ಸಂಸ್ಕೃತಿ ಸರಣಿ – ಭಾಗ ೧ : ಪೂಜೆ
ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ.
ಭಾರತದ್ದು ಇಂತಹ ಭ್ರಮಾ ಕಲ್ಪಿತ ಮತ್ತು ಆಕ್ರಾಮಕ ಶ್ರೇಷ್ಠತೆ ಅಲ್ಲ.ಅದರ ಶ್ರೇಷ್ಠತೆಯ ಗುಣಲಕ್ಷಣಗಳೇ ಬೇರೆ. ಹೂವಿನ ಗಂಧ ಸಹ ಜವಾಗಿ ಹರಡುವಂತೆ ಭಾರತೀಯ ಜೀವನ ವಿಧಾನದ ಅಂತಃಸತ್ವ ಬಹುತೇಕ ಭೂಭಾಗವನ್ನು ಪ್ರಭಾವಿಸಿತ್ತು.ಆದರೆ ಅದೆಲ್ಲ ಈಗ ಗತಕಾಲದ ಚರಿತ್ರೆ.ಕಳೆದ ಸಾವಿರ ವರ್ಷಗಳ ಐತಿಹಾಸಿಕ ಘಟನೆಗಳು ಮತ್ತು ಪರಕೀಯ ಶಿಕ್ಷಣ ವಿಧಾನ ನಮ್ಮ ಸಂಸ್ಕೃತಿಗೆ ನಮ್ಮನ್ನೇ ಪರಕೀಯರಂತೆ ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ, ಆಚರಣೆಗಳ ಕುರಿತು ಹಲವರಿಗೆ ಪ್ರಶ್ನೆಗಳೇಳುವುದು ಸಹಜವೇ.
ಅಂತಹ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶ್ರೀ.ದತ್ತರಾಜ್ ಅವರು ಈ “ಸಂಸ್ಕೃತಿ ಸರಣಿ”ಯನ್ನು ಪ್ರಾರಂಭಿಸಿದ್ದಾರೆ. ಭಾರತ ಯಾವ ರೀತಿಯಲ್ಲಿ ಭಿನ್ನ ಹಾಗೂ ಶ್ರೇಷ್ಠ ಎಂಬುದನ್ನು ವಿವರಿಸಲಿದ್ದಾರೆ.ದತ್ತರಾಜ್ ಅವರು ಧಾರವಾಡದ ಬಳಿ ಹಳ್ಳಿಯಲ್ಲಿ ಹುಟ್ಟಿದವರು.ಆರನೇ ವಯಸ್ಸಿಗೇ ಮನೆ ತೊರೆದು ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು ಇತ್ಯಾದಿ ಕಡೆಗಳಲ್ಲಿ ವೇದ ಪಂಡಿತರ ಮನೆಗಳಲ್ಲಿ ಇದ್ದು ಗುರು ಸೇವೆ, ಭಿಕ್ಷೆ ಮಾಡಿಕೊಂಡು 12 ವರ್ಷ ಋಗ್ವೇದವನ್ನು ಆರು ಅಂಗಗಳ ಸಹಿತ ಕಂಠಪಾಠ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ.ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ.ತಮ್ಮ ಅಧ್ಯಯನ ಮತ್ತು ವಿಭಿನ್ನ ಜೀವನದ ಅನುಭವದ ಆಧಾರದಿಂದ ಭಾರತೀಯ ಸಂಸ್ಕೃತಿ ಪರಿಚಯವನ್ನು ಸರಳ ಆಡು ಭಾಷೆಯಲ್ಲಿ ಮಾಡಿಕೊಡಲಿದ್ದಾರೆ.
