ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ”
– ಪ್ರೇಮಶೇಖರ
ಪ್ರಿಯ ಓದುಗರೇ,
ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ – ಭಾಗ ೪
ಅನ್ಯಲೋಕ ಜೀವಿಗಳ ಬಗೆಗಿನ ಲೇಖನಸರಣಿ ಮೆಚ್ಚುಗೆಗೆ ಪಾತ್ರವಾದಂತೇ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ಮೆಚ್ಚುಗೆಯ ಪತ್ರಗಳಿಗೆ ಖುಷಿಪಟ್ಟು ವೈಯುಕ್ತಿಕವಾಗಿ ಕೃತಜ್ಞತೆ ಹೇಳಿದ್ದೇನೆ, ಪ್ರಶ್ನೆಗಳಿಗೆ ಸಮಾಧಾನ ಹೇಳಲೂ ಪ್ರಯತ್ನಿಸಿದ್ದೇನೆ. ಈ ಪ್ರಶ್ನೆಗಳು ನಿಮ್ಮವೂ ಆಗಿರಬಹುದು, ವಿವರಣೆಗಳನ್ನು ನೀವೂ ಬಯಸಿರಬಹುದು,ಎಲ್ಲ ಪ್ರಶ್ನೆಗಳಿಗೂ ಒಟ್ಟಿಗೆ ಪೂರಕ ವಿವರಗಳೊಂದಿಗೆ ಇಲ್ಲಿ ಉತ್ತರಿಸುವುದು ಈಗ ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ.ಯಾರಿಗೆ ಗೊತ್ತು, ಇದು ಯಾವುದೋ ಜನ್ಮದ ಯಾವುದೋ ಲೆಕ್ಕದ “ಸರಿಮಾಡುವಿಕೆ”ಯಾಗಿರಲೂಬಹುದು! ನಿಮ್ಮನಿಮ್ಮ ಭಾವಕ್ಕೆ, ನಿಮ್ಮನಿಮ್ಮ ಭಕುತಿಗೆ ಅನುಗುಣವಾಗಿ ಉತ್ತರವೆಂದಾಗಲೀ, ವಿವರಣೆಯೆಂದಾಗಲೀ ಪರಿಹಾರವೆಂದಾಗಲೀ ತೆಗೆದುಕೊಳ್ಳಿ.
ಪ್ರಶ್ನೆಗಳಲ್ಲಿ ಮುಖ್ಯವಾದುವನ್ನು ಆಯ್ದು ಸ್ಥೂಲವಾಗಿ ಎರಡು ಗುಂಪುಗಳನ್ನಾಗಿಸಿಕೊಳ್ಳುತ್ತೇನೆ.
1.‘ಸತ್ತ’ ನಂತರ ಏನಾಗುತ್ತದೆ? ಎಲ್ಲಿಗೆ ಹೋಗುತ್ತೇವೆ?
2. ಕೌಟುಂಬಿಕ ಸಂಬಂಧಗಳ ತೊಡಕುಗಳು, ಅವೇಕೆ ಅಸಹನೀಯವಾಗುತ್ತವೆ, ಅವುಗಳಿಗೆ ಪರಿಹಾರವೇ ಇಲ್ಲವೇ? ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ.
