ಒಂದು ಪ್ರೇತದ ಕತೆ! (ಭಾಗ 6)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಪ್ರೇತದ ಆತ್ಮ ಚರಿತೆ! (ಭಾಗ ೫)
ಒಂದೆಡೆ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಬಂಡೇಳುತ್ತಿರುವ ಪಾಳೇಗಾರರು, ಪ್ರಧಾನರ ಒಳಜಗಳ… ನಾಲ್ದಿಕ್ಕುಗಳಲ್ಲೂ ಮರಾಠಾ ಸಾಮ್ರಾಜ್ಯವನ್ನು ಕುಟಿಲನೀತಿಯ ಮೂಲಕ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಕೆಂಪು ಮುಸುಡಿಗಳ ಈಸ್ಟ್ ಇಂಡಿಯಾ ಕಂಪನಿ. ಅದರಿಂದ ಬಿಡಿಸಿಕೊಳ್ಳಲು ಬಾಜಿರಾವ್ ಪಂಡರಾಪುರದಲ್ಲಿ ಸಾಕಷ್ಟು ಧರ್ಮ ಕಾರ್ಯಗಳನ್ನು ನಡೆಸಿದ. ಭೀಮಾ ನದಿಯ ತೀರದಲ್ಲಿ ಭಾರಿ ಹೋಮಗಳನ್ನಿಟ್ಟು ನಾರಾಯಣನ ಪ್ರೇತವನ್ನು ಉಚ್ಛಾಟನೆ ಮಾಡಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ಕೇವಲ ಪೇಶ್ವಾಗಳ ಸಾಮ್ರಾಜ್ಯ ನಾಶವಾಗಲಿ… ಪೇಶ್ವಾಗಳಿಗೆ ಸಂತಾನವಿಲ್ಲದೆ ಹೋಗಲಿ… ಪೇಶ್ವಾಗಳು ಕೈ ಹಿಡಿದ ಮಡದಿಯರನ್ನು ಮುಟ್ಟಿದರೆ ಸಾಕು ಅವರು ಸತ್ತು ಹೋಗುವಂತಾಗಲಿ… ಪೇಶ್ವಾಗಳ ಅರಮನೆಗೆ ಬೆಂಕಿ ಬೀಳಲಿ. ಇದು ನಾರಾಯಣನ ಪ್ರೇತ ಬಾಜಿರಾಯನ ಕಿವಿಯಲ್ಲಿ ಪ್ರತೀ ದಿನ ಉಸುರುತ್ತಿದ್ದ ಮಾತುಗಳು.. ಬಾಜಿರಾಯ ಮದುವೆಯಾದ. ಮಕ್ಕಳನ್ನು ಪಡೆಯಬೇಕು ಎಂದು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿ ನಿಗೂಡವಾಗಿ ಸಾವನ್ನಪ್ಪಿದಳು.!! ಮತ್ತೊಬ್ಬಳನ್ನು ಮದುವೆಯಾದ ಅವಳೂ ಇದೇ ರೀತಿ ನಿಗೂಢವಾಗಿ ಸತ್ತು ಹೋದಳು. ಹೀಗೆ ನಾಲ್ಕು ಜನರನ್ನು, ನಾರಾಯಣ ಪೇಶ್ವೆಯ ಪ್ರೇತ ಬಲಿ ಪಡೆದುಕೊಂಡಿತು. ಬಾಜಿರಾಯನಿಗೆ ಹೆಣ್ಣು ಕೊಡಲು ಜನ ಹಿಂದೇಟು ಹಾಕತೊಡಗಿದರು. ಮತ್ತಷ್ಟು ಓದು
