ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು – ಪುಸ್ತಕ ಪರಿಚಯ – ೩
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೧
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೨
ದಾಖಲೆಗಳು
ಮೂಲ : ವಿನಯಲಾಲ್ ಕನ್ನಡಕ್ಕೆ : ಅಕ್ಷರ ಕೆ.ವಿ
ನಾಗರಿಕತೆಗಳು, ದೇಶಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನೂ ಕೂಡಿದಂತೆ ಎಲ್ಲ ಸಂಗತಿಗಳ ‘ಪ್ರಗತಿ’ ಮತ್ತು ‘ಪತನಗಳನ್ನು’ ಅಳೆಯುವುದಕ್ಕೆ ನಾವು ಬಳಸುವ ದಾಖಲೆಗಳನ್ನು ಕುರಿತಂತೆ ಚಿತ್ರ ವಿಚಿತ್ರವಾದ ಹಲವಾರು ವಿಚಾರಗಳನ್ನು ಹೇಳಬಹುದು. ನಾಜಿಗಳು ಮೃತರಾದ ಖೈದಿಗಳನ್ನು ಕುರಿತಂತೆ ಇಟ್ಟಿರುವ ದಾಖಲೆಪುಸ್ತಕಗಳಲ್ಲಿ ಯಾವ ಯಾತನಾಶಿಬಿರಕ್ಕೆ ಯಾವ ರೈಲಿನ ಮೂಲಕ ಯಾವ ಯಾವ ಯಹೂದಿಗಳನ್ನು ಸಾಗಿಸಲಾಯಿತು, ಪ್ರತಿ ರೈಲಿನಲ್ಲಿದ್ದ ಯಹೂದಿಗಳ ಸಂಖ್ಯೆ, ವಿಷಾನಿಲ ಪ್ರಯೋಗದಿಂದ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ ಈ ಎಲ್ಲವೂ ವಿವವರವಾಗಿ ದೊರೆಯುತ್ತದೆ.
ಭಾರತವನ್ನಾಳಿದ ಬ್ರಿಟಿಷರಿಗೂ ಇಷ್ಟೇ ವಿಸ್ತಾರವಾದ ಆಡಳಿತಾತ್ಮಕ ದಾಖಲೆಗಳನ್ನು ಇಡುವ ಪರಿಪಾಠವಿತ್ತು. 19ನೆಯ ಶತಮಾನದ ತುದಿಯ ವರ್ಷಗಳಲ್ಲಿ ರಾಷ್ಟ್ರೀಯತಾವಾದವು ಪ್ರಬಲವಾಗುತ್ತಿದ್ದಂತೆ ಈ ದಾಖಲೆಗಳು ಇನ್ನೂ ಇನ್ನೂ ವಿವರಗಳನ್ನು ಸೇರಿಸಿಕೊಳ್ಳುತ್ತಾ ಹೋಯಿತು. ಸ್ಥಳಿಯರ ನಡವಳಿಕೆಗಳ ಬಗ್ಗೆ ಮುನ್ಸೂಚನೆ ನೀಡಿ ಅವರಲ್ಲಿ ದಂಗೆಕಾರರನ್ನು ಹತೋಟಿಯಲ್ಲಿಡಲಿಕ್ಕೂ ಇವೇ ದಾಖಲೆಗಳು ಸಹಾಯಕವಾಗುತ್ತದೆಂಬ ಹೊಸ ಭಾರವು ಆಗ ರಾಜ್ಯದ ಮೇಲೆ ಬಿತ್ತು. ಮುಂದೆ ಹೊಸದಾಗಿ ಅವಿಷ್ಕಾರಗೊಂಡ ರಾಷ್ಟ್ರಪ್ರಭುತ್ವವೂ ಇದೇ ಸಾಮ್ರಾಜ್ಯಶಾಹಿ ದಾಖಲೆ ವಿಧಾನವನ್ನು ಮುಂದುವರಿಸಿತು. ಇವತ್ತು ರಾಷ್ಟ್ರ ಪ್ರಭುತ್ವವೊಂದರ ಸೂಚಕ ಚಿನ್ಹೆಗಳಾಗಿ ಒಂದು ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇರುವಂತೆ ರಾಷ್ಟ್ರೀಯ ಪತ್ರಾಗಾರವೂ ಇದೆ. ಈ ರಾಷ್ಟ್ರೀಯ ದಾಖಲೆ ಸಂಗ್ರಹಾಲಯಗಳು ಆಯಾ ರಾಷ್ಟ್ರಗಳ ರಹಸ್ಯಗಳ,ದೌರ್ಜನ್ಯಗಳ ಮತ್ತು ದುಷ್ಕರ್ಮಗಳ ಅಡಗುದಾಣವೂ ಆಗಿರುತ್ತದೆ.
ಹಿಂದೂಗಳ ಸಾಂಸ್ಕೃತಿಕ ಸೃಷ್ಟಿ ಪುರಾಣಗಳಲ್ಲಿ ವರ್ಗೀಕರಣ ಮತ್ತು ಗಣನೆಗಳೆರೆಡೂ ತುಂಬಾ ಅತ್ಯಂತಿಕವಾದ ಒಂದು ಉಪಕರಣವೆಂದು ಭಾವಿಸಲ್ಪಟ್ಟಿದ್ದವು. ದೇವರಪೂಜೆಯಲ್ಲಿ, ಬಲಿಯ ವಿಧಿಗಳಲ್ಲಿ, ಸಾಹಿತ್ಯ ಕೃತಿಗಳ ನಿರ್ಮಾಣದಲ್ಲಿ, ವಂಶವೃಕ್ಷಗಳ ನಿರೂಪಣೆಯಲ್ಲಿ , ಜ್ಯೋತಿಷ್ಯದಲ್ಲಿ ಮತ್ತು ಕಾಮಶಾಸ್ತ್ರದಲ್ಲಿಯೂ ಕೂಡ ಸಂಖ್ಯೆಗಳು ಬಳಕೆಯಾಗುತ್ತಿದ್ದವು. ಅಥರ್ವವೇದವು (ದಾಳಗಳನ್ನು ಉಪಯೋಗಿಸಿ) ಐವತ್ಮೂರು ಬಗೆಯ ಮಾಟ ಮಂತ್ರಗಳನ್ನು ಮಾಡಬಹುದು ಎಂದೂ ಮತ್ತು ಸಾವಿನಲ್ಲಿ ಒಟ್ಟು 101 ಬಗೆಯ ಮರಣಗಳಿವೆಯೆಂದೂ ನಿಖರವಾಗಿ ಹೇಳುತ್ತದೆ. ಇಂಗ್ಲೇಡಿನಲ್ಲಿ ಸಹ ಇನ್ನೊಂದು ಬಗೆಯ ಸಂಖ್ಯಾ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿತ್ತು. ಅಲ್ಲಿ ಮೃತ ದೇಹಗಳನ್ನು ಭರದಿಂದ ಎಣಿಸಲಾಗುತ್ತಿತ್ತು. ಒಂದು ವರ್ಷದ ಅವಧಿಯಲ್ಲಿ ರೂಢಿಗತ ಅಪರಾಧಿಗಳಿಗೆ ಎಷ್ಟು ಬಾರಿ ಛಡಿಯೇಟಿನ ಶಿಕ್ಷೆ ನೀಡಲಾಯಿತೆಂಬ ಅಂಕಿ ಅಂಶದಿಂದ ಆರಂಭಿಸಿ, ಜೈಲುಗಳಲ್ಲಿ, ಆಶ್ರಯಧಾಮಗಳಲ್ಲಿ ಎಷ್ಟು ಜನ ಕುಡುಕರು-ಹುಚ್ಚರು ಇದ್ದಾರೆಂಬ ಲೆಕ್ಕಾಚಾರದವರೆಗೆ-ನಾನಾ ಮಾದರಿಯ ಸಂಖ್ಯಾರಾಶಿಗಳನ್ನು ಇಂಗ್ಲೇಡಿನಲ್ಲಿ ಕಲೆಹಾಕಲಾಯಿತು. ಮುಂದೆ ನಡೆಯತೊಡಗಿದ ಅನಾಹುತಗಳ ದಾಖಲೆಗಳಿಗೆ ಈ ಗಣತಿಯೇ ಆರಂಭವೆಂದೂ ಬೇಕಿದ್ದರೆ ಹೇಳಬಹುದು. ಈ ದಾಖಲೆಗಳ ಮೂಲಕವೇ ಆ ಸಮಾಜವು