ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ
– ರಾಕೇಶ್ ಶೆಟ್ಟಿ
ದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.
ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಮತ್ತಷ್ಟು ಓದು
ಪ್ರಶಸ್ತಿ ಬೇಕೆ ಪ್ರಶಸ್ತಿ!
– ರೋಹಿತ್ ಚಕ್ರತೀರ್ಥ
ಕೇಂದ್ರ ಸಾಹಿತ್ಯ ಅಕಾಡೆಮಿ ಹಿಂದೆ ಕೊಟ್ಟಿದ್ದ ಪ್ರಶಸ್ತಿಗಳನ್ನು “ವ್ಯವಸ್ಥೆಯ ವಿರುದ್ಧ” ಸಿಡಿದೆದ್ದಿರುವ ಲೇಖಕರು ವಾಪಸು ಮಾಡುತ್ತಿದ್ದಾರೆ. ನಯನತಾರಾ, ಅಶೋಕ್ ವಾಜಪೇಯಿ, ಸಾರಾ ಜೋಸೆಫ್, ರೆಹಮಾನ್ ಅಬ್ಬಾಸ್, ರಹಮತ್ ತರೀಕೆರೆ, ಕುಂ. ವೀರಭದ್ರಪ್ಪ, ಅಮನ್ ಸೇಥಿ, ಗುಲಾಮ್ ನಬಿ ಖಯಾಲ್ ಮುಂತಾದ ಹಲವು ಸಾಹಿತಿಗಳು ತಮ್ಮ ಅಕಾಡೆಮಿ ಪ್ರಶಸ್ತಿಗಳನ್ನು ಈಗಾಗಲೇ ವಾಪಸು ಕೊಟ್ಟಿದ್ದಾರೆ ಅಥವಾ ಕೊಡುವುದಾಗಿ ಪತ್ರಿಕಾಹೇಳಿಕೆಗಳನ್ನು ಹೊರಡಿಸಿದ್ದಾರೆ. ಇವರ ಕೆಲವು ಹೇಳಿಕೆಗಳು ಹೀಗಿವೆ: (1) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೂ ನಾವು ಭಯ, ಕಳವಳಗಳ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮ ಈ ಅತಂತ್ರಸ್ಥಿತಿಯ ಬಗ್ಗೆ ಸಾಹಿತ್ಯ ಅಕಾಡೆಮಿ ಮೂಕವಾಗಿದೆ. ಎಮರ್ಜೆನ್ಸಿ, ಸಿಖ್ ನರಮೇಧ, ಬಾಬ್ರಿ ಮಸೀದಿ ಕೆಡವಿದ ಪ್ರಕರಣ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಗಿರಿಜನರ ಹತ್ಯೆಗಳು, ನಕ್ಸಲೈಟ್ ಹಿಂಸೆ, ಗುಜರಾತ್ ಹತ್ಯಾಕಾಂಡಗಳು ಇವೆಲ್ಲ ಸಮಸ್ಯೆಗಳಿಂದ ದೇಶದ ಏಕತೆ, ಭ್ರಾತೃತ್ವದ ಭಾವನೆಗಳಿಗೆ ಧಕ್ಕೆ ಬಂದಿದೆ. ಕಾಲದ ಸಾಕ್ಷಿಪ್ರಜ್ಞೆಯಾಗಬೇಕಾದ ಸಾಹಿತಿಗಳು ಈಗಲ್ಲವಾದರೆ ಇನ್ನೆಂದು ಎಚ್ಚೆತ್ತುಕೊಳ್ಳಬೇಕು? – ಅಶೋಕ್ ವಾಜಪೇಯಿ (2) ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳು ನಿಜಕ್ಕೂ ಗಂಭೀರವಾಗಿವೆ. ಇದು ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶ – ಸಾರಾ ಜೋಸೆಫ್ (3) ದಾದ್ರಿಯಲ್ಲಿ ನಡೆದ ಹತ್ಯೆ ಇಡೀ ಮನುಕುಲವೇ ದುಃಖ ಮತ್ತು ಆಕ್ರೋಶದಿಂದ ತಲೆ ತಗ್ಗಿಸುವಂಥಾದ್ದು. ಈ ಬಗ್ಗೆ ಪ್ರಧಾನಿಗಳು ಇದುವರೆಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇದನ್ನು ನಾನು ವಿರೋಧಿಸಲೇಬೇಕಾಗಿದೆ – ರಹಮಾನ್ ಅಬ್ಬಾಸ್ (4) ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ ನಾನು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ – ರಹಮತ್ ತರೀಕೆರೆ
ಈ ಎಲ್ಲರ ಹೇಳಿಕೆಗಳನ್ನು ನೋಡಿದ ಮೇಲೆ ಪ್ರಶಸ್ತಿ ವಾಪಸು ಮಾಡುತ್ತಿರುವವರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದು ಅನ್ನಿಸುತ್ತದೆ.
(1) ದೇಶದಲ್ಲಿ ಅಶಾಂತಿ, ಅಸಹನೆ ಹೊತ್ತಿ ಉರಿಯುತ್ತಿದೆ ಎನ್ನುವವರು
(2) ಕಲ್ಬುರ್ಗಿ ಕೊಲೆ ಕೇಸಿನಲ್ಲಿ ಪ್ರಧಾನಿ / ಸಾಹಿತ್ಯ ಅಕಾಡೆಮಿ ಮೌನವಾಗಿದೆ ಎನ್ನುತ್ತಿರುವವರು
(3) ದಾದ್ರಿ ಪ್ರಕರಣದ ಬಗ್ಗೆ ಮಾತಾಡುವವರು
(4) ದೇಶದಲ್ಲಿ ಹಿಂದೆ ಆಗಿಹೋಗಿರುವ ಹತ್ಯಾಕಾಂಡಗಳನ್ನೂ ಕೊಲೆ-ಅನಾಚಾರಗಳನ್ನು ಈಗ ಇದ್ದಕ್ಕಿದ್ದಂತೆ ನೆನೆಸಿಕೊಂಡು ಕಣ್ಣೀರು ಹಾಕುತ್ತಿರುವವರು.
ಮತ್ತಷ್ಟು ಓದು