ಸಂಸ್ಕೃತಿ ಸರಣಿಯ ಮೊದಲ ಎರಡು ಭಾಗವಾಗಿ “ಪೂಜೆ”ಯ ಕುರಿತು ಮಾತನಾಡಿದ್ದಾರೆ.ಆ ಎರಡು ಭಾಗಗಳು ನಿಮಗಾಗಿ ನಿಲುಮೆಯಲ್ಲಿ – ನಿಲುಮೆ ನಿರ್ವಾಹಕರು
ಮತ್ತಷ್ಟು ಓದು
ದೇವರು – ಪೂಜೆ
– ಗೀತಾ ಹೆಗಡೆ
ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ. ಸ್ವಚ್ಛತೆ ಜನ ಅನುಸರಿಸಲಿ ಎಂದು. ಮಡಿ ಮೈಲಿಗೆ ಆಚಾರ ವಿಚಾರ ಜಾತಿ ಪದ್ಧತಿ ಇವೆಲ್ಲ ಮನುಷ್ಯನೆ ಮಾಡಿದ್ದು ತಾನೆ. ದೇವರಲ್ಲವಲ್ಲ..? ಹಾಗೆಯೇ ಇದು. ಇಲ್ಲಿ ನಂಬಿಕೆಯಿಂದ ಮಾಡಿದ ಕೆಲಸದಲ್ಲಿ ಸ್ವಚ್ಛತೆಯಿದೆ; ಇದರಿಂದ ಶಾಂತಿ ಸಿಗುತ್ತದೆ. ದೇವರು ಒಂದು ಕಲ್ಪನೆ. ಜಾತಿಗೆ ತಕ್ಕಂತೆ ಅವನ ಸ್ವರೂಪದ ವಿಮರ್ಷೆ. ಆದರೆ ದೇವರು ಒಬ್ಬನೇ. ಅದೊಂದು ಶಕ್ತಿ.. ಅದು ಎಲ್ಲೂ ಇಲ್ಲ. ನಮ್ಮ ಮನಸ್ಸಿನ ಒಳ್ಳೆಯ ನಡೆ ನುಡಿ, ನಮ್ಮ ನಿತ್ಯದ ಜೀವನ ಶೈಲಿ, ನಮ್ಮ ಜೀವನದ ಕನ್ನಡಿ. ಮನಸ್ಸು ಬುದ್ಧಿ ಸರಿಯಾಗಿದ್ದರೆ ದೇವರೆನ್ನುವ ಶಕ್ತಿ ನಮ್ಮಲ್ಲೆ ಕಾಣಬಹುದು. ಆದುದರಿಂದ ಅನಾದಿ ಕಾಲದ ಆಚರಣೆ ಅನುಸರಿಸುತ್ತ ನಮ್ಮ ಮನೆ ಸುತ್ತ ಮುತ್ತಲಿನ ವಾತಾವರಣ ಸುಂದರವಾಗಿರಿಸುವುದರಲ್ಲಿ ತಪ್ಪಿಲ್ಲ. ಮತ್ತಷ್ಟು ಓದು
ದೇವಾಲಯ ಪ್ರವೇಶದ ಕುರಿತು ತಪ್ಪು ತಿಳಿವಳಿಕೆಗಳು
– ಡಾ. ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.
ಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ. ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರಿಗೆ ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೇ ಎಂಬುದು ಅವರ ತರ್ಕ.
ಹಿಂದೂ ಎನ್ನುವುದು ಇಸ್ಲಾಂ ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತ ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪೀ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು,ಅವುಗಳ ಅಭಿವೃದ್ಧಿ,ಜನಪ್ರಿಯತೆ,ನಿರ್ವಹಣೆ,ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ.ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವಕೊಟ್ಟೇ ಅಲ್ಲಿಗೆ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ,ಮತಗಳಿಗೆ,ಕುಲಗಳಿಗೆ,ಪ್ರದೇಶಗಳಿಗೆ,ಊರುಗಳಿಗೆ,ಗಲ್ಲಿಗಳಿಗೆ ಪ್ರತ್ಯೇಕದೇವಾಲಯಗಳು ಇರುವುದು.