ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಾರತೀಯ ಆಹಾರ ವೈಶಿಷ್ಟ್ಯ’

14
ಡಿಸೆ

ಭಗವದ್ಗೀತೆ ಹೇಳುವ ಆಹಾರ ಆದರ್ಶ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

krsna_eatingಆಹಾರ ಎಂದರೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಯಾವುದೇ ಪದಾರ್ಥ “ಪೋಷಕಾಂಶ (ಪ್ರೊಟೀನು), ಶರ್ಕರಪಿಷ್ಟ (ಕಾರ್ಬೊಹೈಡ್ರೇಟು) ಮತ್ತು ಕೊಬ್ಬು (ಫ್ಯಾಟ್)ಗಳನ್ನು ಅಗತ್ಯವಾಗಿ ಒಳಗೊಂಡ, ದೇಹದ ಪೋಷಣೆ, ಬೆಳವಣಿಗೆ, ಸುಭದ್ರತೆಗೆ ಕಾರಣವಾಗುವ ವಸ್ತು” ಎಂದು ವಿಶ್ವಕೋಶ ಹೇಳುತ್ತದೆ. ಆಹಾರ ವಸ್ತು ಮೂಲತಃ ಸಸ್ಯ ಅಥವಾ ಪ್ರಾಣಿ ಮೂಲದ್ದಿರಬಹುದು. ಅದರಲ್ಲಿ ಜೀವಿಗಳ ಬೆಳವಣಿಗೆಗೆ ಅಗತ್ಯವಾದ ಮೇಲ್ಕಂಡ ಧಾತುಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳು ಇದ್ದಾಗ ಮಾತ್ರ ಅಂಥ ವಸ್ತುವನ್ನು ಆಹಾರ ಎನ್ನಲಾಗುತ್ತದೆ. ಆಹಾರ ಸೇವಿಸಿದ ದೇಹದ ವ್ಯವಸ್ಥೆ ಆಹಾರದಲ್ಲಿನ ಮೂಲವಸ್ತುಗಳನ್ನು ಬೇರ್ಪಡಿಸಿ, ತನ್ನ ಕೋಶಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಧಾತುಗಳನ್ನು ಪ್ರವಹಿಸಿ ದೇಹದಲ್ಲಿ ಶಕ್ತಿ ಸಂಚಯನವಾಗುವಂತೆ ಮಾಡುತ್ತದೆ, ದೇಹದ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಆಹಾರದ ಬಗ್ಗೆ ಆಧುನಿಕ ವಿಜ್ಞಾನ ಹೇಳುವ ಮಾತು. ಮತ್ತಷ್ಟು ಓದು »

