ನನ್ನ ಊರು ಬೆಂಗಳೂರು – ಇಂತಿ ನಿಮ್ಮ ಪ್ರೀತಿಯ ಬಾಂಗ್ಲಾ ನುಸುಳುಕೋರ
– ವೃಷಾಂಕ್ ಭಟ್
ಭಾರತದಲ್ಲಿ ದಿನಕಳೆದಂತೆ ಕೌಶಲ್ಯರಹಿತ ಕಾರ್ಮಿಕರ (Unskilled labourers) ಸಂಖ್ಯೆ ಕ್ಷೀಣಿಸುತ್ತಿದೆ. ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಸಂಗ್ರಹಿಸುವವರು ಕ್ಷೀಣಿಸಿರುವ ಪರಿಣಾಮ ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರವೊಂದು ಖಾಲಿಯಾಗಿತ್ತು. ಬೆಂಗಾಲಿ ಮಾತನಾಡುವ ಮುಸಲ್ಮಾನರು ಇಂದು ಆ ಸ್ಥಾನವನ್ನು ತುಂಬಿದ್ದಾರೆ. ಬೆಂಗಾಲಿ ಮಾತನಾಡಿದ ತಕ್ಷಣ ಅವರೆಲ್ಲ ಪಶ್ಚಿಮ ಬಂಗಾಳದವರಲ್ಲ. ಅವರೆಲ್ಲರೂ ಬಾಂಗ್ಲಾ ನುಸುಳುಕೋರರು..! ಮತ್ತಷ್ಟು ಓದು
ಮಾಲ್ಡಾ ಗಲಭೆ ಮತ್ತು ಬಾಂಗ್ಲಾ ನುಸುಳುಕೋರರೆಂಬ ಟೈಂ ಬಾಂಬ್
– ರಾಕೇಶ್ ಶೆಟ್ಟಿ
ನಾಲಗೆಯನ್ನು ಎಕ್ಕಡದಂತೆ ಬಳಸುವ ರಾಜಕಾರಣಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಸಮಾಜವಾದಿ ಪಕ್ಷದ ಅಜಂ ಖಾನ್. ಇತ್ತೀಚೆಗೆ ಆರೆಸ್ಸಿನ ನಾಯಕರ ಲೈಂಗಿಕತೆಯ ಬಗ್ಗೆ ಈತ ಕೆಟ್ಟದಾಗಿ ಮಾತನಾಡಿದ್ದರು. ಈತನಿಗಿಂತ ನಾನೇನೂ ಕಮ್ಮಿಯೆಂಬಂತೆ ಕಮಲೇಶ್ ತಿವಾರಿಯೆಂಬ ಹಿಂದೂ ಮಹಾಸಭದ ವ್ಯಕ್ತಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಟೀಕೆ ಮಾಡಿದ್ದರು. ಮುಸ್ಲಿಮರು ಬೀದಿಗಿಳಿದರು,ತಿವಾರಿಯನ್ನು ಗಲ್ಲಿಗೇರಿಸಿ ಎಂದರು. ತಿವಾರಿಯ ಬಂಧನವಾಯಿತು.ಇದೆಲ್ಲಾ ನಡೆದಿದ್ದು ಕಳೆದ ಡಿಸೆಂಬರ್ ತಿಂಗಳಿನಲ್ಲಿ.
ಆದರೆ ಕಳೆದ ವಾರ ಜನವರಿ ೩ನೇ ತಾರೀಖು,ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾ ಚಕ್ ಪ್ರದೇಶದಲ್ಲಿ ಈದ್ರಾ-ಈ-ಶರಿಯಾ ಎಂಬ ಸಂಘಟನೆ ಕಮಲೇಶನ ಹೇಳಿಕೆಯನ್ನು ಖಂಡಿಸಲೆಂದು ಪ್ರಚೋದನಕಾರಿ ಕರಪತ್ರವೊಂದನ್ನು ಹಂಚಿದೆ ಹಾಗೂ 3ನೇ ತಾರೀಖಿನ ಭಾನುವಾರ ಸುಮಾರು ಎರಡೂವರೆ ಲಕ್ಷದಷ್ಟು ಸಂಖ್ಯೆಯಲ್ಲಿದ್ದ ಗುಂಪು ಪ್ರತಿಭಟನೆಯಲ್ಲಿ ಹೊರಟಿದೆ.ಹಾಗೇ ಹೊರಡುವ ಮುನ್ನ ಪ್ರಚೋದನಕಾರಿ ಭಾಷಣವನ್ನು ಅವರ ತಲೆಗೆ ತುಂಬಲಾಗಿದೆ.ಮಾರಕಾಸ್ತ್ರಗಳನ್ನು ಹಿಡಿದು ಹೊರಟ ಉದ್ರಿಕ್ತ ಗುಂಪು ಕಾಲಿಯಾ ಚಕ್ ಪ್ರದೇಶದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಡುತ್ತ,ಮನೆಗಳಿಗೆ ದಾಳಿಯಿಡುತ್ತ,ಪೋಲಿಸ್ ಠಾಣೆಗೆ ನುಗ್ಗಿ ಅಲ್ಲಿದ್ದ ದಾಖಲೆಗಳು, ಪೋಲಿಸ್ ವಾಹನಗಳಿಗೂ ಬೆಂಕಿಯಿಟ್ಟು ದಾಂಧಲೆ ಮಾಡಿದ್ದರೆ.ಖುದ್ದು ಪೋಲಿಸರೇ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.ಮತಾಂಧರು ದಾಳಿಯೆಬ್ಬಿಸಿ ಹೋದ ಎರಡು ದಿನಗಳ ನಂತರ ಪೋಲಿಸರು ಬೀದಿಗಿಳಿರುವುದಾಗಿ ಅಲ್ಲಿನ ಜನರು ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ.
ದಾದ್ರಿಯಲ್ಲಿ ನಡೆದ ಹತ್ಯೆಯೊಂದನ್ನು ಹಿಡಿದುಕೊಂಡು ದೇಶದ ಹೆಸರಿಗೆ ಮಸಿಬಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಬುದ್ಧಿಜೀವಿಗಳು,ಸೆಕ್ಯುಲರ್ ಮೀಡಿಯಾಗಳು ಮಾಲ್ಡಾದ ಘಟನೆಯ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ.ಮೊದಲಿಗೆ ಬಾಯಿಬಿಟ್ಟಿದ್ದು ಜೀ ನ್ಯೂಸಿನ ಸುಧೀರ್ ಚೌದರಿ,ಆ ನಂತರವೇ ಉಳಿದ ಚಾನೆಲ್ಲುಗಳು ಅನಿವಾರ್ಯವಾಗಿ ಬಾಯಿ ತೆರೆದವು.ಇಷ್ಟಾದರೂ ಬುದ್ಧಿಜೀವಿಗಳು ಬಾಯಿ ತೆಗೆಯಲಿಲ್ಲ.