ವಿಷಯದ ವಿವರಗಳಿಗೆ ದಾಟಿರಿ

Posts tagged ‘ನೋಟ್ ಬ್ಯಾನ್’

8
ನವೆಂ

ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು

ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.

[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.] ಮತ್ತಷ್ಟು ಓದು »

10
ಡಿಸೆ

ಇದು ಆರಂಭ ಅಷ್ಟೇ; ಕಾದು ನೋಡೋಣ

– ಮು ಅ ಶ್ರೀರಂಗ

maxresdefault‘ಹಳ್ಳಿಗಳ ಮನೆಯಲ್ಲಿನ ಹೆಂಗಸರು’ ಆಪದ್ಧನ ಎಂದು ಕೂಡಿಡುವ ಹಣ ಸಾವಿರಾರು ರೂಪಾಯಿಗಳು ಇರಬಹುದು. ಆದರೆ ಲಕ್ಷಾಂತರ ರೂಪಾಯಿಗಳ ತನಕ ಇರುತ್ತದೆ ಎಂಬುದು ಕೇವಲ ಉತ್ಪ್ರೇಕ್ಷೆ. ಇದಕ್ಕೆ ಕಾರಣಗಳು ಹೀಗಿವೆ..

(೧). ಹಿಂದಿದ್ದಂತೆ ಈಗ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ಇಲ್ಲ. ತಾವು ಪಟ್ಟ ಹಳ್ಳಿಯ ಕಷ್ಟಗಳು ತಮ್ಮ ಮಕ್ಕಳಿಗೆ ಬೇಡ ಎಂದು ತಾಯಿತಂದೆಯರೇ ತಮ್ಮ ಮಕ್ಕಳನ್ನು ಓದು, ಕೆಲಸ ಎಂದು ಪಟ್ಟಣಕ್ಕೆ ಕಳಿಸುತ್ತಿದ್ದಾರೆ ಅಥವಾ ಮಕ್ಕಳೇ ಸ್ವತಃ ಹುಟ್ಟಿದೂರನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗಿಯಾಗಿದೆ. ಅವರು ಮತ್ತೆ ಬಂದು ಹಳ್ಳಿಯಲ್ಲಿ ತಮ್ಮಂತೆ ವ್ಯವಸಾಯ ಮಾಡಿಕೊಂಡಿರುವುದಿಲ್ಲ ಎಂದು ತಾಯಿ-ತಂದೆಯರಿಗೂ ಗೊತ್ತು; ಊರು ಬಿಟ್ಟು ಬಂದ ಮಕ್ಕಳು ಒಮ್ಮೆ ಪಟ್ಟಣ ವಾಸದ ರುಚಿ ಹತ್ತಿದ ಮೇಲೆ ಹಳ್ಳಿಗೆ ಹೋಗುವುದು ವರ್ಷಕ್ಕೊಮ್ಮೆ ಊರ ಜಾತ್ರೆಗೋ ಅಥವಾ ತಾಯಿ ತಂದೆಯರು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬಂದ ಮೇಲೆ ಅಷ್ಟೇ. ಮತ್ತಷ್ಟು ಓದು »

8
ಡಿಸೆ

ಚೇಂಜ್‍ಗೆ ಗಂಡ, ಎಕ್ಸ್’ಚೇಂಜ್‍ಗೆ ಪರಗಂಡ..! ( ಹಾಸ್ಯ )

