ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಾಜಪ’

3
ಜನ

ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?

– ಗೋಪಾಲಕೃಷ್ಣ
ಚಿಕ್ಕಮಗಳೂರು

4CE0D6B8-390C-4E23-889C-7727E2BCC073ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್‍ಮೇಲ್’ ಮಾಡಬಹುದಿತ್ತು! ಅಂದು ಎನ್‍ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ. Read more »

Advertisements
21
ಡಿಸೆ

ಮೋದಿ ಮತ್ತೊಮ್ಮೆ ಎನ್ನುವುದಕ್ಕಿಂತ, ಮೋದಿ ಮತ್ತೆ ಮತ್ತೆ ಎನ್ನಿ!

– ಸಾಗರ ಮುಧೋಳ

4CE0D6B8-390C-4E23-889C-7727E2BCC073ಕಳೆದ ಒಂದು ದಶಕದ ಹಿಂದೆ ಯಾರಾದರೂ ಒಬ್ಬ ವಿದ್ಯಾರ್ಥಿ ಅಥವಾ ಯುವಕ ತಾನೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಅಂದುಕೊಂಡಿದ್ದರೆ, ಅದು ಅವನ ದೃಷ್ಟಿಯಲ್ಲಿ ವಿಜ್ಞಾನಿ, ಅಧ್ಯಾಪಕ, ಅಧಿಕಾರಿ, ವೈದ್ಯ ಹೀಗೆ ಹಲವು ಬಗೆಯಲ್ಲಿ ಯೋಚಿಸುತ್ತಿದ್ದ. ಆದರೆ, ತಪ್ಪಿಯೂ ನಾನೊಬ್ಬ ರಾಜಕಾರಣಿಯಾಗಬೇಕೆಂದು ಚಿಂತಿಸುತ್ತಿರಲಿಲ್ಲ. ರಾಜಕಾರಣವೆಂದರೆ ಅದೊಂದು ಸಮಾಜದ ಬಹು ಜನರ ಆಶೋತ್ತರಗಳಿಂದ ಅಸ್ಪೃಶ್ಯವಾಗಿಯೇ ಉಳಿದ ಕ್ಷೇತ್ರ. ಅಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲ. ರಾಜಕಾರಣವಿರುವುದೇ ದುಡ್ಡು ಮಾಡುವುದಕ್ಕೆ, ಜನರನ್ನು ಮೋಸ ಮಾಡುವುದಕ್ಕೆ ಎನ್ನುವುದು ನಾಡಿನ ಹಲವರಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದ ವಾಣಿ. ಯಾರೊಬ್ಬರೂ ಊಹಿಸಿರಲಿಲ್ಲ! 2014 ರ ಸಂದರ್ಭದಿಂದ ಈ ದೇಶದಲ್ಲಿ ಬಾಲಿವುಡ್, ಕ್ರಿಕೆಟ್ ಗಿಂತ ಅತಿ ಹೆಚ್ಚು ಚರ್ಚೆ ಮತ್ತು ಮೆಚ್ಚುಗೆ ಪಡೆದ ವಿಷಯ ರಾಷ್ಟ್ರದ ರಾಜಕೀಯವೇ ಆಯಿತು. ಮೋದಿ ಎಂದರೆ ಅವರೊಬ್ಬ Political leader ಅಲ್ಲ, ಬದಲಾಗಿ ದೇಶದ ಬ್ರಾಂಡ್! ಮೋದಿ ಟೀ,ಮೋದಿ ಕುರ್ತಾ,ಮೋದಿ ಜಾಕೆಟ್ ಎಲ್ಲವೂ ಬ್ರಾಂಡ್. ಮೋದಿಗೆ ಸಂಬಂಧಿಸಿರುವುದೆಲ್ಲವು ಬ್ರಾಂಡ್. ಹಿಂದೆ ಅಪ್ಪ -ಅಮ್ಮ ಮನೆಯಲ್ಲಿ ರಾತ್ರಿ ನ್ಯೂಸ್ ನೋಡುತ್ತಿರಬೇಕಾದರೆ, ತಮ್ಮನ್ನು ಇಂದಿನ ಕ್ರಿಕೆಟ್ ಮ್ಯಾಚನ್ನು ನೋಡುವುದರಿಂದ ತಪ್ಪಿಸಿರುವವರ ಕಡೆ ಮಕ್ಕಳು ಶಪಿಸುತ್ತಾ ಮೂಗು ಮುರಿಯುತ್ತಿದ್ದರು. ಆದರೆ ಮೋದಿ ಎಂಟ್ರಿ ಕೊಟ್ಟ ಮೇಲೆ ಸಕುಟುಂಬ ಸಮೇತರಾಗಿ ಮನೆಯ ಟಿ.ವಿ. ಪರದೆಯ ಮೇಲೆ ಮೋದಿ ಗಾಥೆಯನ್ನು ನೋಡಲು ಶುರುಹಚ್ಚಿದರು. 2014 ರಲ್ಲಿ ಮೋದಿ ಗೆಲ್ಲುವುದು ಅನಿವಾರ್ಯ ಮಾತ್ರವಲ್ಲ, ಅಂತಿಮವಾದ ಪೂರ್ವ ನಿಯೋಜಿತ ತೀರ್ಮಾನವಾಗಿತ್ತು. Breaking news ಗಾಗಿ ಹಪಹಪಿಸುತ್ತಿದ್ದ ನ್ಯೂಸ್ ಚಾನೆಲ್ ಗಳಿಗೆ ಮೋದಿಯಿಂದ ಪ್ರತಿದಿನ Breaking news ಸಿಗುವ ಹಾಗಾಯಿತು. ಕೊನೆಗೆ ಮೋದಿ ಸುನಾಮಿಯ ಎದುರು ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋದವು. ಅತ್ತ ನಾಯಕತ್ವವುಯಿಲ್ಲದೆ, ಇತ್ತ ಧ್ಯೇಯೋದ್ದೇಶಗಳು ಇಲ್ಲದ ಪ್ರತಿಪಕ್ಷಗಳು ಮೋದಿಯ ವಿಜಯಕ್ಕೆ ತಲೆ ಬಾಗಲೇ ಬೇಕಾಯಿತು. ಮೋದಿ ಈ ದೇಶದ ಪ್ರಧಾನಮಂತ್ರಿ ಎಂದು ಜನ ಹೇಳುತ್ತಿರುವಾಗ, ” ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, 125 ಕೋಟಿ ಭಾರತೀಯರ ಪ್ರಧಾನ ಸೇವಕ” ಎಂದ ಮೋದಿಯ ಕೃತಜ್ಞತಾ ಭಾವಕ್ಕೆ ಇಡೀ ದೇಶ ಶರಣೆಂದಿತು. Read more »

