ವಿಷಯದ ವಿವರಗಳಿಗೆ ದಾಟಿರಿ

Posts tagged ‘ನರೇಂದ್ರ ಮೋದಿ’

19
ಜೂನ್

ಮತಾಂಧರ ಮುಂದೆ ಸಧ್ಭಾವನೆಯ ಕನಸೇ?

-ರಾಕೇಶ್ ಶೆಟ್ಟಿ

images (1)ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ. ಮತ್ತಷ್ಟು ಓದು »

11
ಮೇ

ಹಿಟ್ಲರನ ಗೊಬೆಲ್ಸ್ ಮತ್ತು ನೆಹರೂವಿನ ಗಂಜಿಗಿರಾಕಿಗಳು

 – ರಾಕೇಶ್ ಶೆಟ್ಟಿ

‘ಸುಳ್ಳನ್ನೇ ಪದೇ ಪದೇ ಜನರ ಕಿವಿಗೆ ಬೀಳುವಂತೆ ಬೊಬ್ಬೆ ಹೊಡೆಯುತ್ತಾ ಹೋದರೆ ಅದೇ ಸತ್ಯವಾಗುತ್ತ ಹೋಗುತ್ತದೆ’ ಹೀಗೊಂದು ಮಾತನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿ Public Enlightenment & Propaganda ಸಚಿವನಾಗಿದ್ದ ಗೊಬೆಲ್ಸ್ ಹೇಳಿದ್ದನೆಂಬ ಮಾತಿದೆ.ಈ ಮಾತನ್ನು ಗೊಬೆಲ್ಸ್ ಹೇಳಿದ್ದನೋ ಇಲ್ಲವೋ,ಆದರೆ ಈ ಮಾತು ಪ್ರಾಕ್ಟಿಕಲಿ ಸತ್ಯವಂತೂ ಹೌದು.ಬೇಕಿದ್ದರೆ ಗೊಬೆಲ್ಸ್ ಹೇಳಿಕೊಟ್ಟ ಈ ಸೂತ್ರವನ್ನು ಬಳಸುತ್ತಿರುವ ಭಾರತದ ಗಂಜಿಗಿರಾಕಿಗಳನ್ನು ಈ ಬಗ್ಗೆ ಕೇಳಿ ನೋಡಿ. ಉದಾಹರಣೆಗೆ, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಾವೇಶವೊಂದರಲ್ಲಿ ನರೇಂದ್ರ ಮೋದಿಯವರು ಮಾತನಾಡುತ್ತ ‘ ಲೂಟಿಕೋರ-ಕಳ್ಳರು ವಿದೇಶದ ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣವಿಟ್ಟಿದ್ದಾರೆಂದರೆ,ಅದನ್ನು ವಾಪಸ್ ತಂದರೆ ಭಾರತದ ಪ್ರತಿ ಬಡವನಿಗೆ ೧೫ ಲಕ್ಷದಷ್ಟು ಹಣವನ್ನು ಉಚಿತವಾಗಿ ಕೊಡುವಷ್ಟಿದೆ’ ಎಂದಿದ್ದರು(ಈ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ).ಇದೇ ಮಾತನ್ನು ಈಗ ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು ‘ಮೋದಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಕೌಂಟಿಗೆ ೧೫ ಲಕ್ಷ ಹಣ ಹಾಕ್ತಿನಿ ಅಂದಿದ್ರು.ಹಾಕಿಯೇ ಇಲ್ಲ’ ಎಂದು ಊರಿಡಿ ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡರು. ಈಗ ಈ ಸುಳ್ಳು ಯಾವ ಪರಿ ಹರಡಿದೆಯೆಂದರೆ,ಮೋದಿಯನ್ನು ವಿರೋಧಿಸಲು ಕಾರಣವೇ ಸಿಗದವರು ಎಲ್ರಿ ನಮ್ಮ ೧೫ ಲಕ್ಷ ಎಂದು ಕೇಳುವಷ್ಟು. ವಿಚಿತ್ರವೆಂದರೆ,ಇದು ಗಂಜಿಗಿರಾಕಿಗಳ ಅಪಪ್ರಚಾರದ ಕ್ಯಾಮ್ಪೇನು ಎಂದು ಹೇಳಬೇಕಾದವರೇ ತಡಬಡಾಯಿಸುವಂತಾಗಿದೆ.ಇದೇ ನೋಡಿ GGG Lying Formula (ಗಂಜಿ ಗಿರಾಕಿ ಗೊಬೆಲ್ಸ್ ಸುಳ್ಳಿನ ಸೂತ್ರ)ದ ತಾಕತ್ತು.

