ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬುದ್ದಿಜೀವಿಗಳು’

1
ಜೂನ್

ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?

-ಶ್ರೀಕಾಂತ್ ಆಚಾರ್ಯ

1ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಈ ದೇಶದ ಅಷ್ಟೂ ಸವಲತ್ತನ್ನ ಚಪ್ಪರಿಸಿಕೊಂಡು ಅನುಭವಿಸಿದವರಿಂದ ಭಾರತದ ‘ಬರ್ಬಾದಿಗೆ’ ಜಂಗ್(?) ಶುರುವಾಯ್ತಲ್ಲ. ಆಶ್ಚರ್ಯ ಅನ್ನಿಸಿತಾ? ಬಹುಶಃ ಇರಲಿಕ್ಕಿಲ್ಲ. ಈ ದೊಂಬರಾಟಗಳನ್ನ ನಾವೆಲ್ಲಾ ಕಂಡವರೇ. ಬದುಕಿನಲ್ಲಿ ತನಗೊಂದು ‘ಐಡೆಂಟಿಟಿ’ಯೇ ಇಲ್ಲದೇ ಪರಿತಪಿಸುವ ಮಂದಿ ಬಹಳಷ್ಟು ಬಾರಿ ಹೀಗೆಲ್ಲ ಮಾಡಿಯೇ ಹೆಸರಿಗೆ ಬರೋದಿದೆ. ಹಾಗಂತ ಇವರನ್ನ ಅಸಡ್ಡೆ ಮಾಡಿ ಬದಿಗಿಡುವಂತಿಲ್ಲ. ಯಾಕೆಂದರೆ ಇವರೆಲ್ಲರ ಹೋರಾಟ ಇರೋದು ಕೆಟ್ಟದರ ಬಗ್ಗೆಯಲ್ಲ, ಈ ದೇಶಕ್ಯಾವುದೋ ಮಾರಕವಾಗಿದ್ದರೆ ಅದರ ಬಗ್ಗೆಯೂ ಅಲ್ಲ. ಇವರ ‘ಜಂಗ್’ ಇರೋದು ಈ ದೇಶದ ಸಮಗ್ರತೆಯ ಬಗ್ಗೆ. ಈ ದೇಶದ ಸನಾತನತೆಯ ಬಗ್ಗೆ. ಒಟ್ನಲ್ಲಿ ಈ ದೇಶದ ಬಗ್ಗೆಯೇ. ಇವೆಲ್ಲಾ ‘ಬುದ್ಧಿಮಾಂದ್ಯ’ ಜೀವಗಳಿಗೆ ಹೆಗಲಾಗಿ ನಿಂತು ಪೋಷಿಸುತ್ತಿರುವುದು ಇಲ್ಲಿನ ಬುದ್ಧಿ ಜೀವಿಗಳೆಂಬ ಅಡಕಸುಬಿಗಳು. ಅದಲ್ಲದೇ ಇನ್ನೇನು? ಮತಿ ತಪ್ಪಿದವ ಮಾಡಿದ ತಪ್ಪನ್ನ, ತಪ್ಪು ಅನ್ನೋದು ಬಿಟ್ಟು ಅವರೊಲ್ಲಬ್ಬರಾಗಿ ನಿಂತು ಗುರಾಣಿ ಹಿಡಿದು ಮತ್ತಷ್ಟು ಇನ್ನಷ್ಟು ಪ್ರಪಾತಕ್ಕೆ ಇಳಿಯೋಕೆ, ಎಳೆಯೋಕೆ ತಯಾರಾದರೆ? Read more »

10
ಜೂನ್

CSLC ಯ ಸಂಶೋಧನೆ ಮತ್ತು ಪ್ರಗತಿಪರರ ಫ್ಯಾಸಿಸ್ಟ್ ಧೋರಣೆ

CSLC– ರಾಕೇಶ್ ಶೆಟ್ಟಿ

ಅಲ್ಲಿಯವರೆಗೂ ಸುಖಾ ಸುಮ್ಮನೆ ಭೂಮಿಯ ಸುತ್ತ ಗಿರಕಿ ಹೊಡೆಯುತಿದ್ದ ಸೂರ್ಯನಿಗೆ ಸುತ್ತುವುದರಿಂದ ಮುಕ್ತಿ ಕೊಡಿಸಿ,’ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ’ ಅಂದವನು ಕೋಪರ್ನಿಕಸ್. ಅವನ ಕೆಲಸವನ್ನ ಮುಂದುವರಿಸಿದವರು ಗೆಲಿಲಿಯೋ ಮತ್ತು ಬ್ರುನೋ.ಈ ಮೂವರು ಬರುವವರೆಗೂ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಅಂತಲೇ ಜನರು ನಂಬಿದ್ದರು.ಅದೇ ಜನರ ಮಧ್ಯದಿಂದ ಎದ್ದು ಬಂದು,’ಇಲ್ಲ ಸ್ವಾಮಿ ಭೂಮಿಯೇ ಸುತ್ತೋದು’ ಅಂದಿದ್ದ ಕೋಪರ್ನಿಕಸ್ ಅದೇ ಜನರಿಂದ ಹುಚ್ಚ ಅನ್ನಿಸಿಕೊಂಡಿದ್ದ.ಅವನ ನಂತರ ಬಂದ ಗೆಲಿಲಿಯೋ ಮತ್ತು ಬ್ರುನೋ ಸಹ ಕೋಪರ್ನಿಕಸ್ ವಾದಕ್ಕೆ ಸೈ ಅಂದರು.

ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆ-ತಡೆಗಳು ಎದುರಾಗಬೇಕಲ್ಲವೇ? ಗೆಲಿಲಿಯೋ,ಬ್ರೂನೋಗು ಅದೇ ಆಯಿತು. ಇವರ ಸಂಶೋಧನೆಯಿಂದ ಕನಲಿ ಕೆಂಡವಾದ ಪೋಪ್ ಎಂಟನೇ ಅರ್ಬನ್,“Heliocentric System” ಅನ್ನುವುದೇ ಸುಳ್ಳು ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡಿಸಿ, ಅವರಿಬ್ಬರ ಸಂಶೋಧನೆಗೂ ನಿರ್ಬಂಧವನ್ನೂ ಹೇರಿದರು.

ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು.1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ.ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ,೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.

Read more »