– ತುರುವೇಕೆರೆ ಪ್ರಸಾದ್

coupleಬ್ರಹ್ಮಚಾರಿಯಾದ ಮೋದಿಗೆ ನಮ್ಮಂತಹ ಸದ್ (ಸತ್?) ಗೃಹಸ್ಥರ ಕಷ್ಟ ಹೇಗೆ ಗೊತ್ತಿರಲಿಕ್ಕೆ ಸಾಧ್ಯ ? ಎಂದು ನಾವು ಹಲವು ಬಾರಿ ಬಹಳ ಬೇಸತ್ತುಕೊಂಡಿದ್ದೆವು. ದೊಡ್ಡ ದೇಶದ ಪ್ರಧಾನಿ ಆಗುವುದು ದೊಡ್ಡದಲ್ಲ, ಚಿಕ್ಕ ಸಂಸಾರದಲ್ಲಿ ನಿಧಾನಿಯಾಗಿ ಎಲ್ಲವನ್ನೂ ನಿಭಾಯಿಸುವುದೇ ಕಷ್ಟ ಎಂದು ಮೊದಲಿನಿಂದಲೂ ನಮಗೆ ಅನುಭವವೇದ್ಯವಾದ ಅರಿವು ಮೂಡಿತ್ತು. ಅಂತದ್ದೊಂದು ಅರಿವಿಲ್ಲದೆ ಮೋದಿ ಎಲ್ಲಂದರಲ್ಲಿ ಓಡಾಡಿಕೊಂಡು, ದೇಶ ಸುತ್ತಿಕೊಂಡು ನೆಮ್ಮದಿಯಾಗಿದ್ದಾರಲ್ಲ ಎಂದು ನಮಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿಯಿತ್ತು. ನಮ್ಮಂತಹ ಗೃಹಸ್ಥರಿಗೆ ಯಾವುದೇ ಪ್ಯಾಕೇಜ್ ಘೋಷಿಸಿರಲಿಲ್ಲ ಎಂದು ಮುಂದಿನ ಬಾರಿ ಅವರಿಗೆ ಓಟ್ ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಈಗ ಅವರು ಏಕಾಏಕಿ 1000, 500ರ ನೋಟುಗಳನ್ನು ಬ್ಯಾನು ಮಾಡಿ ನಮಗೆ ದೊಡ್ಡ ಉಪಕಾರ ಮಾಡಿದ್ದಾರೆ. ಮಡದಿ ಇದ್ದಿದ್ದರೆ ಇಷ್ಟೆಲ್ಲಾ ಗುಟ್ಟು ಕಾಯ್ದಿಟ್ಟುಕೊಂಡು ಮೋದಿ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಲು ಆಗುತ್ತಿರಲಿಲ್ಲ. ಹೇಗೋ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಕೋಟ್ಯಂತರ ಗೃಹಸ್ಥರನ್ನು ಸಂಕಟದಿಂದ ಪಾರು ಮಾಡಿದ್ದಾರೆ. ನಮ್ಮಲ್ಲೂ ಹೊಸ ಆಸೆ ಭರವಸೆ ಮೂಡಿಸಿದ್ದಾರೆ. ಕೋಟ್ಯಂತರ ಪತ್ನೀ ಶೋಷಿತ ಗಂಡಸರ ಪರವಾಗಿ ಮೋದಿಗೆ ಕೋಟಿಕೋಟಿ ವಂದನೆಗಳು.. ಮತ್ತಷ್ಟು ಓದು »

