ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪೇಶ್ವೆ’

6
ಜನ

ಕೋರೆಗಾಂವ್ ಸ್ವಾಭಿಮಾನದ ವಿಜಯವಾದರೆ ಕೊಡವರದ್ದೇನು?

– ಸಂತೋಷ್ ತಮ್ಮಯ್ಯ
“ಹೊಸ ಪೇಶ್ವೆಗಳ ವಿರುದ್ಧ ನಾವು ಹೋರಾಟ ಮಾಡಲು ನಮಗೆ ಯಾವ ಚುನಾವಣಾ ರಾಜಕೀಯದಿಂದಲೂ ಸಾಧ್ಯವಿಲ್ಲ. ಅದಕ್ಕೆ ಬೀದಿ ಕಾಳಗವನ್ನೇ ಮಾಡಬೇಕು. ದಲಿತರ ಮೇಲಿನ ದೌರ್ಜನ್ಯಕ್ಕೆ ಬೀದಿ ಕಾಳಗವೊಂದೇ ಪರಿಹಾರ ”
ಜಿಗ್ನೇಸ್ ಮೆವಾನಿ ಎಂಬ ಜನಪ್ರತಿನಿಧಿ ಕೋರೆಗಾಂವ್‌ನಲ್ಲಿ ಒದರಿದ್ದು ಹೀಗೆ. ಈ ಮಾತುಗಳನ್ನು ಕೇಳಿದ ವಲ್ಸದ್ ಕ್ಷೇತ್ರದ ಮತದಾರರಿಗೆ ಶ್ರೀಖಂಡ್ ತಿಂದಂತಾಗಿರಬಹುದು. ಏಕೆಂದರೆ ಕೇವಲ ಹದಿನೈದು ದಿನಗಳ ಹಿಂದೆಯಷ್ಟೆ ಅವರು ತಮ್ಮ ಹಕ್ಕು, ತಮ್ಮ ಉದ್ಧಾರ, ನಮ್ಮ ಪ್ರಜಾಪ್ರಭುತ್ವ, ನಮಗಾಗಿ ಬಂದ ಅವತಾರಿ ಪುರುಷ ಎಂದೆಲ್ಲಾ ಹೊಗಳಿ ಆತನನ್ನು ಆರಿಸಿದ್ದರು. ಆದರೆ ಹದಿನೈದೇ ದಿನದಲ್ಲಿ ಆತ ಪ್ರಜಾಪ್ರಭುತ್ವವೆಂದರೆ ನನ್ನ ಎಕ್ಕಡ ಎನ್ನುವಂಥಾ ಹೇಳಿಕೆಯನ್ನು ನೀಡಿ ಕ್ಷೇತ್ರದ ಜನಕ್ಕೆ ಒಳ್ಳೆಯ ಉಡುಗೋರೆಯನ್ನೇ ಕೊಟ್ಟ! ಗುಜರಾತಿನಲ್ಲಿ ಬಿಜೆಪಿ ಗೆದ್ದಿದ್ದರೂ ಜಿಗ್ನೇಶ್ ಗೆಲುವು ಅಪಾಯಕಾರಿ ಎಂದಿದ್ದವರ ಭವಿಷ್ಯವನ್ನು  ಆತ ಇಷ್ಟು ಬೇಗನೆ ನಿಜ ಮಾಡುತ್ತಾನೆಂದು ದೇಶ ಅಂದುಕೊಂಡಿರಲಿಲ್ಲ. ಆದರೆ ಜಿಗ್ನೇಶ್ ಬುದ್ಧಿಜೀವಿಗಳ ಹಲವರ್ಷಗಳ ಶ್ರಮದ ಫಲ ಎಂಬುದನ್ನು ಆರಂಭದಲ್ಲೇ ಕೆಲವರು