ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪ್ರಗತಿಪರ’

1
ಏಪ್ರಿಲ್

ಈ ದೇಶದಲ್ಲಿ ಫಾರೂಕ್ ಯಾಕೆ ಹುತಾತ್ಮ ಅನ್ನಿಸಿಕೊಳ್ಳುವುದಿಲ್ಲ..?

– ಅಜಿತ್ ಹನುಮಕ್ಕನವರ್

ಫಸ್ಟ್ ಆಫ್ ಆಲ್, ಈ ಫಾರೂಕ್ ಯಾರು ಅನ್ನೋದನ್ನ ಒಮ್ಮೆ ಹೇಳಿಬಿಡ್ತೀನಿ. ಆತ ಮೂಲತಃ ತಮಿಳುನಾಡಿನ ಕೊಯಮತ್ತೂರು ಕಡೆಯವನು. ವಯಸ್ಸು ಮೂವತ್ತೊಂದು. ಮದುವೆ ಆಗಿ ಎರಡು ಮಕ್ಕಳ ತಂದೆಯೂ ಆಗಿದ್ದ ಕಬ್ಬಿಣದ ವ್ಯಾಪಾರಿ. ಮೊನ್ನೆ ಹದಿನಾರನೇ ತಾರೀಖು ರಾತ್ರಿ, ಏನೋ ಅರ್ಜೆಂಟ್ ಕೆಲಸ ಇದೆ ಆತನನ್ನ ಮನೆಯಿಂದ ಹೊರಗೆ ಕರೆಸಿಕೊಂಡ ನಾಲ್ಕು ಜನ ನಡುರಸ್ತೆಯಲ್ಲಿ ಕತ್ತರಿಸಿ ಕೊಂದುಬಿಟ್ಟರು. ಮತ್ತಷ್ಟು ಓದು »

27
ಮಾರ್ಚ್

ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..

– ಪ್ರವೀಣ್ ಕುಮಾರ್ ಮಾವಿನಕಾಡು

ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!

ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು. ಮತ್ತಷ್ಟು ಓದು »

24
ಆಗಸ್ಟ್

ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ

– ರಾಕೇಶ್ ಶೆಟ್ಟಿ

ಆನುದೇವಾ ಹೊರಗಣವನು ಸೆಕ್ಯುಲರಿಸಂಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.

ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.

ಮತ್ತಷ್ಟು ಓದು »

18
ನವೆಂ

ಆಳ್ವಾಸ್ ’ನುಡಿಸಿರಿ’ ಮತ್ತು ಪ್ರಗತಿಪರರ ’ಕಿರಿಕಿರಿ’

– ಹರಿಶ್ಚಂದ್ರ ಶೆಟ್ಟಿ

Alvas Nudisiri1ಮೋಹನ ಆಳ್ವರ ನಾಡು ನುಡಿಯ ಕಂಪಿನ ಕನ್ನಡ ನುಡಿಸಿರಿ ಅದ್ದೂರಿಯ ಮುಕ್ತಾಯ ಕಂಡಿದೆ.ಒಬ್ಬ ವ್ಯಕ್ತಿ ತನ್ನ ಇಚ್ಛಾಶಕ್ತಿಯಿಂದ ಇಂತಹದೊಂದು ಕಾರ್ಯ ನಡೆಸುವುದು ಸಾಧ್ಯವೇ ಎನ್ನುವ ಸಾರ್ವಜನಿಕರ ಆಶ್ಚರ್ಯದ ನಡುವೆ ಕೆಲವು ಹುಳುಕಿನ ಮನಸ್ಸುಗಳು ತಮ್ಮ ವಿತಂಡ ವಾದವನ್ನು ಆಳ್ವರತ್ತ ಹರಿಸಿ ಬಿಟ್ಟಿವೆ.ಕಳೆದ ವರ್ಷ ಮೋಹನ ಆಳ್ವರಿಂದ ಸನ್ಮಾನ ಮಾಡಿಸಿಕೊಂಡು,ಶಾಲು ಹೊದಿಸಿಕೊಂಡು,ಒಟ್ಟಿಗೆ ನೋಟಿನ ದಪ್ಪ ಕಟ್ಟನ್ನು ಕಿಸೆಗೇರಿಸಿಕೊಂಡು ಹೋದ ಸಾರಸ್ವತ ಲೋಕದ ಮಹಾಶಯರೊಬ್ಬರು ನಂತರ ತಮ್ಮ ಅಸಲಿ ಬುದ್ಧಿಯ ” ಜಾತಿ” ವಾದವನ್ನು ಸಾಬೀತು ಪಡಿಸಿದ್ದರು…ಅಂತಹ ಸಾಹಿತಿಗೆ,” ಓತಿಕ್ಯಾತನಿಗೆ ಬೇಲಿ ಸಾಕ್ಷಿ ” ಎನ್ನುವಂತೆ,ಕಳೆದ ಹಲವಾರು ವರ್ಷಗಳಿಂದ ನುಡಿಸಿರಿಯ ಹೆಸರಿನಲ್ಲಿ ಕುತ್ತಿಗೆ ಮಟ್ಟ ತಿಂದು ತೇಗಿದ ಬುದ್ಧಿಜೀವಿಗಳು ಸಹಕಾರ ವಾಣಿಯನ್ನು ಒದಗಿಸಿದ್ದವು.ಈ ಸಲವೂ ಇವರುಗಳಿಗೆ ಏನೋ ಒಡಕು ಕಂಡಿದೆಯಂತೆ.ಆಳ್ವರ ಕನ್ನಡ ಮನಸ್ಸು ಪ್ರಿಯವಾಗುವ ಬದಲು ,ಅವುಗಳಿಗೆ ಎಲ್ಲೋ ಬಿದ್ದಿದ್ದ ಕೊಳಚೆ ಆಪ್ಯಾಯಮಾನವಾಗಿ ಕಂಡಿದೆ.ಜನಪದ ನೃತ್ಯಗಳೂ ಜಾತಿ ಪದ್ಧತಿಯ ಓಣಿಯಲ್ಲಿಯೇ ಸಾಗಬೇಕೆಂಬ ಇವುಗಳು ಮಾತ್ರ ಜಾತಿ ಪದ್ದತಿ ನಿವಾರಣೆಗೆ ತಾವೇನು ಘನ ಕಾರ್ಯ ಮಾಡಿದ್ದೇವೆ ಎಂದು ಹೇಳುವುದಿಲ್ಲ.ಇವರುಗಳ ಕೆಲಸ ಏನಿದ್ದರೂ ಬರವಣಿಗೆ ಮೂಲಕ ಘರ್ಷಣೆಯ ಕಿಡಿ ಹೊತ್ತಿಸುವುದು ಮತ್ತು ಆ ಮೂಲಕ ಉದರ ಪೋಷಣೆ ಮಾಡಿಕೊಳ್ಳುವುದು….