ಪ್ರೇತದ ಆತ್ಮ ಚರಿತೆ! (ಭಾಗ ೪)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಆಗಷ್ಟ್ ೩೦ ೧೭೭೩ ಇಡಿ ಪುಣೆ ಗಣೇಶ ಉತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಕೇಸರಿ ಗುಲಾಬಿ ರಂಗಿನೋಕುಳಿಗೆ ನಗರ ನವಶೃಂಗಾರಗೊಂಡಿದೆ. ಶನಿವಾರವಾಡೆಯಲ್ಲೂ ಉತ್ಸವ ಕಳೆಗಟ್ಟಿತ್ತು. ಹಾಡು, ಕುಣಿತ, ಕೀರ್ತನೆ,ಆರತಿ, ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಪೇಶ್ವಾಗಳ ಆರಾಧ್ಯಮೂರ್ತಿ ಚಿಂತಾಮಣಿ ಗಣಪತಿಯ ಪೂಜೆ ಆಗಷ್ಟೆ ಮುಗಿದು ಎಲ್ಲರೂ ವರ್ಷಕ್ಕಾಗುವಷ್ಟು ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡು ಮರಳಿದರು. ವಾಡೆಯಲ್ಲಿ ಕಾವಲು ಭಟರು ಮತ್ತು ಪರಿಚಾರಕ ವರ್ಗವನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ತಮ್ಮ ಸ್ವಸ್ಥಾನ ಸೇರಿಕೊಂಡಿದ್ದರು. ಮಹಾ ದುರಂತವೊಂದು ನಡೆಯುವ ಮೊದಲು ಆವರಿಸುವ ಅಸಾದ್ಯ ನೀರವತೆ ವಾಡೆಯನ್ನು ಆವರಿಸಿಕೊಂಡಿತ್ತು. ರಂಗ ಮಹಲ್ ಕಡೆಯಿಂದ ಐದಾರು ದೀವಟಿಕೆಗಳು ಒಳಪ್ರವೇಶಿಸಿದವು. ಖಿಡ್ಕಿ ದರವಾಜಾ ಬಳಿ ಎರಡು ಬಟ್ಟೆ ಸುತ್ತಿದ ಮುಖಗಳು ಗೋಚರಿಸಿದವು. ಕ್ಷಣಮಾತ್ರದಲ್ಲೇ ಶನಿವಾರವಾಡೆಯ ಹಜಾರಗಳಲ್ಲಿ ಹತ್ತಾರು ಗುಂಪುಗಳ ಹೆಜ್ಜೆಯ ಸಪ್ಪಳ ಮೊಳಗಿತು. ವಾಡೆಯ ಮುಖ್ಯದ್ವಾರದ ಬಳಿ ಐವತ್ತು ಜನರಿದ್ದ ಸೇನಾ ತುಕುಡಿಯೊಂದು ಬಂದು ನಿಂತಿತು. ಗುಂಪಿನ ನಾಯಕ ಸುಮೇರು ಸಿಂಗ್ ಕಾವಲುಗಾರನ ಬಳಿ ಬಂದು ಕೂಡಲೆ ಪೇಶ್ವಾ ಅವರನ್ನು ಕಾಣಬೇಕು ತುರ್ತು ಕೆಲಸವಿದೆ ಎಂದ. ಈಗ ಪೇಶ್ವಾ ಅವರು ನಿದ್ದೆಯಲ್ಲಿದ್ದಾರೆ. ನಾಳೆ ಬಂದು ಭೇಟಿಯಾಗಿ ಎಂದ ಮುಖ್ಯದ್ವಾರದ ರಕ್ಷಣೆಯಲ್ಲಿದ್ದ ಮಹಾದಜಿ ಗೋರೆ… ಮಾತು ಪೂರ್ಣಗೊಳ್ಳುವ ಮೊದಲೇ ಸುಮೇರು ಸಿಂಗ್ ಓರೆಯಿಂದ ಕತ್ತಿ ಹೊರಬಂದು ಗೋರೆಯ ಹೊಟ್ಟೆ ಸೀಳಿ ಹಾಕಿತು. ತುಕುಡಿಯನ್ನು ಒಳನುಗ್ಗುವಂತೆ ಸುಮೇರ್ ಆದೇಶಿಸಿದ ಕೇವಲ ಹತ್ತು ನಿಮಿಷದಲ್ಲೇ ವಾಡೆ ಸುಮೇರು ಸಿಂಗ್ ಕೈವಶವಾಯಿತು. ಆ ವಾಡೆಯ ಕೆಳ ಅಂತಸ್ತಿನಲ್ಲೇ ರಘುನಾಥ ರಾವ್, ಆನಂದಿ ಬಾಯಿ ವಾಸವಾಗಿದ್ದರು. ಸುಮೇರು ಸಿಂಗ್ ಹಿಂಬಾಲಕರು ವಾಡೆಯ ಕಾವಲಿಗಿದ್ದವರನ್ನು ತರಿದು ಹಾಕಿದರು. ಘನಘೊರ ರಕ್ತಪಾತ ನಡೆಯಿತು. ಕೆಲವೇ ಗಂಟೆಗಳ ಮೊದಲು ಚೌತಿಯ ಸಡಗರದಲ್ಲಿ ಗಿಜಿಗುಟ್ಟುತ್ತಿದ್ದ ಶನಿವಾರವಾಡೆ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿತ್ತು. ವಾಡೆಯ ಮೊದಲ ಅಂತಸ್ತಿನ ತೇಗದ ಮುಚ್ಚಿಗೆಗಳಿಂದ ರಕ್ತ ಒಸರ ತೊಡಗಿತು. ಸುಮೇರು ಸಿಂಗ್ ನಾರಾಯಣ ಪೇಶ್ವಾ ಮಲಗಿದ್ದ ಕೋಣೆಗೆ ನುಗ್ಗಿದ. ವಾಡೆಯಲ್ಲಿ ಆಹಾಕಾರ ಚೀತ್ಕಾರಗಳು ಎದ್ದಿರುವುದನ್ನು ಕಂಡು ನಾರಾಯಣನಿಗೆ ಪರಿಸ್ಥಿತಿಯ ಅರಿವಾಯಿತು. ಮತ್ತಷ್ಟು ಓದು
ಪ್ರೇತದ ಆತ್ಮ ಚರಿತೆ! (ಭಾಗ 3)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಶನಿವಾರವಾಡೆಗೆ ಶನಿ ಎಡಗಾಲಿಟ್ಟು ವಕ್ಕರಿಸಿದ್ದ. ರಘುನಾಥನನ್ನು ಗೃಹಬಂಧನದಲ್ಲಿ ಇಢಲಾಗಿದ್ದರೂ, ಆತನ ದುಷ್ಟಕೂಟ ಮಾತ್ರ ಸುಮ್ಮನೆ ಕೂತಿರಲಿಲ್ಲ. ಅದು ಒಂದಲ್ಲಾ ಒಂದು ಸಂಚನ್ನು ಹೆಣೆಯುತ್ತಲೇ ಇತ್ತು. ರಘುನಾಥನ ಬಂಧನವಾದ ಕೆಲವೇ ದಿನದಲ್ಲಿ ಪೇಶ್ವಾ ಮಾಧವ ರಾವ್ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಮಾಧವ ರಾವ್ ಬೆಂಗಾವಲಿಗನಾಗಿದ್ದ ರಾಮಸಿಂಗ್ ಎಂಬಾತ ಮಾಧವ್ ರಾವ್ ಮೇಲೆ ಅನಿರೀಕ್ಷಿತವಾಗಿ ತಲವಾರು ಝಳಪಿಸಿದ. ಕುತ್ತಿಗೆಗೆ ಬೀಳಬೇಕಿದ್ದ ಪೆಟ್ಟು ತೋಳಿಗೆ ಬಿತ್ತು ಬದುಕಿಕೊಂಡ, ಇದರ ಹಿಂದೆ ರಘುನಾಥ ರಾವ್ ಕೈವಾಡ ಇತ್ತು ಎಂದು ಬಳಿಕ ತಿಳಿದು ಬಂತು. ಹೈದರ್ ಆಲಿಯ ವಿರುದ್ಧ ಮೂರನೇ ಯುದ್ಧಕ್ಕೆ ಮಾಧವ್ ರಾವ್ ಪೇಶ್ವಾ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪೇಶ್ವಾ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಭಯಾನಕ ಟಿಬಿ ಖಾಯಿಲೆ ಪೇಶ್ವಾನಿಗೆ ತಟ್ಟಿತ್ತು. ಅಂದಿನ ಕಾಲಕ್ಕೆ ಅದು ಬ್ರಿಟಿಷರು ತಂದು ಬಿಟ್ಟಿದ್ದ ಹೊಸ ಖಾಯಿಲೆಯಾದ ಕಾರಣ ಇಲ್ಲಿ ಟಿಬಿಗೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಥೇವೂರು ಚಂತಾಮಣಿ ದೇವಾಲಯದಲ್ಲಿ ಪೇಶ್ವಾ ಮಾಧವ ರಾವ ಕೊನೆಯುಸಿರೆಳೆದ. ಅಲ್ಲೇ ಆತನ ಅಂತ್ಯಸಂಸ್ಕಾರ ನಡೆಸಲಾಯಿತು. ಆತನ ಪ್ರಿಯ ಪತ್ನಿ ರಾಮಾಬಾಯಿ ಗಂಡನ ಚಿತೆಗೆ ಹಾರಿ ಪ್ರಾಣ ಬಿಟ್ಟಳು. ಮಾಧವ ರಾವ್, ಶನಿವಾರವಾಡೆಯ ಪೇಶ್ವಾ ಗದ್ದುಗೆ ಅಲಂಕರಿಸಿದ ಕೊನೆಯ ಸಮರ್ಥ ಪೇಶ್ವಾ. ಈತ ಹಲವಾರು ಸಮರ್ಥ ಸೇನಾನಿಗಳನ್ನು ಗುರುತಿಸಿ ಅವರಿಗೆ ಬೇರೆ ಬೇರೆ ವಲಯಗಳ ಅಧಿಕಾರ ನೀಡಿದ. ಇಂದು ನಾವು ರಾಜಸ್ಥಾನದಲ್ಲಿ ಕಾಣುತ್ತಿರುವ ಸಿಂಧ್ಯಾ ಮನೆತನದ ಮೂಲ ಪುರುಷ ಮಹಾದ್ ಜಿ ಸಿಂಧ್ಯಾನನ್ನು ಬೆಳೆಸಿದ್ದು ಮಾಧವರಾವ್ ಪೇಶ್ವಾ. ಕೊಲ್ಹಾಪುರದ ಭೋಸ್ಲೆಗಳು, ಬರೋಡಾದ ಗಾಯಕ್ವಾಡರು, ಉತ್ತರಭಾರತದಲ್ಲಿ ಹೋಳ್ಕರ್‌ಗಳು ಇವರೆಲ್ಲಾ ಮಾಧವರಾವ್ ಪೇಶ್ವಾನ ಗರಡಿಯಲ್ಲೇ ಪಳಗಿ ಪುಣೆಗೆ ನಿಷ್ಟರಾಗಿ ಆಡಳಿತ ನಡೆಸಿದರು. ಮಾಧವರಾವ್ ಪೇಶ್ವೆ ತೀರಿಕೊಳ್ಳುತ್ತಿದ್ದಂತೆ ಈ ರಾಜ್ಯಗಳ ಹಿಡಿತ ಪುಣೆಯಿಂದ ಕೈ ತಪ್ಪಿತು. ಎಲ್ಲರೂ ಸ್ವತಂತ್ರರಾಗಿ ಆಳ್ವಿಕೆ ಮಾಡಲು