ತನ್ನೊಳಗಿನ ಬಂಡುಕೋರರನ್ನು, ಬಹಿಷ್ಕೃತರನ್ನು, ದಲಿತ-ದಮನಿತರನ್ನು, ಅಪರಾಧಿಗಳನ್ನು, ಭಿನ್ನಮತೀಯರನ್ನು,ವಿರೋಧಿಗಳನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ನಿರ್ವಹಿಸಬೇಕೆಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿತ್ತು.
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ-೨
– “ನಿಲುಮೆ”ಗಾಗಿ (೧) ಬಾಲಿವುಡ್ ಮತ್ತು (೨) ಜೈಲು ಈ ಎರಡು ಲೇಖನಗಳ ಸಾರಾಂಶ ಮಾಡಿದ್ದು :- ಮು. ಅ . ಶ್ರೀರಂಗ, ಬೆಂಗಳೂರು
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
(೧) ಬಾಲಿವುಡ್
———-
ಮೂಲ ಲೇಖಕರು : ಎಂ. ಕೆ. ರಾಘವೇಂದ್ರ ಕನ್ನಡಕ್ಕೆ : ಅಕ್ಷರ ಕೆ. ವಿ.
ಮುಂಬಯಿಯಲ್ಲಿ ತಯಾರಾಗುವ ಹಿಂದಿ ಭಾಷೆಯ ಚಲನಚಿತ್ರ ಪ್ರಕಾರಕ್ಕೆ ‘ಬಾಲಿವುಡ್’ ಎಂಬ ಹೆಸರನ್ನು ಕೊಡಲಾಗಿದೆ. ಈ ಚಲನಚಿತ್ರಗಳಿಗೆ ಭಾರತದಲ್ಲಿನ ಪ್ರೇಕ್ಷಕರ ಜತೆಗೆ ಏಶಿಯಾ,ಆಫಿಕ್ರಾದಾದ್ಯಂತ ಹರಡಿರುವ ಅಪಾರ ಪ್ರೇಕ್ಷಕ ಸಮೂಹವೇ ಇದೆ. ವದಂತಿಗಳ ಪ್ರಕಾರ (ಅವು ಉತ್ಪ್ರೇಕ್ಷಿತ ವಾಗಿರಲೂಬಹುದು) ಜೋಸೆಫ್ ಸ್ಟಾಲಿನ್ ಮತ್ತು ಮಾವೊತ್ಸೆತುಂಗರಂಥವರೂ ತಮ್ಮ ತಮ್ಮ ‘ ಕಾಲಗಳಲ್ಲಿ ಬಾಲಿವುಡ್ಡಿನ ಚಿತ್ರಗಳ ಭಕ್ತರಾಗಿದ್ದರಂತೆ! ಮಾವೋ ಅವರು ರಾಜಕಪೂರನ “ಆವಾರಾ” ವನ್ನು ನಲವತ್ತು ಬಾರಿ ನೋಡಿದ್ದರಂತೆ!