10
ಆಗಸ್ಟ್

ನಂಬಿಕೆ, ನಿಷೇಧ, ಆಚರಣೆಗಳಲ್ಲಿ ಆಹಾರ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Non-Veg-Restaurantsಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಕುರಿತು ಬಹಳಷ್ಟು ಚರ್ಚೆ ರಾಷ್ಟ್ರಮಟ್ಟದಲ್ಲಿ ಆಗಾಗ ನಡೆಯುತ್ತದೆ. ದನ ಕದಿಯುವ ಹಾಗೂ ಅದನ್ನು ರಕ್ಷಿಸುವ ಗುಂಪುಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ “ಸೋ ಕಾಲ್ಡ್ ಗೋರಕ್ಷಕರ” ವಿರುದ್ಧ ಗುಡುಗುತ್ತಿದ್ದಂತೆಯೇ ಮತ್ತೆ ಇಂಥ ಚರ್ಚೆ ಶುರುವಾಗಿದೆ. ಈ ಚರ್ಚೆಗಳಲ್ಲಿ ಮೇಲ್ನೋಟದಲ್ಲಿ ಬಹುಸಂಖ್ಯಾತರ ಆಹಾರ ಕ್ರಮವನ್ನು ಅಲ್ಪ ಸಂಖ್ಯಾತರ ಮೇಲೆ ಹೇರುವ ಹುನ್ನಾರ; ದಲಿತರು ಹಾಗೂ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಪುರೋಹಿತಶಾಹಿ ವ್ಯವಸ್ಥೆ ಆಳುತ್ತಿರುವ ಸಂಕೇತ ಎಂದೂ, ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಸಾವಿರಾರು ಜಾತಿ-ಸಮುದಾಯಗಳಿಗೆ ಆಹಾರ ಸಂಬಂಧಿ ವಿಧಿ-ನಿಷೇಧಗಳೇ ಇಲ್ಲ ಎಂಬಂತೆಯೂ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವಾಗಲೂ ಬ್ರಾಹ್ಮಣರು ಮಾತ್ರ ಅನ್ಯರನ್ನು ಸಹಪಂಕ್ತಿ ಭೋಜನದಲ್ಲಿ ಕೂರಿಸಿಕೊಳ್ಳುವುದಿಲ್ಲ, ಉಳಿದವರಲ್ಲಿ ಇಂಥ ಸಂಪ್ರದಾಯವಿಲ್ಲ ಎಂಬಂತೆಯೂ ಬಿಂಬಿಸುತ್ತ, ಇವೆಲ್ಲ ಜಾತಿಪದ್ಧತಿಯನ್ನು ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರ ಎಂದೂ ಸರಳವಾಗಿ ವಾದಿಸಲಾಗುತ್ತದೆ. ಆದರೆ ಇವೆಲ್ಲ ಹಾಗೆ ವಾದಿಸುವವರ ವಿವಿಧ ಸಮುದಾಯಗಳ ಆಹಾರ ಸಂಬಂಧಿ ಅಜ್ಞಾನವನ್ನು ತೋರಿಸುತ್ತದೆಯಲ್ಲದೇ ಇನ್ನೇನನ್ನೂ ಅಲ್ಲ. ಇಂಥ ತಿಳಿವಳಿಕೆಯನ್ನು ತಲೆಕೆಳಗಾಗಿಸುವ ಕ್ಷೇತ್ರಾಧಾರಿತ ಅಧ್ಯಯನದ ಫಲಿತ ಹಾಗೂ ವಾಸ್ತವ ಇಲ್ಲಿದೆ. ಇದು ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಯೊಂದನ್ನು ಆಧರಿಸಿದೆ. ಮತ್ತಷ್ಟು ಓದು »

12
ಜನ

ಭಾರತೀಯ ಆಹಾರ ಶೈಲಿಗಳ ಕುರಿತು ಒಂದು ವೈಜ್ಞಾನಿಕ ಚಿತ್ರಣ

– ವಿನಾಯಕ ಹಂಪಿಹೊಳಿ

ಭಾರತೀಯ ಆಹಾರ ವೈಶಿಷ್ಟ್ಯಆಹಾರದ ಶೈಲಿಗಳಲ್ಲಿ ಎಷ್ಟು ಪ್ರಕಾರಗಳು ಎಂಬ ಪ್ರಶ್ನೆಗೆ ಎಲ್ಲರೂ ಉತ್ತರಿಸುವದು ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಬಗ್ಗೆ. ಪಾಶ್ಚಿಮಾತ್ಯ ಲೋಕದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಕುರಿತು ಅನೇಕ ಚರ್ಚೆಗಳು ವಾದ ವಿವಾದಗಳಾಗಿವೆ. ನಮ್ಮ ದೇಶದಲ್ಲಿಯೂ ಸಂತರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುವ ಕೃತಿಗಳು ಕಾಣುತ್ತವೆ. ಆದರೂ ಸಸ್ಯಾಹಾರ v/s ಮಾಂಸಾಹಾರದಲ್ಲಿ ಯಾವದು ಸರಿ ಎಂಬಂಥ ಚರ್ಚೆಗಳು ಹಿಂದೆಂದೂ ಆದಂತೆ ಕಾಣುವದಿಲ್ಲವಾದರೂ ಈಗ ಅಂಥ ಚರ್ಚೆಗಳು ಚೆನ್ನಾಗಿಯೇ ನಡೆಯುತ್ತಿವೆ. ಇಂದು ನಮ್ಮ ದೇಶದಲ್ಲಿರುವ ಹೋಟೆಲ್ಲುಗಳ ರಚನೆಗಳು ಬಹುತೇಕ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಮೇಲೆಯೇ ಆಗಿರುತ್ತವೆ.

