ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬ್ರಾಹ್ಮಣ’

26
ಆಕ್ಟೋ

ಉತ್ತರ ಸಿಗದ ನನ್ನ ಪ್ರಶ್ನೆಗಳು

– ವಿದ್ಯಾ ಕುಲಕರ್ಣಿ

ಜಿಜ್ಞಾಸು, ಪ್ರಬುದ್ಧರ ಚಿಂತನೆ, ಕುಲುಮೆ, ನಿಲುಮೆ ಈ ಗುಂಪುಗಳಲ್ಲಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅವುಗಳಿಗೆ ಯಾರೂ ಸಮರ್ಪಕ ಉತ್ತರ ಕೊಡದೇ ಪುನಃ ಬೇರೆ ಬೇರೆ ಪ್ರಶ್ನೆ ಕೇಳುತ್ತಲೇ ಹೋಗುತ್ತಾರೆ.

ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದರೆ “ಉತ್ತರಿಸಿದ್ದೇನೆ. ನಿಮಗೆ ತಿಳಿಯದಿದ್ದರೆ ಏನು ಮಾಡಲಿ??” “ನಿಮಗೆ ಗ್ರಹಿಸುವ ಶಕ್ತಿ ಇಲ್ಲ ಏನು ಮಾಡಲಿ?” ಇತ್ಯಾದಿ ಹಾರಿಕೆಯ ಉತ್ತರ ಕೊಡುತ್ತಾರೆ. ಹಾಗಿದ್ದರೆ ನನ್ನ ಪ್ರಶ್ನೆಗಳಾದರೂ ಏನು??

ಪುನಃ ಅದೇ ಪ್ರಶ್ನೆಗಳನ್ನು ಕ್ರೋಢೀಕರಿಸಿ ನಂಬರ್ ಕೊಟ್ಟು ಕೇಳುತ್ತಿದ್ದೇನೆ. ಈಗಲಾದರೂ ಉತ್ತರಿಸುವ (ನಂಬರ್ ಪ್ರಕಾರ ಉತ್ತರಿಸುವ) ಸೌಜನ್ಯ ಯಾರಾದರೂ  ತೋರಿಸುತ್ತೀರಾ?? ಮತ್ತಷ್ಟು ಓದು »

30
ಆಕ್ಟೋ

ದೀಪಾವಳಿಯ ಬೆಳಕಿಗೆ ಶಾಶ್ವತ ಕತ್ತಲೆ ತುಂಬಿದ ಸೈತಾನ

– ಸಂತೋಷ್ ತಮ್ಮಯ್ಯ

dsc8476_tipu_sultan_mಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮತ್ತಷ್ಟು ಓದು »

11
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )

– ಡಾ. ಮಾಧವ ಪೆರಾಜೆ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

ಎರಡು ಭಿನ್ನ ಶಾಸನಗಳು:

tirumalaಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ …… ಮತ್ತಷ್ಟು ಓದು »

10
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

– ಡಾ. ಮಾಧವ ಪೆರಾಜೆ

ಮಧ್ಯಕಾಲದಲ್ಲಿ ಗುಡಿಗಳು:

tirumalaದೇವಾಲಯಗಳಿಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಬಂದಿರುವುದೇ ಮಧ್ಯಯುಗದಲ್ಲಿ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ. ಪುರಾಣಗಳು ಕಾವ್ಯಗಳು ದೇವಾಲಯಗಳ ಕುರಿತು ಹಾಡಿಹೊಗಳುವುದಕ್ಕೆ ಈ ಕಾಲದಲ್ಲಿ ಪ್ರಾರಂಭ ಮಾಡುತ್ತವೆ. ಅಗ್ನಿಪುರಾಣದ ಪ್ರಕಾರ ದೇವಾಲಯಗಳನ್ನು ಕಟ್ಟಿಸುವ ಬಯಕೆ ಬಂತೆಂದರೆ ಸಾಕು – ಅವರ  ಪಾಪ ಪರಿಹಾರವಾಗುತ್ತದೆಯಂತೆ. ದೇವಾಲಯಕ್ಕೆ ಒಂದು ಇಟ್ಟಿಗೆಯನ್ನು ಇಟ್ಟರೆ ಅದು ಅವನಿಗೆ ಸಾಯುವಾಗ ಒಂದು ಯಜ್ಞವನ್ನು ಮಾಡಿದ ಪುಣ್ಯವನ್ನು ಕೊಡುತ್ತದೆಯಂತೆ – ಹಾಗೆಂದು ಹಯಶೀರ್ಷ ಸಂಹಿತೆ ಹೇಳುತ್ತದೆ. ಯಾವುದಾದರೊಂದು ಮಗು ಆಟದ ನೆಪದಲ್ಲಿ ಮರಳಿನಲ್ಲಿ ಗುಡಿ ಕಟ್ಟಿದರೂ ಆ ಮಗುವಿಗೆ ಸ್ವರ್ಗ ಲಭಿಸುತ್ತದೆ ಎಂದು ವಿಷ್ಣು ರಹಸ್ಯವು ತಿಳಿಸುತ್ತದೆ. ಹೀಗೆ ಇಲ್ಲಿಂದ ದೇವಾಲಯಗಳಿಗೆ ಮಹತ್ವವೂ ಪ್ರಸಿದ್ಧಿಯೂ ದೊರೆಯುತ್ತದೆ. ಶ್ರೀಮಂತರು,ಚಕ್ರವರ್ತಿಗಳು, ದಂಡನಾಯಕರು ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯಗಳನ್ನು ಕಟ್ಟಿಸುವುದು, ಅಂತಹ ದೇವಾಲಯಗಳಿಗೆ ಪೂಜಾರಿಗಳನ್ನು ನೇಮಕ ಮಾಡುವುದು, ದೇವಾಲಯಗಳ ಸಂದರ್ಶನಕ್ಕಾಗಿ ಹೋಗುವುದು, ಅಲ್ಲಿ ಪ್ರಾರ್ಥನೆ ಮಾಡುವುದು, ಯಾರು ಪೂಜೆ ಮಾಡಬಹುದು, ಮಾಡಬಾರದು ಎನ್ನುವುದು ಮೊದಲಾದವುಗಳೆಲ್ಲ ಈ ಕಾಲದಿಂದಲೇ ಆರಂಭವಾಗುತ್ತವೆ. ನಮ್ಮ ಕನಕದಾಸರು ಈ ಕಾಲದವರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹೀಗಾಗಿ ಮಧ್ಯಕಾಲೀನ ವಿಷಯಗಳಿಗೆ ಸಂಬಂಧಿಸಿದ ಈಗ ನಾವು ನಿರ್ದಿಷ್ಟವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, ಈ ವಿವರಗಳು ಇನ್ನಷ್ಟು ಸ್ಪಷ್ಟವಾಗಬಲ್ಲವು. ಹಾಗಾದುದರಿಂದ ನಿರ್ದಿಷ್ಟವಾಗಿ ದೇವಾಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನೇ ಲಕ್ಷಿಸಿ ಇನ್ನು ಮುಂದೆ ಈ ವಿಷಯವನ್ನು ಇನ್ನಷ್ಟು ವಿಸ್ತರಿಸೋಣ. ಮತ್ತಷ್ಟು ಓದು »

9
ಆಕ್ಟೋ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )

– ಡಾ. ಮಾಧವ ಪೆರಾಜೆ

tirumala‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ. ಮತ್ತಷ್ಟು ಓದು »

28
ಮೇ

ಭಾರತದಲ್ಲಿ ಶೂದ್ರರ ಶೋಷಣೆ ನಡೆದಿದೆಯೇ??

– ವಲವಿ ವಿಜಯಪುರ

c609ಸಾಮಾನ್ಯವಾಗಿ ಭಾರತದಲ್ಲಿ ಮನುಸ್ಮೃತಿಯು ಶೂದ್ರರಿಗೆ ವೇದಗಳನ್ನು ಕಲಿಯುವ ಅಧಿಕಾರ ನೀಡಲಿಲ್ಲ. ಅವರಿಗೆ ಸಂಸ್ಕೃತದ ಜ್ಞಾನವನ್ನು  ಕೊಡಲಿಲ್ಲ. ವಿದ್ಯೆಯನ್ನು ಶೂದ್ರರಿಂದ ಮುಚ್ಚಿಡಲಾಯಿತು.  ಮೇಲ್ವರ್ಗದವರ ಮನೆಯ ಸಗಣಿಯನ್ನು ಬಾಚುವದೇ ಅವರ ಕೆಲಸವಾಗಿತ್ತು. ಯಾವುದೇ ಉನ್ನತ ಹುದ್ದೆಗಳನ್ನು ನೀಡದೇ ಅವರನ್ನು ವಂಚಿಸಲಾಯಿತು. ಮತ್ತು ಈ ವಂಚನೆಯಲ್ಲಿ ಅಧಿಕವಾಗಿ ಬ್ರಾಹ್ಮಣರು ಭಾಗೀದಾರರು. ಸಮಾಜವೆಂಬ ಪಿರಮಿಡ್ ಆಕೃತಿಯಲ್ಲಿ ಅತ್ಯಂತ ಮೇಲೆ ಬ್ರಾಹ್ಮಣನಿದ್ದರೆ ಅತ್ಯಂತ ಕೆಳಸ್ತರದಲ್ಲಿ ಶೂದ್ರನಿದ್ದಾನೆ ಮತ್ತು ಅವನನ್ನು ವಿಶೇಷವಾಗಿ ಬ್ರಾಹ್ಮಣರು ಶೋಷಣೆ ಮಾಡಿದ್ದಾರೆ ಅನ್ನುವದು ಆಧುನಿಕ ಶಿಕ್ಷಣ ಪಡೆದವರ ವಾದವಾಗಿದೆ. ಮತ್ತಷ್ಟು ಓದು »