ಬಾಲಿವುಡ್ ಚಿತ್ರಗಳ ಕೆಲವು ಲಕ್ಷಣಗಳನ್ನು ಬಹುಶಃ ಈ ರೀತಿ ಪಟ್ಟಿಮಾಡಬಹುದು.
(೧) ರಂಜನೆ
(೨) ಸಾವಿನ ಅಂಚಿನಲ್ಲಿರುವ ಶ್ರೀಮಂತ ವಿಧವೆ ಸಾವನ್ನು ಎದುರುನೋಡುತ್ತ ಮುಂಬರುವ ಭಾವುಕ ಉತ್ತುಂಗಕ್ಕೆ ಕಾರಣಲಾಗುವುದು
(೩) ತನ್ನಪ್ಪನ ಸಾವಿಗೆ ಕಾರಣನಾದ ಖಳನಾಯಕನಿಗೆ ಪ್ರತೀಕಾರಮಾಡಲು ಕಾಯುತ್ತಿರುವ ನಾಯಕ
(೪) ಹುಟ್ಟುವಾಗಲೇ ಸಂತತ್ವವನ್ನು ಪಡೆದ ಸಂತರು
(೫) ಯಾವಾಗಲೂ ಶೋಕದಲ್ಲೇ ಮುಳುಗಿರುವ ವಿಧವೆಯರು
(೬) ಗೃಹಿಣಿಯರಾಗಲು ಸಾಧ್ಯವಾಗದ ವೇಶ್ಯೆಯರು.
ಹೊಸ ಕಾದಂಬರಿ : ಕರಣಂ ಪವನ್ ಪ್ರಸಾದರ “ಕರ್ಮ”
– ನಂದೀಶ್ ಆಚಾರ್ಯ
Concave media co.ಈ ಕಾದಂಬರಿಯನ್ನು ಹೊರತಂದಿದೆ. ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಾಂಬರಿಕಾರರಾದ ಎಸ್ ಎಲ್ ಭೈರಪ್ಪನವರು ಈ ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಶತವಾಧಾನಿ ಆರ್ ಗಣೇಶರು ಕಾದಾಂಬರಿಯನ್ನು ಬಿಡುಗಡೆಗೊಳಿಸಿದರು. ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ’
ಅಚಾನಕ್ಕಾಗಿ ಅಪ್ಪಳಿಸಿದ ತಂದೆಯ ಸಾವಿನ ಸುದ್ದಿ ತನಗೆ ಏನೂ ಅಘಾತವನ್ನ ನೀಡದ್ದನ್ನು ಕಂಡು ಕಥಾನಾಯಕ ಮೊದಲಿನಿಂದಲೂ ಗೊಂದಲದಲ್ಲೇ ಎದುರಾಗುತ್ತಾನೆ. ಪ್ರತಿ ಪ್ರಸಂಗದಲ್ಲೂ ತನ್ನನ್ನು ತಾನೇ ಕೆಡವಿಕೊಂಡು ಅನುಭವಿಸುತ್ತಾನೆ. ತನ್ನ ಹುಟ್ಟೂರಿಗೆ ಹೋಗಿ ತನ್ನ ತಮ್ಮ ನರಹರಿ, ತಾಯಿಯನ್ನು ಕೂಡಿ ತಂದೆಯ ಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯಿಂದ ಕರ್ಮ ಮಜಲು ಬದಲಿಸಿ ತನ್ನ ಮೂಲವಾದವಾದ ನಂಬಿಕೆ ಮತ್ತು ಶ್ರದ್ಧೆ ಎರಡೂ ತೀರ ಬೇರೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ, ನಂಬಿಕೆಗೆ ಘಾಸಿಯಾಗುತ್ತದೆ, ಶ್ರದ್ಧೆಗೆ ಎಂದೂ ಘಾಸಿಯಾಗುವುದಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಕ್ರಿಯೆ ಮಾಡಿಸುವ ತಂದೆಯ ಸ್ನೇಹಿತ ಶ್ರೀಕಂಠ ಜೋಯಿಸರು ಮತ್ತು ಕಥಾ ನಾಯಕನ ಸಂಭಾಷಣೆಯ ಒಂದು ಪ್ರಸಂಗ ಹೀಗಿದೆ.
