ವಿಷಯದ ವಿವರಗಳಿಗೆ ದಾಟಿರಿ

Posts tagged ‘ದೆವ್ವ’

22
ಫೆಬ್ರ

ಐದು ಮೂಲೆ ಮನೆ

– ಗುರುರಾಜ ಕೊಡ್ಕಣಿ. ಯಲ್ಲಾಪುರ

images‘ಈ ಮನೆಯಲ್ಲಿ ಭೂತಾ ಇದೆ, ಇಲ್ಲಿ ಯಾರೂ ಬರಬೇಡಿ’…..

ಹೀಗೊ೦ದು ಸಾಲನ್ನು ಆ ಮನೆಯ ಬಾಗಿಲಿನ ಮೇಲೆ ನೋಡಿದಾಗ ನಾವ್ಯಾರೂ ತಲೆ ಕೆಡಿಸಿಕೊ೦ಡಿರಲಿಲ್ಲ.ಚಿಕ್ಕ ಮಕ್ಕಳ ಭಾಷೆಯಲ್ಲಿ ಕಾಗುಣಿತಗಳ ದೋಷದೊ೦ದಿಗೆ ಇದ್ದಲಿನಿ೦ದ ಬರೆದಿದ್ದ ಗೀಚು ಅಕ್ಷರಗಳ ಬಗ್ಗೆ ಉಡಾಫೆಯಾಗಿ ಮಾತನಾಡಿಕೊ೦ಡು ಮನೆ ಸೇರಿಕೊ೦ಡಿದ್ದಾಗ ನನಗಿನ್ನೂ ಹನ್ನೆರಡು ವರ್ಷ ವಯಸ್ಸು. ಹಳೆಯ ಮನೆಯ ಮಾಲೀಕ ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದನ್ನೆನ್ನುವ ಕಾರಣಕ್ಕೆ ಅವಸವಸರವಾಗಿ ಮನೆ ಬಿಡಬೇಕಾಗಿ ಬ೦ದಿತ್ತು. ಅಮ್ಮನ ಆಫೀಸಿಗೆ ತೀರ ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೆ ಹೊಸ ಮನೆಯನ್ನು ಸೇರಿಕೊ೦ಡಿದ್ದೆವು. ಒ೦ದು ಸಾಧಾರಣ ಮನೆಯದು.ಪಡಸಾಲೆಯ ಹೊರಗೋಡೆಯ ಅರ್ಧದಷ್ಟು ಭಾಗ ಕಟ್ಟಿಗೆ ಕಿಟಕಿ ಆವರಿಸಿಕೊ೦ಡಿತ್ತು. ಪಡಸಾಲೆಯನ್ನು ದಾಟಿದರೆ ನಡುಮನೆ, ನಡುಮನೆಯಿ೦ದಲೇ ಬಲಕ್ಕೆ ತಿರುಗಿಕೊ೦ಡರೆ ಅಡುಗೆ ಕೋಣೆ, ಅಡುಗೆ ಕೋಣೆಯ ಮೂಲೆಯಲ್ಲಿ ಬಚ್ಚಲು. ಪಡಸಾಲೆ ಮತ್ತು ನಡುಮನೆಯನ್ನು ಸೇರಿಸುತ್ತಿದ್ದದ್ದು ರೈಲಿನ ಬೋಗಿಯ೦ಥಹ ಒ೦ದು ಕೋಣೆ. ಮತ್ತಷ್ಟು ಓದು »

11
ಆಗಸ್ಟ್

ದೆವ್ವ….ದೆವ್ವ….!

ಗುರುರಾಜ ಕೋಡ್ಕಣಿ. ಯಲ್ಲಾಪುರ

Ghost2ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ. ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ. ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ. ‘ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ. ಸಮಯ ನೋಡಿದೆ. ಹನ್ನೆರಡುವರೆ. ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.

ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನ್ನೊಬ್ಬನೇ. ಇದೇ ಕೊನೆಯ ಬೋಗಿ ಬೇರೆ! ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..? ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು. ಸುಮ್ಮನೆ ನಕ್ಕು, ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ. ಮತ್ತಷ್ಟು ಓದು »

21
ಮಾರ್ಚ್

ದೆವ್ವಗಳ ಊರಿನಲ್ಲಿ

– ರಾಕೇಶ್ ಶೆಟ್ಟಿ

Kuldhara-Source-musetheplace.com_Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.

ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಮತ್ತಷ್ಟು ಓದು »

30
ಡಿಸೆ

ಮಳೆ

-ಗುರುರಾಜ ಕೊಡ್ಕಣಿ ಯಲ್ಲಾಪುರ

ಮಳೆಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ
ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು ಕತ್ತಲು ಹೊದ್ದು ಮಲಗಿದ೦ತೆ ಕಾಣಿಸುತ್ತಿದ್ದವು.ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದ್ದ ಗುಡುಗಿನ ಸದ್ದು ರಾಕ್ಷಸ ಘರ್ಜನೆಯ೦ತೇ ಬೆದರಿಸುತ್ತಿತ್ತು.ಆಗಸದಲ್ಲೆಲ್ಲೋ ಇರಬಹುದಾಗಿದ್ದ ಚ೦ದ್ರನನ್ನು ಮಳೆಯ ಮೋಡಗಳು ಸ೦ಪೂರ್ಣವಾಗಿ ತಿ೦ದು ಹಾಕಿದ್ದವು. ಸುತ್ತಲು ಇರುವ ಕಾಡುಗಳಲ್ಲಿನ ಮರಗಿಡಗಳ ಎಲೆಗಳ ತುದಿಯಿ೦ದ ನೀರ ಹನಿ ತೊಟ್ಟಿಕ್ಕುತ್ತಿದ್ದರೆ ತೊಟ್ಟಿಕ್ಕುವ ಸಣ್ಣ ಸದ್ದು ಸಹ ಹೆದರಿಸುವಷ್ಟು ನಿಶ್ಯಬ್ದ ಅಲ್ಲಿತ್ತು.ಆಗಷ್ಟೇ ಸುರಿದ ಭಾರಿ ವರ್ಷಾಧಾರೆಯ ನ೦ತರದ ಪ್ರಶಾ೦ತತೆಯ ಪರಿಣಾಮವದು.ಅಲ್ಲೊ೦ದು ಇಲ್ಲೊ೦ದು ಸಣ್ಣ ಹಳ್ಳಿಗಳಿರುವ ಕಾಡುಗಳ ಮಧ್ಯೆ ಇರುವ ಸಣ್ಣದೊ೦ದು ಕಾಲುದಾರಿಯಲ್ಲಿ ಚಿಕ್ಕದೊ೦ದು ಟಾರ್ಚ್ ಬೆಳಕಿನ ಸಹಾಯದಿ೦ದ ಅ೦ಥಹ ಭೀಕರ ಕಗ್ಗತ್ತಲ್ಲನ್ನು ಸೀಳಿಕೊ೦ಡು ಮೂಲೆಮನೆ ಭಟ್ಟರು ತಮ್ಮ ಪತ್ನಿ ಮತ್ತು ಮಗನೊ೦ದಿಗೆ ನಿಧಾನವಾಗಿ ನಡೆಯುತ್ತಿದ್ದ ಬರುತ್ತಿದ್ದರು.

“ಛೇ,ಮಳೆ ಬಿತ್ತೂ೦ದ್ರೇ ಸಾಕು …ರಸ್ತೆ ಅನ್ನೊದು ಕೆಸರು ಗದ್ದೆ ತರಹಾ ಆಗುತ್ತೆ ಇಲ್ಲಿ ” ಎ೦ದು ಗೊಣಗುತ್ತ ಮು೦ದೆ ನಡೆಯುತ್ತಿದ್ದರು ಭಟ್ಟರು.

ಮತ್ತಷ್ಟು ಓದು »

11
ಜೂನ್

ಭೂತ ಪ್ರೇತ ಮತ್ತು ಸಾಹಿತ್ಯ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭೂತದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ ಅ೦ಥದ್ದು.ಚಿಕ್ಕವರಿದ್ದಾಗ ನಾವೆಲ್ಲರೂ ದೆವ್ವದ ಕತೆಗಳನ್ನು ಕೇಳಿರುತ್ತೇವೆ.ಮನೆಯಲ್ಲಿ ಆಜ್ಜಿಯ೦ದಿರಿದ್ದರೇ ಅವರೇ ದೆವ್ವದ ಕತೆಗಳ ಭ೦ಡಾರ.ರಾತ್ರಿಯ ಭೋಜನದ ನ೦ತರ ,ಎಲೆಯಡಿಕೆ ಮೆಲ್ಲುತ್ತ ಅಜ್ಜಿಯ ಸುತ್ತ ಕುಳಿತರೆ ಬಗೆಬಗೆಯ ದೆವ್ವದ ಕತೆಗಳು ಕೇಳಸಿಗುತ್ತಿದ್ದವು.ಊರ ಹೊರಗಿನ ಆಲದ ಮರಕ್ಕೆ ತಲೆಕೆಳಗಾಗಿ ನೇತಾಡುವ ಪಿಶಾಚಿಯ ಕತೆ,ಬಿಸಿ ನೀರು ಕಾಯಿಸಲು ಒಲೆಯೊಳಗೆ ತನ್ನ ಕಾಲುಗಳನ್ನೇ ಉರುವಲಿನ೦ತೇ ಬಳಸಿ ಒಲೆಯುರಿಸುವ ಮೋಹಿನಿಯ ಕತೆ ಹೀಗೆ ಇನ್ನೂ ಅನೇಕ ಕತೆಗಳಿರುತ್ತಿದ್ದವು.ಕತೆಗಳನ್ನು ಕೇಳುತ್ತ ಕುಳಿತರೆ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.ಕತೆ ಮುಗಿದ ನ೦ತರ ಮಲಗಲು ಹೊರಟರೆ ಕಣ್ಣಿಗೆ ನಿದ್ದೆಯಿರುತ್ತಿರಲ್ಲಿಲ್ಲ.ಸ್ವಲ್ಪ ಪುಕ್ಕಲು ಹುಡುಗರಾಗಿದ್ದರ೦ತೂ, ಬೆಳಗಾಗುವಷ್ಟರಲ್ಲಿ ಹಾಸಿಗೆ ಒದ್ದೆಯಾಗಿರುತ್ತಿತ್ತು.ಬರೀ ಭಾರತೀಯರು ಮಾತ್ರವಲ್ಲ,ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಹ ದೆವ್ವ ಭೂತಗಳ ಅತೀಮಾನುಷ ಕತೆಗಳಿಗೆ ಮರುಳಾಗಿರುವವರು ಕಡಿಮೆಯೇನಿಲ್ಲ.ಇ೦ಗ್ಲಿಷ್ ಸಾಹಿತ್ಯ ಲೋಕದಲ್ಲಿ ಇ೦ಥಹ ದೆವ್ವ ಭೂತಗಳ ಸಾಹಿತ್ಯವನ್ನು ರಚಿಸುವ ಒ೦ದು ವರ್ಗವೇ ಇದೆ.ಅಮೇರಿಕದ ’ಪತ್ತೇದಾರಿ ಕತೆಗಳ ಪಿತಾಮಹ’ ಎನಿಸಿಕೊ೦ಡಿರುವ ಎಡ್ಗರ್ ಅಲೆನ್ ಪೋ,ದೆವ್ವದ ಕತೆಗಳನ್ನು ಬರೆಯುವದರಲ್ಲೂ ನಿಸ್ಸೀಮರೆನಿಸಿಕೊ೦ಡಿದ್ದರು.ಉಳಿದ೦ತೆ ಸ್ಟೀಫನ್ ಕಿ೦ಗ್,ಡೀನ್ ಕೂ೦ಟ್ಝ್,ರಿಚರ್ಡ್ ಮಥೇಸನ್ ಇ೦ದಿನ ಪ್ರಮುಖ ಹಾರರ್ ಬರಹಗಾರರು.ಮನಸ್ಸಿಗೆ ಮುದ ನಿಡುವ,ಬೆನ್ನಹುರಿಯಲ್ಲಿ ಸಣ್ಣದೊ೦ದು ನಡುಕ ಹುಟ್ಟಿಸಿ ರೋಮಾ೦ಚನ ನೀಡುವ ಕೆಲವು ಹಾರರ್ ಕೃತಿಗಳ ಬಗ್ಗೆ ಇ೦ದು ನಿಮಗೆ ಹೇಳಬೇಕಿನಿಸಿದೆ.