ಆರಂಭಿಸಿದರು. ಮಾಧವ ರಾವ್ ಬಳಿಕ ಪುಣೆಯಲ್ಲಿ ನಾಲಾಯಕ್ಕುಗಳ ಸರದಿ ಆರಂಭ ವಾಯಿತು. ಪೇಶ್ವಾಯಿಯ ರಕ್ತ ಎಲ್ಲಿ ಕಳಪೆಯಾಯಿತೋ ಗೊತ್ತಿಲ್ಲ, ಒಬ್ಬರಿಗಿಂತ ಒಬ್ಬರು ಅಯೋಗ್ಯರೇ ಬರಲಾರಂಭಿಸಿದರು. ಶನಿವಾರ ವಾಡೆಯನ್ನು ಇಂದಿಗೂ ಕಾಡುತ್ತಿರುವ ಪ್ರೇತದ ಕತೆ ಇಲ್ಲಿ ಆರಂಭವಾಗುತ್ತದೆ. ಮತ್ತಷ್ಟು ಓದು
ಪ್ರೇತದ ಆತ್ಮ ಚರಿತೆ! (ಭಾಗ ೧)
– ಶ್ರೀಕಾಂತ್ ಶೆಟ್ಟಿ
ಒಂದು ಪ್ರೇತದ ಕತೆ. ಆ ಒಂದು ಪ್ರೇತ ಮಾಡಿದ ಆವಾಂತರಕ್ಕೆ ಇತಿಹಾಸವೇ ಹೊಸ ತಿರುವು ಪಡೆದುಕೊಂಡು ಬಿಟ್ಟಿತು. ಈ ಭೂತ ಪ್ರೇತ ಇದೆಲ್ಲಾ ಇದೆಯೋ ಇಲ್ಲವೋ, ಇದ್ದರೆ ವೈಜ್ಞಾನಿಕ ಕಾರಣ ಕೊಡಿ. ಅದರ ಇರುವನ್ನು ಸಾಬೀತು ಮಾಡಿ ಎನ್ನುವವರಿಗೆ ಈ ಕತೆ ಹೇಳಿ ಮಾಡಿಸಿದ್ದಲ್ಲ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿರುವ ದಂತಕತೆಯನ್ನು ಆಧಾರವಾಗಿಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಿದ್ದೇನೆ. ಇದರಲ್ಲಿ ಕೇವಲ ಪ್ರೇತ ಮಾತ್ರ ಬಂದು ಹೋಗುವುದಿಲ್ಲ. ಹದಿನೆಂಟನೇ ಶತಮಾನದಲ್ಲಿ ಭೂಮಿ ನಡುಗಿಸುವಷ್ಟು ಸೇನೆ ಕಟ್ಟಿಕೊಂಡು, ಮೊಘಲರನ್ನು ಬೇರು ಸಮೇತ ಕಿತ್ತೊಗೆದ ಮರಾಟಾ ಪೇಶ್ವಾಗಳು ಬರುತ್ತಾರೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕೃಷ್ಣಾ ನದಿ ದಂಡೆಯವರೆಗೆ ಪೇಶ್ವಾಗಳ ಕತ್ತಿಯ ಅಬ್ಬರ, ಕುದುರೆಗಳ ಹೇಷಾರವ, ಮದೋನ್ಮತ್ತ ಆನೆಗಳ ಹೂಂಕಾರ.. ನಭವನ್ನೇ ನಡುಗಿಸುವ ಮರಾಠಾ ಮಾವಳಿಗಳ ಹರಹರಾ ಮಹಾದೇವ ರಣಘರ್ಜನೆ.. ಚಿತ್ಪಾವನ ಬ್ರಾಹ್ಮಣ ರಣಕಲಿಗಳ ಅಪ್ರತಿಮ ರಣತಂತ್ರ.. ಒಂದು ಶತಮಾನ ಕಾಲ ವಿಜೃಂಭಿಸಿದ ಮರಾಠ ಶಕ್ತಿಯ ವಿವಿಧ ಮುಖ ಪರಿಚಯ ಇಲ್ಲಿ ನಿಮಗಾಗಲಿದೆ.