ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬ್ರೇಕಿಂಗ್ ನ್ಯೂಸ್’

23
ಫೆಬ್ರ

ಮಾಧ್ಯಮಗಳೇ‌ ಸಾಕು ನಿಲ್ಲಿಸಿ‌ ನಿಮ್ಮ‌ ಬೂಟಾಟಿಕೆಯ..

– ವರುಣ್ ಕುಮಾರ್

vol-21-no-20ಕಾರ್ಯಾಂಗ,‌ ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ‌ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರುತ್ತದೆ. ಇಂತಹ ನಿಷ್ಕ್ರೀಯ ವ್ಯವಸ್ಥೆಗಳಿಗೆ ಚುರುಕು ಮುಟ್ಟಿಸಲು, ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಬ್ಬಿಸಲು ಜನತೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲು ಸುದ್ದಿ ಮಾದ್ಯಮಗಳ ಪಾತ್ರ ಬಹುಮುಖ್ಯವಾದುದು‌. ಅದಕ್ಕಾಗಿ ಮಾದ್ಯಮಕ್ಕೆ ೪ ನೇ ಆಧಾರಸ್ತಂಭವೆಂಬ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ.

ಈ ಸ್ಥಾನವನ್ನು ಮಾದ್ಯಮ ರಂಗದವರು ಕಾಪಾಡಿಕೊಂಡಿದ್ದಾರೆಯೇ?, ಇವರ ಕಾರ್ಯಶೈಲಿ, ನಿರ್ವಹಣೆ ಹಾಗೂ ಅವರ ನಡವಳಿಕೆಗಳು ಇದರ ಬಗ್ಗೆ ಸಣ್ಣ ವಿಶ್ಲೇಷಣೆಯನ್ನು ನಡೆಸೋಣ.

ಕೆಲ ದಶಕಗಳ ಹಿಂದೆ ಹೋದರೆ ಸುದ್ದಿ ವಾಹಿನಿಗಳ‌ ಆರ್ಭಟ ಇಷ್ಟೊಂದಿರಲಿಲ್ಲ. ಆಯಾ ದಿನಗಳಲ್ಲಿ ನಡೆದಂತಹ ಸುದ್ದಿಗಳನ್ನು‌ ಕೇವಲ ೨೦ ಅಥವಾ ೩೦ ನಿಮಿಷಗಳಲ್ಲಿ ಎಲ್ಲ ಪ್ರಮುಖ ವಾರ್ತೆಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ ಯಾವಾಗ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಭಾರತ ಸಾಧಿಸಿದಾಗ ಎಲ್ಲ ವಿಭಾಗಗಳಲ್ಲಿ ಮಹತ್ತರ ಬದಲಾವಣೆಗಳು ಕಾಣಲಾರಂಭಿಸಿದರು. ಒಂದೆರಡು ವಾಹಿನಿಗಳಿದ್ದಲ್ಲಿ ನೂರಾರು ವಾಹಿನಿಗಳು ಟಿ.ವಿ.ಪರದೆಯಲ್ಲಿ ಕಾಣತೊಡಗಿಸಿದವು. ಅದರಲ್ಲೂ ಮುಖ್ಯವಾಗಿ ೨೪*೭ ಘಂಟೆ ಸುದ್ದಿಗಳನ್ನು ಬಿತ್ತರಿಸುವ ವಾಹಿನಿಗಳೆಂದರೆ ಅದೊಂದು ಪ್ರತಿಷ್ಠೆಯ ವಿಷಯವೇ ಆಗಿತ್ತು. ಇಲ್ಲಿಂದ ಸುದ್ದಿಗಳನ್ನು ಕೊಡುವ ವ್ಯಾಖ್ಯೆಯೇ ಬದಲಾಗತೊಡಗಿತು, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್ ಈ ರೀತಿಯಾಗಿ ಪ್ರತಿ‌ ಕ್ಷಣದಲ್ಲೂ ಸುದ್ದಿಯನ್ನು ಬಿತ್ತರಿಸುವ ರೀತಿಯಲ್ಲಿ ವಾಹಿನಿಗಳು ಬಂದುಬಿಟ್ಟವು. ಆದರೆ ಯಾವಾಗ ತಮ್ಮ ಲಾಭಕ್ಕೋಸ್ಕರ, ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿಗಳು ಕೆಲಸ ಮಾಡತೊಡಗಿದಾಗ ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಅಲುಗಾಡುವ ಪರಿಸ್ಥಿತಿಗೆ ಬರತೊಡಗಿತು. ಮತ್ತಷ್ಟು ಓದು »

