ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಗತ್ ಸಿಂಗ್’

11
ಮೇ

ಹಿಟ್ಲರನ ಗೊಬೆಲ್ಸ್ ಮತ್ತು ನೆಹರೂವಿನ ಗಂಜಿಗಿರಾಕಿಗಳು

 – ರಾಕೇಶ್ ಶೆಟ್ಟಿ

‘ಸುಳ್ಳನ್ನೇ ಪದೇ ಪದೇ ಜನರ ಕಿವಿಗೆ ಬೀಳುವಂತೆ ಬೊಬ್ಬೆ ಹೊಡೆಯುತ್ತಾ ಹೋದರೆ ಅದೇ ಸತ್ಯವಾಗುತ್ತ ಹೋಗುತ್ತದೆ’ ಹೀಗೊಂದು ಮಾತನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿ Public Enlightenment & Propaganda ಸಚಿವನಾಗಿದ್ದ ಗೊಬೆಲ್ಸ್ ಹೇಳಿದ್ದನೆಂಬ ಮಾತಿದೆ.ಈ ಮಾತನ್ನು ಗೊಬೆಲ್ಸ್ ಹೇಳಿದ್ದನೋ ಇಲ್ಲವೋ,ಆದರೆ ಈ ಮಾತು ಪ್ರಾಕ್ಟಿಕಲಿ ಸತ್ಯವಂತೂ ಹೌದು.ಬೇಕಿದ್ದರೆ ಗೊಬೆಲ್ಸ್ ಹೇಳಿಕೊಟ್ಟ ಈ ಸೂತ್ರವನ್ನು ಬಳಸುತ್ತಿರುವ ಭಾರತದ ಗಂಜಿಗಿರಾಕಿಗಳನ್ನು ಈ ಬಗ್ಗೆ ಕೇಳಿ ನೋಡಿ. ಉದಾಹರಣೆಗೆ, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಾವೇಶವೊಂದರಲ್ಲಿ ನರೇಂದ್ರ ಮೋದಿಯವರು ಮಾತನಾಡುತ್ತ ‘ ಲೂಟಿಕೋರ-ಕಳ್ಳರು ವಿದೇಶದ ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣವಿಟ್ಟಿದ್ದಾರೆಂದರೆ,ಅದನ್ನು ವಾಪಸ್ ತಂದರೆ ಭಾರತದ ಪ್ರತಿ ಬಡವನಿಗೆ ೧೫ ಲಕ್ಷದಷ್ಟು ಹಣವನ್ನು ಉಚಿತವಾಗಿ ಕೊಡುವಷ್ಟಿದೆ’ ಎಂದಿದ್ದರು(ಈ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ).ಇದೇ ಮಾತನ್ನು ಈಗ ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು ‘ಮೋದಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಕೌಂಟಿಗೆ ೧೫ ಲಕ್ಷ ಹಣ ಹಾಕ್ತಿನಿ ಅಂದಿದ್ರು.ಹಾಕಿಯೇ ಇಲ್ಲ’ ಎಂದು ಊರಿಡಿ ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡರು. ಈಗ ಈ ಸುಳ್ಳು ಯಾವ ಪರಿ ಹರಡಿದೆಯೆಂದರೆ,ಮೋದಿಯನ್ನು ವಿರೋಧಿಸಲು ಕಾರಣವೇ ಸಿಗದವರು ಎಲ್ರಿ ನಮ್ಮ ೧೫ ಲಕ್ಷ ಎಂದು ಕೇಳುವಷ್ಟು. ವಿಚಿತ್ರವೆಂದರೆ,ಇದು ಗಂಜಿಗಿರಾಕಿಗಳ ಅಪಪ್ರಚಾರದ ಕ್ಯಾಮ್ಪೇನು ಎಂದು ಹೇಳಬೇಕಾದವರೇ ತಡಬಡಾಯಿಸುವಂತಾಗಿದೆ.ಇದೇ ನೋಡಿ GGG Lying Formula (ಗಂಜಿ ಗಿರಾಕಿ ಗೊಬೆಲ್ಸ್ ಸುಳ್ಳಿನ ಸೂತ್ರ)ದ ತಾಕತ್ತು.