ಮತ್ತಷ್ಟು ಓದು
Share this:
- Click to share on Twitter (Opens in new window)
- Click to share on Facebook (Opens in new window)
- Click to email a link to a friend (Opens in new window)
- Click to print (Opens in new window)
- Click to share on LinkedIn (Opens in new window)
- Click to share on google mail (Opens in new window)
- Click to share on Tumblr (Opens in new window)
- Click to share on Reddit (Opens in new window)
- Click to share on Pinterest (Opens in new window)
- Click to share on buzz.google.com (Opens in new window)
ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್
– ಪ್ರೇಮಶೇಖರ
ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
ನಾನೊಬ್ಬ ಪ್ರವಾದಿಯಲ್ಲ.ನನಗೆ ಏಕಾಏಕಿ ಯಾವ ಜ್ಞಾನೋದಯವೂ ಆಗಿಲ್ಲ.ವೈಜ್ಞಾನಿಕವಾಗಿ ಸಾಬೀತಾದ ಸತ್ಯಗಳ ಅಧ್ಯಯನದ ಆಧಾರದ ಮೇಲೆ, ಹಲವು ವರ್ಷಗಳ ಚಿಂತನೆಯ ಮೂಲಕ ಮಾನವಜನ್ಮದ ಉದ್ದೇಶದ ಬಗ್ಗೆ ನನ್ನದೇ ಆದ ಕೆಲವೊಂದು ವಿಚಾರಗಳನ್ನು ರೂಪಿಸಿಕೊಂಡಿದ್ದೇನೆ.ಅವುಗಳನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸತ್ಕರ್ಮ ಹಾಗೂ ಕುಕರ್ಮಗಳಿಗನುಗುಣವಾಗಿ ಮರುಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು ನಂಬಿಕೆಯನ್ನಿಟ್ಟಿದ್ದಾರೆ.ಈ ಮೂರು ಧರ್ಮಗಳ ತಳಹದಿಯೇ ಕರ್ಮ ಮತ್ತು ಕರ್ಮಕ್ಕನುಗುಣವಾಗಿ ಮರುಜನ್ಮ. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಪುನರ್ಜನ್ಮವನ್ನು ತಿರಸ್ಕರಿಸುತ್ತವೆ.ಇರುವುದೊಂದೇ ಜನ್ಮ,ನಂತರದ್ದು ಅಂತಿಮ ತೀರ್ಪು, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳುತ್ತವೆ.ಆದರೆ ಬೈಬಲ್‍ನ ಎರಡೂ ಒಡಂಬಡಿಕೆಗಳಲ್ಲಿ ಪುನರ್ಜನ್ಮದ ಬಗ್ಗೆ ಉಲ್ಲೇಖಗಳಿದ್ದುವೆಂದೂ, ಅವುಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಉದ್ದೇಶಪೂರ್ವಕವಾಗಿ ತೆಗೆದುಹಾಕಿದರು ಎಂದು ಹೇಳಲಾಗುತ್ತದೆ.ಅವರದನ್ನು ಮಾಡಿದ್ದು ಸದುದ್ದೇಶದಿಂದಲೇ.ಈ ಜನ್ಮದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಂದಿನ ಜನ್ಮದಲ್ಲಿ ಅವಕಾಶವಿದೆ ಎಂದು ನಂಬಿದ ಜನರು ತಪ್ಪುಗಳನ್ನೆಸಗುವುದಕ್ಕೆ ಹಿಂಜರಿಯದಿರಬಹುದು, ಅದಕ್ಕೆ ಬದಲಾಗಿ ಇರುವೊಂದೇ ಜನ್ಮ, ತಪ್ಪೆಸಗಿದರೆ ತಿದ್ದಿಕೊಳ್ಳಲು ಅವಕಾಶವೇ ಇಲ್ಲ, ಅದಕ್ಕನುಗುಣವಾಗಿ ಶಿಕ್ಷೆಯೂ ಶತಸಿದ್ಧ ಎಂದು ನಂಬಿಸಿದರೆ ಜನರು ತಪ್ಪುಗಳನ್ನೆಸಗಲು ಹಿಂಜರಿದು ಸದ್ಗುಣಿಗಳಾತ್ತಾರೆಂದು ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಆಶಿಸಿದ್ದರು.(ಇಷ್ಟಾಗಿಯೂ ಆವರ ಕಣ್ಣುತಪ್ಪಿಸಿ ಪುನರ್ಜನ್ಮದ ಬಗ್ಗೆ ಕೆಲ ಉಲ್ಲೇಖಗಳು ಬೈಬಲ್‍ನಲ್ಲಿ ಉಳಿದುಕೊಂಡಿವೆ. ನೋಡಿ: ಮ್ಯಾಥ್ಯೂ 11:13-14, 17:10-13)