ಮತ್ತಷ್ಟು ಓದು »

23
ಸೆಪ್ಟೆಂ

ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣರಾ?

– ತುರುವೇಕೆರೆ ಪ್ರಸಾದ್

ಗಂಗಾ ಪೂಜೆಪುರೋಹಿತಶಾಹಿ ಎಂದರೆ ಧರ್ಮ, ದೇವರು  ಮತ್ತು ಮಹಾತ್ಮರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಇತರೆ ವರ್ಗಗಳನ್ನು ಅಕ್ಷರ  ಹಾಗೂ ಇನ್ನಿತರ ಸಾಮಾಜಿಕ ಅವಕಾಶಗಳಿಂದ ವಂಚಿಸಿದ  ಒಂದು ಪ್ರಭಾವಶಾಲಿ ವರ್ಗ! ಈ ಪುರೋಹಿತಶಾಹಿ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ಹಾಗೂ ಸ್ವಾರ್ಥಕ್ಕೆ ತಿರುಗಿಸಿಕೊಂಡು ಸಮಾಜದ ದುರ್ಬಲ ವರ್ಗಗಳನ್ನು ಶೋಷಿಸುತ್ತದೆ ಎಂಬ ಆರೋಪವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.

ಪುರೋಹಿತ ಶಾಹಿ ಅರಿವು ಮತ್ತು ಜ್ಞಾನವನ್ನು ತನ್ನ ಖಾಸಗಿ ಸೊತ್ತು ಎಂದು ಭಾವಿಸಿ  ಸಮಾಜದ ಹಿಂದುಳಿದ ವರ್ಗಗಳಿಗೆ ವಿದ್ಯೆಯನ್ನು ಕಲಿಯಲು ಅವಕಾಶ ನೀಡದೆ ವಂಚಿಸಿತು. ರಾಜಾಶಾಹಿ ಜೊತೆ ಕೈ ಜೋಡಿಸಿ ಹಿಂದುಳಿದವರು  ಸಾಮಾಜಿಕ ಸ್ಥಾನಮಾನ ಪಡೆಯದಂತೆ ನಿರ್ಬಂಧಿಸಿತು. ವ್ಯವಸ್ಥೆ ಮತ್ತು ಸಮುದಾಯದಲ್ಲಿ ತರತಮ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಯಿತು. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅರಾಜಕತೆಗೆ ಕಾರಣವಾಯಿತು. ಶುದ್ಧ ರೂಪದಲ್ಲಿದ್ದ ಧರ್ಮ ಪುರೋಹಿತ ಶಾಹಿಯಿಂದ ಭ್ರಷ್ಟವಾಯಿತು.ದೇವರು ಮತ್ತು ಧರ್ಮದ ಏಕಸ್ವಾಮ್ಯವನ್ನು ತಮ್ಮದಾಗಿಸಿಕೊಂಡು ದೇವರು, ಧರ್ಮದ ಏಜೆಂಟರಾಗಿ  ಜನರನ್ನು ಮೂಡನಂಬಿಕೆಯ ಕೂಪಕ್ಕೆ ತಳ್ಳಿತು. ಸ್ವತಃ ದುಡಿಮೆ ಮಾಡದೆ ದಾನ ಧರ್ಮದ ಹೆಸರಿನಲ್ಲಿ ಜನರಿಂದ ಆಹಾರ,ವಸ್ತ್ರ ದ್ರವ್ಯಾದಿಳನ್ನು ಕಿತ್ತು ಜೀವನ ನಡೆಸಿತು. ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿರಿಸಿ ಸಮಾಜದ ಕೆಳಸ್ತರದ ಜನರ ದುಡಿಮೆಯಲ್ಲಿ ಕೂತು ತಿಂದು ಶ್ರಮಸಂಸ್ಕøತಿಯನ್ನು ಧಿಕ್ಕರಿಸಿತು. ನಾವು ಆಸ್ತಿವಂತರು,ನಾವು ಆಳುವವರು,ನಮ್ಮ ಸೇವೆ ಮಾಡಲು, ಬೇಕಾದುದನ್ನೆಲ್ಲಾ ಉತ್ಪತ್ತಿ ಮಾಡಿ ಕೊಡುವವರು ಶೂದ್ರರು ಎಂದು ಪರಿಭಾವಿಸಿ ನಿಕೃಷ್ಟವಾಗಿ ನಡೆದುಕೊಂಡಿತು.