4
ಡಿಸೆ

ಪರ ವಿರೋಧಗಳ ನಡುವೆ ನೋಟುಗಳ ಸಮಸ್ಯೆ

– ಮು ಅ ಶ್ರೀರಂಗ

untitledಪ್ರಜಾಪ್ರಭುತ್ವದಲ್ಲಿ ‘ಪಾಸಿಟಿವ್ ಆದ ವಾತಾವರಣ’ ಎಂಬುದು ಒಂದು ಆದರ್ಶವಾಗಬಹುದಷ್ಟೇ ಹೊರತು ವಾಸ್ತವ ಆಗಲಾರದು. ಹೀಗಾಗಿ  ಕೆಲವೊಂದು ಸುಧಾರಣೆಗಳನ್ನು ಮುಂದಿನ ದಿನಗಳ ಒಳಿತಿಗಾಗಿ, ಕೆಲವರಿಗೆ ಸದ್ಯಕ್ಕೆ ಅನಾನುಕೂಲವೆನಿಸಿದರೂ, ಇದು ಪಾಸಿಟಿವ್ ಆದ ವಾತಾವರಣ ಅಲ್ಲ ಎಂದು ಅನಿಸಿದರೂ  ತರಲೇಬೇಕಾಗುತ್ತದೆ. ಹಿಂದೆ ಭಾರತದಲ್ಲಿ ಭೂಸುಧಾರಣಾ ಕಾನೂನು, ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಇವುಗಳನ್ನು ಜಾರಿಗೆ ತಂದಾಗಲೂ ‘ಎಲ್ಲೂ, ಎಲ್ಲರಲ್ಲೂ ಪಾಸಿಟಿವ್ ಆದ ವಾತಾವರಣ’ ಇರಲಿಲ್ಲ.  ಭಾರತದಲ್ಲಿ ಅನಕ್ಷರಸ್ಥರೇ ಜಾಸ್ತಿ; ಇಡೀ ದೇಶದಲ್ಲಿ ಅಕ್ಷರಸ್ಥರು ಜಾಸ್ತಿ ಇರುವ ರಾಜ್ಯವಾದ  ಕೇರಳದಲ್ಲಿ ಸಹ ‘ನಗದು’ ವ್ಯವಹಾರವೇ ಜಾಸ್ತಿ; ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, Paytm ಇತ್ಯಾದಿಗಳ ಮೂಲಕ ವ್ಯವಹಾರ ಕಡಿಮೆ. ಹೀಗಾಗಿ ಇಡೀ ಭಾರತದಲ್ಲಿ ಈ ವ್ಯವಸ್ಥೆಯನ್ನು ಶೇಕಡಾ ಐವತ್ತರಷ್ಟು ಜಾರಿಗೆ ತರುವುದೂ ಅಸಾಧ್ಯ ಎಂದು ಹೇಳಲು ಕೆಲವರು ಕೊಡುವ ಅಂಕಿ-ಅಂಶಗಳ ಬಗ್ಗೆ ನನ್ನ ತಕರಾರೇನೂ ಇಲ್ಲ. ಯಾವುದಾದರೂ ಒಂದೆರೆಡು ಸಂಸ್ಥೆಗಳು ಅಂತಹ sample surveyಗಳನ್ನು ಮಾಡಿರುತ್ತವೆ. ಅವುಗಳ ಆಧಾರದ ಮೇಲೆ ಹೇಳಿರುತ್ತಾರೆ. ಚುನಾವಣೆಯ ಫಲಿತಾಂಶಗಳು, ಯಾವುದೋ ಒಂದು ಸಾಮಾಜಿಕ ಸಮಸ್ಯೆ ಇವುಗಳ ಬಗೆಗಿನ ಇಂತಹ ಅಂಕಿ-ಅಂಶಗಳು ‘ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ’. ಈಗಂತೂ ಸುದ್ದಿ ವಾಹಿನಿಗಳು yes or no ಎಂಬ ಎರಡು ಪದಗಳ sms ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿವೆ! ಅಲ್ಲಿಗೆ ಮುಗಿಯಿತು. ಅದೇ ಸತ್ಯ, ದೂಸರಾ ಮಾತಿಲ್ಲ.  ಮತ್ತಷ್ಟು ಓದು »