Share this:
- Click to share on Twitter (Opens in new window)
- Click to share on Facebook (Opens in new window)
- Click to email a link to a friend (Opens in new window)
- Click to print (Opens in new window)
- Click to share on LinkedIn (Opens in new window)
- Click to share on google mail (Opens in new window)
- Click to share on Tumblr (Opens in new window)
- Click to share on Reddit (Opens in new window)
- Click to share on Pinterest (Opens in new window)
- Click to share on buzz.google.com (Opens in new window)
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
– ಪ್ರೇಮಶೇಖರ
ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ನಾವು ಹೋಮೋ ಸೇಪಿಯನ್ ಸೇಪಿಯನ್ ಮಾನವರು ಭೂಮಿಯಲ್ಲಿ ಕಾಣಿಸಿಕೊಂಡದ್ದು ಕೇವಲ ಮೂವತ್ತೈದು ಸಾವಿರ ವರ್ಷಗಳ ಹಿಂದೆ.ಆದರೆ ಅರವತ್ತು ಲಕ್ಷ ವರ್ಷಗಳ ಹಿಂದೆ ವಾನರನಿಂದ ಮಾನವ ಪ್ರತ್ಯೇಕವಾದದ್ದಕ್ಕಿಂತಲೂ ಹಿಂದೆಯೇ ಅಷ್ಟೇಕೆ ಕೋಟ್ಯಾಂತರ ವರ್ಷಗಳ ಹಿಂದೆಯೇ ಭೂಮಿಯಲ್ಲಿ ನಮ್ಮಂತಹ ಪೂರ್ಣ ಹೋಮೋ ಸೇಪಿಯನ್ ಸೇಪಿಯನ್ ಮಾನವರು ಇದ್ದ ಕುರುಹುಗಳು ದೊರೆತಿವೆ.ಅವರ ಪಾದದ ಗುರುತುಗಳಷ್ಟೇ ಏಕೆ,ಸುಸ್ಥಿತಿಯಲ್ಲಿರುವ ಪೂರ್ಣ ಆಸ್ಥಿಪಂಜರಗಳೇ ಚೀನಾ, ಅರ್ಜೆಂಟೈನಾ, ಮಧ್ಯ ಏಶಿಯಾ, ಅಮೆರಿಕಾ, ಸೇರಿದಂತೆ ಪ್ರಪಂಚದ ಎಲ್ಲೆಡೆ ಸಿಕ್ಕಿವೆ! ಕ್ಯಾಲಿಫೋರ್ನಿಯಾದ ಟೇಬಲ್ ಮೌಂಟನ್‍ನಲ್ಲಿ ದೊರೆತಿರುವ ಅಸ್ಥಿಪಂಜರವೊಂದು ಮೂರುಕೋಟಿ ಮೂವತ್ತು ಲಕ್ಷ ವರ್ಷ ಹಳೆಯದು! ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಕ್ಕಿರುವ ಅಸ್ಥಿಪಂಜರ ನಾಲ್ಕೂವರೆಕೋಟಿ ವರ್ಷ ಹಳೆಯದು!
ಡೈನೋಸಾರ್‍ಗಳು ನಿರ್ನಾಮವಾದದ್ದು ಆರೂವರೆ ಕೋಟಿ ವರ್ಷಗಳ ಹಿಂದೆ.ಅದಾದ ಮೇಲಷ್ಟೇ ಭೂಮಿಯಲ್ಲಿ ಸಸ್ತನಿಗಳು ಉಗಮವಾಗಿ ವಿಕಾಸ ಹೊಂದಿದ್ದು.ಆದರೆ,ಸಸ್ತನಿಯಾದ ಹೋಮೋ ಸೇಪಿಯನ್ ಸೇಪಿಯನ್ ಮಾನವ ಮತ್ತು ಡೈನೋಸಾರ್‍ಗಳ ಹೆಜ್ಜೆ ಗುರುತುಗಳು ಜತೆಜತೆಯಾಗಿಯೇ ಭೂಗರ್ಭದ ಒಂದೇ ಸ್ತರದಲ್ಲಿ ದೊರೆತು ಅವೆರಡೂ ಇದ್ದದ್ದು ಒಂದೇಕಾಲದಲ್ಲಿ ಎಂದು ಸೂಚಿಸುತ್ತವೆ.ಮಧ್ಯ ಏಶಿಯಾದ ತುರ್ಕ್‍ಮೆನಿಸ್ತಾನ,ಅಮೆರಿಕಾದ ಪೆನ್ಸಿಲ್‍ವೇನಿಯಾ ಮತ್ತು ಕೆಂಟಕಿ ಸೇರಿದಂತೆ ಹಲವೆಡೆ ಇವು ದೊರೆತಿವೆ.ಅಂದರೆ ಡಾರ್ವಿನ್‍ನ ವಿಕಾಸವಾದವನ್ನು ಕಸದಬುಟ್ಟಿಗೆಸೆದು ನಾವು ಭೂಮಿಯಲ್ಲಿ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೂ ಇದ್ದೇವೆ ಎಂದು ತಿಳಿಯಬೇಕೆ?