ಭಾರತದ ಗಂಜಿಗಿರಾಕಿಗಳ ಗೊಬೆಲ್ಸ್ ಕಾರ್ಯಾಚರಣೆಯ ಬಗ್ಗೆ ಮಾತನಾಡುವ ಮುನ್ನ, ಜರ್ಮನಿಯ ಗೊಬೆಲ್ಸ್ ಪರಿಚಯ ಮಾಡಿಕೊಳ್ಳಬೇಕು,ಆಗ ಅವರಿಬ್ಬರ ಸಾಮ್ಯತೆ ಅರ್ಥವಾದೀತು. ಜರ್ಮನಿಯಲ್ಲಿ National Socialist German Workers’ (Nazi) Party ಹಿಟ್ಲರನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಪೋಗ್ಯಾಂಡ ಸಚಿವನಾಗಿ ಬಂದವನು ಗೊಬೆಲ್ಸ್. ಹೈಡಲ್ ಬರ್ಗ್ ವಿವಿಯಿಂದ ಸಾಹಿತ್ಯದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದ ಚಾಣಾಕ್ಷ ಈತ. ಈತನಿಗೆ ಯಾವುದೇ ಸುಳ್ಳನ್ನು ಸತ್ಯವೆಂದು ಓದುಗರನ್ನು ಮರುಳು ಮಾಡುವ ಬರವಣಿಗೆ ಒಲಿದಿತ್ತು. ಇದರ ಜೊತೆಗೆ ಸಾಹಿತ್ಯ,ಸಿನಿಮಾ,ಕಲೆ ಇವನ ಆಸಕ್ತಿಕರ ಕ್ಷೇತ್ರಗಳು. ಇಷ್ಟೆಲ್ಲಾ ಆಸಕ್ತಿ ಮತ್ತು ಸಾಮರ್ಥ್ಯವಿದ್ದ  ವ್ಯಕ್ತಿ ದೇಶದ ಸಾಂಸ್ಕೃತಿಕ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಸಮರ್ಥ ವ್ಯಕ್ತಿಯಾಗಿ ಹಿಟ್ಲರನಿಗೆ ಅನ್ನಿಸಿದ್ದು ಸಹಜವೇ. ಅಧಿಕಾರಕ್ಕೆ ಬಂದ ಗೊಬೆಲ್ಸ್ ಕೂಡ ಹಿಟ್ಲರ್ ಸುತ್ತ ನಕಲಿ ಪ್ರಭಾವಳಿಯನ್ನು ಸೃಷ್ಟಿಸುವಲ್ಲಿ ಸಫಲನಾಗಿದ್ದ,  ಇವನಿಲ್ಲದಿದ್ದರೆ ಜರ್ಮನಿ ಮತ್ತೊಮ್ಮೆ ಗೌರವಯುತವಾಗಿ ತಲೆ ಎತ್ತಲಾರದು ಎಂದ, ಜನರು ನಂಬಿದರು.

ಮತ್ತಷ್ಟು ಓದು »

8
ನವೆಂ

ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು

ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.

[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.] ಮತ್ತಷ್ಟು ಓದು »