ಅರಿತಿದ್ದರು. ನಿಜ, ಆತ ಬುದ್ಧಿಜೀವಿಗಳ ಅಸ್ಪಷ್ಟ ಕನಸ್ಸಿಗೆ ಸ್ಪಷ್ಟ ರೂಪ ಕೊಟ್ಟವನು. ಎಗ್ಗಿಲ್ಲದೆ ಮಾತಾಡುವ, ಮುಗ್ದರನ್ನು ಸುಲಭವಾಗಿ ವಂಚಿಸುವ, ಬಿಸಿ ರಕ್ತದ, ಹುಚ್ಚು ಮಾತಿನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಆದರೆ ಪಕ್ಷೇತರನಾಗಿ ನಿಂತು ಚುನಾವಣೆ ಗೆಲ್ಲಬಲ್ಲ ಸಾಮರ್ಥ್ಯದ, ಪರಂಪರೆಯ ಬಗ್ಗೆ ಕೆಂಡಕಾರಬಲ್ಲ, ಮುಸಲ್ಮಾನನಂತೆ ಯೋಚಿಸಬಲ್ಲ, ಕಮ್ಯುನಿಸ್ಟನಂತೆ ಮಾತಾಡಬಲ್ಲ, ಆದರೆ ಅವರಾರೂ ಆಗಿರದ, ಕಡ್ಡಾಯವಾಗಿ ದಲಿತನೇ ಆಗಿರಬೇಕಾದ ಆಕೃತಿಯೊಂದರ ಹುಡುಕಾಟದಲ್ಲಿದ್ದ ಬುದ್ಧಿಜೀವಿಗಳಿಗೆ ಸಿಕ್ಕವನು ಈ ಜಿಗ್ನೇಶ್ ಮೆವಾನಿ. ಬುದ್ಧಿಜೀವಿಗಳ ಕೈಪಿಡಿಯ ಪ್ರಕಾರ ಕನ್ಹಯ್ಯನೆಂಬವನು ಎಷ್ಟಾದರೂ ಭೂಮಿಹಾರ್ ಬ್ರಾಹ್ಮಣ. ಆತ ಧೀರ್ಘಕಾಲ ಬಾಳಿಕೆಗೆ ಬಾರದವನು! ಹಾಗಾಗಿ ಜಿಗ್ನೇಶ್ ಎಂಬ ಬುದ್ಧಿಜೀವಿಗಳು ಕೆತ್ತಿದ ಆಕಾರ ಹದಿನೈದೇ ದಿನದಲ್ಲಿ ಪ್ರಜಾಪ್ರಭುತ್ವವನ್ನು ಹಂಗಿಸಿ, ಮಹಾರಾಷ್ಟ್ರಕ್ಕೆ ಬೆಂಕಿ ಹಾಕಿ, ಹೆಣ ಬೀಳಿಸಿ ಹೋಗಿದ್ದ. ಇಲ್ಲದಿದ್ದರೆ ಭೀಮಾ-ಕೋರೇಗಾಂವ್ ವಿಜಯದ ೨೦೦ನೇ ವರ್ಷಾಚರಣೆ ಸಂದರ್ಭದಲ್ಲಿ ಏಕಾಏಕಿ ಬೀದಿ ಕಾಳಗ ಯಾಕಾಗಬೇಕಿತ್ತು? ಅಂಥ ಯಾವ ಕಾರಣ ತಾನೇ ಇತ್ತು? ಮೊದಲ ಬಲಿಗಾಗಿ ಜಿಗ್ನೇಶ ಕೋರೆಗಾಂವನ್ನೇ ಏಕೆ ಆರಿಸಿಕೊಂಡ? ಈ ಸಂಗತಿ ಎಷ್ಟು ಆಳದಲ್ಲಿದೆಯೋ ಅಷ್ಟೇ ಸೂಕ್ಷ್ಮವಾಗಿಯೂ ಇದೆ.