“ಇವೆಲ್ಲಾ ನಿಜಾನಾ?’’ ಅಳುಕಿನಿಂದಲೇ ಸುರೇಂದ್ರ ಪ್ರಶ್ನಿಸಿದ. ಭಟ್ಟರು ಹಿಂದಿರುಗಿ ನೋಡುವ ಹೊತ್ತಿಗೆ ಇವನ ಕಂಠ ಕುಸಿದು ಹೋಯಿತು. ಅಲ್ಲೇ ಅಡಕೆ ಮರಕ್ಕೆ ಹಬ್ಬಿಸಿದ್ದ ಏಲಕ್ಕಿ ಗಿಡವನ್ನು ಪರೀಕ್ಷಿಸುತ್ತಾ ನಿಂತ. “ತೋಟ ಮಾರ್ತಾ ಇದೀನಿ ತಗೋತ್ಯಾ ಮಾರಾಯಾ?’’ ಗಿಡವನ್ನು ಮೂಸುತ್ತಿದ್ದ ಸುರೇಂದ್ರ “ನನಗ್ಯಾಕೆ ಭಟ್ಟರೇ?’’ ಎಂದ. “ಈಗ ಅದೇ ಹೊಸ ವಿಚಾರ ಈ ವಾಣಿ ಗಂಡ ಎಲ್ಲಾ ಮುಂಡುಮೋಚಿ ಈಗ ಇಲ್ಲಿ ತೋಟ ಗೀಟ ಮಾಡ್ಕೊಂಡು ಅದನ್ನೇ ಕಂಪೆನಿ ಮಾಡಿ ದುಡ್ಡು ಮಾಡ್ತಾ ಇದಾನೆ ಅವನು ನಿನ್ನ ಥರಾನೆ ಯಾವುದೋ ಇಂಜಿನಿಯರ್ ನನಗೆ ಸರಿ ಗೊತ್ತಿಲ್ಲ’’ ಭರತನ ಮೇಲಿನ ಉರಿಗೆ ಗಿಡದ ಎಲೆಯನ್ನು ಚಿವುಟಿದ. “ಎಲೆ ಎಂತ ಮಾಡ್ತೋ ನಿಂಗೆ? ಅದೇನೋ ವಿಷಯ ಅಂದ್ಯಲ್ಲ ಏನು?’’ ಆಗಲೇ ಕೇಳಿದೆನೆಲ್ಲ ಅದೇ ಎಂದು ಸುರೇಂದ್ರ ಉತ್ತರಿಸಿದ. “ನಿಜವಾ ಅಂತ ಕೇಳಿದೆ. ಏನು ನಿಜ. ನಾನು ಇರೋದ, ನೀ ಇರೋದ ಅಥವಾ ನಾ ಮನುಷ್ಯಾನ ಏನು? ಸ್ವಷ್ಟ ಕೇಳು, ಈ ಮೈಗಳ್ಳ ಮುಂಡೇವು ಇದಾವಲ್ಲ ಇವರಿಂದ ಅಡಕೆ ಇಳಿಸಕ್ಕೆ ಆಗಿಲ್ಲ. ದುಡ್ಡು ಕೊಟ್ರೂ ಜನ ಬರಲ್ಲ. ದಿನದ ಗಂಜಿ ನಂಬಿದೋರಿಗೆ ಒಂದು ರೂಪಾಯಿ ಅಕ್ಕಿ ಕೊಟ್ರೆ ಇನ್ನೇನ್ ಆಗತ್ತೆ ಹೊಲದ ಕೆಲಸ ತೋಟದ ಕೆಲಸಕ್ಕೆ ಆಳುಗಳೇ ಇಲ್ಲ. ವಯಸ್ಸಲ್ಲಿ ನಾನೇ ಇಳಿಸ್ತಿದ್ದೆ.