31
ಆಕ್ಟೋ

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು

– ಅನಿಲ್ ಚಳಗೇರಿ

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 1

ಕೈಯಲ್ಲಿ ಉದ್ದನೇಯ ಕೋಲು, ಹೆಗಲಿಗೊಂದು ಚೀಲ, ಕಾಲಲ್ಲಿ ಸ್ಪೋರ್ಟ್ಸ್ ಶೂಸ್ ಹಾಕಿಕೊಂಡ ಹಿರಿಯರೊಬ್ಬರು ಆಗಲೇ ನಮ್ಮ ಜೊತೆ 23 ಕಿಲೋ ಮೀಟರಿನಿಂದ ನಡೆದುಕೊಂಡು ಬಂದಿದ್ದರು (ಹತ್ತಾರು ಸಾವಿರ ಕಾರ್ಯಕರ್ತರ ಮಧ್ಯೆ ಅದೆಲ್ಲೋ ಹತ್ತಿಪತ್ತನೇ ಸಾಲಿನಲ್ಲಿ ಯಾರಿಗೂ ಕಾಣದೆ), ನಾವು ಅವರನ್ನು ಕುತೂಹಲದಿಂದ ನೋಡುತ್ತಿರುವದನ್ನು ಗಮನಿಸಿದ ಅವರು, ತಮ್ಮನ್ನು ತಾವು ಪರಿಚಯಿಸಿಕೊಂಡರು. ” I am captain Pillai, retired army officer, I am 71 years young and I have been walking from the day one and covered 150 kms today” ಅಂತ ಹೇಳಿದರು. ನಿಮಗೆ ಪ್ರೇರಣೆಯೇನು ? ನಿಮ್ಮ ಅಥವಾ ಮೇಲೆ ಏನಾದ್ರೂ ಅಟ್ಯಾಕ್ ಆಗಿತ್ತಾ?, ಅಂತ ಕೇಳಿದರೆ, “ನಾನು ದೇಶಕ್ಕೋಸ್ಕರ ದುಡಿದವನು, ನನಗೆ ಕಳ್ಳ ಕಮ್ಯುನಿಸ್ಟರ ನರಿ ಬುದ್ಧಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು, ” ನನ್ನ ಕೊನೆಯ ಉಸಿರಿರುವವರೆಗೆ ಅವರನ್ನು ವಿರೋಧಿಸುವೆ” ಅಂದಾಗಲೇ ನೆನಪಾಗಿದ್ದು ಅಕ್ಷಯ್ ಕುಮಾರ್ ನಟಿಸಿದ ” ಹಾಲಿಡೇ” ಚಿತ್ರ. “a soldier never takes rest” ಶೀರ್ಷಿಕೆ…. ಮುಂದೆರಡು ದಿನ ಎಪ್ಪತ್ತರ ಹರೆಯದ ಆ ಮಾಜಿ ಸೈನಿಕನ ದಿಟ್ಟ ಹೆಜ್ಜೆಗಳೇ ನಮ್ಮೆಲ್ಲರ ನಡಿಗೆಗೆ ಪ್ರೇರಣೆಯಾಯಿತು … ಮತ್ತಷ್ಟು ಓದು »

18
ಜುಲೈ

‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”

– ಗೋಪಾಲಕೃಷ್ಣ

‘ಭಾಗ್ಯ’ವಂತರೇ, “ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ”

ಮೂರು ವರ್ಷಗಳಲ್ಲಿ ಮೋದಿಯ ಪುಕ್ಸಟ್ಟೆ ಸಾಧನೆಗಳು “ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ..”, “ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ…” , “ದೇಹ ನಿಮ್ಮದು ಚಾಪೇನೂ ನಿಮ್ಮದು, ಯೋಗ ದಿನವೂ ನಿಮ್ಮದು..” , “ಅಕೌಂಟೂ ನಿಮ್ಮದು, ಧನವೂ ನಿಮ್ಮದು..”, “ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ” ಇದಕ್ಕಿಂತಲೂ ತುಟ್ಟಿ/ಬಿಟ್ಟಿ ಯೋಜನೆಗಳಿವೆಯೇ? ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪೋಸ್ಟ್ ಗಳು ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ದೇಶದ ಅಭಿವೃದ್ಧಿಯನ್ನು ಗಮನಿಸುತ್ತಿರುವವರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿರುವುದು ನಿಜ, ಮೋದಿ ಭಕ್ತರಿಗಂತೂ ಮೋದಿ ಹೇಳಿದ್ದು, ಮಾಡಿದ್ದೆಲ್ಲವೂ ಸರಿಯಿರಬಹುದು! ಆದರೆ ಮೋದಿಯನ್ನು ವಿರೋಧಿಸುವವರು ಹಾಗೂ ವಿರೋಧಿಸಲಿಕ್ಕಾಗಿಯೇ ವಿರೋಧಿಸುವವರು ನರೇಂದ್ರ ಮೋದಿಯವರನ್ನು ಪವಾಡ ಪುರುಷನಂತೆ ನೋಡುತ್ತಿರುವುದೇ ಆಶ್ಚರ್ಯ ಉಂಟು ಮಾಡುತ್ತಿದೆ. ಇದಕ್ಕೆ ಮೇಲಿನ ಪೋಸ್ಟ್ ಒಂದು ಚಿಕ್ಕ ನಿದರ್ಶನ ಅಷ್ಟೇ. ಮತ್ತಷ್ಟು ಓದು »

