ಅನಂತಕುಮಾರ್ ಹೇಳಿದ್ದರಲ್ಲೇನು ತಪ್ಪಿದೆ?
– ಜೆಬಿಆರ್ ರಂಗಸ್ವಾಮಿ
ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದೆ. ಯಾವ context ನಲ್ಲಿ ಯಾಕಾಗಿ ಆ ಮಾತುಗಳನ್ನಾಡಿದ್ದಾರೆ ? ಅದನ್ನೂ ಆಲಿಸಿದೆ. ಅವರು ಉದ್ದೇಶಿಸಿ ಹೇಳಿದ ಮಾತುಗಳಲ್ಲಿ ಅಪರಾಧವೇನಿದೆ ? ಅನ್ನಿಸಿತು. ಮತ್ತೊಮ್ಮೆ ಎಲ್ಲ ಛಾನಲ್ಗಳಲ್ಲಿ ಅವರು ಆಡಿದ ಮಾತುಗಳನ್ನು ಗ್ರಹಿಸಲು ಯತ್ನಿಸಿದೆ. ಕಾವ್ಯಾನಂದರ ( ಕುವೆಂಪು ಅಲ್ಲ ) ಮೊದಲು ನೀನು ಮಾನವನಾಗು ಎಂಬುದನ್ನು ಉಲ್ಲೇಖಿಸಿ ಪ್ರಾಸಂಗಿಕವಾಗಿ ಮಾತನಾಡಿದ್ದಾರೆಯೇ ಹೊರತು, ಆ ಮಾತುಗಳನ್ನು ಅವಹೇಳನ ಮಾಡಿದ್ದಾರೆ ಅನ್ನಿಸಲಿಲ್ಲ. ಕಾವ್ಯಾನಂದರನ್ನು ಟೀಕಿಸಲಿಲ್ಲ. ಬುದ್ದಿಜೀವಿಗಳು ಎಂದೊಡನೆ ‘ಪುಸ್ತಕ ಬರೆವ ಎಲ್ಲರೂ’ ಅಂದುಕೊಳ್ಳಬೇಕಿಲ್ಲ. ಆ ಹೆಸರಿನಲ್ಲಿ ವ್ಯಾಪಾರ ಮಾಡುವ ಗೋಸುಂಬೆಗಳು, ದುರ್ಲಾಭ ಪಡೆದುಕೊಳ್ಳುವ ವಂಚಕರು; ಫೋನು, ಫ್ಯಾನು, ಗೂಟದ ಕಾರಿನ ಸವಲತ್ತಿಗಾಗಿ ಹಾತೊರೆವ ಅಪ್ರಾಮಾಣಿಕರ ಗುಂಪನ್ನು ಉದ್ದೇಶಿಸಿ ಹೇಳಿದ ಮಾತುಗಳು ಎಂದು ಯಾರಿಗಾದರೂ ಗೊತ್ತಾಗುತ್ತದೆ. ಬುದ್ದಿಜೀವಿಗಳ ಸೋಗಿನಲ್ಲಿ ಪರಾನ್ನಪುಷ್ಟರಾಗಿರುವ ಗಂಜಿಗಿರಾಕಿಗಳನ್ನು ಎಲ್ಲ ಕಡೆಯೂ ನಾವು ದಿನವೂ ನೋಡುತ್ತಿಲ್ಲವೇ ? ಮತ್ತಷ್ಟು ಓದು
ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..
– ಪ್ರವೀಣ್ ಕುಮಾರ್ ಮಾವಿನಕಾಡು
ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!
ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು. ಮತ್ತಷ್ಟು ಓದು
ಪ್ರಧಾನಿಗಳ ನಡೆಯ ಹಿಂದೆ ಎಷ್ಟೆಲ್ಲ ಚಿಂತನೆ ಇದೆಯೆಂದರೆ…
– ರೋಹಿತ್ ಚಕ್ರತೀರ್ಥ
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಸಂಜೆ ಮಾಡಿದ ಭಾಷಣದಲ್ಲಿ ಐನೂರು ಮತ್ತು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ಸರಕಾರ ವಾಪಸು ಪಡೆಯಲಿದೆ ಎಂಬ ಘೋಷಣೆ ಮಾಡಿದರು. ಈ ಕಾರ್ಯಾಚರಣೆ 4 ವಿಷಯಗಳನ್ನು ಗುರಿಯಾಗಿಟ್ಟುಕೊಂಡಿದೆ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾನೋಟು. ಈ ನಾಲ್ಕೂ ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದರಿಂದ ಅವನ್ನು ಒಟ್ಟಾಗಿ ಪರಿಹರಿಸುವ ಇಲ್ಲವೇ ನಿಶ್ಶಕ್ತಗೊಳಿಸುವ ಅತ್ಯಂತ ಪ್ರಬಲ, ಪರಿಣಾಮಕಾರಿ ಪರಿಹಾರದ ಅಗತ್ಯ ಹಲವು ವರ್ಷಗಳಿಂದ ಇತ್ತು. ಹತ್ತು ವರ್ಷ ದೇಶವನ್ನು ಆಳಿದ ನಾಮಕಾವಾಸ್ತೆ ಆರ್ಥಿಕತಜ್ಞರಿಗಾಗದ ಗಟ್ಟಿ-ದಿಟ್ಟ ನಡೆಯನ್ನು ಮೋದಿ ತೋರಿಸಿ ನಾಯಕತ್ವದಲ್ಲಿ ಜ್ಞಾನದ ಜೊತೆ ಧೈರ್ಯವೂ ಬೇಕೆಂಬ ಸಂದೇಶ ರವಾನಿಸಿದ್ದಾರೆ. ಮತ್ತಷ್ಟು ಓದು
ನಂಜುಂಡೇಗೌಡರು ಮೋದಿಗೆ ಬರೆದ ಪತ್ರಕ್ಕೊಂದು ಆತ್ಮೀಯ ಪ್ರತಿಕ್ರಿಯೆ
– ವಿಜಯ್ ಪೈ
ಸನ್ಮಾನ್ಯ ಹೊನಕೆರೆ ನಂಜುಂಡೇಗೌಡರಿಗೆ ವಂದನೆಗಳು.
ತಾವು ಪ್ರಧಾನ ಮಂತ್ರಿಗಳಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ‘ಆತ್ಮೀಯ’ ಪತ್ರವನ್ನು ಓದಿದ ನಂತರ ನಿಮಗೊಂದು ಆತ್ಮೀಯ ಪ್ರತಿಕ್ರಿಯೆ ನೀಡಬೇಕಾಯಿತು.
(ನಂಜುಂಡೇಗೌಡರ ಪತ್ರ : www.prajavani.net/columns/ಗೌರವಾನ್ವಿತ-ಪ್ರಧಾನಿಗೆ-ಆತ್ಮೀಯ-ಪತ್ರ )
ಮೋದಿ ಆಡಳಿತದಿಂದ ಈ ದೇಶದಲ್ಲಿ ಬಂದ ಒಂದು ಅತ್ಯುತ್ತಮ ಬದಲಾವಣೆಯೆಂದರೆ, ‘ಬುದ್ಧಿಜೀವಿ’ಗಳೆಂದು / ಪತ್ರಕರ್ತರೆಂಬ ಅಪಾದನೆಗೊಳಲ್ಪಟ್ಟವರು ಆಗಾಗ ಪ್ರಧಾನಿಗೆ ಪತ್ರ ಬರೆಯುವ, ಬುದ್ಧಿವಾದ ಹೇಳುವ/ ಎಚ್ಚರಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವುದು. ದಶಕಗಳ ಕಾಲ ಕೋಮಾಕ್ಕೆ ಒಳಗಾಗಿದ್ದ ಇವರುಗಳು, ಈಗ ಮೋದಿ ಎಂಬ ಸಂಜೀವಿನಿಯಿಂದ ಮತ್ತೆ ಜೀವಂತಗೊಂಡು ಮತ್ತೆ ‘ಸಾಕ್ಷಿ ಪ್ರಜ್ಞೆ’ಗಳಾಗಿದ್ದಾರೆ ಎಂದು ಜನ ಭಾವಿಸಿದರೆ, ನೀವೂ ಕೂಡ ಅಲ್ಲಗೆಳೆಯುವುದಿಲ್ಲ ಅಂದುಕೊಳ್ಳುತ್ತೇನೆ. ಮೊನ್ನೆ-ಮೊನ್ನೆ ಬರವನ್ನು ಹೇಗೆ ನಿರ್ವಹಿಸಬೇಕು, ಈ ವಿಷಯದಲ್ಲಿ ಸರಕಾರದ ನ್ಯೂನತೆಗಳೇನು ಎಂಬ ಬಗ್ಗೆ ನಮ್ಮ ದೇಶ ಕಂಡ ಕೆಲವು ಬಹುಮುಖ್ಯ ಸಾಕ್ಷಿಪ್ರಜ್ಞೆಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಈಗ ನೀವು ಕೂಡ ಸರಕಾರದ ಎರಡನೆಯ ವರ್ಷಾಚರಣೆಯ ಸಂದರ್ಭದಲ್ಲಿ ಪತ್ರ ಬರೆದಿದ್ದೀರಿ. ತಮ್ಮ ಕಾಳಜಿಗೆ ವಂದನೆಗಳು. ಮತ್ತಷ್ಟು ಓದು
ಶನಿಯ ಬೆನ್ನೇರಿದ ಕಾಕ, ಇದೆಲ್ಲ ನಾಟಕ ಯಾಕ?