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
ವಿನಯಲಾಲ್ ಮತ್ತು ಅಶೀಶ್ ನಂದಿಯವರ ಸಂಪಾದಕತ್ವದಲ್ಲಿ “ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು” ಎಂಬ ಪುಸ್ತಕವನ್ನು ಅಕ್ಷರ ಪ್ರಕಾಶನದವರು (ಹೆಗ್ಗೋಡು ಸಾಗರ; ಮೊದಲ ಮುದ್ರಣ ೨೦೦೭ ಮತ್ತು ಎರಡನೇ ಮುದ್ರಣ ೨೦೧೦) ಪ್ರಕಟಿಸಿದ್ದಾರೆ. ಈ ಪುಸ್ತಕದ ಬಗ್ಗೆ ಪ್ರಕಾಶಕರು ‘ಬೌದ್ಧಿಕ ಸಿದ್ಧ ಮಾದರಿಗಳ ನಿರಾಕರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿರುವುದನ್ನು ಅವರದೇ ಮಾತುಗಳಲ್ಲಿ ಈ ರೀತಿ ಸಂಕ್ಷೇಪಿಸಿ ಹೇಳಬಹುದು.”… ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ (ಅಂದರೆ ಪ್ರಸ್ತುತ ಪುಸ್ತಕದಲ್ಲಿ) ‘ಅರ್ಥಶಾಸ್ತ್ರ’ ದಿಂದ ‘ಬಾಲಿವುಡ್’ ನವರೆಗೆ, ‘ಇಸ್ಲಾಂ’ನಿಂದ ‘ಕೋಕಾಕೋಲಾ’ವರೆಗೆ, ‘ಮಾರ್ಕ್ಸ್ ವಾದ’ ದಿಂದ, ‘ಯಾಹೂ(yahoo)’ ,ದವರೆಗೆ ನಾನಾ ವಿಚಾರ ಕುರಿತ ಕಿರುಲೇಖನಗಳಿವೆ…ಆಧುನಿಕ ಜೀವನಕ್ರಮದಲ್ಲಿ ನಾವಿವತ್ತು ಹಲವು ಪದಗಳನ್ನೂ ಮತ್ತು ಆ ಪದಗಳೊಂದಿಗೆ ಅಂತರ್ಗತವೂ ಆಗಿರುವ ವಿಚಾರಗಳನ್ನು ‘ಸಾಮಾನ್ಯಜ್ಞಾನ’ವಾಗಿ ತುಂಬ ಸಹಜವೂ ಪರಿಚಿತವೂ ಎಂದು ಭಾವಿಸಿ ಸ್ವೀಕರಿಸಿದ್ದೇವೆ. ಉದಾಹರಣೆಗೆ ಶಿಕ್ಷಣ,ಬಡತನ,ಅಥವಾ ಅರ್ಥಶಾಸ್ತ್ರ ಮೊದಲಾದವು…ಈಗ ಈ ಪದವು ಚಾಲ್ತಿಯಲ್ಲಿ ಪಡೆದಿರುವ ಅರ್ಥವನ್ನಾಗಲೀ …ಆ ವ್ಯಾಖ್ಯಾನದ ಹಿನ್ನೆಲೆಯಲ್ಲಿರುವ ಸಿದ್ಧಾಂತವನ್ನಾಗಲಿ ಮೂಲಭೂತವಾಗಿಯೇ ಪ್ರಶ್ನಿಸುವ ಸಾಹಸಕ್ಕೆ ನಾವು ಕೈ ಹಾಕುವುದು ಅಪರೂಪ.