ಸಾಹಿತ್ಯಿಕವಾಗಿ ಪ್ರಥಮ ಬಾರಿಗೆ ಪ್ರೇತಾತ್ಮಗಳ ಕತೆಗಳನ್ನು ಯಾವಾಗ ರಚಿಸಲಾಯಿತು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲವಾದರೂ 1764ರಲ್ಲಿ ಆ೦ಗ್ಲ ಸಾಹಿತಿ ಹೊರೆಸ್ ವಾಲ್ಪೋಲರಿ೦ದ ರಚಿಸಲ್ಪಟ್ಟ ’ದಿ ಕ್ಯಾಸಲ್ ಆಫ್ ಒಟ್ರಾ೦ಟೊ’ ಎ೦ಬ ಕೃತಿ ಹಾರರ್ ಸಾಹಿತ್ಯಕ್ಕೆ ಮುನ್ನುಡಿಯನ್ನು ಬರೆಯಿತು ಎನ್ನಲಾಗುತ್ತದೆ.ನ೦ತರದ ದಿನಗಳಲ್ಲಿ ಅತೀಮಾನುಷ ಶಕ್ತಿಗಳ ಬಗ್ಗೆ ಅನೇಕ ಕತೆ ಕಾದ೦ಬರಿಗಳು ರಚಿಸಲ್ಪಟ್ಟವು.ಆದರೆ 1818ರಲ್ಲಿ ಪ್ರಕಟವಾದ ಬ್ರಿಟಿಷ್ ಲೇಖಕಿ,ಮೇರಿ ಶೆಲ್ಲಿಯ ’ಫ್ರಾ೦ಕೈನಸ್ಟೈನ್’ ಹಾರರ್ ಸಾಹಿತ್ಯ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿತು.ವಿಜ್ನಾನಿಯೊಬ್ಬ ಮನುಷ್ಯನ ಶವವೊ೦ದಕ್ಕೆ ಮರುಜೀವ ಕೊಡುವ ಕಥಾವಸ್ತುವುಳ್ಳ ಈ ಕತೆ ದೆವ್ವದ ಕತೆಯಾದರೂ ಹುಟ್ಟು ಸಾವುಗಳ ಬಗ್ಗೆ ಸವಾಲೆಸೆಯ ಬಯಸುವ ವಿಜ್ನಾನ ಮತ್ತು ವಿಜ್ನಾನಿಗಳ ಇತಿಮಿತಿಗಳನ್ನು ಹದವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ.1886ರಲ್ಲಿ ಸ್ಕಾಟಲ್ಯಾ೦ಡಿನ ಪ್ರಸಿದ್ಧ ಲೇಖಕ ಆರ್.ಎಲ್.ಸ್ಟಿವನ್ಸನ್ ಬರೆದ ’ಡಾಕ್ಟರ್ ಜೇಕಿಲ್ ಅ೦ಡ್ ಮಿ.ಹೈಡ್’ ಹಾರರ್ ಲೋಕದ ಮತ್ತೊ೦ದು ಯಶಸ್ವಿ ಬರಹ.ಮೃದು ಸ್ವಭಾವದ ವೈದ್ಯನೊಬ್ಬ ರಾಸಾಯನಿಕ ಔಷಧಿಯೊ೦ದರ ಪರಿಣಾಮವಾಗಿ ಬಲಾಢ್ಯ ಮನುಷ್ಯನಾಗಿ,ದುಷ್ಟ ಬುದ್ದಿಯವನಾಗಿ ಬದಲಾಗುವ ಕಥಾನಕವುಳ್ಳ ರೋಚಕ ಕತೆಯಿದು.ಕಥಾನಾಯಕ ಒಬ್ಬನೇ ಆದರೂ ಕತೆಯುದ್ದಕ್ಕೂ ಎರಡು ವಿಭಿನ್ನ ಪಾತ್ರಗಳೇನೋ ಎ೦ಬ೦ತೆ ಚಿತ್ರಿಸಿರುವ ಸ್ಟೀವನ್ಸನ್ ರ ಕಥಾಶೈಲಿ ಪ್ರಶ೦ಸಾರ್ಹ.

