ವಿಷಯದ ವಿವರಗಳಿಗೆ ದಾಟಿರಿ

Posts tagged ‘ದಾದ್ರಿ’

28
ಆಕ್ಟೋ

ದಲಿತರ ಹೆಗಲ ಮೇಲೆ ಬಂದೂಕಿಟ್ಟಿರುವ ಕೈಗಳು ಯಾರದ್ದು?

ರಾಕೇಶ್ ಶೆಟ್ಟಿ

udupi‘ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗಿಂತಲೂ, ಅಧಿಕಾರದಲ್ಲಿರದ ಕಾಂಗ್ರೆಸ್ಸ್ ದೇಶಕ್ಕೆ ಅಪಾಯಕಾರಿ’ ಅಂತ ಗೆಳೆಯನೊಬ್ಬ ಆಗಾಗ್ಗೆ ಹೇಳ್ತಾ ಇರ್ತಾನೆ. 2014ರ ಮೇ 16 ರಂದು ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಇವತ್ತಿನವರೆಗೂ ಕಾಂಗ್ರೆಸ್ಸ್ ಪಕ್ಷದವರ ಆರ್ಭಟಗಳನ್ನು ನೋಡಿದರೇ, ಗೆಳೆಯನ ಮಾತು ನಿಜವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಹಿಂದಿನ ಯಾವುದೇ ಚುನಾವಣೆಗಳಂತಿರಲಿಲ್ಲ. ಕಾಂಗ್ರೆಸ್ ಎಂಬ ಪುರಾತನ ಪಕ್ಷ ಮಕಾಡೆ ಮಲಗಿದರೇ, ಉಳಿದ ಅವಕಾಶವಾದಿ ಪ್ರಾದೇಶಿಕ, ಕೌಟುಂಬಿಕ, ಸೆಕ್ಯುಲರ್, ಕಮ್ಯುನಿಸ್ಟ್ ಪಕ್ಷಗಳು ಹೇಳ ಹೆಸರಿಲ್ಲದಂತಾದವು. ಮತ್ತಷ್ಟು ಓದು »

18
ಡಿಸೆ

ಭಾರತದಲ್ಲಿ ಯಾವ ರೀತಿಯ ಅಸಹಿಷ್ಣುತೆ ಬೆಳೆಯುತ್ತಿದೆ?

ಮೂಲ: ಪ್ರೊ. ಎಸ್.ಎನ್ ಬಾಲಗಂಗಾಧರ
ಕನ್ನಡಕ್ಕೆ : ಇಂಚರ

ಪ್ರೊ.ಬಾಲಗಂಗಾಧರಇತ್ತೀಚೆಗೆ ಭಾರತದ ಸಾಮಾಜಿಕ ವಾತಾವರಣದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಧ್ವನಿ ಭಾರತದ ಹಲವು ಕಡೆಗಳಿಂದ ಜೋರಾಗಿ ಕೇಳಿಬರುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು ಈ ಕೀರಲು ಕೂಗುಗಳನ್ನೇ ಹಿಗ್ಗಿಸಿ, ಬೂದುಗಾಜಿನಿಂದ ನೋಡುತ್ತಿರುವುದೂ ಅಲ್ಲದೆ, ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ವಿಚಾರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವ್ಯಂಗ್ಯ ಮಾಡಲು ಬಳಸುತ್ತಿವೆ. ಭಾರತೀಯರ ಈ ಅಸಹಿಷ್ಣುತೆಯ ಮಂತ್ರವನ್ನು ಒಂದು ಪಕ್ಷ ಅರ್ಥ ಮಾಡಿಕೊಂಡರೂ, ಯುರೋಪಿಯನ್ನರು ಏಕೆ ಇದೇ ಮಂತ್ರವನ್ನು ಪುನರುಚ್ಛರಿಸುತ್ತಿದ್ದಾರೆ? ಎಂಬದನ್ನು ಯೋಚಿಸಬೇಕು. ಈ ಘಟನೆಯನ್ನು ಅವಲೋಕಿಸಿದಾಗ, ಇಲ್ಲಿ ಕಾಡುತ್ತಿರುವ ಅಸಹಿಷ್ಣುತೆಯ ಕುರಿತು ಇರುವ ಅಸ್ಪಷ್ಟತೆ! ಇವೆಲ್ಲವೂ ಒಂದು ಒಗಟಿನ ಹಾಗೆಯೇ ಕಾಣುತ್ತದೆ.

ಬಹುಶಃ ಇಲ್ಲಿ ನಡೆದಿರುವ ಕೆಲವಾರು ಕೊಲೆಗಳ ಕುರಿತು ಪ್ರತಿಭಟಿಸಲು ಅಸಹಿಷ್ಣುತೆಯ ಕೂಗನ್ನು ಒಂದಷ್ಟು ಜನರು ಎಬ್ಬಿಸಿರಬಹುದು. ಹಾಗೆಯೇ ಒಂದಷ್ಟು ಜನರ ಕೊಲೆಗಳಾಗಲು, ಆ ವ್ಯಕ್ತಿಗಳು ಒಂದಷ್ಟು ಜನರ ಅಸಹಿಷ್ಣುತೆಗೆ ಗುರಿಯಾಗಿದ್ದದು ಕೂಡ ಕಾರಣವಿರಬಹುದು. ಆದರೆ ಜನರು ಮಾತ್ರ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಪ್ರತಿಭಟಿಸುತ್ತಿಲ್ಲವೆಂಬುದು ಹಾಗೂ ಭಾರತ ಇಂತಹ ಅಪರಾಧಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಸಂಗತಿ.

ನಿರ್ದಿಷ್ಟ ವ್ಯಕ್ತಿಗಳ ಕೊಲೆಗಳಾದಾಗ ಮಾತ್ರ ದೇಶದಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉದಾ: ಕಲ್ಬುರ್ಗಿ ಅವರ ಕೊಲೆ ಈ ಅಸಹಿಷ್ಟುತೆಯ ಕೂಗನ್ನು ಹುಟ್ಟುಹಾಕಿತು. ಆದರೆ ಕಲ್ಬುರ್ಗಿಯವರು ಕೂಡ ಅನೇಕ ವಿಷಯಗಳಲ್ಲಿ ಅಸಹಿಷ್ಣುತೆ ಹೊಂದಿದ್ದವರು. ಸೆಮೆಟಿಕ್ ಥಿಯಾಲಜಿ ಪ್ರಕಾರ ಮೂರ್ತಿ ಪೂಜೆ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳದೆ ಅಥವಾ ಅದು ಪಾಪ ಹೇಗೆ? ಎಂಬುದನ್ನುಅರ್ಥ ಮಾಡಿಕೊಳ್ಳದೆಯೇ ಮೂರ್ತಿ ಪೂಜೆಯ ವಿರುದ್ಧ ಭಾರತದ ಅನೇಕ ಬುದ್ಧಿಜೀವಿಗಳಿಗಿರುವ ಅಸಹಿಷ್ಣುತೆ / ಪೂರ್ವಗ್ರಹ ಕಲ್ಬುರ್ಗಿಯವರಿಗೂ ಇತ್ತು. ಅವರ ಸಿದ್ದಾಂತಗಳಿಗಿಂತ ಭಿನ್ನವಾದ ಸಿದ್ದಾಂತಗಳನ್ನು ಒಪ್ಪದಿರುವಷ್ಟು ಅಸಹಿಷ್ಣುತೆ / ಅಸಹನೆ ಅವರಲ್ಲಿತ್ತು. ಅವರಂತಹುದೇ ಮನಸ್ಥಿತಿಯುಳ್ಳ ಒಂದಷ್ಟು ಜನರನ್ನೊಳಗೊಂಡ ತಂಡದ ಮುಂದಾಳತ್ವ ವಹಿಸಿ ಕಲ್ಬುರ್ಗಿಯವರು, ಕನ್ನಡ ದಿನಪತ್ರಿಕೆಯ ಮಾಲೀಕರನ್ನು ಭೇಟಿ ಮಾಡಿ ಅದರಲ್ಲಿ ಬರುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು!

ಮತ್ತಷ್ಟು ಓದು »