ವಸಾಹತುಶಾಹಿ ವ್ಯವಸ್ಥೆಯೊಂದಿಗೆ ಈ ಪುರೋಹಿತಶಾಹಿ ಶಾಮೀಲಾಗಿ ಅಲ್ಲಿನ ಪ್ರಿಸ್ಟ್ಲಿ ಹುಡ್ ಸಂಸ್ಕøತಿಯನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವಂತೆ ನೋಡಿಕೊಂಡಿತು. ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೂ ಈ ಪುರೋಹಿತಶಾಹಿ ಸನ್ಯಾಸಿ ದೀಕ್ಷೆ ಕೊಡಲು ತಿರಸ್ಕರಿಸಿತು. ಬ್ರಾಹ್ಮಣ್ಯವನ್ನು ತೊರೆದು ಹೋದ ರಾಮಕೃಷ್ಣ ಪರಮಹಂಸರೇ ಕೊನೆಗೆ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ಕೊಟ್ಟರು. ಪುರೋಹಿತಶಾಹಿ ಜಾತಿ ಪದ್ದತಿಯನ್ನು ವಿರೋಧಿಸಿದ ಬಸವಣ್ಣನವರನ್ನು ನಂದಿ ಅವತಾರ ಎಂದು ಬಿಂಬಿಸಿ ಪೂಜೆ ಮಾಡುವಂತೆ ಮಾಡಲಾಗಿದೆ.ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ಧನನ್ನೇ ಅವತಾರ ಪುರುಷ ಎಂದು ಬಿಂಬಿಸಲಾಯಿತು. ಹೀಗೆ ಪುರೋಹಿತಶಾಹಿಯ ಮೇಲೆ ಆರೋಪಪಟ್ಟಿ ಸಾಗುತ್ತದೆ..!

ಮತ್ತಷ್ಟು ಓದು »

22
ಸೆಪ್ಟೆಂ

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ

–      ರಾಕೇಶ್ ಶೆಟ್ಟಿ

ಮನು ಸ್ಮೃತಿಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?

“ಮನುಸ್ಮೃತಿ!”

ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ  “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.

ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.

ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.

ಮತ್ತಷ್ಟು ಓದು »

23
ಏಪ್ರಿಲ್

ಪ್ರತ್ಯೇಕ ಪಂಕ್ತಿ ಭೋಜನ : “ಸಂಪ್ರದಾಯ”ದ ಮುಸುಕಿನ “ಅನಾಗರೀಕ” ವರ್ತನೆಯ ಸುತ್ತ

– ರಾಕೇಶ್ ಶೆಟ್ಟಿ

ಪ್ರತ್ಯೇಕ ಪಂಕ್ತಿ ಬೇಧಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು  ‘ಪ್ರತ್ಯೇಕ ಪಂಕ್ತಿ ಭೋಜನ’ದ ಕಾರಣಕ್ಕೆ.

ಏನಿದು ಮತ್ತೆ ಈ ವಿವಾದ ಅಂತ ನೋಡಲಿಕ್ಕೆ ಹೋದರೆ :  ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.

“ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ “

ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ “ಅನಾಗರೀಕ”ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.

ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ / ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ,ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ.

–*–*–*–

ಮತ್ತಷ್ಟು ಓದು »

22
ಜುಲೈ

ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’

–  ರಾಕೇಶ್ ಶೆಟ್ಟಿ

NaModiಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.

೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!

ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,

ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”

ಮತ್ತಷ್ಟು ಓದು »