ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370
– ರಾಕೇಶ್ ಶೆಟ್ಟಿ
“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು ಸಂವಿಧಾನ ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ ಮುಚ್ಚಿಸಲು “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ ನೆಹರೂ ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್ 370 ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…! ಮತ್ತಷ್ಟು ಓದು
ಭಾರತದ ನಾಯಕರ ಹತ್ಯೆಯ ಹಿಂದಿನ ಕಾಣದ ಕೈಗಳು
– ರಾಕೇಶ್ ಶೆಟ್ಟಿ
ಆ ಮನುಷ್ಯ ಮನಸ್ಸು ಮಾಡಿದ್ದರೆ, ಬ್ರಿಟಿಷ್ ಸರ್ಕಾರದಲ್ಲಿ ‘ಐ.ಸಿ.ಎಸ್’ ಅಧಿಕಾರಿಯಾಗಿ ನೆಮ್ಮದಿಯ ಬದುಕು ಬದುಕಬಹುದಿತ್ತು, ಆದರೆ ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ ಅನ್ನು ಎಡಗಾಲಲ್ಲಿ ಒದ್ದು, ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಭಾರತಕ್ಕೆ ಬಂದ ಸುಭಾಷ್ ರವರು ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ತಮ್ಮ ಸಾಮರ್ಥ್ಯದಿಂದಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆಗಲಾದರೂ ಅವರು ಸುಮ್ಮನೇ ಇದ್ದಿದ್ದರೂ ಸ್ವತಂತ್ರ ಭಾರತದಲ್ಲಿ ಯಾವುದಾದರೊಂದು ಸಚಿವ ಸ್ಥಾನ ಪಡೆದು ಇರುತ್ತಿದ್ದರೋ ಏನೋ. ಆದರೆ ಹುಟ್ಟಾ ಸ್ವಾಭಿಮಾನಿ ಮತ್ತು ಹೋರಾಟಗಾರರಾಗಿದ್ದ ನೇತಾಜಿಯವರು ಕಾಂಗ್ರೆಸ್ಸನ್ನೇ ಬದಲಿಸ ಹೊರಟರು. ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಹೇಗೆ ನೆಹರೂ ಮನೆತನದ ಅಡಿಯಾಳಾಗಿದೆಯೋ, ಆಗ ಗಾಂಧೀಜಿಯವರ ಕೈಯಲ್ಲೇ ಇತ್ತು. ಅದನ್ನು ಧಿಕ್ಕರಿಸಿ ನಿಂತ ಸುಭಾಷರನ್ನು ಗಾಂಧೀ ಬೆಂಬಲಿಗರು ಬಿಟ್ಟಾರೇನು? ಬೆಂಬಲಿಗರು ಬಿಟ್ಟರೂ, ಗಾಂಧೀಜಿ ಪಕ್ಷದ ಮೇಲಿನ ತನ್ನ ಪಾರುಪತ್ತೇದಾರಿಕೆಯನ್ನು ಬಿಡಲು ಸಿದ್ಧರಿದ್ದರಿರಲಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯವೊಂದೇ ಅಂತಿಮ ಗಮ್ಯವಾಗಿದ್ದ ಸುಭಾಷರಿಗೆ ಗಾಂಧೀಜಿಯವರ ಚಿಲ್ಲರೆ ರಾಜಕೀಯದ ಜಂಜಾಟಗಳು ಬೇಕಿರಲಿಲ್ಲ. ಕಾಂಗ್ರೆಸ್ಸಿನಿಂದ ಹೊರ ಬಂದ ಅವರು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಬ್ರಿಟಿಷರಿಗೆ ಸುಭಾಷ್ Potential Threat ಎನ್ನುವುದು ಅರಿವಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿದ್ದರು, ಈ ಪುಣ್ಯಾತ್ಮ ಅಲ್ಲಿಂದ ತಪ್ಪಿಸಿಕೊಂಡರು. ನಂತರದ್ದು ಭಾರತ ಸ್ವಾತಂತ್ರ್ಯ ಇತಿಹಾಸದ ರೋಚಕ ಅಧ್ಯಾಯ, ಬರಿಗೈಯಲ್ಲಿ ದೇಶಬಿಟ್ಟ ಸುಭಾಷ್, ೪೫ ಸಾವಿರ ಜನರ ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್ ಜೊತೆ ಸೇರಿಕೊಂಡು ೪೪ರಲ್ಲೇ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು, ಅಂತಿಮವಾಗಿ ಜಪಾನ್ ಹಾಗೂ ಆಜಾದ್ ಹಿಂದ್ ಫೌಜಿಗೆ ಈಶಾನ್ಯ ಭಾರತದಲ್ಲಿ ಹಿನ್ನಡೆಯಾಯಿತಾದರೂ, ಸುಭಾಷರು ಹೊತ್ತಿಸಿದ್ದ ಕ್ರಾಂತಿಯ ಕಿಡಿ ಸರ್ವವ್ಯಾಪಿಯಾಗಿತ್ತು. ಆಜಾದ್ ಹಿಂದ್ ಫೌಜಿನ ರುದ್ರನರ್ತನ ಬ್ರಿಟಿಷ್ ಭಾರತೀಯ ಆರ್ಮಿಯನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಅತ್ತ ಜಪಾನ್ ಶರಣಾಗಾತಿಯಾಗುವುದರಲ್ಲಿತ್ತು, ಇತ್ತ ಬ್ರಿಟಿಷರಿಗೆ ಭಾರತದಲ್ಲಿ ಉಳಿಗಾಲವಿರಲಿಲ್ಲವಾಗಿತ್ತು, ಆಗಲೇ ಶುರುವಾಗಿದ್ದು ಸುಭಾಷರ ನಿಗೂಢ ವಿಮಾನಾಪಘಾತದ ಕತೆ. ಅಪಘಾತದಲ್ಲಿ ಸುಭಾಷರು ಅಸುನೀಗಿದರು ಎನ್ನುವುದನ್ನು ಯಾರೆಂದರೇ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಮೇರಿಕನ್/ಬ್ರಿಟಿಷ್ ಗುಪ್ತಚರರು ವರ್ಷಗಟ್ಟಲೆ ಸುಭಾಷರ ಇರುವಿಕೆಯ ಪತ್ತೆ ಹಚ್ಚಲೆಂದೇ ಹಿಂದೆ ಬಿದ್ದಿದ್ದರು. ಇತ್ತ ಭಾರತದಲ್ಲಿ ಬ್ರಿಟಿಷರ ಹೈಫೈ ಆತಿಥ್ಯದ ಜೈಲಿನಲ್ಲಿದ್ದುಕೊಂಡೇ ಆಜಾದ್ ಹಿಂದ್ ಫೌಜಿನವರು ಭಾರತಕ್ಕೆ ಬಂದರೆ ಕತ್ತಿ ಹಿಡಿದು ಹೋರಾಡುತ್ತೇನೆಂದಿದ್ದ ಕಠಾರಿ ವೀರ ನೆಹರೂ ಸಾಹೇಬರಿಗೆ, ಸುಭಾಷ್ ವಾಪಸ್ ಬಂದರೆ ತನ್ನ ಖುರ್ಚಿಯ ಗತಿಯೇನು ಎಂದು ಚಿಂತೆ ಹತ್ತಿತ್ತು. ಅದೇ ಕಾರಣಕ್ಕೆ, ಬ್ರಿಟನ್ ಪ್ರಧಾನಿ ಆಟ್ಲಿಯವರಿಗೆ ಬರೆದ ಪತ್ರದಲ್ಲಿ, ನಿಮ್ಮ ಯುದ್ಧ ಖೈದಿ ಸುಭಾಷ್ ಗೆ ರಷ್ಯಾ ಆಶ್ರಯ ಕೊಟ್ಟಿದೆ ಎಂದು ಚಿಲ್ಲರೆ ದೂರು ನೀಡಿದ್ದರು. ಅಂದು ತೈಪೆಯಲ್ಲಿ ಯಾವುದೇ ವಿಮಾನ ಹಾರಾಟ ನಡೆದಿಲ್ಲವೆನ್ನುವುದು ಈಗ ಅಧಿಕೃತವಾಗಿದೆ. ವಿಮಾನವೇ ಹಾರದೇ, ಅಪಘಾತವಾಗಿದ್ದು ಎಲ್ಲಿಂದ? ಅಪಘಾತವೇ ನಡೆಯದಿದ್ದ ಮೇಲೆ ಸುಭಾಷರು ಹೋದರೆಲ್ಲಿ? ಹಾಗೆ ನಾಪತ್ತೆಯಾದವರನ್ನು ಹುಡುಕಿ ಕೊಲ್ಲಲಾಯಿತೇ? ಈ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತಂತ್ರ ಭಾರತದ ಮೊದಲ ನಿಗೂಢ ರಾಜಕೀಯ ಕಣ್ಮರೆ/ಹತ್ಯೆಯ ಸಾಲಿಗೆ ಸೇರುವುದು ಸುಭಾಷರ ಹೆಸರು. ಸುಭಾಷರು ಮಾಡಿದ ತಪ್ಪೆಂದರೆ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದು. ಸುಭಾಷರಿಂದ ಶುರುವಾದ ಈ ನಿಗೂಢ ರಾಜಕೀಯ ಹತ್ಯೆ/ಕಣ್ಮರೆಯ ಸರಣಿ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಲೇ ಹೋಯಿತು. ಮತ್ತಷ್ಟು ಓದು
ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?
– ಶ್ರೀಕಾಂತ್ ಆಚಾರ್ಯ
ನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ? ಮತ್ತಷ್ಟು ಓದು