ಭಾರತದ ಗಂಜಿಗಿರಾಕಿಗಳ ಗೊಬೆಲ್ಸ್ ಕಾರ್ಯಾಚರಣೆಯ ಬಗ್ಗೆ ಮಾತನಾಡುವ ಮುನ್ನ, ಜರ್ಮನಿಯ ಗೊಬೆಲ್ಸ್ ಪರಿಚಯ ಮಾಡಿಕೊಳ್ಳಬೇಕು,ಆಗ ಅವರಿಬ್ಬರ ಸಾಮ್ಯತೆ ಅರ್ಥವಾದೀತು. ಜರ್ಮನಿಯಲ್ಲಿ National Socialist German Workers’ (Nazi) Party ಹಿಟ್ಲರನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಪೋಗ್ಯಾಂಡ ಸಚಿವನಾಗಿ ಬಂದವನು ಗೊಬೆಲ್ಸ್. ಹೈಡಲ್ ಬರ್ಗ್ ವಿವಿಯಿಂದ ಸಾಹಿತ್ಯದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದ ಚಾಣಾಕ್ಷ ಈತ. ಈತನಿಗೆ ಯಾವುದೇ ಸುಳ್ಳನ್ನು ಸತ್ಯವೆಂದು ಓದುಗರನ್ನು ಮರುಳು ಮಾಡುವ ಬರವಣಿಗೆ ಒಲಿದಿತ್ತು. ಇದರ ಜೊತೆಗೆ ಸಾಹಿತ್ಯ,ಸಿನಿಮಾ,ಕಲೆ ಇವನ ಆಸಕ್ತಿಕರ ಕ್ಷೇತ್ರಗಳು. ಇಷ್ಟೆಲ್ಲಾ ಆಸಕ್ತಿ ಮತ್ತು ಸಾಮರ್ಥ್ಯವಿದ್ದ  ವ್ಯಕ್ತಿ ದೇಶದ ಸಾಂಸ್ಕೃತಿಕ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಸಮರ್ಥ ವ್ಯಕ್ತಿಯಾಗಿ ಹಿಟ್ಲರನಿಗೆ ಅನ್ನಿಸಿದ್ದು ಸಹಜವೇ. ಅಧಿಕಾರಕ್ಕೆ ಬಂದ ಗೊಬೆಲ್ಸ್ ಕೂಡ ಹಿಟ್ಲರ್ ಸುತ್ತ ನಕಲಿ ಪ್ರಭಾವಳಿಯನ್ನು ಸೃಷ್ಟಿಸುವಲ್ಲಿ ಸಫಲನಾಗಿದ್ದ,  ಇವನಿಲ್ಲದಿದ್ದರೆ ಜರ್ಮನಿ ಮತ್ತೊಮ್ಮೆ ಗೌರವಯುತವಾಗಿ ತಲೆ ಎತ್ತಲಾರದು ಎಂದ, ಜನರು ನಂಬಿದರು.

ಮತ್ತಷ್ಟು ಓದು »

23
ಮಾರ್ಚ್

ಮೇರಾ ರಂಗ್ ದೇ ಬಸಂತಿ ಚೋಲಾ…

ಶಿವಾನಂದ ಶಿವಲಿಂಗಪ್ಪ ಸೈದಾಪೂರ (ಎಂ.ಎ.ವಿದ್ಯಾರ್ಥಿ)
ರಾಜ್ಯ ಕಾರ್ಯಕಾರಣಿ ಸದಸ್ಯರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

ಸುಮಾರು ನೂರಾರು ವರ್ಷಗಳ ಕಾಲ ಪರಾಧೀನತೆಯನ್ನು ಕಿತ್ತೊಗೆಯಲು ಲಕ್ಷಾಂತರ ಜನ ತಮ್ಮ ಬಿಸಿ ನೆತ್ತರವನ್ನು ನೀರಾಗಿ ಹರಿಸಿ ನಮಗಾಗಿ, ನಮ್ಮ ಉಳಿವಿಗಾಗಿ ಹೋರಾಡಿ ಜೀವವನ್ನೇ ತೆತ್ತು ಇಂದಿನ ಸುಭದ್ರತೆಗೆ ಕಾರಣರಾದರು. 1857ರ ಮಹಾ ಸಂಗ್ರಾಮದಿಂದ 1947 ರ ವರೆಗೆ ಅನೇಕಾನೇಕ ಕ್ರಾಂತಿಕಾರಿ ಮಹನೀಯರು ಕಾರಣೀಕರ್ತರಾಗಿದ್ದಾರೆ. ಅಂತಹವರಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಹೊಸ ಅಧ್ಯಾಯವನ್ನೇ ಬರೆದ ಮಹಾನ್ ಹೋರಾಟಗಾರರೆಂದರೆ ಅದು ಭಗತ್ ಸಿಂಗ್, ಸುಖದೇವ್, ರಾಜಗುರುರವರು. ಕ್ರಾಂತಿಯ ಇತಿಹಾಸದಲ್ಲಿ ಅವರ ಆತ್ಮ ಬಲಿದಾನವೇ ಅತ್ಯಂತ ಪ್ರಮುಖದೆಂದು ಹೇಳಬಹುದು. ದಾಸ್ಯ ಮುಕ್ತಿಗಾಗಿ, ತಮ್ಮ ಜೀವನದ ಅಂತಿಮ ಹೊತ್ತಿನಲ್ಲಿಯೂ ಕೂಡ ನಗು ನಗುತ ತಾಯಿ ಭಾರತಮಾತೆಯನ್ನು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತ ಉರುಳನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ್ದರು.