19
ಮೇ

ಕೈ ಜಾರುತ್ತಿರುವ ಜಮ್ಮುಕಾಶ್ಮೀರ ; ನೆನಪಾಗುವ ಜಗಮೋಹನ್

– ರಾಕೇಶ್ ಶೆಟ್ಟಿ

ಕಳೆದ 5 ತಿಂಗಳಿನಲ್ಲಿ ಸೇನೆಯ ಮೇಲೆ 7 ದಾಳಿಗಳು ; ಮೇ 2ನೇ ತಾರೀಖು ಇಬ್ಬರು ಭಾರತೀಯ ಯೋಧರ ತಲೆಕಡಿಯಲಾಯಿತು;2 ಬ್ಯಾಂಕುಗಳ ದರೋಡೆ,ಹತ್ಯೆಗಳು; ರಾಜ್ಯ ಸರ್ಕಾರವೇ ಭದ್ರತಾ ದೃಷ್ಟಿಯಿಂದ 40 ಬ್ಯಾಂಕುಗಳಲ್ಲಿ ನಗದು ವ್ಯವಹಾರ ಮಾಡದಂತೆ ಸೂಚಿಸಿದ್ದು; ಸಹೋದರಿಯ ಮದುವೆಗೆಂದು ರಜೆಯಲ್ಲಿ ಮನೆಗೆ ಬಂದಿದ್ದ ಯೋಧನನ್ನು ಅಪಹರಿಸಿ,ಚಿತ್ರಹಿಂಸೆ ನೀಡಿ ಹತ್ಯೆ;ಹುತಾತ್ಮ ಯೋಧನ ಶವಯಾತ್ರೆಯಲ್ಲಿ ಕಲ್ಲು ತೂರಾಟ;ಎನ್ಕೌಂಟರಿನಲ್ಲಿ ಸತ್ತ ಉಗ್ರನ ಶವಯಾತ್ರೆಯಲ್ಲಿ ಪ್ರತ್ಯಕ್ಷವಾದ ಉಗ್ರರಿಂದ ಗಾಳಿಯಲ್ಲಿ ಗುಂಡು,ಪ್ರತೀಕಾರದ ಕೂಗು;ಆಡಳಿತಾರೂಢ ಪಿಡಿಪಿ ಪಕ್ಷದ ಪುಲ್ವಾಮ ಜಿಲ್ಲಾಧ್ಯಕ್ಷನನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಇವೆಲ್ಲ ಘನಂಧಾರಿ ಸಾಧನೆಗಳಾಗಿರುವುದು ಆಗುತ್ತಿರುವುದು ಜಮ್ಮುಕಾಶ್ಮೀರ ರಾಜ್ಯದಲ್ಲಿ.ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉಗ್ರ ಬರ್ಹಾನ್ ವನಿಯ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರ, Demonetization ಮತ್ತು ಸರ್ಜಿಕಲ್ ಸ್ಟ್ರೈಕ್ ನಂತರ ತಾತ್ಕಾಲಿಕವಾಗಿ ತಣ್ಣಗಾಗಿತ್ತಾದರೂ ಈಗ ಭೀಕರ ಹಂತಕ್ಕೆ ಹೊರಟಿರುವಂತೆ ತೋರುತ್ತಿದೆ.ಜಮ್ಮುಕಾಶ್ಮೀರ ರಾಜ್ಯದಿಂದ ಈಗ ಬರುತ್ತಿರುವ ಸುದ್ದಿಗಳು 90ರ ದಶಕವನ್ನು ಮತ್ತೊಮ್ಮೆ ನೆನಪಿಸುತ್ತಿರುವುದು ಸುಳ್ಳಲ್ಲ. 90ರ ದಶಕದಲ್ಲೂ ಹೀಗೆ ಕಾನೂನು-ಸುವ್ಯವಸ್ಥೆಯೆನ್ನುವುದು ಹಾಳು ಬಿದ್ದು ಹೋಗಿತ್ತು.ಆಗಲೂ ಹೀಗೆ ಉಗ್ರಗಾಮಿಗಳು ಕಾಶ್ಮೀರಿಗಳ ಮನೆಬಾಗಿಲು ತಟ್ಟುತ್ತಿದ್ದರು,ಅನಾಮತ್ತಾಗಿ ಮನೆಯಿಂದ ಎತ್ತಾಕಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು.ಈಗ ಹೊತ್ತಿ ಉರಿಯುತ್ತಿರುವ ದಕ್ಷಿಣ ಕಾಶ್ಮೀರದ ಸ್ಥಿತಿ ಮತ್ತೆ 90ರ ದಶಕಕ್ಕೆ ಹೊರಳಿ ನಿಂತಂತಿದೆ.

