ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ
– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.
ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.
ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.
ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.
ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?
ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .
ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.
ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.
ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?
ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.
ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.
ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.
ಚಿತ್ರಕೃಪೆ : Business Today
ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ, ಭಾರತ ಮತ್ತು ಮೋದಿ – ಭಾಗ 2
– ಪ್ರಶಾಂತ್ ಪದ್ಮನಾಭ
ಭಾಗ 1 – ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?
ಮೊದಲನೇ ಪೋಸ್ಟ್ನಲ್ಲಿ ಕಾಂಮೆಂಟ್ನಲ್ಲಿ ಯಾರೋ ಕೇಳಿದ ಪ್ರಶ್ನೆಗಳು, ಹಾಗು ಅದರ ಉತ್ತರ ಎಲ್ಲರಿಗೂ ತಲುಪಲಿ ಅನ್ನೋ ಉದ್ದೇಶದಿಂದ ಹೊಸ ಪೋಸ್ಟ್ ಹಾಕಿದ್ದೀನಿ. ಮೊದಲ ಪೋಸ್ಟ್ ನ ಉದ್ದೇಶ ಅಮೇರಿಕಾದಲ್ಲಿ WTI ನ ಬೆಲೆ ಹೇಗೆ ನೆಗೆಟಿವ್ ಆಯಿತು, ಹಾಗೆ ಆಗಿದ್ದಿರಿಂದ ಭಾರತದಲ್ಲೂ ಕಮ್ಮಿ ಮಾಡಿಯೆಂದು ಕೇಳುವುದು ಅವಿವೇಕತನ ಎಂಬುದಾಗಿತ್ತು. (ಅಮೇರಿಕಾದಲ್ಲಿ ಮಳೆಯಾದರೆ, ಮೋದಿ ಭಾರತದಲ್ಲಿ ಯಾಕೆ ಕೊಡೆ ಹಿಡಿಯಲ್ಲಿಲ್ಲ ಅಂತ ಕೇಳುವ ಕಾಂಗ್ರೆಸ್ ಗೆ ಬಹುಪರಾಕ್ ಹೇಳವ ಮನಸ್ಥಿತಿಗೆ ಉತ್ತರ ಹೇಳುವುದು)
ಇದನ್ನೂ ಕೂಡ ಜಾಸ್ತಿ ಟೆಕ್ನಿಕಲಿಯಾಗಿ ಹೇಳದೆ, ಸರಳ ಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೀನಿ.
ಪ್ರಶ್ನೆ:
1. ಜಗತ್ತಿನ ಕಚ್ಚಾ ತೈಲದ ಕ್ವಾಲಿಟಿ ನಿರ್ಧಾರವಾಗುವುದು 2 ಅಂಶಗಳಿಂದ. Low Sulphur ಕಂಟೆಂಟ್ ಮತ್ತು Low Density (Higher API). ಈ ಎರಡು ಅಂಶಗಳನ್ನ ಪರಿಗಣಿಸಿ Brent ಹಾಗೂ WTI compare ಮಾಡಿದ್ರೆ WTI ಗುಣಮಟ್ಟವೇ ಉತ್ತಮ.
2. ಎರಡನೆಯದು ತೈಲ its self is commodity. ಶೇರು ವ್ಯವಹಾರವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಿ.
3. ಮೂರನೆಯದು WTI ಸೀಮಿತವಾಗಿ ಹೇಳೋದಾದ್ರೆ..ಅಲ್ಲಿರುವ Future Trading Agreement ಇರುವುದು Every 1000 Barrels ಗೆ. ಹಾಗಾಗಿ ಅದು negative Trade ಆದ್ರು ಅದನ್ನ ಕೊಂಡುಕೊಳ್ಳುವುದು ಕಷ್ಟ.
4. ನಾಲ್ಕನೆಯದು ಭಾರತದಲ್ಲಿ Oil rate ಏರಿರಲು ಮಖ್ಯ ಕಾರಣ ನಮ್ಮ Tax ವ್ಯವಸ್ಥೆ.
5. ಅಂತರರಾಷ್ಟೀಯ ಕಚ್ಚಾ ತೈಲದ ವೇಳೆ 20 ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಹಾಗಾದ್ರೆ ಪೆಟ್ರೋಲ್ ಬೆಲೆ ಇನ್ನಷ್ಚು ಇಳಿಯಬೇಕಿತ್ತಲ್ಲವೇ..?
ಉತ್ತರ: ಮತ್ತಷ್ಟು ಓದು
ರೂಪಾಯಿ,ಪೆಟ್ರೋಲ್ ಮತ್ತು ಸ್ವದೇಶಿ
– ಪ್ರಶಸ್ತಿ.ಪಿ ಶಿವಮೊಗ್ಗ
ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? !! ರಫ್ತೆಂದರೆ ಚೀನಾದಂತೆ ಬೇಕಾಬಿಟ್ಟಿ ವ್ಯವಹಾರವಲ್ಲ, ಅಗ್ಗದ ದರದಲ್ಲಿ ಚೀನಾದವ್ರೂ ಎಲ್ಲಾ ಕಡೆ ಕಸದಂತೆ ತಂದು ಎಲ್ಲಾ ದೇಶಗಳಲ್ಲಿ, ಭಾರತಕ್ಕೂ ತಂದು ಸುರಿತಿರುವಾಗ, ಕೂಲಿಯಿಂದ ಹಿಡಿದು ಕಚ್ಚಾವಸ್ತುಗಳವರೆಗೆ ಎಲ್ಲದರ ಬೆಲೆ ಏರಿದ್ರೂ ಗುಣಮಟ್ಟ ಕಾದುಕೊಳ್ಳೋ ಅನಿವಾರ್ಯತೆಯಿರೋ ಭಾರತೀಯ ರಫ್ತು ಉದ್ಯಮಕ್ಕೂ ಹೊಡೆತ ಬೀಳುತ್ತಿದೆ ಅದ್ರ ಮದ್ಯ ಕೊಕ್ಕೆ ತೆಗೆಯೋ ಹೊರದೇಶಗಳ ನೂರಾರು ಕಾನೂನುಗಳು ಬೇರೆ…ಅದೆಲ್ಲಾ ದೊಡ್ಡ ತಲೆ ನೋವು ಅಂದ್ರಾ ? ಸರಿ,ಹೋಗ್ಲಿ ಬಿಡಿ.ಅದಿರ್ಲಿ, ಪೆಟ್ರೋಲ್ ಬೆಲೆ ಏರ್ತಾ ಇದ್ರೂ ರೂಪಾಯಿ ಬೆಲೆ ಇಳಿತಾ ಇದ್ರೂ ಘನ ಸರ್ಕಾರ ಏನು ಮಾಡ್ತಾ ಇದೆ ಅಂತ ಬೊಬ್ಬೆ ಹಾಕೋ ಬದ್ಲು ಆ ಸಮಯದಲ್ಲಿ ನಮ್ಮಿಂದ ಏನಾದ್ರೂ ಮಾಡ್ಬಹುದಾ ಅಂತ್ಯಾಕೆ ಯೋಚ್ನೆ ಮಾಡ್ಬಾರ್ದು ?
ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು
– ಪ್ರಶಸ್ತಿ.ಪಿ,ಸಾಗರ
ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು . ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?
ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ? ಮತ್ತಷ್ಟು ಓದು