ವಿಷಯದ ವಿವರಗಳಿಗೆ ದಾಟಿರಿ

Posts tagged ‘ತುಳುನಾಡು’

19
ಜುಲೈ

ನಮ್ಮೂರ ಹಬ್ಬ – ಕೆಡ್ಡಸ (ಭೂಮಿ ಋತುಮತಿಯಾಗುವುದು)

– ಭರತೇಶ ಅಲಸಂಡೆಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ

ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು, ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ… ಮತ್ತಷ್ಟು ಓದು »

26
ಆಕ್ಟೋ

ಕಂಬಳ ಅಮಾನವೀಯ ಆಚರಣೆಯೇ?

– ನಾಗಶಿಲ್ಪ ಪಿ.ಎಸ್.
%e0%b2%95%e0%b2%82%e0%b2%ac%e0%b2%b3ಕಂಬಳ ಒಂದು ಅಮಾನವೀಯ ಆಚರಣೆಯೇ?
ತುಳುವರ ಸಾಂಪ್ರದಾಯಿಕ ಆಚರಣೆ ಕಂಬಳದ ಕುರಿತು ಒಂದು ಬರಹ, Beauty of Tulunad ಎಂಬ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗಿತ್ತು. ಬರಹವು ಕಂಬಳ ಆಚರಣೆಯ ನಿಷೇಧದಿಂದಾಗಿ, ತುಳುನಾಡ ಜನರಿಗೆ ಆಗಿರುವ ನೋವನ್ನು ಬಿತ್ತರಿಸಿತ್ತು. ಕಂಬಳದ ಕುರಿತ ಬರಹವನ್ನು ಓದಿದ ನನಗೆ ಆಚರಣೆಗಳು ನಮ್ಮ ಸಂಪ್ರದಾಯದ ಒಂದು ಭಾಗ ಎನ್ನುವ ಹೇಳಿಕೆ ಮತ್ತೊಮ್ಮೆ ಮನದಟ್ಟಾಯಿತು.
18
ಆಕ್ಟೋ

ತುಳುನಾಡಿನ ಮಾರ್ನೆಮಿ ಆಚರಣೆ

– ಭರತೇಶ ಅಲಸಂಡೆಮಜಲು

ಪಿಲಿ ನಲಿಕೆಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ,
ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ,
ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ,
ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು…..
(ಹುಲಿ, ಕೊರಗ,ಕರಡಿ, ಸಿಂಹ ಕುಣಿಯುತ್ತಿವೆ,
ಪುಟ್ಟ ಮಗು, ಮಲಗಿದ್ದಲ್ಲೇ ಇದ್ದ ಅಜ್ಜ ಎದ್ದು ನಡೆದರು,
ಚೆಂಡೆಯ ಸದ್ದಿಗೆ ಏದ್ದಿತ್ತು ದೂಳು ಊರೇಲ್ಲಾ,
ಬಂತು ನವರಾತ್ರಿ ನಡೆಯುತ್ತಾ, ಕುಣಿಯುತ್ತಾ…)

