ವಿಷಯದ ವಿವರಗಳಿಗೆ ದಾಟಿರಿ

Posts tagged ‘ನಾರಾಯಣ ಗುರು’

26
ಆಗಸ್ಟ್

ಬ್ರಹ್ಮರ್ಷಿ ನಾರಾಯಣ ಗುರುಗಳ ಮೇಲೇಕೆ ಬೌದ್ಧಿಕ ವಿಧ್ವಂಸಕರ ವಕ್ರದೃಷ್ಟಿ?

– ಸಂತೋಷ್ ತಮ್ಮಯ್ಯ
narayanaguru-24-1472006537ಕೆಲವರ್ಷಗಳ ಹಿಂದೆ ಉತ್ತರ ಭಾರತದ ಎಲ್ಲೋ ಬಾಂಬ್ ಸ್ಪೋಟಿಸಿದವರನ್ನು ಹಿಡಿಯಲು ಭಯೋತ್ಪಾದನಾ ನಿಗ್ರಹ ದಳ ಮಂಗಳೂರಿಗೆ ಆಗಮಿಸಿತ್ತು. ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಉಲ್ಲಾಳ ಪ್ರದೇಶದ ಒಂದು ಊರೊಳಗೂ ಅವರು ನುಗ್ಗಿ ಭಯೋತ್ಪಾದಕರನ್ನೂ ಹಿಡಿದಿದ್ದರು. ಆದರೆ ಭಯೋತ್ಪಾದನಾ ನಿಗ್ರಹ ದಳವೆಂಬ ಚಾಲಾಕಿಗಳ ತಂಡವನ್ನು ಸ್ಥಳೀಯರು ಊರಿಂದ ಜಪ್ಪಯ್ಯ ಎಂದರೂ ಹೊರಹೋಗಬಿಡಲಿಲ್ಲ. ಜನರು ಕಾಶ್ಮೀರದಲ್ಲಿ ಕಲ್ಲೆಸೆಯುವವರಂತೆ ಅಧಿಕಾರಿಗಳಿದ್ದ ಕಾರುಗಳತ್ತ ಕಲ್ಲೆಸೆದರು, ಟಯರುಗಳನ್ನು ಸುಟ್ಟು ರಸ್ತೆಗೆಸೆದರು. ಹೀಗೆ ಮಾಡಿದವರೇನೂ ಬಾಂಗ್ಲಾ ವಲಸಿಗರಲ್ಲ. ಲಷ್ಕರ್ ತೊಯಿಬಾದವರಲ್ಲ. ಎಲ್ಲರೂ ಕರಾವಳಿಯ ಬ್ಯಾರಿಗಳೆಂಬ ಸ್ಥಳೀಯ ಮುಸ್ಲಿಮರು. ಶಂಕಿತ ಭಯೋತ್ಪಾದಕನೂ ತಮ್ಮಂತೆ ಒಬ್ಬ ಮುಸಲ್ಮಾನ ಎಂಬ ಒಂದೇ ಒಂದು ಕಾರಣಕ್ಕೆ ಸ್ಥಳೀಯರು ಹಾಗೆ ವರ್ತಿಸಿದ್ದರು. ಆದರೂ ನಮ್ಮಲ್ಲಿ ಭಯೋತ್ಪಾದನೆಗೆ ಧರ್ಮವಿಲ್ಲ! ವಿಚಿತ್ರವೆಂದರೆ ಆಗ ಕರಾವಳಿಯ ರಕ್ಷಕರೆಂಬಂತೆ ವರ್ತಿಸುವ ಮಂಗಳೂರಿನ ಸಮಸ್ತ ಬುದ್ಧಿಜೀವಿಗಳು, ಬಾಂಬುಗಳನ್ನೇ ಅಕ್ಷರಗಳಾಗಿ ಬರೆಯುವವರಾರೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎಂದು ತಲೆಕೆಟ್ಟವರಿಗೆ ಬುದ್ಧಿಹೇಳಲಿಲ್ಲ. Read more »