ವಿಷಯದ ವಿವರಗಳಿಗೆ ದಾಟಿರಿ

Posts tagged ‘ನೇತಾಜಿ’

21
ಆಕ್ಟೋ

ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!

– ಶ್ರೇಯಾಂಕ ಎಸ್ ರಾನಡೆ.

netaji-subhash-chandra-bose-01-1501591576‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93.

ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. Read more »

9
ಫೆಬ್ರ

ಪ್ರಸ್ಥಾನ: ಕಲ್ಕತ್ತಾದಿಂದ ಬರ್ಲಿನ್ನಿನ ವರೆಗೆ; ದಾಸ್ಯದಿಂದ ಮುಕ್ತಿಯವರೆಗೆ

– ಎಸ್.ಎನ್.ಭಾಸ್ಕರ್‍

NSC-Bose-Airಕಲ್ಕತ್ತಾ ನಗರದ ಎಲ್ಗಿನ್ ರಸ್ತೆಯ ಮನೆಯೊಂದರಲ್ಲಿನ ಪ್ರತ್ಯೇಕ ಕೋಣೆ. ದಿನಾಂಕ ೧೬ ನೇ ಜನವರಿ, ಇಸವಿ ೧೯೪೧.

“ರಾಷ್ಟ್ರಂ ಧಾರಯತಾಂ ಧ್ರೃವಂ”

“ರಾಷ್ಟ್ರಂ ಅಶ್ವಮೇಧಃ”

ಇದು ಸಂಕಲ್ಪ. ಈ ಧೀರ ಸಂಕಲ್ಪ ಮನೆಮಾಡಿದ್ದ ಆ ವ್ಯಕ್ತಿ ಪದ್ಮಾಸನ ಹಾಕಿ ಕುಳಿತಿದ್ದಾರೆ. ಎಡಗೈನಲ್ಲಿ ಜಪಮಾಲೆ ಮನದಲ್ಲಿ ಪ್ರಣವಮಂತ್ರ. ಮುಚ್ಚಿದ ಕಣ್ಗಳ ಹಿಂದೆ ಅದೆಂತಹ ಉಜ್ವಲ ಭವಿತವ್ಯದ ನೋಟವಿತ್ತೋ..! ಅರಿಯಬಲ್ಲವರು ತಾನೇ ಯಾರಿದ್ದರು ?

ಮಂದಸ್ಮಿತ ಅಂತರ್ಮುಖಿಯಾದ ಮುಖಾರವಿಂದದ ನೆರಳಿನಲ್ಲಿ ಸ್ಪಷ್ಟ ನಿಲುವು ಅಪ್ರಯತ್ನಪೂರ್ವಕವಾಗಿ ನಳನಳಿಸುತಲಿತ್ತು. ಆಳವಾದ ಧ್ಯಾನ. ಜಪಮಾಲೆಯನ್ನು ಹಿಡಿದಿದ್ದ ಕೈ ಬೆರಳುಗಳನ್ನು ಹೊರತು ಪಡಿಸಿ ಇಡೀ ದೇಹ ನಿರ್ಲಿಪ್ತ. ಮನದಲ್ಲಿ ಜ್ವಾಲಾಮುಖಿಯೇ ಇದ್ದರೂ, ಹಿಮಾಲಯದ ಪರ್ವತದಂತೆ ಶಾಂತಸ್ಮಿತ. ಮುಂಜಾನೆಯ ಮೊಗ್ಗರಳುವಂತೆ ನಿಧಾನವಾಗಿ ಕಣ್ಣಗಳನ್ನು ತೆರೆಯುತ್ತಾರೆ. ಎದುರಿಗೆ ಗೋಡೆಯ ಮೇಲೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಅದರ ಎಡಗಡೆಗೆ ರಾಮಕೃಷ್ಣ ಪರಮಹಂಸರು, ಬಲಗಡೆಗೆ ಮಹರ್ಷಿ ಅರವಿಂದರು. ತನ್ನೆರಡೂ ಕೈಗಳನ್ನೂ ಕಟ್ಟಿ ನಸುನಗುತ್ತಾ ನಿಂತಿದ್ದ ವಿವೇಕಾನಂದರ ಭಾವಚಿತ್ರವನ್ನೇ ನೋಡುತ್ತಾ ನಿಶ್ಚಲರಾಗಿ ಕುಳಿತೇ ಇದ್ದರು. ಅದೆಂತಹ ದಿವ್ಯ ಚೈತನ್ಯ, ದೇದೀಪ್ಯಮಾನವಾದ ಪ್ರಾಂಜ್ವಲ ಕಣ್ಗಳಲ್ಲಿ ಹೊಳೆಯುತ್ತಿದ್ದ ಅಚಲ ವಿಶ್ವಾಸ. ನೋಡುತ್ತಿದ್ದರೇ ಆ ಕಣ್ಗಳೆಂಬ ಸಾಗರದಲ್ಲಿ ಮುಳುಗೇ ಹೋಗುತ್ತೇವೆ. ಸೂಜಿಗಲ್ಲಿಗೆ ಸೆಳೆಯಲ್ಪಡುವ ಕಬ್ಬಿಣದ ಚೂರುಗಳಂತೆ ಸೆಳೆದು ಬಂಧಿಯಾಗುತ್ತೇವೆ. ಎಂತಹ ಆಕರ್ಷಣೀಯ ವ್ಯಕ್ತಿತ್ವ…!! ಕಣ್ತುಂಬಿ ಬಂತು ಮೂಡಿದ ಹನಿಗಳು ಧಳ ಧಳನೇ ಇಳಿಯತೊಡಗಿದವು ನೋಟ ಮಾತ್ರ ನಿಶ್ಚಲ..ನಿರ್ಲಿಪ್ತ. ರೋಮ ರೋಮಗಳಲ್ಲೂ ವಿದ್ಯುತ್ ಸಂಚಾರ. ಅವರ ನಿರ್ಧಾರ ಸಂಪೂರ್ಣವಾಗಿತ್ತು. ರೂಪುರೇಷೆಗಳು ಸಿದ್ದವಾಗಿದ್ದವು. ಇಟ್ಟ ಹೆಜ್ಜೆ ಹಿಂತೆಗೆದ ನಿದರ್ಶನ ಜಾಯಮಾನದಲ್ಲೇ ಇಲ್ಲವಲ್ಲ. “ರಾಷ್ಟ್ರಂ ಧಾರಯತಾಂ ದ್ರೃವಂ: ರಾಷ್ಟ್ರಂ ಅಶ್ವಮೇಧಃ:”.

Read more »

28
ಸೆಪ್ಟೆಂ

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

 -ಸಂತೋಶ್ ತಮ್ಮಯ್ಯ

ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.

ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.

Read more »