ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ!
– ಸುಜಿತ್ ಕುಮಾರ್
ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರಬಿದ್ದು ಮುಂದೆ ಇನ್ನೇನೂ ಸಾಧ್ಯವಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚೆವಿಂಗ್-ಗಮ್ ಗಳನ್ನು ಮಾರುತ್ತಿದ್ದ ಈ ಪೋರ ‘ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು’ ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು! ಮತ್ತಷ್ಟು ಓದು
ದಿಗ್ಗಜರ ಮೇಲಾಟ..!
– ರೂಪಲಕ್ಷ್ಮೀ
೧೯೮೦ರ ದಶಕ ಅಮೇರಿಕಾಗಷ್ಟೇ ಅಲ್ಲಾ, ಇಡೀ ಜಗತ್ತಿಗೆ ಅತ್ಯಂತ ಮಹತ್ವದ ದಶಕ. ಇಬ್ಬರು ದಿಗ್ಗಜರು ಕಂಪ್ಯೂಟರ್ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಒತ್ತಿದ ಕಾಲವಿದು. ಕಂಪ್ಯೂಟರ್ ತಂತ್ರಜ್ಞಾನ ಮನೆಮನೆಗೆ ಪಸರಿಸಲು ಸಹಾಯ ಮಾಡಿದ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್ ಇಬ್ಬರ ನಡುವಿನ ಸಂಕೀರ್ಣ ಸಂಬಂಧವನ್ನು, ನಾಟಕೀಯವಾಗಿ, ನಾಜೂಕಾಗಿ ಈ ವಿಡಿಯೋದಲ್ಲಿ ಚಿತ್ರಿಸಿದ್ದಾರೆ. ಈ ಇಬ್ಬರೂ ಒಟ್ಟಿಗೆ ಇದ್ದರೂ ಕೂಡ ಪರಸ್ಪರ ಸ್ಪರ್ಧಿಗಳಾಗಿದ್ದರು. ಪರಸ್ಪರ ಸ್ಫರ್ಧಿಗಳಾಗಿದ್ದರೂ ಕೂಡ, ಒಟ್ಟಿಗೆ ಕೆಲಸ ಮಾಡಿ ತಂತ್ರಜ್ಞಾನದಲ್ಲಿ ಅತ್ಯುತ್ತಮ ಹಂತವನ್ನು ತಲುಪಿದವರು. ಒಬ್ಬರನೊಬ್ಬರು ಎಷ್ಟು ವಿರೋಧಿಸುತ್ತಿದ್ದರೋ, ಅಷ್ಟೇ ಪರಸ್ಪರ ಗೌರವಿಸುತ್ತಿದ್ದರು ಕೂಡ. ಇಬ್ಬರೂ ಕೂಡ ಮಹತ್ವಾಕಾಂಕ್ಷಿಗಳು, ಬುದ್ಧಿವಂತರು. ಕಂಪ್ಯೂಟರ್ ಮತ್ತು ತಂತ್ರಜ್ಞಾನ ಎರಡರಲ್ಲಿಯೂ ಆಪಲ್ ಕಂಪೆನಿಯೇ ಮೇಲುಗೈ ಸಾಧಿಸಬೇಕೆಂಬುದು ಸ್ಟೀವ್ ಜಾಬ್ಸ್ ನ ಮನಸ್ಥಿತಿಯಾಗಿದ್ದರೆ, ಮನೆಮನೆಗೂ ತಂತ್ರಜ್ಞಾನವನ್ನು ತಲುಪಿಸಬೇಕೆಂಬುದು ಬಿಲ್ ಗೇಟ್ಸ್ ನ ಇಚ್ಛೆಯಾಗಿತ್ತು. ಮತ್ತಷ್ಟು ಓದು