… ಬದಲು ಬದಲಾಗುತ್ತಲೇ ಇರುವ ಬೌದ್ಧಿಕ ಜಗತ್ತಿನೊಳಗೊಂದು ಕಿರುನೋಟವನ್ನು ಕೊಡುವ ಮೂಲಕ ಓದುಗರಿಗೆ ತುಂಬ ಪರಿಚಿತವೆಂದು ಭಾವಿತವಾದದ್ದು, ಎಷ್ಟು ಅಪರಿಚಿತವೆಂಬುದನ್ನೂ ಹಾಗೂ ಅಪರಿಚಿತವೇ ಎಷ್ಟು ಪರಿಚಿತವೆಂಬುದನ್ನೂ ಕಾಣಿಸಿ ಕೊಡುವ ಒಂದು ಪ್ರಯತ್ನ ಇಲ್ಲಿದೆ. ಅಲ್ಲದೆ ಇಲ್ಲಿ ಸಂಕಲಿತವಾಗಿರುವ ಎಲ್ಲ ಲೇಖನಗಳಲ್ಲಿ ಶೈಕ್ಷಣಿಕ ಶಿಸ್ತಿನ ಬಿಗಿಯಾದ ಜಡ ನಿರೂಪಣೆಗಿಂತ ಹಗುರವಾದ ಪ್ರಬಂಧರೂಪಿ ಲಾಲಿತ್ಯದ ಶೈಲಿ ಕಾಣಿಸಿಕೊಂಡಿರುವುದು ಕೂಡಾ ಇಂಥ ಪ್ರಯತ್ನದ ಒಂದು ಅಂಗವಾಗಿಯೇ …ಈ ಎಲ್ಲ ಲೇಖನಗಳು,ತಮ್ಮ ವಸ್ತು -ವಿನ್ಯಾಸಗಳೆರಡರಲ್ಲೂ ಪಾಶ್ಚಿಮಾತ್ಯ ರೂಢಿಯಲ್ಲಿ ಯಾವುದನ್ನು ‘ಅಕೆಡೆಮಿಕ್ ಬರಹ‘ ಎನ್ನಲಾಗುತ್ತದೆಯೋ ಅದಕ್ಕಿಂತ ಭಿನ್ನವಾದ ಹೊಸತನಕ್ಕಾಗಿ ಹವಣಿಸುತ್ತಿವೆ …”
ಇನ್ನು ನಾನು ಮಾಡಲು ಪ್ರಯತ್ನಿಸಿರುವ ಈ ಪುಸ್ತಕದ ಪರಿಚಯದ ರೀತಿಯ ಬಗ್ಗೆ ಒಂದೆರೆಡು ಮಾತುಗಳು. ‘ನಿಲುಮೆ’ಯ ಓದುಗರಲ್ಲಿ ಹಲವರು ಈಗಾಗಲೇ ಈ ಪುಸ್ತಕವನ್ನು ಓದಿರಬಹುದು ಮತ್ತು ಕೆಲವರ ಗಮನಕ್ಕೆ ಬರದೆ ಹೋಗಿರಬಹುದು. ಪ್ರಸ್ತುತ ಪುಸ್ತಕದಲ್ಲಿರುವ ಲೇಖನಗಳ ಅರ್ಥಕ್ಕೆ ಭಂಗ ಬರದಂತೆ ಅವುಗಳ ‘ಸಾರಾಂಶ’ವನ್ನು ನೀಡಲು ನಾನು ಪ್ರಯತ್ನಿಸಿದ್ದೇನೆ.ಈ ಲೇಖನಗಳಲ್ಲಿ ಆಗಾಗ ‘ನಾನು’, ‘ನಾವು’ ಎಂಬ ಪದಗಳು ಬರುತ್ತವೆ. ಅವು ಆ ಮೂಲ ಲೇಖಕರೇ ಹೊರತು ಸಾರಾಂಶ ಬರೆದಿರುವ ”ನಾನಲ್ಲ” ಎಂಬುದನ್ನು ಓದುಗರು ಗಮನಕ್ಕೆ ತರಲು ಇಚ್ಚಿಸುತ್ತೇನೆ.