– ರೋಹಿತ್ ಚಕ್ರತೀರ್ಥ
ನಮ್ಮ ದೇಶದಲ್ಲಿ ಖರ್ಚಿಲ್ಲದೆ ಪ್ರಸಿದ್ಧಿ ಒದಗಿಸುವ ಎರಡು ಸಂಗತಿಗಳಿವೆ. ಒಂದು ಬುದ್ಧಿಜೀವಿಯಾಗುವುದು, ಇನ್ನೊಂದು ಮಹಿಳಾವಾದಿಯಾಗುವುದು. ಬುದ್ಧಿಜೀವಿಯಾಗಬೇಕಾದರೆ ನೀವು ಸೆಕ್ಯುಲರ್ ಎಂದು (ಏನೆಂದು ಗೊತ್ತಿರದಿದ್ದರೂ) ತೋರಿಸಿಕೊಳ್ಳಬೇಕು. ಹಿಂದೂಗಳನ್ನು, ಅವರ ಆಚರಣೆ, ಪದ್ಧತಿ, ಹಬ್ಬಹರಿದಿನಗಳನ್ನು ಬಯ್ಯಬೇಕು. ಹಿಂದೂ ದೇವರನ್ನು, ದೇವಾಲಯಗಳನ್ನು ಪ್ರಶ್ನಿಸಬೇಕು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಿಲಿಜನ್ನುಗಳನ್ನು ಓಲೈಸಬೇಕು. ಮೋದಿಯನ್ನು ತೆಗಳಬೇಕು. ಭಯೋತ್ಪಾದಕರನ್ನು, ನಕ್ಸಲರನ್ನು ಬೆಂಬಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೆನ್ನುಮೂಳೆ ಇರಬಾರದು. ಜೊತೆಗೆ, ಅರ್ಥವತ್ತಾದ ಮಾತು, ತರ್ಕಬದ್ಧವಾದ ಚಿಂತನೆ – ಇವೆರಡರ ಬಗ್ಗೆ ನೀವು ಎಂದೆಂದೂ ತಲೆ ಕೆಡಿಸಿಕೊಂಡಿರಬಾರದು. ಹಾಗೆಯೇ, ಮಹಿಳಾವಾದಿಯಾಗುವುದು ಕೂಡ ಸುಲಭ. ಮೊದಲಿಗೆ ಮಹಿಳಾವಾದ = ಪುರುಷದ್ವೇಷ ಎಂಬ ಸಮೀಕರಣ ಬರೆಯಿರಿ. ಮಹಿಳೆಗೆ ಸ್ವಾತಂತ್ರ್ಯ ಬೇಕು ಅನ್ನಿ. ಉದ್ಯೋಗದಲ್ಲಿ, ಸಂಸತ್ತಿನಲ್ಲಿ, ಬಸ್ಸಿನಲ್ಲಿ, ಚಿತ್ರಮಂದಿರದಲ್ಲಿ, ನಡೆದಾಡುವ ರಸ್ತೆಯಲ್ಲಿ – ಹೀಗೆ ಎಲ್ಲೆಲ್ಲೂ ಹೆಣ್ಣಿಗೆ ಸಮಾನತೆ ಬೇಕೆಂದು ಬೊಬ್ಬೆ ಹೊಡೆಯಿರಿ. ಉದ್ಧೇಶವೇ ಇಲ್ಲದೆ ಪ್ರತಿಭಟನೆ ಮಾಡಿದರೂ ಓಕೆ. ವಿರೋಧಿಸದವರಿಗೂ ಧಿಕ್ಕಾರ ಕೂಗಿದರೂ ಓಕೆ. ಒಟ್ಟಲ್ಲಿ ನಿಮ್ಮ ಮಾತು, ಕೂಗಾಟ, ಹಾರಾಟ, ಹೋರಾಟವೆಲ್ಲ ನಾಲ್ಕು ಜನಕ್ಕೆ ಗೊತ್ತಾಗಬೇಕು, ಪತ್ರಿಕೆ ಟಿವಿಗಳಲ್ಲಿ ಬರಬೇಕು. ಮತ್ತು ಇವೆಲ್ಲದರ ಜೊತೆ, ನೀವು, ಮೇಲೆ ಹೇಳಿದ ಬುದ್ಧಿಜೀವಿಯೂ ಆಗಿರಬೇಕಾದ್ದು ಅನಿವಾರ್ಯ. ಎರಡು ವರ್ಷಗಳ ಹಿಂದೆ ಒಂದು ಬುದ್ಧಿಜೀವಿ ಮಹಿಳಾಪರ ಲೇಖಕಿ, “ಮೋದಿಯ ಮುಖ ನೋಡಿದರೇನೇ ಆತ ಸ್ತ್ರೀದ್ವೇಷಿ ಅನ್ನೋದು ಗೊತ್ತಾಗುತ್ತದೆ” ಎಂದಿದ್ದರು. ಇಂಥ ಹೇಳಿಕೆ ಕೊಡುವವರಿಗೆ ಮಹಿಳಾಪರ ಸಂಘಟನೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಮತ್ತಷ್ಟು ಓದು
ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣರಾ?
– ತುರುವೇಕೆರೆ ಪ್ರಸಾದ್
ಪುರೋಹಿತಶಾಹಿ ಎಂದರೆ ಧರ್ಮ, ದೇವರು ಮತ್ತು ಮಹಾತ್ಮರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಇತರೆ ವರ್ಗಗಳನ್ನು ಅಕ್ಷರ ಹಾಗೂ ಇನ್ನಿತರ ಸಾಮಾಜಿಕ ಅವಕಾಶಗಳಿಂದ ವಂಚಿಸಿದ ಒಂದು ಪ್ರಭಾವಶಾಲಿ ವರ್ಗ! ಈ ಪುರೋಹಿತಶಾಹಿ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ಹಾಗೂ ಸ್ವಾರ್ಥಕ್ಕೆ ತಿರುಗಿಸಿಕೊಂಡು ಸಮಾಜದ ದುರ್ಬಲ ವರ್ಗಗಳನ್ನು ಶೋಷಿಸುತ್ತದೆ ಎಂಬ ಆರೋಪವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.
ಪುರೋಹಿತ ಶಾಹಿ ಅರಿವು ಮತ್ತು ಜ್ಞಾನವನ್ನು ತನ್ನ ಖಾಸಗಿ ಸೊತ್ತು ಎಂದು ಭಾವಿಸಿ ಸಮಾಜದ ಹಿಂದುಳಿದ ವರ್ಗಗಳಿಗೆ ವಿದ್ಯೆಯನ್ನು ಕಲಿಯಲು ಅವಕಾಶ ನೀಡದೆ ವಂಚಿಸಿತು. ರಾಜಾಶಾಹಿ ಜೊತೆ ಕೈ ಜೋಡಿಸಿ ಹಿಂದುಳಿದವರು ಸಾಮಾಜಿಕ ಸ್ಥಾನಮಾನ ಪಡೆಯದಂತೆ ನಿರ್ಬಂಧಿಸಿತು. ವ್ಯವಸ್ಥೆ ಮತ್ತು ಸಮುದಾಯದಲ್ಲಿ ತರತಮ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಯಿತು. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅರಾಜಕತೆಗೆ ಕಾರಣವಾಯಿತು. ಶುದ್ಧ ರೂಪದಲ್ಲಿದ್ದ ಧರ್ಮ ಪುರೋಹಿತ ಶಾಹಿಯಿಂದ ಭ್ರಷ್ಟವಾಯಿತು.