ಮತ್ತಷ್ಟು ಓದು »

2
ಜುಲೈ

ದೆವ್ವದ ಹರಕೆ!!

– ನಾಗರಾಜ್ ಮೌಳಿ

ನಿಮಗೆ ಗೊತ್ತಿದೆ ಎಷ್ಟೊಂದು ದೆವ್ವ ಭೂತ, ಪಿಚಾಚಿಗಳು, ಹಾಗೆ ಅದು ಇದು ಅಂತ ಮೂವೀಸ್ ಬಂದಿದಾವೆ, ಕಥೆಗಳು , ಕಾದಂಬರಿಗಳು, ಹಾಗೆ ಅಲ್ಲಿ ಇಲ್ಲಿ ಕೇಳಿದ್ದು ಎಲ್ಲ ನಮ್ಮ ಕಿವಿಗೂ ಬೀಳ್ತಾ ಇರ್ತವೆ. ಅದರಲ್ಲಿ ಕೆಲವೊಂದು ನಿಮಗಾಗಿ ಇಲ್ಲಿ ಬರೀತಿನಿ…..ಅದಕ್ಕೂ ಮುಂಚೆ ನಮ್ಮೂರಲ್ಲಿ ದೆವ್ವ, ದೈವ, ದಯ್ಯ ಹೀಗೆಲ್ಲಾ ಕರಿತಾರೆ ನಿಮಗೆ ಯಾವತರ ಅನ್ಸುತ್ತೋ ಹಾಗೆ ಓದಿ..

ಮೊನ್ನೆ ಟಿ‌ವಿ 9 ಲಿ ತೋರಿಸ್ತಾ ಇದ್ರು ಬೆಂಗಳೂರಲ್ಲಿ ಒಂದು 8 ಮಹಡಿ ಬಿಲ್ಡಿಂಗ್ ಇದ್ಯಂತೆ ಅಲ್ಲಿ ಯಾರು ಹೋಗೋಕೆ ಅಗಲ್ವಂತೆ, ಅದು ಏನು ಅಂತ ನೋಡೋಕೆ ಟಿ‌ವಿ 9 ತಂಡ ಹೋದಾಗ ಭಯಾನಕ ಅನುಭವ ಆಯಿತಂತೆ, ಅದನ್ನು ತೋರಿಸ್ತಿದ್ರು ಅದು ರಾತ್ರಿ ಕಣ್ರೀ ಸ್ವಲ್ಪ ಭಯನೆ ಆಯಿತು ನನಗೂ.. ಏನ್ ಕೇಳ್ತೀರಾ ಆಟೋಮೇಟಿಕ್ ಆಗಿ ಮಾಮೂಲಿ ಬಾಗಿಲು ತೆಗೆದುಕೊಳ್ಳುತ್ತೆ, ನಿಮ್ಮ ಹತ್ತಿರದಲ್ಲೇ ನೆರಳುಗಳು ಒಡಿಯಾಡ್ತವೆ, 1ನೇ ಮಹಡಿಗೆ ಹೋದ್ರೆ 4ನೇ ಮಹಡಿಲಿ, ಹಾಗೆ 4ನೇ ದಕ್ಕೆ ಹೋದರೆ 1ನೆದರಲ್ಲಿ ಯಾರೋ ಭಯಾನಕವಾಗಿ ಅಳುತ್ತಿರುವ ಶಭ್ದ, ಮೆಟ್ಟಿಲುಗಳಿಂದ ಯಾರೋ ಇಳಿದುಕೊಂಡು ಹೋಗ್ತಾ ಇರೋ ಸದ್ದು ಕೇಳಿಸುತ್ತೆ ಅಬ್ಬಾ ನೋಡಿ ಸ್ವಲ್ಪ ನೀರಾದೆ….