2
ಡಿಸೆ

ಮೋದಿ ಭಾರತದಲ್ಲಿ ತೀವ್ರಗೊಂಡ ನಿರುದ್ಯೋಗ ಸಮಸ್ಯೆ : ಚಿಂತಾಜನಕ ಮಾಹಿತಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್, ಮಾವಿನಕಾಡು

sulsuddi-2ನವದೆಹಲಿ, ಡಿಸೆಂಬರ್ 2 : ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ತೀವ್ರವಾಗಿದೆ. ಕಳೆದ ಹನ್ನೆರಡು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿರುವುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಕಳೆದ ನವೆಂಬರ್.8 ನೇ ತಾರೀಕಿನಿಂದ ದೇಶದಲ್ಲಿ ಇಲ್ಲಿಯವರೆಗೆ 15 ರಿಂದ 65 ರ ವಯಸ್ಸಿನ ಸುಮಾರು 8% ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟ್ರಲ್‌ ಗಂಜಿ ಬ್ಯೂರೋ ನಡೆಸಿದ ಉದ್ಯೋಗ-ನಿರುದ್ಯೋಗ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಮತ್ತಷ್ಟು ಓದು »

1
ಡಿಸೆ

ಅನಾಣ್ಯೀಕರಣ ಯಾಕೆ ? ಹೇಗೆ ?

– ರೂಪಲಕ್ಷ್ಮಿ

hqdefaultಮೋದಿಯವರು ಈ ೫೦೦/೧೦೦೦ ನೋಟ್ ಗಳನ್ನು ನಿಷೇಧಿಸಿದ ದಿವಸದಿಂದ ಜನರಿಗೆ ಸಿಕ್ಕಾಪಟ್ಟೆ ಗೊಂದಲಗಳು. ಬಹುಶಃ ರಹಸ್ಯವಾಗಿಟ್ಟು, ದಿಢೀರನೆ ಘೋಷಿಸಿದ್ದರಿಂದಾದ ಪ್ರಮಾದವಿದು. ಮಾಧ್ಯಮಗಳು ಕೂಡ ವಸ್ತುನಿಷ್ಟವಾಗಿ ಇದನ್ನು ವಿಶ್ಲೇಷಿಸದೆ, ಯುದ್ಧವೇ ಘೋಷಣೆಯಾಗಿದೆ ಅನ್ನುವ ರೀತಿಯಲ್ಲಿ ಬಿಂಬಿಸಿದ್ದು ಮತ್ತೊಂದು ಕಾರಣ. ಕಪ್ಪು ಹಣ / ಬಿಳಿ ಹಣ, ೨೦೦% ಟ್ಯಾಕ್ಸ್ / ೫೦% ಟ್ಯಾಕ್ಸ್, ರಾಜಕಾರಣಿಗಳು / ಉದ್ಯಮಿಗಳು, ೨೦೦೦ದ ನೋಟ್ / ೫೦೦ ರ ನೋಟ್, ನಮಗೆ ಟೈಮ್ ಕೊಡಬೇಕಿತ್ತು ಅಂತಾ ಒಂದಷ್ಟು ಜನರ ಬೊಬ್ಬೆ, ಬಡಜನರು ಸಾಯ್ತಿದ್ದಾರೆ ಅಂತಾ ಒಂದಷ್ಟು ಜನರ ಗೋಳು, ಇದರ ಮಧ್ಯೆ ಆ ನೋಟ್ ಗಳನ್ನು ನಿಷೇಧಿಸಿರುವುದಷ್ಟೆ, ಮೌಲ್ಯವನ್ನಲ್ಲ, ಅದಕ್ಕೆ ನಿಮಗೆ ಬದಲಾಯಿಸಲು ಅಥವಾ ನಿಮ್ಮ ಅಕೌಂಟಿಗೆ ಪಡೆಯಲು ೫೦ ದಿವಸಗಳ ಕಾಲಾವಕಾಶ ಇದೆ ಎಂದರೂ ಕೂಡ ಜನರು ಅರ್ಜೆಂಟಿನಲ್ಲಿ ಹೋಗಿ, ಅವಶ್ಯಕತೆ ಇದೆಯೋ, ಇಲ್ಲವೋ, ಕ್ಯೂ ನಲ್ಲಿ ನಿಂತು ಹಣ ತಂದು ಸಂಗ್ರಹಿಸಿಟ್ಟುಕೊಂಡು ಸದ್ಯ, ಬದಲಾಯಿಸಿಕೊಂಡ್ವಿ ಎಂಬ ನಿಟ್ಟುಸಿರು ಬಿಟ್ಟರು. ಮತ್ತೂ ಕೆಲವರು ಇದೇ ಸಮಯದಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಬದಲಾಯಿಸಲು ಪೈಪೋಟಿಗೆ ಬಿದ್ದವರಂತೆ ಕೂಲಿಯಾಳುಗಳನ್ನು ಕ್ಯೂ ನಲ್ಲಿ ನಿಲ್ಲಿಸಿ, ಹಣ ಬದಲಾಯಿಸಿದರು. ಮೋದಿಯವರು ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಕೂಡ ಬಡವ, ಬಲ್ಲಿದರೆನ್ನದೆ ಕ್ಯೂನಲ್ಲಿ ನಿಂತದ್ದೇ, ನಿಂತದ್ದು. ಹಾಗಿದ್ದರೆ ಈ ಅನಾಣ್ಯೀಕರಣದಿಂದ ತೊಂದರೆಗಳಿಲ್ಲವೇ? ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗಗಳೇನು? ಮತ್ತಷ್ಟು ಓದು »

30
ನವೆಂ

ನೋಟು ರದ್ದತಿಯ ಪೂರ್ವ ತಯಾರಿ ಮತ್ತು ದೂರ ದೃಷ್ಟಿತ್ವ…!

– ಶ್ರೇಯಾಂಕ ಎಸ್ ರಾನಡೆ

untitledಕಳೆದ ೭೦ ವರ್ಷಗಳಲ್ಲಿ ಭಾರತದ ಪ್ರತೀ ಪ್ರಜೆಗೆ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವಂತಾಗಲು ಹಿಂದಿನ ಸರಕಾರದ ‘ಸ್ವಾಭಿಮಾನ್’ದಂತಹ ಯೋಜನೆಯಿಂದಲೂ ಸಾಧ್ಯವಾಗಲಿಲ್ಲ. ಅದಕ್ಕೆ ಜನಧನ್ ಯೋಜನೆ ಬರಬೇಕಾಯಿತು. ಇದು ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ವರ್ಷದಿಂದ ಜಾರಿಗೆ ತಂದ “ಜಾಮ್ ಟ್ರಿನಿಟಿ” ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯದಿಂದ ಸೋರಿಕೆ, ನಕಲಿ ಫಲಾನುಭವಿಗಳು, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಲಿದೆ. ಇದನ್ನೇ ಭಾನುವಾರ ಪ್ರಧಾನಿಯವರು ವ್ಯಕ್ತಪಡಿಸಿರುವ ದೂರದೃಷ್ಟಿಯ ಮನಿ ಕಿ ಬಾತ್. ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಪೂರಕವಾಗಿ ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ ಡಿಜಿಟಲ್ ಬ್ಯಾಂಕಿಂಗ್ ಗೆ ಪೂರ್ವಭೂಮಿಕೆ. ಮತ್ತಷ್ಟು ಓದು »

25
ನವೆಂ

ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ

– ವಿನಾಯಕ ಹಂಪಿಹೊಳಿ

e-commerceಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.

ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು »

21
ನವೆಂ

ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?

– ಮು ಅ ಶ್ರೀರಂಗ

maxresdefaultದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ  ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ  ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ.  ಆದರೆ   ಹೆಚ್ಚಿನ ಪತ್ರಿಕೆ ಮತ್ತು ಟಿ  ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ. ಮತ್ತಷ್ಟು ಓದು »

20
ನವೆಂ

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

– ಸಂತೋಷಕುಮಾರ ಮೆಹೆಂದಳೆ.

maxresdefault(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಕುಟುಂಬ ಕೊನೆಯ ಕ್ಷಣದಲ್ಲಿ ಎನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. ) ಮತ್ತಷ್ಟು ಓದು »