ಹೀಗೊ೦ದು ’ಆತ್ಮ’ಕಥನ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ ನ೦ತರ ಏನಾಗುತ್ತದೆ?ದೇಹ ನಶಿಸಿದ ನ೦ತರವೂ ಆತ್ಮವೆನ್ನುವುದು ಉಳಿಯಲಿದೆಯೇ? ಅಸಲಿಗೆ ಆತ್ಮವೆ೦ದರೆ ಏನು? ಇ೦ಥಹ ಹತ್ತಾರು ಪ್ರಶ್ನೆಗಳ ಉತ್ತರಕ್ಕಾಗಿ ಸಾವಿರಾರು ವರ್ಷಗಳಿ೦ದಲೂ ಮನುಷ್ಯ ಹುಡುಕಾಡುತ್ತಿದ್ದಾನೆ. ತನಗೆ ತಿಳಿದ೦ತೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮ,ಪ್ರೇತಾತ್ಮ,ಪವಿತ್ರಾತ್ಮ,ಪರಮಾತ್ಮ ಎ೦ದೆಲ್ಲ ವಿ೦ಗಡಿಸಿದ್ದಾನೆ.ಅವನಿಗೆ ಪ್ರೇತಾತ್ಮವೆ೦ದರೆ ಭಯ,ಪರಮಾತ್ಮನೆ೦ದರೆ ಭಕ್ತಿ.ಹೀಗೆ ಭಯಭಕ್ತಿಗಳಿದ್ದರೂ ಆತ್ಮದ ಅಸ್ತಿತ್ವದ ಬಗ್ಗೆ ಖಚಿತವಾಗಿ ಹೇಳಲಾರ.ತಿಳಿದುಕೊಳ್ಳುವ ಪ್ರಯತ್ನವನ್ನ೦ತೂ ಕೈಬಿಡಲಾರ.ಆತ್ಮಜ್ಞಾನಕ್ಕಾಗಿ ಪುರಾಣಗಳನ್ನು ತಡಕಾಡುತ್ತಾನೆ.ವಾಜಶ್ರವನ ಪುತ್ರ ನಚಿಕೇತನ೦ತೆ ಕಾಲಜ್ಞಾನಿಯಾಗ ಬಯಸುತ್ತಾನೆ. ಸಾಧ್ಯವಾಗದಿದ್ದಾಗ ಉತ್ತರಕ್ಕಾಗಿ ವಿಜ್ಞಾನದ ಮೊರೆ ಹೋಗುತ್ತಾನೆ.ಇಷ್ಟಾಗಿಯೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತಾ? ಗೊತ್ತಿಲ್ಲ.ಆದರೆ ಆತ್ಮಜ್ಞಾನದ ಅರ್ಥೈಸುವಿಕೆಯ ಹಾದಿಯಲ್ಲಿ ವಿಜ್ಞಾನ ಮತ್ತು ಧಾರ್ಮಿಕತೆಯ ಕವಲುಗಳು ಸಾಗಿರಬಹುದಾದ ದೂರದ ಸಣ್ಣದೊ೦ದು ಪರಾಮರ್ಶೆಯ ಉದ್ಧಟತನ್ನು ತೋರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ.
ಬೌದ್ದರನ್ನು ಓಡಿಸಲು ಶಂಕರರೇನು ಅರಸರಾಗಿದ್ದರೇ?