ದೇವರು ಮತ್ತು ಧರ್ಮದ ಏಕಸ್ವಾಮ್ಯವನ್ನು ತಮ್ಮದಾಗಿಸಿಕೊಂಡು ದೇವರು, ಧರ್ಮದ ಏಜೆಂಟರಾಗಿ ಜನರನ್ನು ಮೂಡನಂಬಿಕೆಯ ಕೂಪಕ್ಕೆ ತಳ್ಳಿತು. ಸ್ವತಃ ದುಡಿಮೆ ಮಾಡದೆ ದಾನ ಧರ್ಮದ ಹೆಸರಿನಲ್ಲಿ ಜನರಿಂದ ಆಹಾರ,ವಸ್ತ್ರ ದ್ರವ್ಯಾದಿಳನ್ನು ಕಿತ್ತು ಜೀವನ ನಡೆಸಿತು. ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿರಿಸಿ ಸಮಾಜದ ಕೆಳಸ್ತರದ ಜನರ ದುಡಿಮೆಯಲ್ಲಿ ಕೂತು ತಿಂದು ಶ್ರಮಸಂಸ್ಕøತಿಯನ್ನು ಧಿಕ್ಕರಿಸಿತು. ನಾವು ಆಸ್ತಿವಂತರು,ನಾವು ಆಳುವವರು,ನಮ್ಮ ಸೇವೆ ಮಾಡಲು, ಬೇಕಾದುದನ್ನೆಲ್ಲಾ ಉತ್ಪತ್ತಿ ಮಾಡಿ ಕೊಡುವವರು ಶೂದ್ರರು ಎಂದು ಪರಿಭಾವಿಸಿ ನಿಕೃಷ್ಟವಾಗಿ ನಡೆದುಕೊಂಡಿತು.
ವಸಾಹತುಶಾಹಿ ವ್ಯವಸ್ಥೆಯೊಂದಿಗೆ ಈ ಪುರೋಹಿತಶಾಹಿ ಶಾಮೀಲಾಗಿ ಅಲ್ಲಿನ ಪ್ರಿಸ್ಟ್ಲಿ ಹುಡ್ ಸಂಸ್ಕøತಿಯನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವಂತೆ ನೋಡಿಕೊಂಡಿತು. ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೂ ಈ ಪುರೋಹಿತಶಾಹಿ ಸನ್ಯಾಸಿ ದೀಕ್ಷೆ ಕೊಡಲು ತಿರಸ್ಕರಿಸಿತು. ಬ್ರಾಹ್ಮಣ್ಯವನ್ನು ತೊರೆದು ಹೋದ ರಾಮಕೃಷ್ಣ ಪರಮಹಂಸರೇ ಕೊನೆಗೆ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ಕೊಟ್ಟರು. ಪುರೋಹಿತಶಾಹಿ ಜಾತಿ ಪದ್ದತಿಯನ್ನು ವಿರೋಧಿಸಿದ ಬಸವಣ್ಣನವರನ್ನು ನಂದಿ ಅವತಾರ ಎಂದು ಬಿಂಬಿಸಿ ಪೂಜೆ ಮಾಡುವಂತೆ ಮಾಡಲಾಗಿದೆ.ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ಧನನ್ನೇ ಅವತಾರ ಪುರುಷ ಎಂದು ಬಿಂಬಿಸಲಾಯಿತು. ಹೀಗೆ ಪುರೋಹಿತಶಾಹಿಯ ಮೇಲೆ ಆರೋಪಪಟ್ಟಿ ಸಾಗುತ್ತದೆ..!
ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೇಕೆ ಇವರಿಗೆ ಈ ಪರಿ ಕೋಪ?”