27
ಮೇ

ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ

– ಸಂದೀಪ್ ಶರ್ಮಾ .ಎಂ

18C9F35-356x340ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತುಗಳಲ್ಲೇ ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ ಅದು ಅವರ ಭ್ರಮಾಲೋಕದ ಪರಮಾವಧಿ ಎಂದರೆ ತಪ್ಪಾಗಲಾರದು. ಬುದ್ಧುಜೀವಿಗಳ ಮುಖದ ರಾಡಿಯನ್ನು ಇವರು ಒರೆಸಲು ಹರಸಾಹಸ ಪಡುತ್ತಿದ್ದಾರೆ ಹಾಗು ಅವರುಗಳ ಗೊಡ್ಡುತನದ ಧೋರಣೆಗಳನ್ನು ಎತ್ತಿ ಹಿಡಿಯಲು ನೋಡುತ್ತಿದ್ದಾರೆ. ಆದರೆ ವಾಚಕವೃಂದದವರನ್ನು ಬೆಪ್ಪು ಮಾಡಲಿಕ್ಕೆ ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಂತಿಲ್ಲ. ಮತ್ತೂರಿನಲ್ಲಿ ಸಂಸ್ಕೃತ ಭಾಷೆ ಮಾತನಾಡಿದರೆ ಇವರ ಗಂಟು ಏನು ಹೋಗುವುದೋ ಗೊತ್ತಿಲ್ಲ, ಇಲ್ಲಿನವರು ಮಾತನಾಡುವ ಭಾಷೆಗು ಹಾಗು ಅಲ್ಲಿ ನಡೆದ ಯಾಗಕ್ಕೂ ಯಾವ ಬಾದರಾಯಣ ಸಂಬಂಧ. ಸಂಸ್ಕೃತ ಮೃತ ಭಾಷೆ ಎಂದು ತಿಳಿದಿರುವ ಇವರು ಆ ಭಾಷೆಯಿಂದಲೇ ಮಿಕ್ಕೆಲ್ಲ ಭಾಷೆಗಳು ಉದ್ಭವಿಸಿದವು ಎಂಬುದನ್ನು ಇವರು ಮನಗಂಡಂತಿಲ್ಲ. ಸುಮಾರು ಅರವತ್ತು ಲಕ್ಷಕ್ಕೂ ಹೆಚ್ಚು ಜನ ಉಪಯೋಗಿಸುವ ಈ ಭಾಷೆಯು ಹೇಗೆ ಇವರ ಪ್ರಕಾರ ಮೃತವಾಯಿತೋ ಎಂಬುದನ್ನು ಇವರ ಅಧ್ಯಯನ ಹಾಗು ಚಿಂತನೆಯಿಂದ ತಿಳಿದುಕೊಳ್ಳಬೇಕಾಗಿದೆ. ಮತ್ತಷ್ಟು ಓದು »

24
ಮೇ

ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು

–  ರಾಕೇಶ್ ಶೆಟ್ಟಿ

ಬುದ್ಧಿಜೀವಿಗಳ ಮೂಢನಂಬಿಕೆಗಳುಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ. ಮತ್ತಷ್ಟು ಓದು »

11
ಏಪ್ರಿಲ್

ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ

– ವಿನಾಯಕ ಹಂಪಿಹೊಳಿ

rigvedaಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.

ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ || ಮತ್ತಷ್ಟು ಓದು »

29
ಡಿಸೆ

ಬಂಗುಡೆ ಫ್ರೈ ಮತ್ತು ಭಗವದ್ಗೀತೆ

– ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.

ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.

**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು »