ್ತಿ ತಣಿಯಲಿ ಪೃಥ್ವಿ’

4
ಜುಲೈ

ಯುವಾಬ್ರಿಗೇಡ್ ನ ಲೋಕಕಲ್ಯಾ(ಣ)ಣಿ ಕಾರ್ಯ

– ಯುವಾ ಬ್ರಿಗೇಡ್

ತರುಣಶಕ್ತಿ ತಣಿಯಲಿ ಪೃಥ್ವಿಆಕಾಶಾತ್ ವಾಯುಃ ವಾಯೋರಗ್ನಿಃ ಅಸ್ಮೀರಾಶಃ ಅರಭ್ಯಪೃಥಿವೀಂ ಶೃಧಿವ್ಯಾ ಓಷಧಯಃ ಓಷಧಿಭ್ಯೋನ್ನಮ್ ಹಾಗಂತ ವೇದವಾಕ್ಯ ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು ಅದರಿಂದ ಅಗ್ನಿ ಆ ಮೂಲಕ ನೀರು ಭೂಮಿ ಸಸ್ಯಗಳು ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡಿತು.ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲಾ ದೇವರೆಂಬಂತೆ ಪೂಜಿಸಿದರು. ವೃಕ್ಷ ಪೂಜೆ, ಭುಮಿ ಪೂಜೆ, ಯಾಗ ಯಜ್ಞ, ನದೀ ಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. ಅದನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಮಾತ್ರ ತೊರೆದುಬಿಟ್ಟೆವು.

ಅನಾಮತ್ತಾಗಿ ವೃಕ್ಷಕ್ಕೆ ಕೊಡಲಿ ಬೀಸಿದೆವು. ನಾಶದ ಮಹಾಪರ್ವ ನಡೆಯಿತು. ಭೂಮಿಗೆ ವಿಷವುಣಿಸಿದೆವು. ನೀರನ್ನು ಅತ್ಯಂತ ಕೆಟ್ಟದಾಗಿ ಬಳಸಿದೆವು. ಭುಮಿಯ ಮೇಲಣ ನೀರು ಖಾಲಿಯಾಗುತ್ತಿದ್ದಂತೆ ಕೊಳವೆ ಬಾವಿ ಕೊರೆಸಿದೆವು. ನೂರು ಇನ್ನೂರು ಐನೂರು ಎಂಟುನೂರು ಕೊನೆಗೆ ಸಾವಿರ ಅಡಿ ಆಳಕ್ಕೆ ಭುಮಿಯನ್ನು ಕೊರೆದು ಅನಾಯಾಸವಾಗಿ ನಿಮಿಷಗಳಲ್ಲಿ ನೀರನ್ನು ಮೇಲೆತ್ತಬಲ್ಲ ತಂತ್ರಜ್ಞಾನ ನಿರ್ಮಾಣಗೊಂಡಿತು. ನೀರು ಆಳದಿಂದ ಮೇಲಕ್ಕೆ ಬಂತು ನಿಜ; ಆದರೆ ಇಷ್ಟು ಆಳಕ್ಕೆ ನೀರು ಇಳಿಯಲು ಇಳಿಯಲು ನಡೆದಿರುವ ದೀರ್ಘ ಪ್ರಕ್ರಿಯೆ ನಮ್ಮವರಿಗೆ ಮರೆತುಹೋಗಿತ್ತು. ಸಲೀಸಾಗಿ ನೀರು ಆಳದಿಂದ ಮೇಲೆ ಬರುವಾಗ ಭೂಮಿಯ ಮೇಲ್ಪದರದ ನೀರನ್ನು ಕಷ್ಟಪಟ್ಟು ಉಳಿಸಿಕೊಳ್ಳುವುದು ಇಲ್ಲವಾಯ್ತು.ನೋಡನೋಡುತ್ತಲೇ ಬಾವಿಗಳು ಮುಚ್ಚಿದವು. ಕಲ್ಯಾಣಿ – ಪುಷ್ಕರಣಿಗಳು ಪಾಳುಬಿದ್ದವು. ಕೆರೆಗಳು ಆಕ್ರಾಂತವಾದವು. ಅಂತರ್ಗಂಗೆಗೆ ಹಾತೊರೆದ ಮನುಷ್ಯ ಕಣ್ಣೆದುರಿನ ಗಂಗೆಯ ಮರೆತ.
Read more »