– ರಾಕೇಶ್ ಶೆಟ್ಟಿ
ಫೇಸ್ಬುಕಿನಲ್ಲಿ ದಿನಕ್ಕೆ ಅದೆಷ್ಟು ಲಕ್ಷ ಸ್ಟೇಟಸ್ ಅಪ್ಡೇಟ್ ಗಳು ಬರುತ್ತವೆಯೋ ಗೊತ್ತಿಲ್ಲ.ಅವುಗಳಲ್ಲಿ ಜೊಳ್ಳು-ಕಾಳು ಎಲ್ಲವೂ ಇರುತ್ತವೆ.ಇತ್ತೀಚೆಗೆ ನಮ್ಮ ಮೀಡಿಯಾಗಳಲ್ಲಿ “ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಆ ಸ್ಟೇಟಸ್ಸಿನಲ್ಲಿ,ಪ್ರಭಾ ಅವರು “ಪುರೋಹಿತಶಾಹಿ” ಗಳನ್ನು ಟೀಕಿಸಿ ಅವರ ಮೇಲೆ ಸಿಟ್ಟು ಮಾಡಿಕೊಂಡು ಬರೆದಿದ್ದರು. ಭಟ್ಟರ ಕಮೆಂಟಿನ ಗಲಾಟೆಯಲ್ಲಿ ಕಳೆದು ಹೋಗಿದ್ದು, ಪ್ರಭಾ ಅವರು ಬರೆದ ಸ್ಟೇಟಸ್ಸಿನಲ್ಲಿದ್ದ “ಪುರೋಹಿತಶಾಹಿ”ಯ ಬಗ್ಗೆ ಆಗಬೇಕಿದ್ದ ಚರ್ಚೆ.
ಈ ಲೇಖನವನ್ನು ಓದುತ್ತಿರುವ ಬಹುತೇಕ ಜನ ಸಾಮಾನ್ಯರಿಗೆ “ಪುರೋಹಿತಶಾಹಿ” ಎಂದರೇನು ಎನ್ನುವ ಪ್ರಶ್ನೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಹಾಗಾಗಿ ಪುರೋಹಿತಶಾಹಿಯನ್ನು ಅರ್ಥವೇನು ನೋಡೋಣ.
ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಧರ್ಮದ ಏಕಸ್ವಾಮ್ಯ (ಒಂದರ್ಥದಲ್ಲಿ Copy Rights) ವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ. ಪುರೋಹಿತರ ಆಳ್ವಿಕೆಯೇ “ಪುರೋಹಿತಶಾಹಿ”.
ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೆಕೆ ಇವರಿಗೆ ಈ ಪರಿ ಕೋಪ?”
ಬುದ್ಧಿಜೀವಿಗಳ Definitionನ ಪ್ರಕಾರ “ಪುರೋಹಿತಶಾಹಿ”ಯೆಂದರೆ ದೇವರ ಬಗ್ಗೆ ಭಯ ಮೂಡಿಸಿ ಜನರನ್ನು ಮೂರ್ತಿ ಪೂಜೆಗಳಲ್ಲಿ ತೊಡಗಿಸಿ,ನೆಪ ಹೇಳಿ ಜೇಬು ತುಂಬಿಸಿಕೊಳ್ಳುವವರು ಮತ್ತು ಭವಿಷ್ಯ ಇತ್ಯಾದಿ ನೆಪದಲ್ಲಿ ಮೋಸ ಮಾಡುವವರು” ಅನ್ನುವ ಧಾಟಿಯಲ್ಲಿರುತ್ತದೆ. (ಬಹುಷಃ ಇದಕ್ಕಿಂತ ಉತ್ತಮ Definition ಇದ್ದರೂ ಇರಬಹುದು)
ಒಟ್ಟಾರೆಯಾಗಿ ಬುದ್ಧಿಜೀವಿಗಳ ಈ ಪುರೋಹಿತಶಾಹಿಯ ಕುರಿತ ಮೇಲಿನ Definition ಅನ್ನು ಅರ್ಥಮಾಡಿಕೊಂಡಾಗ ತಿಳಿಯುವುದೇನೆಂದರೆ, “ದೇವರು ಮತ್ತು ಜನರ ನಡುವಿನ ಮಧ್ಯವರ್ತಿಗಳಾದ ಈ ಪುರೋಹಿತರು ಜನರನ್ನು ನಮ್ಮ ಧರ್ಮ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ಸಮಾಜವನ್ನು/ಧರ್ಮವನ್ನು ಹಾಳು ಮಾಡುತಿದ್ದಾರೆ”
ನಮ್ಮ ಬುದ್ಧಿಜೀವಿಗಳ ಈ ವಾದದ ಮೂಲವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.ಆಗ ನಮಗೆ ಮುಂದಿನ ಚರ್ಚೆಯ ಹಾದಿ ಸುಲಭವಾಗಾಹುದು.