ತುಳುನಾಡಿನಲ್ಲಿ ನವರಾತ್ರಿ, ದಸರಾ,ದುರ್ಗಾ ಪೂಜೆಯು ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ .ಒಂಬತ್ತು ದಿನಗಳ ಕಾಲ ಭರಪೂರ ಭಯ, ಭಕ್ತಿಯ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷವನ್ನು ಅರ್ವಿಭಾವಗೊಳಿಸಿ ಆ ತೆರದಲ್ಲಿ ನಟನೆ, ಹಾಸ್ಯ, ಮಾತಿನ ರಂಗು ನೀಡಿ ದುರ್ಗೆಯರ ಅರಾಧನೆ ಶುರುವಿಡುತ್ತದೆ, ದಕ್ಷಿಣದ ಜಿಲ್ಲೆಗಳ ಪ್ರಸಿದ್ಧ ದೇವಾಲಯಗಳಾದ ಮಂಗಳಾದೇವಿ, ಕಟೀಲು, ಬಪ್ಪನಾಡು, ಮಂದಾರ್ತಿ, ಕೊಲ್ಲೂರು, ಬೆಳ್ಳಾರೆಯ ಜಲದುರ್ಗೆ, ಭಗವತಿ ಹೀಗೆ ಹಲವಾರು ಹಳ್ಳಿಗೊಂದರಂತೆ, ಸೀಮೆಗೊಂದರಂತೆ ದುರ್ಗೆಯರ ದೇವಾಲಯಗಳು ಕಂಡುಬರುತ್ತದೆ, ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಪೂಜೆ ನಡೆಯದಿದ್ದರೂ ದೇವಿಯ ಅರಾಧನೆ ಮಾಡುವ ಮನೆಗಳಲ್ಲಿ ಮತ್ತು ಸಿರಿ ದರ್ಶನವಿರುವ ಮನೆಗಳಲ್ಲಿ ಮಾರ್ನೆಮಿಯ ವಿಶೇಷ ಪೂಜೆ ನಡೆಸುತ್ತಾರೆ. ತುಳುನಾಡಿನ ಯಕ್ಷಗಾನ ಪ್ರಸಂಗಗಳಲ್ಲಿ ದುರ್ಗೆಯರ ಲೀಲೆಗಳನ್ನು ಮನೋಜ್ಞವಾಗಿ ಹಲವಾರು ಕ್ಷೇತ್ರ ಮಹಾತ್ಮೆಗಳು ಕಣ್ಣಿಗೆ ಕಟ್ಟಿಕೊಡುತ್ತದೆ.

ಮತ್ತಷ್ಟು ಓದು »

1
ಡಿಸೆ

ತುಳುನಾಡ ನಂಬಿಕೆಗಳು…

– ಭರತೇಶ ಆಲಸಂಡೆಮಜಲು

ತುಳುನಾಡುಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ನಮ್ಮ  ಜ್ಞಾನದ ಅಳತೆಯೊಳಗೆ…. “ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ” ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ.

ನಮ್ಮ ಯೋಚನಾ ಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ.  ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕೃತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ, ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.

ಮತ್ತಷ್ಟು ಓದು »

24
ನವೆಂ

ಕಾನೂನಿನ ಹೆಸರಲ್ಲಿ ಮರೆಯಾಗಲಿದೆಯೆ ಕರಾವಳಿಯ ಕಂಬಳ ಕ್ರೀಡೆ?

– ರಾಘವೇಂದ್ರ ಅಡಿಗ. ಹೆಚ್.ಎನ್

ಕಂಬಳಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂಟಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.

ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.

ಮತ್ತಷ್ಟು ಓದು »

8
ಜನ

ತುಳುವಿಗೆ ೮ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ…!

– ರಾಕೇಶ್ ಶೆಟ್ಟಿ

Tulu - 8th Scheduleಬೆಂಗಳೂರಿನ ಸಮಸ್ತ ತುಳು ಸಂಘಟನೆಗಳೂ ಒಗ್ಗೂಡಿ,ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವಂತೆ ಮತ್ತು ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಸೆಪ್ಟಂಬರ್ ೨೮ ರ ಶನಿವಾರ ಕಳೆದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ’ಹಕ್ಕೊತ್ತಾಯ – ಪ್ರತಿಭಟನೆ’ಯನ್ನು ಮಾಡಿದ್ದವು.ಅಂದಿನ ಪ್ರತಿಭಟನೆಯ ನೇತೃತ್ವ ವಹಿಸಿದವರು ಹಿರಿಯ ಸಾಹಿತಿ ಡಾ|| ಡಿ.ಕೆ ಚೌಟ ಅವರು. ಚೌಟ ಅವರ ಭಾಷಣದಲ್ಲಿ ಇಷ್ಟು ವರ್ಷಗಳ ಕಾಯುವಿಕೆಯನ್ನು ಕಡೆಗಣಿಸಿದ ರಾಜಕಾರಣಿಗಳು,ವ್ಯವಸ್ಥೆಗಳ ಮೇಲೆ ಸಾತ್ವಿಕ ಕೋಪ ಎದ್ದು ಕಾಣುತಿತ್ತು.ಹಾಗೆಯೇ ತುಳುವಿಗೆ ಇರುವ ಅಪಾಯ, ನಮ್ಮ ಭೂಮಿ ಮಲಯಾಳಿಗಳ ಪಾಲಾಗುತ್ತಿರುವ ಬಗೆಗಿನ ಆತಂಕವಿತ್ತು.ಆ ದಿನ ಬಹಳಷ್ಟು ಜನ ಮಾತನಾಡಿದರು.ಆದರೆ ನಿಜವಾಗಿಯೂ ತುಳುವರ ಅಸ್ಮಿತೆಯನ್ನು ಬಡಿದ್ದೆಬ್ಬಿಸುವಂತ ಮಾತನಾಡಿದ್ದು ಚೌಟ ಅವರೊಬ್ಬರೇ.ಅವರ ಮಾತು ಮತ್ತದಕ್ಕೆ ವ್ಯಕ್ತವಾದ ಸ್ಪಂದನೆ ಕಂಡಾಗ ಏನಾದರೂ ಒಳ್ಳೆಯ ಬೆಳವಣಿಗೆಗಳು ಆಗಬಹುದು ಅಂದುಕೊಳ್ಳುತಿದ್ದೆ.ಅಷ್ಟರಲ್ಲೇ, ರಾಜಕಾರಣಿಗಳ ಆಗಮನವಾಯಿತು…!