Share this:
- Click to share on Twitter (Opens in new window)
- Click to share on Facebook (Opens in new window)
- Click to email a link to a friend (Opens in new window)
- Click to print (Opens in new window)
- Click to share on LinkedIn (Opens in new window)
- Click to share on google mail (Opens in new window)
- Click to share on Tumblr (Opens in new window)
- Click to share on Reddit (Opens in new window)
- Click to share on Pinterest (Opens in new window)
- Click to share on buzz.google.com (Opens in new window)
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
– ಪ್ರೇಮಶೇಖರ
ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಯುಎಫ್ಓಗಳಲ್ಲಿನ ‘ಅನ್ಯಲೋಕ’ ಜೀವಿಗಳು ಮನುಷ್ಯರನ್ನು,ಹೆಚ್ಚಾಗಿ ಸ್ತ್ರೀಯರನ್ನು ಅಪಹರಿಸುವ ಲೆಕ್ಕವಿಲ್ಲದಷ್ಟು ಪ್ರಕರಣಗಳು ವರದಿಯಾಗಿವೆ.ಈ ಬಗ್ಗೆ ಕೂಲಂಕಶವಾಗಿ “ವೈಜ್ಞಾನಿಕ ತನಿಖೆ” ನಡೆಸಿರುವ ಸಂಶೋಧಕರ ಪ್ರಕಾರ ಕೆಲವು ಅಪವಾದಗಳ ಹೊರತಾಗಿ ಎಲ್ಲ ‘ಅಪಹರಣ’ಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜರುಗುತ್ತವೆ.
ಅನ್ಯಲೋಕ ಜೀವಿಗಳು ಮನುಷ್ಯ ಸ್ತ್ರೀಯರ ಮೇಲೆ ಜೈವಿಕ ಪ್ರಯೋಗಗಳನ್ನು ನಡೆಸುತ್ತಿರುವಂತಿದೆ.ನಿದ್ರಿಸುತ್ತಿರುವ ಸ್ತ್ರೀಯರನ್ನು ಹಾಸಿಗೆಯಿಂದಲೇ ಎತ್ತಿಕೊಂಡು ತಮ್ಮ ವಾಹನದಲ್ಲಿ ಕೊಂಡೊಯ್ದು ಅವರ ಗರ್ಭಾಶಯಗಳಿಂದ ಅಂಡಾಣುಗಳನ್ನು ತೆಗೆದುಕೊಳ್ಳುತ್ತಾರೆ.ಆ ಅಂಡಾಣುಗಳನ್ನು ಬೇರಾವುದೋ ವೀರ್ಯಾಣುಗಳಿಂದ ಫಲಿತಗೊಳಿಸಿ ಅದೇ ಸ್ತ್ರೀಯರನ್ನು ಮತ್ತೆ ಹೊತ್ತೊಯ್ದು ಫಲಿತ ಅಂಡಾಣುಗಳನ್ನು ಅವರ ಗರ್ಭಾಶಯಗಳಲ್ಲಿಟ್ಟು ಅವರಿಗರಿವಿಲ್ಲದಂತೆ ಬೆಳೆಸಿ, ಕೆಲವಾರಗಳ ನಂತರ ಅವರನ್ನು ಮತ್ತೆ ಎತ್ತಿಕೊಂಡು ಹೋಗಿ ಭ್ರೂಣಗಳನ್ನು ತೆಗೆದುಕೊಳ್ಳುತ್ತಾರೆ.ಒಂದೆರಡು ವರ್ಷಗಳ ನಂತರ ಅದೇ ಮಹಿಳೆಯರನ್ನು ಮತ್ತೆ ತಮ್ಮ ವಾಹನದಲ್ಲಿ ಬೇರೆಲ್ಲಿಗೋ ಕರೆದುಕೊಂಡು ಹೋಗಿ ದಪ್ಪತಲೆಯ ವಿಚಿತ್ರ ಮಕ್ಕಳನ್ನು ತೋಳಲ್ಲಿಟ್ಟು “ಇದು ನಿನ್ನ ಮಗು, ಇದನ್ನು ಮುದ್ದು ಮಾಡು.ವಾತ್ಸಲ್ಯದ,ಭಾವನಾತ್ಮಕ ಸಾಮೀಪ್ಯದ ಅಗತ್ಯ ಈ ಮಗುವಿಗಿದೆ” ಎಂದು ಹೇಳುತ್ತಾರೆ.ಆ ಜೀವಿಗಳು ಭೂಮಿಯ ಗಂಡಸರನ್ನೂ ಎತ್ತಿಕೊಂಡು ಹೋಗಿ ಬಲವಂತವಾಗಿ ವೀರ್ಯ ಸಂಗ್ರಹಣೆ ಮಾಡಿಕೊಳ್ಳುವ ಉದಾಹರಣೆಗಳೂ ಇವೆ.ಬಹುಷಃ ತಮ್ಮ ಸ್ತ್ರೀಜೀವಿಗಳ ಅಂಡಾಣು ಜತೆ ಮನುಷ್ಯ ಪುರುಷರ ವೀರ್ಯಾಣುವಿನ ಸಂಗಮವನ್ನವರು ಮಾಡುತ್ತಿರಬಹುದು.ತಮ್ಮ ಸ್ತ್ರೀಜೀವಿಗಳ ಜತೆ ಭೂಮಿಯ ಪುರುಷರ ಲೈಂಗಿಕ ಸಮಾಗಮಕ್ಕೆ ಅನ್ಯಲೋಕಜೀವಿಗಳು ಅವಕಾಶ ಮಾಡಿಕೊಟ್ಟ ಉದಾಹರಣೆಗಳೂ ಇವೆ.
