ಮುಧೋಳ ನಾಯಿಯ ಜೊತೆಯ ಹೋಲಿಕೆಗೆ ಇವರು ಅರ್ಹರೇ?

ಲಾಲ್ ಬಹೂದ್ದೂರ್ ಶಾಸ್ತ್ರಿಗಳ ಬಾಯಿಂದ ಭಾರತ್ ಕೀ ಆಯೂಬ್ ಎಂದು ಬೆನ್ನು ತಟ್ಟಿಸಿಕೊಂಡ ಒರ್ವ ಯೋಧ ಕ್ಯಾ.ಆಯೂಬ್ ಖಾನ್. ವೀರ ಚಕ್ರ ಪುರಷ್ಕೃತ ಕ್ಯಾ.ಖಾನ್ಗೆ ಶಾಸ್ತ್ರಿ ಮೇಲೆ ಅದೆಷ್ಟು ಅಭಿಮಾನವಿತ್ತೆಂದರೆ ನಿವೃತ್ತಿಯ ನಂತರ ಅವರು ಕಾಂಗ್ರೆಸ್ಗೆ ಸೇರಿದರು. ಎರಡು ಬಾರಿ ರಾಜಾಸ್ಥಾನದ ಜುಂಜುನು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಸಂಸದರೂ ಆದರು. ಆದರೆ ಆಯೂಬ್ ಖಾನರಿಗೆ ಶಾಸ್ತ್ರಿಗಳ ನಿಧನಾನಂತರ ಯಾಕೋ ತನ್ನ ಆಯ್ಕೆ ತಪ್ಪಿದೆ ಎನಿಸತೊಡಗಿತು. ಇಂದಿರಾ ಸರ್ವಾಧಿಕಾರ ಮತ್ತು ರಾಜೀವ್ ಗಾಂಧಿ ಪಟಾಲಮ್ಮಿನ ಸೈನಿಕ ವಿರೋಧಿ ನೀತಿಗಳನ್ನು ಸಹಿಸುವಷ್ಟು ದಿನ ಸಹಿಸಿದರು. ಕೊನೆಗೆ ಶಾಸ್ತ್ರಿಗಳಿಗಾದ ಸ್ಥಿತಿ ನರಸಿಂಹರಾಯರಿಗೂ ಬಂದಾಗ ಹಿಂದೆ ಮುಂದೆ ನೋಡದೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸಂನ್ಯಾಸ ಸ್ವೀಕರಿಸಿದರು. ಕೊನೆ ಕಾಲದಲ್ಲಿ ಆಯೂಬ್ ಖಾನರಿಗೆ ಕಾಂಗ್ರೆಸ್ ಸೇರಿದ್ದ ಬಗ್ಗೆ ಎಷ್ಟು ಪಾಪಪ್ರಜ್ಞೆ ಕಾಡುತ್ತಿತ್ತೆಂದರೆ ಆರೋಗ್ಯ ವಿಚಾರಿಸಲು ಬಂದ ವಾಜಪೇಯಿಯವರ ಪಾದಸ್ಪರ್ಶಕ್ಕೆ ಅನುಮತಿಯನ್ನೂ ಆ ಯೋಧ ಕೇಳಿದ್ದರು. ಏಕೆಂದರೆ ಒಬ್ಬ ದೇಶಭಕ್ತ ಯೋಧ ಮತ್ತು ಕಾಂಗ್ರೆಸಿಗ ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ ಎಂಬ ಸತ್ಯ ಆಯೂಬ್ ಖಾನರಿಗೆ ತಮ್ಮ ಕೊನೆಕಾಲದಲ್ಲಿ ಅರ್ಥವಾಗಿತ್ತು.
ಸಿದ್ಧಾಂತಗಳ ಸಂಗ ಸಾಕಾಗಿದೆ; ದೇಶಭಕ್ತಿಯ ಸಂಘ ಬೇಕಾಗಿದೆ
– ರೋಹಿತ್ ಚಕ್ರತೀರ್ಥ
ಕನ್ನಡದಲ್ಲಿ “ತಾಯಿನಾಡು” ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮತ್ತು ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಮೊದಲ ಚುನಾಯಿತ ಶಾಸಕನಾಗಿದ್ದ ಪಿ.ಆರ್.ರಾಮಯ್ಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳು. ಪದವಿಯ ಅಂತಿಮ ವರ್ಷದಲ್ಲಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನದಿನಕ್ಕೆ ಏರುತ್ತಿದ್ದ ಹೊತ್ತು. ಗಾಂಧಿಯ ಮಾತುಗಳನ್ನು ಕೇಳಲು ಎಲ್ಲಿಂದ ಎಲ್ಲಿಯವರೆಗೂ ಕಾಲ್ನಡಿಗೆಯಲ್ಲೋ ರೈಲಿನಲ್ಲೋ ಹೋಗಿಬರಲು ತಯಾರಾಗಿದ್ದ ರಾಮಯ್ಯನವರಿಗೆ ಒಂದು ದಿನ ವಾರಾಣಸಿಯ ಪಕ್ಕದಲ್ಲೇ ಗಾಂಧಿ ಭಾಷಣ ಏರ್ಪಾಟಾಗಿದ್ದನ್ನು ಕಂಡು ಸಕ್ಕರೆ ಹಾಲು ಕುಡಿದಷ್ಟು ಸಂತೋಷವಾಯಿತು. ಅಂದಿನ ಭಾಷಣದಲ್ಲಿ ಗಾಂಧಿ, ಹೋರಾಟಕ್ಕೆ ಭೀಮಬಲ ಬರಬೇಕಾದರೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ-ಕಾಲೇಜುಗಳಿಂದ ಹೊರಬಂದು ಹೋರಾಟದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಮಾತು ರಾಮಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅವರು ತಕ್ಷಣ ತನ್ನ ಪದವಿ ವ್ಯಾಸಂಗವನ್ನು ಮೊಟಕುಗೊಳಿಸಿ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಬಿಟ್ಟರು. ಇನ್ನೊಂದೆರಡು ವಾರಗಳು ಕಳೆದರೆ ಮುಖ್ಯಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದ್ದವು. ಈಗ ಏಕಾಏಕಿ ವಿಶ್ವವಿದ್ಯಾಲಯ ತೊರೆದರೆ ಗತಿಯೇನು ಎಂಬ ಸಣ್ಣದೊಂದು ಅಂಜಿಕೆಯೂ ಅವರ ಮನದ ಮೂಲೆಯಲ್ಲಿತ್ತು. ನೇರವಾಗಿ ವಿವಿಯ ಕುಲಪತಿಗಳಾಗಿದ್ದ ಮದನ ಮೋಹನ ಮಾಲವೀಯರಲ್ಲಿಗೆ ಹೋಗಿ ತನ್ನ ಇಬ್ಬಂದಿತನವನ್ನು ವಿವರಿಸಿ ಏನು ಮಾಡಲಿ ಎಂದು ಮಾರ್ಗದರ್ಶನ ಕೇಳಿದರು. Read more