Read more »

Advertisements
21
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೪)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)

14117697_1080861882009420_308061420913968049_nಆಗಷ್ಟ್ ೩೦ ೧೭೭೩ ಇಡಿ ಪುಣೆ ಗಣೇಶ ಉತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಕೇಸರಿ ಗುಲಾಬಿ ರಂಗಿನೋಕುಳಿಗೆ ನಗರ ನವಶೃಂಗಾರಗೊಂಡಿದೆ. ಶನಿವಾರವಾಡೆಯಲ್ಲೂ ಉತ್ಸವ ಕಳೆಗಟ್ಟಿತ್ತು. ಹಾಡು, ಕುಣಿತ, ಕೀರ್ತನೆ,ಆರತಿ, ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಪೇಶ್ವಾಗಳ ಆರಾಧ್ಯಮೂರ್ತಿ ಚಿಂತಾಮಣಿ ಗಣಪತಿಯ ಪೂಜೆ ಆಗ‍ಷ್ಟೆ ಮುಗಿದು ಎಲ್ಲರೂ ವರ್ಷಕ್ಕಾಗುವಷ್ಟು ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡು ಮರಳಿದರು. ವಾಡೆಯಲ್ಲಿ ಕಾವಲು ಭಟರು ಮತ್ತು ಪರಿಚಾರಕ ವರ್ಗವನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ತಮ್ಮ ಸ್ವಸ್ಥಾನ ಸೇರಿಕೊಂಡಿದ್ದರು. ಮಹಾ ದುರಂತವೊಂದು ನಡೆಯುವ ಮೊದಲು ಆವರಿಸುವ ಅಸಾದ್ಯ ನೀರವತೆ ವಾಡೆಯನ್ನು ಆವರಿಸಿಕೊಂಡಿತ್ತು. ರಂಗ ಮಹಲ್ ಕಡೆಯಿಂದ ಐದಾರು ದೀವಟಿಕೆಗಳು ಒಳಪ್ರವೇಶಿಸಿದವು. ಖಿಡ್ಕಿ ದರವಾಜಾ ಬಳಿ ಎರಡು ಬಟ್ಟೆ ಸುತ್ತಿದ ಮುಖಗಳು ಗೋಚರಿಸಿದವು. ಕ್ಷಣಮಾತ್ರದಲ್ಲೇ ಶನಿವಾರವಾಡೆಯ ಹಜಾರಗಳಲ್ಲಿ ಹತ್ತಾರು ಗುಂಪುಗಳ ಹೆಜ್ಜೆಯ ಸಪ್ಪಳ ಮೊಳಗಿತು. ವಾಡೆಯ ಮುಖ್ಯದ್ವಾರದ ಬಳಿ ಐವತ್ತು ಜನರಿದ್ದ ಸೇನಾ ತುಕುಡಿಯೊಂದು ಬಂದು ನಿಂತಿತು. ಗುಂಪಿನ ನಾಯಕ ಸುಮೇರು ಸಿಂಗ್ ಕಾವಲುಗಾರನ ಬಳಿ ಬಂದು ಕೂಡಲೆ ಪೇಶ್ವಾ ಅವರನ್ನು ಕಾಣಬೇಕು ತುರ್ತು ಕೆಲಸವಿದೆ ಎಂದ. ಈಗ ಪೇಶ್ವಾ ಅವರು ನಿದ್ದೆಯಲ್ಲಿದ್ದಾರೆ. ನಾಳೆ ಬಂದು ಭೇಟಿಯಾಗಿ ಎಂದ ಮುಖ್ಯದ್ವಾರದ ರಕ್ಷಣೆಯಲ್ಲಿದ್ದ ಮಹಾದಜಿ ಗೋರೆ… ಮಾತು ಪೂರ್ಣಗೊಳ್ಳುವ ಮೊದಲೇ ಸುಮೇರು ಸಿಂಗ್ ಓರೆಯಿಂದ ಕತ್ತಿ ಹೊರಬಂದು ಗೋರೆಯ ಹೊಟ್ಟೆ ಸೀಳಿ ಹಾಕಿತು. ತುಕುಡಿಯನ್ನು ಒಳನುಗ್ಗುವಂತೆ ಸುಮೇರ್ ಆದೇಶಿಸಿದ ಕೇವಲ ಹತ್ತು ನಿಮಿಷದಲ್ಲೇ ವಾಡೆ ಸುಮೇರು ಸಿಂಗ್ ಕೈವಶವಾಯಿತು. ಆ ವಾಡೆಯ ಕೆಳ ಅಂತಸ್ತಿನಲ್ಲೇ ರಘುನಾಥ ರಾವ್, ಆನಂದಿ ಬಾಯಿ ವಾಸವಾಗಿದ್ದರು. ಸುಮೇರು ಸಿಂಗ್ ಹಿಂಬಾಲಕರು ವಾಡೆಯ ಕಾವಲಿಗಿದ್ದವರನ್ನು ತರಿದು ಹಾಕಿದರು. ಘನಘೊರ ರಕ್ತಪಾತ ನಡೆಯಿತು. ಕೆಲವೇ ಗಂಟೆಗಳ ಮೊದಲು ಚೌತಿಯ ಸಡಗರದಲ್ಲಿ ಗಿಜಿಗುಟ್ಟುತ್ತಿದ್ದ ಶನಿವಾರವಾಡೆ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿತ್ತು. ವಾಡೆಯ ಮೊದಲ ಅಂತಸ್ತಿನ ತೇಗದ ಮುಚ್ಚಿಗೆಗಳಿಂದ ರಕ್ತ ಒಸರ ತೊಡಗಿತು. ಸುಮೇರು ಸಿಂಗ್ ನಾರಾಯಣ ಪೇಶ್ವಾ ಮಲಗಿದ್ದ ಕೋಣೆಗೆ ನುಗ್ಗಿದ. ವಾಡೆಯಲ್ಲಿ ಆಹಾಕಾರ ಚೀತ್ಕಾರಗಳು ಎದ್ದಿರುವುದನ್ನು ಕಂಡು ನಾರಾಯಣನಿಗೆ ಪರಿಸ್ಥಿತಿಯ ಅರಿವಾಯಿತು. Read more »

16
ಸೆಪ್ಟೆಂ

ಪ್ರೇತದ ಆತ್ಮ ಚರಿತೆ! (ಭಾಗ ೨)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
14141908_1078958802199728_8622841239691589630_nಅದು ಮನುಕುಲ ಕಂಡ ಪರಮ ಪಾಪಿಗಳಲ್ಲೊಬ್ಬ ಔರಂಗಜೇಬ ದಿಲ್ಲಿಯ ಗದ್ದುಗೆಯಲ್ಲಿದ್ದ ಸಮಯ. ಪ್ರಜೆಗಳನ್ನು ಪರಿಪಾಲನೆ ಮಾಡಬೇಕಾದ ದೊರೆಯೇ ಜಿಸಿಯಾ ತಲೆಗಂದಾಯ ಹೇರಿ ಒಂದು ನಿರ್ದಿಷ್ಟ ಸಮಾಜದ ಸರ್ವನಾಶಕ್ಕೆ ಪಣತೊಟ್ಟು ಸಾವಿರಾರು ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದ ಕಂಟಕಕಾಲ.. ಆ ಹೊತ್ತಿನಲ್ಲಿ ಸ್ವಾಭಿಮಾನಿ ಹಿಂದೂಗಳ ಪಾಲಿಗೆ ಆಪತ್ಭಾಂದವರಾಗಿ ಶಿವಾಜಿ ಮಹಾರಾಜರು ಉದಿಸಿದರು. ಸಹ್ಯಾದ್ರಿಯ ಸಿಂಹದ ಗುಡುಗಿಗೆ ದಿಲ್ಲಿಯ ಮೊಘಲರ ಮಯೂರ ಸಿಂಹಾಸನ ತಣ್ಣಗೆ ಕಂಪಿಸಿದ್ದಂತೂ ಸತ್ಯ. ಪ್ರವಾಹಕ್ಕೆ ವಿರುದ್ಧವಾಗಿ ಈಜಿ ತನ್ನ ಸದ್ಗುಣಗಳಿಂದ ಪ್ರಜೆಗಳ ಹೃದಯವನ್ನೂ… ಖಡ್ಗಪರಾಕ್ರಮದಿಂದ ಯವನರ ಸೈನ್ಯವನ್ನೂ ಗೆದ್ದ ಶಿವಾಜಿ, ಹಿಂದವೀ ಸ್ವಾರಾಜ್ಯವನ್ನು ಕಟ್ಟಿದರು. ಅಖಂಡ ಹಿಂದೂ ಸಾಮ್ರಾಜ್ಯಕ್ಕೆ ಬೀಜಾರೋಹಣ ಮಾಡಿದವರು ಶಿವಾಜಿ ಮಹಾರಾಜರಾದರೂ, ಅವರ ಕನಸನ್ನು ನನಸು ಮಾಡಿದವರು ಮಾತ್ರ ಪುಣೆಯ ಪೇಶ್ವಾಗಳು. Read more »