Share this:
- Click to share on Twitter (Opens in new window)
- Click to share on Facebook (Opens in new window)
- Click to email a link to a friend (Opens in new window)
- Click to print (Opens in new window)
- Click to share on LinkedIn (Opens in new window)
- Click to share on google mail (Opens in new window)
- Click to share on Tumblr (Opens in new window)
- Click to share on Reddit (Opens in new window)
- Click to share on Pinterest (Opens in new window)
- Click to share on buzz.google.com (Opens in new window)
ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
– ಪ್ರೇಮಶೇಖರ
ಫೆಬ್ರವರಿ 20-21ರ ಸುಮಾರಿಗೆ ಫ್ಲೈಯಿಂಗ್ ಸಾಸರೊಂದು ಕೆನಡಾದ ವಿನಿಪೆಗ್ ಸರೋವರಕ್ಕೆ ಬಿದ್ದ ಪ್ರಕರಣ ವರದಿಯಾಗಿದೆ.ಭೀಕರ ಚಳಿಯಿಂದಾಗಿ ಸರೋವರದ ನೀರು ಹಲವು ಅಡಿಗಳ ಆಳದವರೆಗೆ ಹಿಮಗಟ್ಟಿಹೋಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ ಮೆಟ್ಟಲುಮೆಟ್ಟಲಾಗಿರುವ ಪಿರಮಿಡ್ ಆಕಾರದ ಫ್ಲೈಯಿಂಗ್ ಸಾಸರ್ ಸರೋವರದ ಹಿಮಪದರವನ್ನು ಸೀಳಿಕೊಂಡು ಒಳತೂರಿಹೋಯಿತಂತೆ. ಇಷ್ಟರ ಹೊರತಾಗಿ ಬೇರಾವ ವಿವರಗಳೂ ದೊರೆಯುತ್ತಿಲ್ಲ. ಇದಕ್ಕೆ ಕಾರಣ, ವಿಷಯ ತಿಳಿದ ತಕ್ಷಣ ಕೆನಡಾ ರಕ್ಷಣಾಪಡೆಗಳು ವಿರಳ ಜನಸಂಖ್ಯೆಯ ಆ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿರುವುದು.ಅಷ್ಟೇ ಅಲ್ಲ, ಫ್ಲೈಯಿಂಗ್ ಸಾಸರ್‍ನ ಛಾಯಾಚಿತ್ರ ತೆಗೆದಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾಪಡೆಗಳು ವಶಕ್ಕೆ ತೆಗೆದುಕೊಂಡಿವೆ.ಸರೋವರಕ್ಕೆ ಬಿದ್ದದ್ದು ಫ್ಲೈಯಿಂಗ್ ಸಾಸರ್ ಅಲ್ಲವೆಂದೂ, ಕಡುಚಳಿಗಾಲದಲ್ಲಿ ವಿಮಾನಾಫಘಾತವಾದರೆ ರಕ್ಷಣಾಕ್ರಮಗಳನ್ನು ಹೇಗೆ ಕೈಗೊಳ್ಳಬೇಕೆಂದು ತಾವು ಪ್ರಯೋಗ ನಡೆಸುತ್ತಿರುವುದಾಗಿಯೂ ಸೈನಿಕರು ಮನೆಮನೆಗೆ ಹೋಗಿ ಜನರಿಗೆ ತಿಳಿಹೇಳುತ್ತಿದ್ದಾರೆ.ಯುಎಫ್‍ಓಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಅತ್ಯಂತ ಗೌಪ್ಯವಾಗಿರಿಸುವ ಸರ್ಕಾರಗಳ ನೀತಿಯ ಮುಂದುವರಿಕೆಗೆ ಇದು ಹೊಚ್ಚಹೊಸ ಉದಾಹರಣೆ.