31
ಮೇ

ಅಮಿತ್ ಷಾ ಲಕ್ಷದ್ವೀಪ ಪ್ರವಾಸ ವಿಸ್ತಾರದ ಮತ್ತೊಂದು ಮಜಲು…

ಸಂತೋಷ್ ಬಿ.ಎಲ್
ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ
ಭಾಜಪ

ವಿಸ್ತಾರ-ವಿಕಾಸ ಬಿಜೆಪಿಗೆ ಒಂದೇ ನಾಣ್ಯದ ಎರಡು ಮುಖಗಳು. ಬಹುಮತದಲ್ಲಿ ನಿಲ್ಲದೇ ಸರ್ವವ್ಯಾಪಿಯಾಗಬೇಕು.. ಸರ್ವಸ್ಪರ್ಶಿಯಾಗಬೇಕು ಎಂಬುದು ಬಿಜೆಪಿಯ ಗುರಿ. ವಿಚಾರ-ವಿಕಾಸ-ಸಂಘಟನೆ ನಮ್ಮ ಬೆಳವಣಿಗೆಯ ಮೂರು ಆಯಾಮಗಳು. ವಿಕಾಸ ಪುರುಷ ನರೇಂದ್ರ ಮೋದಿಯವರ ನೇತೃತ್ವ ವಿಸ್ತಾರ ಪುರುಷ ಅಮಿತ್ ಷಾರವರ ಸಾರಥ್ಯ ಇಂದು ಬಿಜೆಪಿಯನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತಿದೆ. ಪ್ರತೀ ಮನೆ-ಮನವನ್ನು ಮುಟ್ಟುವ ಯೋಜನೆಯೊಡನೆ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಎಂಬ ಗುರಿಯೊಡನೆ ಬಿಜೆಪಿಯ ಯಾತ್ರೆ ಭರದಿಂದ ಸಾಗಿದೆ. ಪಂ.ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ ವರ್ಷ ಈ ಯಾತ್ರೆಗೆ ಇನ್ನಷ್ಟು ಹುರುಪು ತುಂಬಿದೆ. 3 ಸಾವಿರಕ್ಕೂ ಮಿಕ್ಕಿ 1 ವರ್ಷದ ‘ವಿಸ್ತಾರಕ’ರು ಹಾಗೂ 4 ಲಕ್ಷಕ್ಕೂ ಹೆಚ್ಚು 15 ದಿನ ಸಮಯ ನೀಡುವ ‘ವಿಸ್ತಾರಕ’ರನ್ನು ಹೊರಡಿಸುವುದು ನಮ್ಮ ಗುರಿ. ಆ ಗುರಿಗೆ ಚೈತನ್ಯ ತುಂಬಲು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾರವರು ಸ್ವತಃ ತಾವು 15 ದಿನ ವಿಸ್ತಾರಕರಾಗಿ ‘ವಿಸ್ತಾರ ಯಾತ್ರೆ’ ಘೋಷಣೆ ಮಾಡಿದರು. ಪಶ್ಚಿಮ ಬಂಗಾಲ, ಓರಿಸ್ಸಾ, ತೆಲಂಗಾಣ, ಲಕ್ಷದ್ವೀಪ ಹಾಗೂ ಗುಜರಾತ್‌ನಲ್ಲಿ 3 ದಿನ ಕೆಲಸ ಮಾಡುವ ಸಂಕಲ್ಪ ಘೋಷಿಸಿದರು. ಈ ಘೋಷಣೆಯೇ ಪಕ್ಷದ ಒಳಗೆ ವಿದ್ಯುತ್ ಸಂಚಾರ ಮೂಡಿಸಿತು. Read more »