ಒಬ್ಬರು ಚಿಕ್ಕಮಗಳೂರಿನ ಸಂಸದ ಜಯಪ್ರಕಾಶ್ ಹೆಗ್ಡೆ,ಮತ್ತೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್.ಇಂತ ಪ್ರತಿಭಟನಾ ಸಭೆಗಳಿಗೆ ರಾಜಕಾರಣಿಗಳನ್ನೇಕೆ ಕರೆಯುತ್ತಾರೆ ಅನ್ನುವುದು ನನಗೆ ಅರ್ಥವಾಗಲಿಲ್ಲ!

ಅದಕ್ಕೇ ಸರಿಯಾಗಿಯೇ ಈ ಇಬ್ಬರ ಮಾತುಗಳು ಸಾಗಿತ್ತು.ಪ್ರತಿಭಟನೆಗೆಂದು ಬಂದವರನ್ನು ತಮ್ಮ ಆಶ್ವಾಸನೆಗಳ ಮೂಲಕ,ಹಾಸ್ಯ ಚಟಾಕಿಗಳ ಮೂಲಕ ಸಮಾಧಾನಪಡಿಸುವ ಎಂದಿನ ರಾಜಕಾರಣಿಗಳ ಓಲೈಕೆಯ ಶೈಲಿಯ ಭಾಷಣ.೮ನೇ ಪರಿಚ್ಚೇದ ಬಿಟ್ಟು ಕೋರಿರೊಟ್ಟಿ,ನೀರ್ ದೋಸೆ ಇತ್ಯಾದಿ ಇತ್ಯಾದಿ.ಅನಂತ ಕುಮಾರ್ ಅವರು ನವೆಂಬರ್ ತಿಂಗಳಲ್ಲಿ ನೀವು ಒಂದು ತುಳು ನಿಯೋಗವನ್ನು ಕರೆದುಕೊಂಡು ದೆಹಲಿಗೆ ಬನ್ನಿ ಆ ಸಮಯಕ್ಕೆ ಶುರುವಾಗುವ ಸಂಸತ್ತಿನ ಅಧಿವೇಶನದಲ್ಲಿ  ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಮಾತನಾಡುವ ಅಂತ ಹೇಳಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ್ದರು.ಅನಂತ ಕುಮಾರ್ ಅವರ ಮಾತನ್ನು ಹೆಗ್ಡೆಯವರು ಅನುಮೋದಿಸಿದ್ದರು.ವೇದಿಕೆಯಲ್ಲಿದ್ದವರೂ ಅದಕ್ಕೇ ಸಮ್ಮತಿಸುವುದರೊಂದಿಗೆ ಪ್ರತಿಭಟನಾ ಸಭೆ ’ಶಾಂತ’ವಾಯಿತು.

ಮತ್ತಷ್ಟು ಓದು »

8
ನವೆಂ

ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?

-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್

Tulu Naduಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!

ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.

ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.

ಮತ್ತಷ್ಟು ಓದು »