ಅಂತಹ ಮಹಾನ್ ಹೋರಾಟಗಾರರ ಬಲಿದಾನವಾಗಿ 87 ವರ್ಷ ಉರುಳಿದವು. ಅದರ ಸ್ಮರಣೆಯೇ ಈ ಲೇಖನ. ಮತ್ತಷ್ಟು ಓದು »

31
ಮಾರ್ಚ್

ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು

-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210

355-Vinyaka-Damodar-Savarkar1123-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಮತ್ತಷ್ಟು ಓದು »

23
ಮಾರ್ಚ್

ಸಾಯುವ ಕೊನೆ ಕ್ಷಣದಲ್ಲೂ ಆ ಮೂವರ ಬಾಯಲ್ಲಿ ಮೊಳಗಿದ ಮಂತ್ರ…. ಭಾರತ್ ಮಾತಾ ಕೀ ಜೈ!

– ನಿತ್ಯಾನಂದ ವಿವೇಕವಂಶಿ

ಭಗತ್ ಸಿಂಗ್,ರಾಜ್ ಗುರು,ಸುಖ ದೇವ್ಓದುವ ಮುನ್ನ..

ಈ ದೇಶಕ್ಕೆ ಸ್ವಾತಂತ್ರ್ಯವೆಂಬುದು ಸುಮ್ಮನೆ ಬರಲಿಲ್ಲ. ಸುಮಾರು ಆರೂವರೆ ಲಕ್ಷ ವೀರ ವೀರಾಂಗನೆಯರ ಪ್ರಾಣತ್ಯಾಗದ ಫಲವಾಗಿ ಈ ಸ್ವಾತಂತ್ರ್ಯ ದೊರಕಿದೆ. ಅವರು ತಮ್ಮ ನೆತ್ತರು ಹರಿಸಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟವೆಂಬ ಮಹಾ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿ ನೀಡಿದ ವೀರರ ತ್ಯಾಗ ಬಲಿದಾನಗಳು ಅನನ್ಯವಾದವು. ಹೋರಾಟದ ಈ ಇತಿಹಾಸದಲ್ಲಿ ಹಲವಾರು ರೋಚಕ ಘಟನೆಗಳು, ರೋಮಾಂಚನಕಾರಿ ಕಥೆಗಳು, ಅದ್ವಿತೀಯ ತ್ಯಾಗ ಬಲಿದಾನದ ಘಟನೆಗಳಿವೆ. ಅವುಗಳಲ್ಲಿ ಕೆಲವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದ್ದರೆ, ಇನ್ನು ಕೆಲವು ಅಜ್ಞಾತವಾಗಿ, ಹೊರ ಪ್ರಪಂಚಕ್ಕೆ ಪ್ರಕಟಗೊಳ್ಳದೇ, ಕಾಲಗರ್ಭದಲ್ಲಿ ಹೂತುಹೋಗಿ ಕಣ್ಮರೆಯಾಗಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಉಳಿದಿರುವ ರೋಚಕ ಘಟನೆಗಳಲ್ಲಿ ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ತ್ಯಾಗ ಬಲಿದಾನಗಳು ಚಿರಸ್ಮರಣೀಯವಾದುದಾಗಿದೆ. ತಮ್ಮ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಲು, ದಾಸ್ಯದ ಸಂಕೋಲೆಯನ್ನು ಕಿತ್ತೊಗೆಯಲು ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಮರವನ್ನೇ ಸಾರಿದ ಈ ಮೂವರು ಕ್ರಾಂತಿಕಾರಿಗಳಿಗೆ ಬ್ರಿಟೀಷ್ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. 23 ಮಾರ್ಚ್ 1931 ರಂದು ತಮ್ಮ 23-24 ನೇ ವಯಸ್ಸಿನಲ್ಲಿಯೇ ಈ ಮೂವರು ಕ್ರಾಂತಿಸೋದರರು ನಗುನಗುತ್ತಾ ಬಲಿಗಂಬವನ್ನೇರಿದರು. ದುರದೃಷ್ಟಕರ ಸಂಗತಿಯೆಂದರೆ ನಮಗ್ಯಾರಿಗೂ ಆ ದಿನದ ನೆನಪೇ ಇಲ್ಲ. ಪ್ರತೀ ವರ್ಷ ಮಾರ್ಚ್ 23 ರಂದು ವಾರ್ತಾ ಇಲಾಖೆಯಿಂದ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹಿರಾತು ಬಿಟ್ಟರೆ, ‘ಶಹೀದ್ ಡೇ’ಯನ್ನು ಆಚರಿಸುವ ಕೆಲವು ಸಂಘಟನೆಗಳನ್ನು ಬಿಟ್ಟರೆ ಇಡೀ ದೇಶದಲ್ಲಿ ಎಲ್ಲಿಯೂ ಈ ಅಪೂರ್ವ ಬಲಿದಾನವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಕಾರಣವೇನೆಂದರೆ ನಮಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರೂ ಕೂಡಾ ನೆನಪಿಲ್ಲ.
ಮತ್ತಷ್ಟು ಓದು »

28
ಡಿಸೆ

ಭಗತ್ ಸಿಂಗ್ – ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ

– ಕ.ವೆಂ.ನಾಗರಾಜ್

ScreenShot       ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ. ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧi ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ.
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮ ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ!
28
ಸೆಪ್ಟೆಂ

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

 -ಸಂತೋಶ್ ತಮ್ಮಯ್ಯ

ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.

ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.

ಮತ್ತಷ್ಟು ಓದು »