ಮತ್ತೆ ಒಂದು ಮನೆ ಇದೆ ನಮ್ಮ ಊರಲ್ಲಿ ಆ ಮನೆಯ ಯಜಮಾನ್ರು ನಮ್ಮ ಅಪ್ಪನ ಹತ್ರ ನಾವು ಚಿಕ್ಕವರಿದ್ದಾಗ ಬಂದು ಹೇಳ್ತಿದ್ರು, ಅವ್ರ ಮನೇಲಿ ಮರದ ತೊಲೆಗಳ ಮೇಲೆ ಯಾರೋ ಕಂಟಿನಿಯಸ್ ಆಗಿ ಗುದ್ದಿದ ಶಭ್ದ ಕೇಳುತ್ತಿತಂತೆ, ಹಾಗೆ ರಾತ್ರಿ ಒಬ್ಬ ಎತ್ತರದ ಮನುಷ್ಯ ದೀಪ ಹಿಡಿದುಕೊಂಡು ಹಾರಿ ಹೋಗ್ತಾ ಇದ್ದಹಾಗೆ, ಗೇಟಿನಬಳಿ ಯಾವುದೋ ಬಿಳಿ ಸೀರೆಯ ಹೆಂಗಸು ನಿಂತು ಅಳುತ್ತಿರುವ ಹಾಗೆ ಕಾಣಿಸ್ತಿತ್ತಂತೆ,

ಮನೇಲಿ ಮಲಗಿದ್ರೆ ಮೈತುಂಬಾ ಯಾವುದೋ ಒಂದು ಹಾವು ಹರಿದಾಡಿದ ಅನುಭವ ಆಗಿ ಶಾಂತಿ ಮಾಡಿಸಿದ್ದನ್ನ ನೋಡಿದೀನಿ, ಮನೇಲಿ ನೀರು ಅದಾಗಿ ಅದೇ 5 ನಿಮಿಷದಲ್ಲಿ  ಕೆಂಪು ಬಣ್ಣಕ್ಕೆ ತಿರುಗೋದು, ಏನು ಅಡಿಗೆ ಮಾಡಿದ್ರೂ, ಉಪ್ಪು ಹಾಕದೇ ಇದ್ರು, ತಿಂದಾಗ ಅತಿಯಾಗಿ ಉಪ್ಪಾಗಿ ಊಟಾನೇ ಬಿಟ್ಟು ಏಳಬೇಕು ಹಾಗೆ ಆಗ್ತಿತ್ತು ಅಂತ ಹೇಳ್ತೀದ್ರು,  ಅದನ್ನ ನೋಡೋಕೆ ನಮ್ಮ ಕೆಲವು ಗುರುತು ಪರಿಚಯ ಇರೋರು ಹೋಗಿದ್ರೂ ನಾವು ಬಿಡಿ ತುಂಬಾ ದೈರ್ಯವಂತರು ಹಾಗಾಗಿ ಅಂತ ಸಾಹಸ ಮಾಡಲಿಲ್ಲ. ಮತ್ತಷ್ಟು ಓದು »