ಮತ್ತಷ್ಟು ಓದು »

25
ಏಪ್ರಿಲ್

ಪ್ರಧಾನಿಗಳಿಗೇಕೆ ಭದ್ರತೆ..?

– ಸುರೇಶ್ ಮುಗ್ಬಾಳ್
ತಿಪಟೂರು

ನಾಯಕರ ಭದ್ರತೆಯ ವಿಚಾರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಎರಡು ಘಟನೆಗಳು

ಒಂದು “ಪ್ರಧಾನಿಗಳಿಗೇಕೆ ಭದ್ರತೆ..? ಜೀವ ಬೆದರಿಕೆ ಇದ್ದರೆ ಸತ್ತರೆ ಸಾಯಲಿ ಬಿಡಿ” ಎಂದು ಹೇಳಿದ ಬಸವರಾಜ ರಾಯರೆಡ್ಡಿಯವರ ಘಟನೆ. ಮತ್ತೊಂದು ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಎದುರಾಗಿ ಕಪ್ಪು ಬಟ್ಟೆ ಪ್ರದರ್ಶಿಸಿದ ಪ್ರತಿಭಟನಾಕಾರರನ್ನು ಮಂಡ್ಯ ಎಸ್.ಪಿ. ‘ಸುಧೀರ್ ಕುಮಾರ್ ರೆಡ್ಡಿ’ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ಡಿಯವರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಘಟನೆ. ಮತ್ತಷ್ಟು ಓದು »

27
ಡಿಸೆ

ಮೋದಿಯಂತವರು ರಾಜಕೀಯಕ್ಕೆ ಬರಬೇಕು..

– ರಾಕೇಶ್ ಶೆಟ್ಟಿ

2ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ. ಮತ್ತಷ್ಟು ಓದು »

25
ನವೆಂ

ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ

– ವಿನಾಯಕ ಹಂಪಿಹೊಳಿ

e-commerceಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.

ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು »

14
ನವೆಂ

ಮೋದಿಜಿ ಮಾಡುವುದೆಲ್ಲ ವೋಟಿಗಲ್ಲಾ…!