22
ಮೇ

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು …

– ಎಸ್.ಎನ್ ಭಾಸ್ಕರ್

ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು. ಎತ್ತರದ ಆಕರ್ಷಕ ಆಸನದ ಮೇಲೆ ಪ್ರತಿಷ್ಟಾಪಿಸಲ್ಪಟ್ಟಿರುವ ವ್ಯಕ್ತಿಯ ಬಾಯಲ್ಲಿ ಅನಿಯಮಿತವಾಗಿ ಬರುತ್ತಿರುವ ಹಿತೋಪದೇಷಗಳು.

ಅಲ್ಲೆಲ್ಲೋ ಒಂದು ಗುಹೆ, ಅದರಲ್ಲಿದೆ ಅಚ್ಚರಿಯ ಕಲ್ಲು, ಮುಟ್ಟಿದರೆ ನಿಮ್ಮ ಪಾಪವೆಲ್ಲಾ ಮಾಯ….ಮತ್ತಿನ್ನಲ್ಲೋ ಇದೆ ಒಂದು ಕೆರೆ ಅದರ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಕಷ್ಟ ಕಾರ್ಪಣ್ಯ ಅಷ್ಟ ದರಿದ್ರಗಳಿಗೂ ವಿರಾಮ.. ಹೀಗೂ ಉಂಟೇ..????

ಮುಂದೆ ಕಾದಿದೆ…..ಬರಲಿದೆ ಭೀಕರ ಪ್ರಳಯ, ಇದರಿಂದ ಜಗತ್ತು ಸರ್ವನಾಷ. ಅಲ್ಲೋಲ-ಕಲ್ಲೋಲ ಎಬ್ಬಿಸಲಿದೆ ಸುನಾಮಿ..ಇಡೀ ವಿಶ್ವವೇ ಮುಳಗಲಿದೆ ಸಮುದ್ರದಲ್ಲಿ..

ಕ್ಷಮಿಸಿ… ಇವೆಲ್ಲಾ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವಂತ ಕಾರ್ಯಕ್ರಮಗಳ ಒಂದು ಪಕ್ಷಿನೋಟ. ಇಂದು ಹುಟ್ಟಿಕೊಂಡಿರುವ ಟಿ.ವಿ ದೃಶ್ಯ ಮಾಧ್ಯಮಗಳ ಲೆಕ್ಕ ಬೆಳೆಯುತ್ತಲೇ ಇದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಈ ಮಾದ್ಯಮಗಳಿಗೆ ಯಾವುದೇ ಬೇಲಿಯೇ ಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಆ ಟಿವಿ, ಈ ಟಿವಿ. ಇತ್ಯಾದಿ..ಇತ್ಯಾದಿ..೨೪ ಘಂಟೆಗಳ ನಿರಂತರ ಸುದ್ದಿಪ್ರಸಾರಕ್ಕಾಗಿ ಈ ಚಾನೆಲ್‌ಗಳು ಮೀಸಲು. ಅದೆಂತಹ ಸುದ್ದಿಯೇ ಆಗಿರಬಹುದು ಅಥವಾ ಅಸಲು ಸುದ್ದಿಯೇ ಅಲ್ಲದಿರಬಹುದು, ಒಟ್ಟಿನಲ್ಲಿ ಹೇಳಲಿಕ್ಕೊಂದು ವಿಷಯ, ಬಿತ್ತರಿಸಲೊಂದು ಮಾಧ್ಯಮ, ನೋಡಲಿಕ್ಕೆಂದು ಪ್ರೇಕ್ಷಕರು…

ಮತ್ತಷ್ಟು ಓದು »