ಸೈಕಲ್ಲೇರಿದ ನಲ್ಲ, ದಾಟಿದ ಸಾವಿರ ಮೈಲಿಗಲ್ಲ!
– ರಾಘವೇಂದ್ರ ಸುಬ್ರಹ್ಮಣ್ಯ
ಒಬ್ಬ ಬಡ ಹುಡುಗ, ಒಂದು ದಿನ ಒಬ್ಬ ಶ್ರೀಮಂತ ಹುಡುಗಿಯನ್ನ ಭೇಟಿಯಾದ. ಇಬ್ಬರಲ್ಲೂ ಪ್ರೇಮಾಂಕುರವಾಯ್ತು. ಹುಡುಗಿ ವಾಪಾಸು ತನ್ನ ದೇಶಕ್ಕೆ ಹೊರಟುಹೋದಳು. ಹುಡುಗ ‘ನನ್ನ ಪ್ರೀತಿಯನ್ನ ಸಾಯೋಕೆ ಬಿಡಲ್ಲ. ಬರ್ತೀನಿ. ಒಂದಲ್ಲಾ ಒಂದು ದಿನ ನಿನ್ನ ಭೇಟಿಯಾಗುತ್ತೇನೆ’ ಅಂತಾ ಆಕೆಗೂ, ಆಕೆಯ ಜೊತೆಗೆ ತನಗೆ ತಾನೇ ಮಾತುಕೊಟ್ಕೊಂಡ. ಆದರೆ ಅವಳಿದ್ದಲ್ಲಿಗೆ ಹೋಗೋಣ ಅಂದ್ರೆ ಇವನ ಹತ್ರ ದುಡ್ಡಿಲ್ಲ. ಬೆಳಾಗಾದ್ರೆ ‘ಇವತ್ತು ಸಾಯಂಕಾಲ ಊಟಕ್ಕೆ ಏನು?’ ಅನ್ನುವಷ್ಟು ಬಡತನ. ಆದರೆ ಕಮಿಟ್ಮೆಂಟ್ ಕೊಟ್ಟಾಗಿದೆ. ಒಂದಿನ ಆ ಹುಡುಗ ‘ಇನ್ನು ಸುಮ್ನಿದ್ರೆ ಆಗಲ್ಲ. ಶುರು ಮಾಡೇಬಿಡೋಣ’ ಅಂತಾ ಹೇಳ್ಕಂಡು ಒಂದು ಸೈಕಲ್ ತಗಂಡು ಈ ಹುಡುಗಿಯನ್ನು ಭೇಟಿಯಾಗೋಕೆ ಹೊರಟೇ ಬಿಡ್ತಾನೆ. ಎಷ್ಟೂ ದೂರ ಸೈಕಲ್ ಹೊಡೆದ ಅಂತೀರಾ? ನೂರಲ್ಲ, ಐನೂರಲ್ಲ, ಸಾವಿರವೂ ಅಲ್ಲ. ಬರೋಬ್ಬರಿ 9350 ಕಿಲೋಮೀಟರ್ ದೂರ!! ಪ್ರೀತಿಯ ಆಳದ ಮುಂದೆ ಈ ದೂರ ಯಾವ ಲೆಕ್ಕ ಬಿಡ್ರೀ! ಮತ್ತಷ್ಟು ಓದು
PK ಎಂಬ ರಾಂಗ್ ನಂಬರ್
– ಸಂತೋಷ್ ಕುಮಾರ್ ಪಿ.ಕೆ
ಅಮೀರ್ ಖಾನ್ ಎಂದರೆ ವಿಭಿನ್ನ ಶೈಲಿಯ ಚಿತ್ರಗಳನ್ನು ತೆರೆಗೆ ತರುವ ಸಾಮರ್ಥ್ಯ ಉಳ್ಳವರು ಎಂಬುದೇ ಬಹುತೇಕರ ಭಾವನೆ, ಅದು ಸತ್ಯ ಕೂಡ. ಈಗ ಬಂದಿರುವ ಪೀಕೆ ಚಿತ್ರ ಕೆಲವು ತಪ್ಪುಗ್ರಹಿಕೆಗಳ ಆಧಾರದ ಮೇಲೆ ಹೋಗುತ್ತದೆ ಎಂಬುದು ಬಿಟ್ಟರೆ ಅದನ್ನೊಂದು ಉತ್ತಮ ಲವ್ ಸ್ಟೋರಿ ಆಧಾರಿತ ಚಿತ್ರವನ್ನಾಗಿ ನಿರ್ದೇಶಕರು ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ. ಹಾಗಾದರೆ ಆ ತಪ್ಪುಗ್ರಹಿಕೆಗಳು ಏನು?
1. ಭಾರತೀಯ ಸಂಪ್ರದಾಯ ಮತ್ತು ಸೆಮೆಟಿಕ್ ರಿಲಿಜನ್ ಗಳು ಭಗವಾನ್ ಮತ್ತು ಗಾಡ್ ಎಂದು ಮಾತನಾಡುವಾಗ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳದಿರುವುದು. ನಮ್ಮಲ್ಲಿ ಸಾಮಾನ್ಯವಾಗಿ ದೇವರೇ ಕಾಪಾಡಬೇಕು, ದೇವರು ನಿನಗೆ ಕರುಣಿಸಲಿ, ಹೀಗೆ ಇತ್ಯಾದಿಗಳನ್ನು ದೇವರಿಗೆ ಆರೋಪಿಸುವಾಗ, ಅಕ್ಷರಶಃ ದೇವರನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡಿರುತ್ತೇವೆಯೆ? ಅದು ಹೇಳುವವರಿಗೂ ಸ್ಪಷ್ಟವಿರುವುದಿಲ್ಲ, ಕೇಳಿಸಿಕೊಳ್ಳುವವರಿಗೂ ತಿಳಿದಿರುವುದಿಲ್ಲ,. ಆಡುವ ಮಾತಿಗೂ ಕ್ರಿಯೆಗೂ ಕೆಲವು ಬಾರಿ ನಮ್ಮ ಸಂಸ್ಕೃತಿಯಲ್ಲಿ ಸಂಬಂಧವೇ ಇರುವುದಿಲ್ಲ, ದೇವರು ಇದ್ದಾನೆ ಎಂದರೆ ಇದ್ದಾನೆ ಎಂದಷ್ಟೇ..ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ನಮ್ಮ ಪ್ರಶ್ನೆಯೂ ಅಲ್ಲ ಆಸಕ್ತಿಯೂ ಅಲ್ಲ. ಆದರೆ ಇದನ್ನೇ ರಿಲಿಜನ್ ಸಮಾಜಗಳಲ್ಲಿ ಬಳಸಿದರೆ ಅದಕ್ಕೆ ನಿರ್ದಿಷ್ಟ ಅರ್ಥವೂ ಇದೆ, ಅದನ್ನು ಹುಡುಕಲು (ತೀರ ಸಿಗುವುದಿಲ್ಲ ಎಂದು ತಿಳಿದಿದ್ದರೂ) ಸಹಾಯ ಮಾಡುವ ಸಂಸ್ಥೆಗಳು ಹಾಗೂ ಗ್ರಂಥಗಳು ದೊರಕುತ್ತವೆ. ಇಲ್ಲಿ ಭಾಷೆಯ ಒಕ್ಕಣೆಯ ಆಧಾರದ ಮೇಲೆ ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವುದಕ್ಕಿಂತ ಏನನ್ನು ಹೇಳುತ್ತಿಲ್ಲ ಎಂಬುದು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ. ಏಲಿಯನ್ ಮನುಷ್ಯನಿಗೆ ಭಾಷೆ ತಿಳಿದ ಮಾತ್ರಕ್ಕೆ ಸಂಸ್ಕೃತಿಯೇ ಅರ್ಥವಾಗಿಬಿಡುತ್ತದೆ ಎಂಬುದು ನಿರ್ದೇಶಕರ ತಪ್ಪುಗ್ರಹಿಕೆಗೆ ಒಂದು ನಿದರ್ಶನವಾಗಿದೆ.