ನಮ್ಮ ದೇಶದ ಬುದ್ಧಿಜೀವಿಗಳು ಚರಿತ್ರೆಯಲ್ಲಿ ಆಗಿ ಹೋದ ಶ್ರೇಷ್ಠ ಸಂತರ ಜಾತಿ-ವಿರೋಧೀ ವಾಕ್ಯಗಳನ್ನು ಸಾಮಾಜಿಕ ಕ್ರಾಂತಿಗೆ ಸಮೀಕರಿಸಿ ಸಮಾನತೆ ಸ್ವಾತಂತ್ರ್ಯದ ಹಕ್ಕುಗಳ ಕಲ್ಪನೆ ಅವರಲ್ಲಿತ್ತು ಎಂದು ಹೇಳುತ್ತಾರಾದರೂ, ಅದೇ ಸಂತರು ವಿಧಿಸುವ ಆಹಾರ ಪದ್ಧತಿಯ ಕುರಿತು ದಿವ್ಯ ಮೌನವನ್ನು ತಾಳುತ್ತಾರೆ. ಕಾರಣ ಅದೇ ತರ್ಕದ ಅಡಿಯಲ್ಲಿ ಆ ವಿಧಿಯು ಹೇರಿಕೆಯಾಗಿ ಬಿಡುತ್ತದೆ ಇಲ್ಲವೇ ಸ್ವಾತಂತ್ರ್ಯದ ಹರಣವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಅದು ಬುದ್ಧಿಜೀವಿಗಳಿಗೆ ಇಷ್ಟವಿಲ್ಲ. ಪಾಶ್ಚಾತ್ಯರ ವಸಾಹತು ಶಿಕ್ಷಣ ಪಡೆದು ಹಿಂದೂ ಎಂಬ ರಿಲಿಜನ್ನನ್ನು ಒಪ್ಪಿಕೊಂಡ ಸಸ್ಯಾಹಾರಿಗೂ ಹಿಂದೂ ರಿಲಿಜನ್ನಿನ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಮಾಂಸಾಹಾರದ ಉಲ್ಲೇಖಗಳು ವಿಚಿತ್ರವಾಗಿ ಕಾಣುತ್ತವೆ.

ಹಾಗಿದ್ದರೆ ಭಾರತೀಯ ಆಹಾರ ಶೈಲಿ ಏನು? ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಎರಡು ರೀತಿಯಲ್ಲಿ ವಿಂಗಡಿಸಿ ಹೊರಟರೆ ನಮ್ಮ ಸಂಪ್ರದಾಯಗಳ ಆಹಾರದ ಶೈಲಿಗಳನ್ನು ವಿವರಿಸಬಲ್ಲದೇ? ಸಮರ್ಪಕವಾಗಿ ವಿವರಿಸುವ ಚಿತ್ರಣವನ್ನೇ ತಾನೇ ವೈಜ್ಞಾನಿಕವೆಂದು ಕರೆಯಲು ಸಾಧ್ಯ. ಆದ್ದರಿಂದ ಮೊದಲು ಈಗಿರುವ ಸಸ್ಯಾಹಾರ ಮತ್ತು ಮಾಂಸಾಹಾರವೆಂಬ ವಿಭಾಗಗಳ ಚಿತ್ರಣವನ್ನು ಮೊದಲು ಅವಲೋಕಿಸೋಣ. ಅದು ನಮ್ಮ ಸಂಪ್ರದಾಯಗಳ ಆಹಾರ ಪದ್ಧತಿಯನ್ನು ವಿವರಿಸಲು ಸಾಧ್ಯವೇ ಎಂಬುದನ್ನು ಅರಿಯೋಣ. ಇಲ್ಲವಾದಲ್ಲಿ ನಮ್ಮ ಸಂಪ್ರದಾಯಗಳಲ್ಲಿರುವ ವಿವಿಧ ಆಹಾರದ ಶೈಲಿಗಳನ್ನು ವಿವರಿಸುವ ಚಿತ್ರಣವನ್ನು ರಚಿಸಲು ಸಾಧ್ಯವೇ ಎನ್ನುವದನ್ನು ಚರ್ಚಿಸೋಣ.

ಮತ್ತಷ್ಟು ಓದು »