ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪ್ರೀತಿ’

9
ಏಪ್ರಿಲ್

ಆಡುವ ಮಾತು….!!

– ಗೀತಾ ಜಿ.ಹೆಗಡೆ
ಕಲ್ಮನೆ

ಕೆಲವೊಮ್ಮೆ ಮನುಷ್ಯರ ಮಾತು, ನಡವಳಿಕೆ ಎಷ್ಟೊಂದು ಇರುಸು ಮುರುಸು ತರಿಸುತ್ತದೆ. ಕೆಲವರು ಆಡುವ ಮಾತುಗಳು ಅದೆಷ್ಟು ಕಿರಿ ಕಿರಿ ಬೇಸರ ತರಿಸುವುದೆಂದರೆ ಕೇಳೋದಕ್ಕೇ ಆಗೋದಿಲ್ಲ. ಏನಾದರೂ ತಿರುಗಿ ಹೇಳೋದಕ್ಕೂ ಸ್ವಲ್ಪ ಕಷ್ಟ. ಅದರಲ್ಲೂ ಕೆಲವು ಹತ್ತಿರದ ಸಂಬಂಧಿಕರಾದರಂತೂ ಮುಗಿದೇ ಹೋಯಿತು.  ಅವರ ವಾಕ್ ಚಾತುರ್ಯ ಸದಾ ಕಿವಿಗೆ ಬೀಳುತ್ತಲೇ ಇರುತ್ತದೆ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ರೀತಿಯ ಮಾತುಗಳು ಅವರಿಗೆ ಅದೇನೋ ಅಚ್ಚು ಮೆಚ್ಚು. ತಾನೇನೊ ಗಹನವಾಗಿ ಮಾತನಾಡುವವರೆಂಬ ಹುಸಿ ಭ್ರಮೆ ಮನೆ ಮಾಡಿರಬಹುದೇನೊ? ಏಕೆಂದರೆ ಕೇಳಿಸಿಕೊಳ್ಳುವ ಎದುರಾಳಿಯ ಕಡೆ ಕಿಂಚಿತ್ತೂ ಗಮನವಿಲ್ಲದೆ ತಮ್ಮದೇ ಮಾತಿನ ದಾಟಿ ಮುಂದುವರಿಸಿಕೊಂಡು ಹೋಗುತ್ತಿರುತ್ತಾರೆ. ಇದು ಅವರ ಹುಟ್ಟು ಗುಣವಾದರೂ ಇದು ಎಷ್ಟು ಸರಿ? ವಯಸ್ಸಾಗುತ್ತ ಮನುಷ್ಯನಿಗೆ ತಿಳಿವಳಿಕೆ ಬಂದಂತೆ ನಮ್ಮ ಮಾತು ನಡೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂಬ ಪರಿಜ್ಞಾನವೂ ಇದ್ದಂತೆ ಕಾಣುವುದಿಲ್ಲ. ಆನೆ ನಡೆದಿದ್ದೇ ದಾರಿ ಅನ್ನುವಂತೆ ಅವರ ಮಾತು ಮುಂದುವರಿದಿರುತ್ತದೆ. ಮತ್ತಷ್ಟು ಓದು »

28
ನವೆಂ

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ…!