– ಸಂತೋಶ್ ತಮ್ಮಯ್ಯ
ಕೆಲವರ ಮನಸ್ಸೇ ವಿಚಿತ್ರವಾದುದು. ಅವರದ್ದು ವಿನಾಕಾರಣ ನಿರಾಕರಣವಾದ. ಇದ್ದುದನ್ನು ಇಲ್ಲವೆನ್ನುವುದು, ಇಲ್ಲದ್ದನ್ನು ಇದೆ ಎನ್ನುವುದು , ವಿನಾಕಾರಣ ಖಂಡಿಸುವುದು, ವಿಪರೀತವನ್ನು ಮಂಡಿಸುವುದು, ವಿಚಿತ್ರ ಸ್ವಭಾವಗಳು. ಉದಾಹರಣೆಗೆ ಎಲ್ಲರಿಗೂ ಇಷ್ಟವಾಗುವ ಸಿನೆಮಾವನ್ನು ಕೆಲವರು ವಿನಾಕಾರಣ ಬಯ್ಯುತ್ತಾರಲ್ಲಾ ಅಂಥವರು. ಆ ಮನಸ್ಸನ್ನು ಸಿನಿಕವೆನ್ನಿ, ಪೂರ್ವಗ್ರಹವೆನ್ನಿ, ಅಬದ್ಧವೆನ್ನಿ, ಅಸ್ವಸ್ಥವೆನ್ನಿ ಎಲ್ಲವೂ ಸರಿಯೇ. ನಮ್ಮ ಸಾಹಿತ್ಯಲೋಕದಲ್ಲಿ ಅಂಥವರನೇಕರು ಸಿಗುತ್ತಾರೆ. ಅವರೆಲ್ಲರೂ ಸಂದರ್ಭ ಸಿಕ್ಕಾಗಲೆಲ್ಲಾ ಹೀಗೆ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಭೈರಪ್ಪನವರು ಬರೆದಾಗ, ನ್ಯಾಯನೀತಿಯನ್ನು ಇನ್ಯಾರೋ ಎತ್ತಿ ಹಿಡಿದಾಗ, ಚಿದಾನಂದ ಮೂರ್ತಿಗಳು ಏನನ್ನೋ ಶೋಧಿಸಿದಾಗಲೆಲ್ಲಾ ಅದಕ್ಕೆ ಸಂಪೂರ್ಣ ನೇತ್ಯಾತ್ಮಕವಾದುದನ್ನು ಹಿಡಿದು ಹೇಳಿಕೆಗಳನ್ನು ನೀಡಲಾರಂಭಿಸುತ್ತಾರೆ. ಅದಕ್ಕೆ ಕೆಲವು ಪತ್ರಕರ್ತರು ಕನ್ನಡದ ಮನಸ್ಸು ಎಂಬ ಹೆಸರು ಕೊಟ್ಟುಬಿಡುತ್ತಾರೆ. ಇಂಥ ಸತ್ಯದ ಆವರಣವನ್ನೇ ಕನ್ನಡದ ಮನಸ್ಸು ಎನ್ನುವುದಾದರೆ ಅದು ಕನ್ನಡಕ್ಕೆ ಮುಸುಕಿರುವ ಆವರಣ ಎನ್ನದೆ ವಿಧಿ ಇಲ್ಲ. ಇಂಥವರ ಗುಂಪಿಗೆ ಈಗ ಮತ್ತೊಬ್ಬರು ಸೇರಿದ್ದಾರೆ.
ಯಾರೋ ಕೇಶವ ಮೂರ್ತಿಯಂತೆ. ಇದುವರೆಗೆ ಅವರ ಮುಖ ನೋಡಿದವರಿಲ್ಲ. ಸಾಹಿತ್ಯ ಓದಿದವರಿಲಿಲ್ಲ. ಈ ಮಧ್ಯೆ ಕಾಂಗ್ರೆಸ್ ಆಡಳಿತಕ್ಕೆ ಬಂತು. ಗುರುತಿಸಿಕೊಳ್ಳುವುದು ಲಾಭದ ದೃಷ್ಟಿಯಿಂದ ಉತ್ತಮ ಎನಿಸಿತ್ತೋ ಏನೋ ಹೇಳಿಕೆಯೊಂದನ್ನು ಕೊಟ್ಟರು.”ನರೇಂದ್ರ ಮೋದಿಗಿಂತ ಶಂಕರಾಚಾರ್ಯರು ಹೆಚ್ಚು ಕ್ರೂರಿ” ಎಂದರು. ನರೇಂದ್ರಮೋದಿಯವರನ್ನು ನವನವೀನವಾಗಿ ಟೀಕಿಸುವ ಜನರಿಗೆ ಒಮ್ಮೆ ಈ ಮಾದರಿಯ ಟೀಕೆ ಸ್ವಜನಶೀಲವಾಗಿ ಕಂಡಿರಬೇಕು. ಏಕೆಂದರೆ ಅಲ್ಲಿ ಮೋದಿಯೂ ಇದ್ದರೂ, ಶಂಕರಾಚಾರ್ಯರೂ ಇದ್ದರು. ಇತಿಹಾಸವನ್ನೂ ಬಯ್ದಂತಾಯಿತು. ವರ್ತಮಾನವನ್ನೂ ತೆಗಳಿದಂತಾಯಿತು. ವೋಟ್ ಬ್ಯಾಂಕ್ ರಾಜಕಾರಣಕ್ಕಂತೂ ಇಂಥ ಹೇಳಿಕೆಗಳ ಆವಶ್ಯಕತೆ ತುಂಬಾ ಇತ್ತು. ಖಂಡಿಸುವ ಈ ಹೇಳಿಕೆಗಳಿಗಾಗಿ ಅವರು ಸಾಕಷ್ಟು ಶ್ರಮವನ್ನೇ ಪಟ್ಟಿರಬೇಕು.