– ವಿಕ್ರಮ್ ಎಂ.ಆರ್

know-what-pm-modi-were-doing-in-surgical-strike-nightನಲವತ್ತು ವರ್ಷಗಳಿಂದ ಹಾಗೆಯೇ ಮೂಲೆ ಗುಂಪಾಗಿ ಬಿದ್ದಿತ್ತು. 1973ರಲ್ಲಿ ಇಂದಿರಾಗಾಂಧಿ OROP ಪ್ರಸ್ತಾಪವನ್ನೇ ಕಿತ್ತು ಎಸೆದಿದ್ದರು. ಇಂದು ಮೋದಿ ಸರ್ಕಾರ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೈನಿಕರ ಕನಸನ್ನು ನನಸು ಮಾಡಿದೆ. GST ಎಷ್ಟು ವರ್ಷದಿಂದ ಚರ್ಚೆಯಲ್ಲಿತ್ತು, ನೀವೇ ವಿಚಾರ ಮಾಡಿ! ಗಾಂಧಿ ಮನೆತನದ ತಂದಿಟ್ಟ ನೂರೆಂಟು ವಿಘ್ನಗಳ ನಡುವೆಯೂ ಮೋದಿಜಿ GST ಬಿಲ್ಲನ್ನು ಸಂಸತ್ತಿನಲ್ಲಿ ತಂದು ಎರಡೂ ಸದನದಲ್ಲಿ ಮಂಡನೆ ಮಾಡಿ ಎಲ್ಲರ ಒಪ್ಪಂದ ಪಡೆದು ಪಾಸು ಮಾಡಲಾಗಿದೆ. ಪ್ರಧಾನಮಂತ್ರಿ ಧನ ಜನ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಎಷ್ಟೋ ಕೋಟಿ ಬಡ ಜನರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಮೊದಲು ಅವರಿಗೆ ಸಿಗಬೇಕಾದ ಹಣ ಕೈಗೆ ಬರುತ್ತಿರಲಿಲ್ಲ ಆದರೆ ಈಗ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಮ್ಮ ಕಂಪನಿಯಲ್ಲಿರುವ ಕಾಂಟ್ರಾಕ್ಟ್ ಕೆಲಸಗಾರನೊಬ್ಬ ಹೀಗೆ ಹೇಳುತ್ತಾನೆ “ಸರ್, ಮೊದಲು ನೂರು ರೂಪಾಯಿ ವೇತನ ಇದ್ದರೆ ಅದರಲ್ಲಿ ಇಪ್ಪತ್ತು ರೂಪಾಯಿಯನ್ನು ಮೇಲ್ವಿಚಾರಕ ಇಟ್ಟುಕೊಂಡು ಉಳಿದಿದ್ದನ್ನು ನನಗೆ ಕೊಡುತ್ತಿದ್ದ ಆದರೆ ಈಗ ನೇರವಾಗಿ ನೂರು ರುಪಾಯಿ ನನ್ನ ಬ್ಯಾಂಕಿಗೆ ಬರುತ್ತದೆ”. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಸಾವಿರ ನಿದರ್ಶನಗಳನ್ನು ಹಂಚಿಕೊಳ್ಳಬಹುದು. ಇವೆಲ್ಲ ಒಂದಲ್ಲಾ ಒಂದುಕಡೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ‌. ಆದರೆ ಮೋದಿ ಸರ್ಕಾರ ಏನೇ ಮಾಡಿದರೂ ಕೆಲವರಿಗೆ ಉರಿ. ವಿರೋಧ ಪಕ್ಷ ಅಥವಾ ಕೆಲವು ಬುದ್ಧಿಜೀವಿಗಳು ಮೋದಿಜಿಯವರ ಪ್ರತಿ ಪ್ರಯತ್ನವನ್ನೂ ವಿರೋಧಿಸುವುದು ಯಾತಕ್ಕೆ? ಮಾಡಬೇಕು ಇಲ್ಲವೇ ಮಾಡಲು ಬಿಡಬೇಕು. ಅರವತ್ತು ವರ್ಷವಾಯಿತು, ಇನ್ನೂ ದೇಶ ಎಷ್ಟು ಮುಂದುವರಿಯಬೇಕೋ ಅಷ್ಟು ಮುಂದುವರಿದಿಲ್ಲ. ಮೋದಿಜಿ ಬಂದಾಗಿನಿಂದ ಒಂದು ರಿದಮ್ ಸಿಕ್ಕಿದೆ ಅದನ್ನು ಹಾಳು ಮಾಡಲು‌ ಕಾರಣಗಳೇನು? ಏನೇ ಮಾಡಿದರೂ ಅದು ಚುನಾವಣೆಯಲ್ಲಿ ಮತ ಗಳಿಸಲೇ ಮಾಡಿದ್ದು ಎಂದು ಡಂಗುರ ಬಾರಿಸುತ್ತ ಸಾರುವ ಈ ಎಡಬಿಡಂಗಿಗಳ ಉದ್ದೇಶವಾದರೂ ಏನು? ಮತ್ತಷ್ಟು ಓದು »