– ಗುರುರಾಜ ಕೋಡ್ಕಣಿ. ಯಲ್ಲಾಪುರ

2686103_0f90c4f1ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು, ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ. ಬಿಸಿಲಿಗೆ ಕಪ್ಪಗಾಗಿದ್ದ ತನ್ನ ಮುಖವನ್ನೊಮ್ಮೆ ನಿಧಾನಕ್ಕೆ ಮೇಲಕ್ಕೆತ್ತಿದ್ದ ಆ ಸೈನ್ಯಾಧಿಕಾರಿ ನಿಖರವಾದ ಸಮಯವನ್ನು ಕಂಡುಕೊಳ್ಳಲು ತನ್ನ ಕಣ್ಣುಗಳನ್ನು ಕ್ಷಣಕಾಲ ಕಿರಿದಾಗಿಸಿ ಗಡಿಯಾರವನ್ನು ದಿಟ್ಟಿಸಿದ. ಉಸಿರುಗಟ್ಟಿಸುವಷ್ಟು ಜೋರಾಗಿದ್ದ ಹೃದಯಬಡಿತ ಅವನಿಗಿಂದು. ಕೇವಲ ಆರೇ ಅರು ನಿಮಿಷಗಳಲ್ಲಿ ಆತ ತನ್ನ ಬದುಕಿನ ಬೆಳದಿಂಗಳ ಬಾಲೆಯನ್ನು ಭೇಟಿಯಾಗಲಿದ್ದ. ಕಳೆದ ಹದಿನೆಂಟು ತಿಂಗಳಿನಿಂದ ಬಾಳಿಗೊಂದು ಸ್ಪೂರ್ತಿಯಾಗಿರುವ, ತಾನು ಇದುವರೆಗೂ ನೋಡಿರದಿದ್ದ ತನ್ನ ಪತ್ರ ಪ್ರೇಮಿಯನ್ನು ಆತ ಮೊದಲ ಬಾರಿಗೆ ಸಂಧಿಸಲಿದ್ದ. ನಿಲ್ದಾಣದ ಮುಖ್ಯ ದ್ವಾರದತ್ತಲೇ ತದೇಕಚಿತ್ತದಿಂದ ನೋಡುತ್ತ ನಿಂತಿದ್ದ ಅವನು, ಮಾಹಿತಿಗಾಗಿ ಅಲ್ಲಿದ್ದ ಗುಮಾಸ್ತನ ಸುತ್ತ ಗಜಿಬಿಜಿಯಿಂದ ನಿಂತಿದ್ದ ಜನಜಂಗುಳಿಯಿಂದ ಕೊಂಚ ದೂರ ಸರಿದು ಮಾಹಿತಿ ಕೇಂದ್ರದ ಪಕ್ಕದಲ್ಲಿಯೇ ನಿಂತಿದ್ದ. ಮತ್ತಷ್ಟು ಓದು »

12
ನವೆಂ

ಕಡಲ ಕಣ್ಣೀರು: ಒಂದು ಪ್ರೀತಿಯ ಕತೆ..!

– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು
ಮೂಡಬಿದ್ರೆ

hqdefaultಇಂದು ಕಡಲು ಬತ್ತಿದಂತಿತ್ತು ಭೋರ್ಗೆರೆವ ಸದ್ದಿಲ್ಲದೆ, ಕಾಲು ಸುತ್ತಿ ಮುತ್ತಿಕ್ಕುವ ತೆರೆಗಳೆಲ್ಲಾ ದೂರ ದೂರಕ್ಕೆ ಸರಿದಂತೆ ಮರಳ ಮೇಲೆಲ್ಲಾ ಅವಳ ಹೆಜ್ಜೆ ಗುರುತುಗಳು ಸಾವಿರ ಕಥೆಗಳನ್ನು ಹೇಳಿ ನಕ್ಕಂತೆ ಭಾಸವಾಗುತ್ತಿತ್ತು.. ದೂರದಲ್ಲೆಲ್ಲೊ ಮಗುವೊಂದು ರಚ್ಚೆಹಿಡಿದು ಅಳುವ ಸದ್ದು ಉಕ್ಕಿ ಬರುವ ದುಃಖದ ಮುಂದುವರಿದ ಭಾಗದಂತಿತ್ತು.. ಹೃದಯದ ಆರ್ದ್ರತೆಯ ಚೀರುವಿಕೆಯ ನಡುವೆಯೆ ಏನೂ ನಡೆಯದ ಹಾಗೇ ಎದುರುನಿಂತು ಕಣ್ಣ ದಿಟ್ಟಿ ತಪ್ಪಿಸಿ ನೆಲ ನೋಡುತ್ತ ಕೊನೆಗೊಮ್ಮೆ ಕಾಲ್ಮುಟ್ಟಿ ಕ್ಷಮಿಸಿಬಿಡು, ಮರೆತುಬಿಡು ಎಂದು ಹೊರಟವಳ ಹಿಂದೆ ನೋವಿನ ಗಜಲ್ ಗಜ್ಜೆಕಟ್ಟಿ ಕುಣಿದಿತ್ತು.. ಕೊಸರಿಕೊಂಡ ಕೈಬೆರಳ ಗುರುತಿನ್ನು ಮಚ್ಚೆಯಂತೆ ಎದೆಯೊಳಗೆ ಅಂಟಿಕೊಳ್ಳುವುದು ನಿಶ್ಚಯವಾದಾಗ ಕಣ್ಣು ಯಾಕೋ ಅವಳ ಬಿಂಬದೊಡನೆ ಹನಿಯತೊಡಗಿತ್ತು… ಮತ್ತಷ್ಟು ಓದು »

7
ಜುಲೈ

“ಮಿಡಿದ ಹೃದಯಗಳು”

ಪ್ರವೀಣ್ .ಎಸ್

impossibly-cute-puppy-8ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈ ಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ ಅಡಿ ಮಡಿಸಿ, ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಹೆಜ್ಜೆ ಹಾಕುತ್ತ ಆತುರವಾಗಿ ಬಸ್ ಸ್ಟಾಪಿನೆಡೆಗೆ ಪ್ರಯಾಣಿಸಿದೆ. ಅಂತೂ ಇಂತು ತುಂತುರು ಮಳೆಯ ಫಲಿತಾಂಶವೋ ಎಂಬ ಟ್ರಾಫಿಕ್ ಜಂಜಾಟಕ್ಕೆ ಸಿಲುಕಿ ಬಸವಳಿದ ಬಸ್ ಬಂದೆ ಬಿಟ್ಟಿತು, ಇನ್ನು ಚಾಲಕರು ಮತ್ತು ನಿರ್ವಾಹಕರು ಒಂದು ಕಾಪಿ ಹೀರಲೋ / ಬೀಡಿ ಹಚ್ಚಲೋ ಕೆಳಗಿಳಿದರು, ಆಗಲೇ ಸಮಯ 8 ಕ್ಕೆ ಹತ್ತು ನಿಮಿಷ. ಬಸ್ ಏರಿ ಸಾಮಾನ್ಯವಾಗಿಯೇ ಕಿಟಕಿ ಪಕ್ಕದ ಸೀಟ್ನಲ್ಲಿ ಕೂರುವ ಜನ ಇಂದು ಯಾರೂ ಆ ಸೀಟ್ಗಳ ಹಿಡಿಯುತ್ತಿಲ್ಲ, ಕಾರಣ ನಿಮಗೆ ಗೊತ್ತೇ ಇದೆ! ಎಷ್ಟು ಪ್ರಮಾಣದ ಮಳೆ ಹೊರಗೆ ಆಗಿದೆ ಎಂದು ತಿಳಿಯಲು ನಮ್ಮೂರಿನ ಬಸ್ಸಿನೊಳಗೆ ಹೊಕ್ಕರೆ ಸಾಕು (ಮಳೆ ಅಳೆಯುವ ಸಾಧನವಿಟ್ಟು ಅಳೆವುದೊಂದೇ ಬಾಕಿ, ಹವಾಮಾನ ಇಲಾಖೆಗೆ) ಆ ವಿಷಯ ಇರಲಿ ಬಿಡಿ; ಅಂತೂ ನನಗೂ ಒಂದು ಸೀಟು ದೊರಕಿತು. ಮತ್ತಷ್ಟು ಓದು »

19
ಜೂನ್

ಅಪ್ಪನ ಪತ್ರ

– ರೋಹಿತ್ ಚಕ್ರತೀರ್ಥ

Untitled58

ಮಗನನ್ನು ಬದುಕಿನ ಬೆಟ್ಟ ಹತ್ತಿ ತೋರಿಸುವ ಅಪ್ಪ
ಪ್ರೀತಿಯ ಅಶ್ವಿನ್,
ಬಹಳ ದಿನಗಳಿಂದ ನಿನಗೆ ಪತ್ರ ಬರೆದಿರಲಿಲ್ಲ. ಬರೆದು ಹೇಳುವಂಥಾದ್ದೇನೋ ಬಹಳ ಇತ್ತೆನ್ನೋಣ. ಆದರೆ, ನನ್ನ ಪತ್ರಗಳಿಂದ ನಿನ್ನ ಓದಿಗೆಲ್ಲಿ ಕಿರಿಕಿರಿಯಾದೀತೋ ಅಂತ ಸ್ವಲ್ಪ ಸಮಯ ಪೆನ್ನಿಗೂ ಅಂಚೆಯಣ್ಣನಿಗೂ ವಿಶ್ರಾಂತಿ ಕೊಟ್ಟಿದ್ದೆ. ಅಂದ ಹಾಗೆ, ಪರೀಕ್ಷೆ ಹೇಗೆ ಮಾಡಿದ್ದೀಯ? ನಿನ್ನಮ್ಮ ಇಲ್ಲಿ ಮೂರು ಹೊತ್ತು ಕೈ ಮುಗಿಯುವ ರಾಘವೇಂದ್ರ ಸ್ವಾಮಿಗಳಿಗೆ ನೀನು ನಿರಾಸೆ ಮಾಡುವುದಿಲ್ಲವೆಂದು ನಂಬುತ್ತೇನೆ! ಮತ್ತಷ್ಟು ಓದು »

11
ಜೂನ್

ಅನಾಥ ಪ್ರಜ್ಞೆಯ ಸ್ಥಿತಿ

160205113645-02-lovestory-super-169

ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ. ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ. ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ, ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು. ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ. ಯಾಕೆ ಹೀಗೆ ಈ ಮನಸ್ಸು. ಇದಕ್ಕಿನ್ನೇನು ಬೇಕು ?  ಸುತ್ತ ಎಲ್ಲರೂ ಇದ್ದಾರಲ್ಲ! ಇನ್ನೂ ಯಾಕೆ ಈ ಕೊರಗು. ಹೀಗೆ ಎಷ್ಟು ಬುದ್ಧಿ ಹೇಳಿದರೂ ಕೇಳಲಾರದ ಮನಸ್ಸು ಪದೇ ಪದೇ ಈ ಸ್ಥಿತಿಗೆ ಬರುತ್ತದೆ. ಯೋಚಿಸಿ ಯೋಚಿಸಿ ಕಣ್ಣೀರು ಹೆಣ್ಣಾದರೆ, ಅದೇ ಗಂಡಾದರೆ ಸಾಮಾನ್ಯವಾಗಿ ದುಶ್ಚಟಕ್ಕೆ ದಾಸ. ಯಾಕೆ ಹೀಗೆ? ಮತ್ತಷ್ಟು ಓದು »

29
ಮಾರ್ಚ್

ಬಣ್ಣದ ಬದುಕಿಗೆ ಮರುಳಾಗುವ ಮುನ್ನ

– ರಾಜೇಶ್ ನರಿಂಗಾನ

Sad_Brown_Eyes_With_Tears-6ಕಳೆದ ವಾರ ನಮ್ಮ ಕಂಪೆನಿಯ ಮಾರ್ಕೆಟಿಂಗ್ ವಿಸ್ತರಣೆಗಾಗಿ ಪೂಂಜಾಲಕಟ್ಟೆಗೆ ಹೋಗಿದ್ದೆ. ಮೊದಲೇ ಬಿರುಬಿಸಿಲು. ಬಸ್ಸಿನಿಂದ ಇಳಿಯುತ್ತಿದ್ದಂತೆ ಅಲ್ಲೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಅಂಗಡಿಗೆ ಹೋಗಿ ಎಳನೀರು ಕುಡಿದು ಹೊರಬಂದಾಗ ಬಸ್ ಸ್ಟ್ಯಾಂಡ್’ನಲ್ಲಿ ಒಬ್ಬಾಕೆ ಮೂವತ್ತು ಮೂವತ್ತೈದರ ಹರೆಯದ ಮಹಿಳೆ ನಾನು ಹೋಗಬೇಕಾಗಿದ್ದ ಗೇರುಬೀಜದ ಕಾರ್ಖಾನೆಯ ಕಡೆಯಿಂದ ಬರುತ್ತಿದ್ದರು. ತನ್ನ ಕೈಯಲ್ಲಿ ಒಂದು ಪುಟ್ಟ ಮಗುವನ್ನು ಎತ್ತಿಕೊಂಡಿದ್ದರೆ, ಇನ್ನಿಬ್ಬರು ಮಕ್ಕಳು ನಡೆದುಕೊಂಡು ಬಸ್ ಸ್ಟ್ಯಾಂಡ್ ನ ಕಡೆಗೆ ಬರುತ್ತಿದ್ದರು. ಅವರು ನನ್ನ ಕಣ್ಣಿಗೆ ಹತ್ತಿರವಾಗುತ್ತಿದ್ದಂತೆ ಆಕೆಯನ್ನು ಎಲ್ಲೋ ನೋಡಿದ ನೆನಪು ಕಾಡತೊಡಗಿತು. ಕಡೆಗೂ ನೆನಪು ಮರುಕಳಿಸಿತು… ಹೌದು…!!!! ಅದು ಅವಳೇ…..!!!!!! ಈಗ ಮತ್ತಷ್ಟು ನೆನಪಾಯಿತು. ನನ್ನ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು….. ಮತ್ತಷ್ಟು ಓದು »

18
ಆಗಸ್ಟ್

ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು

– ಚೇತನಾ ತೀರ್ಥಹಳ್ಳಿ

ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. ಸುಭಾಷ್ ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….

“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)

ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.

ಸುಭಾಷ್ ಚಂದ್ರ ಬೋಸ್… ಮತ್ತಷ್ಟು ಓದು »

6
ಜುಲೈ

ಇದೇನಾ… ಹುಚ್ಚು ಪ್ರೀತಿ…?

– ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ

Preetijಬೀದಿ ಹೋಟೇಲವೊಂದರಲ್ಲಿ  ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು  ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ  ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ.  ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ.ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .

ಲೇ.. ಆ ಫಿಗರು ಭಾರಿ ಇತ್ತಲೆ… ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .

ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ.ಲೆ… ನೀವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .

ಮತ್ತಷ್ಟು ಓದು »

29
ಜನ

ಈ ಪ್ರೀತಿ…!!

– ಸುಷ್ಮಾ ಮೂಡಬಿದ್ರಿ

ಇಬ್ಬರ ಮದ್ಯದಲ್ಲೂ ನೀರವ ಮೌನ…ಆಗತಾನೆ ಹೊರಗೆ ಮಳೆ ತಣ್ಣಗೆ ಆರಂಭವಾಗಿ, ಭೋರ್ಗರೆಯುತ್ತಾ ಸುರಿಯಲಾರಂಭಿಸಿತು. ಬೀಸಿ ಬಂದ ಗಾಳಿಗೆ ಕಿಟಕಿ ಪರದೆಗಳೆಲ್ಲಾ ನೃತ್ಯವಾಡುತ್ತಿತ್ತು…ಕಿಟಕಿಯಿಂದ ಹೊರಗೆ ದೂರದ ಅದ್ಯಾವ ಬಿಂದುಗೋ ದೃಷ್ಟಿ ಹಾಯಿಸುತ್ತಾ ನಿಂತಿದ್ದ..ಮೆಲ್ಲಗೆ “ಸುಂಜೂ….”ಎಂದೆ..ರಭಸದ ಮಳೆ ಸದ್ದಿಗೋ ಏನೋ ಕೇಳಿಸಿಲ್ಲವೆಂಬಂತೆ ನಿಂತೇ ಇದ್ದ ಅಂವ..ಮೌನ ಮುರಿಯಲಾಗಲಿಲ್ಲ ನನ್ನಿಂದ..ಶೂನ್ಯದೆಡೆಗಿನ ಅವನ ನೋಟ ಕದಲಿಸಲಾಗಲಿಲ್ಲ..ಹತ್ತಿರ ಬಂದು ನಿಂತೆ..ಈಗ ನೋಡಿದ..ಕಂಗಳು ಕಾಂತಿಹೀನ ಅನಿಸಿತು.

“ಮಾತಡೋಲ್ಲವಾ….”ಎಂದೆ..

ಮತ್ತೇ ದೃಷ್ಟಿ ಬದಲಿಸಿದ…ಈ ಬಗೆಯ ಮೌನ ಸಹಿಸಲಾಗಲಿಲ್ಲ…

“ಪ್ಲೀಸ್..”ಎಂದ ನನ್ನ ಕಣ್ಣಲ್ಲಿ ನೀರಾಡಿತ್ತು…

ಅದೇನನಿಸಿತೋ..”ಸುಶೀ..”ಕರೆದ…ಹ್ಞು0 ಗುಟ್ಟಿದೆ…

ಮತ್ತಷ್ಟು ಓದು »