ಬಹುಶಃ ಕೇಶವಮೂರ್ತಿಯವರಿಗೆ ಈ ಸಂಗತಿಗಳು ತಿಳಿದಿರಲಿಕ್ಕಿಲ್ಲ.
೧೯೮೪ರ ಸಿಕ್ಖ್ ನರಮೇಧದಲ್ಲಿ ಸತ್ತವರು ೨೭೩೩ ಎಂಬುದು ಸರಕಾರದ ದಾಖಲೆ. ಆದರೆ ದಂಗೆಯಲ್ಲಿ ೨೫,೦೦೦ಕ್ಕೂ ಹೆಚ್ಚು ಜನರು ಸತ್ತರು ಮತ್ತು ಗಾಯಗೊಂಡಿದ್ದರು. ನೂರಾರು ಸಿಕ್ಖ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಸುಮಾರು ೩ ಲಕ್ಷ ಸಿಕ್ಖರು ಮನೆಮಾರುಗಳನ್ನು ಬಿಟ್ಟು ಓಡಿ ಹೋದರು ಮತ್ತು ತಲೆ ಮರೆಸಿಕೊಂಡರು. ನೂರಾರು ಗುರುದ್ವಾರಗಳನ್ನು ಕೆಡವಲಾಯಿತು ಮತ್ತು ಧರ್ಮಗ್ರಂಥವನ್ನು ಸುಡಲಾಯಿತು. ದೇಶ ಕಾಯುತ್ತಿದ್ದ ೩೦೦ ಜನ ಸಿಕ್ಖ್ ಯೋಧರನ್ನ್ನು ಕೊಲ್ಲಲಾಯಿತು. ಬೊಕಾರೋ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ೧೨೦ ಜನ ಸಿಕ್ಖರನ್ನು ಸಾಮೂಹಿಕವಾಗಿ ದಹಿಸಲಾಯಿತು. ಖಾನ್‌ಪುರದಲ್ಲಿ ೧೩ ವರ್ಷದ ಸಿಕ್ಖ್ ಬಾಲಕನನ್ನು ಗ್ಯಾಸ್ ಸ್ಟವ್‌ನಲ್ಲೇ ಕೋಳಿ ಸುಡುವಂತೆ ಸುಡಲಾಯಿತು. ಅಗರ್ತಲಾದಲ್ಲಿ ವಾಸಿಸುತ್ತಿದ್ದ ೩೦ ಸಿಕ್ಖ್ ಕುಟುಂಬಗಳು ಜೀವರಕ್ಷಣೆಗಾಗಿ ಪೊಲೀಸ್ ಠಾಣೆಯ ಮೆಟ್ಟಲೇರಿದರು. ಪೊಲೀಸರೇ ಅವರೆಲ್ಲರನ್ನು ಸಜೀವವಾಗಿ ಸುಟ್ಟರು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ೧೨ ಜನ ಸಿಕ್ಖರನ್ನು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ನೇಣು ಹಾಕಿ ಕೊಲ್ಲಲಾಯಿತು.