ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಾರತೀಯ ಸೇನೆ’

12
ಸೆಪ್ಟೆಂ

ಲಡಾಖ್ ಹಾಗು ಭಾರತೀಯ ಸೇನೆ

– ಪಲ್ಲವಿ ಭಟ್
ಬೆಂಗಳೂರು

ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್‌’ನಲ್ಲಿ ಭಾರತ, ಚೀನಾ ಯೋಧರ ಸಂಘರ್ಷ: ಭಾರತದೊಳಗೆ ನುಗ್ಗಲು ಚೀನಾ ಸೈನಿಕರ ಯತ್ನ” ಎಂಬುದಾಗಿತ್ತು ಶೀರ್ಷಿಕೆ. ಲಡಾಖ್ ಪ್ರವಾಸ ಮುಗಿಸಿ ಇನ್ನೂ ೧೦ ದಿನಗಳಾಗಿಲ್ಲ. ಅಷ್ಟರಲ್ಲೇ ಇಂತಹ ವಾರ್ತೆಯನ್ನು ಓದಬೇಕಾಗಿ ಬಂತು. ಮತ್ತಷ್ಟು ಓದು »

7
ಜುಲೈ

ದೇಶಕ್ಕಾಗಿ ನಿಮ್ಮ ಪ್ರಾಣಾರ್ಪಣ – ಇದೋ ನಿಮಗೆ ನಮ್ಮ ಅಶ್ರು ತರ್ಪಣ

– ಕ್ಯಾ. ನವೀನ್ ನಾಗಪ್ಪ

ರೈಫಲ್ ಮ್ಯಾನ್ ಮೋಹಿ೦ದರ್ ಸಿ೦ಗ್, ರೈಫಲ್ ಮ್ಯಾನ್ ರಾಕೇಶ್ ಕುಮಾರ್, ಲ್ಯಾನ್ಸ್ ನಾಯಕ್ ಹರೀಶ್ ಪಾಲ್, ಮೇಜರ್ ಅಜಯ್ ಸಿ೦ಗ್ ಜಸ್ರೋಟಿಯ, ಹವಲ್ದಾರ್ ಜಗನ್ನಾಥ್, ಲ್ಯಾನ್ಸ್ ನಾಯಕ್ ರಣಬೀರ್ ಸಿ೦ಗ್, ರೈಫಲ್ ಮ್ಯಾನ್ ಪವನ್ ಸಿ೦ಗ್, ರೈಫಲ್ ಮ್ಯಾನ್ ಅಶೋಕ್ ಕುಮಾರ್, ಲ್ಯಾನ್ಸ್ ನಾಯಕ್ ವೀರ್ ಸಿ೦ಗ್, ರೈಫಲ್ ಮ್ಯಾನ್ ಶ್ಯಾಮ್ ಸಿ೦ಗ್, ಹವಲ್ದಾರ್ ಕ್ರಿಷನ್ ಸಿ೦ಗ್, ರೈಫಲ್ ಮ್ಯಾನ್ ಮನೋಹರ್ ಲಾಲ್, ಲ್ಯಾನ್ಸ್ ನಾಯಕ್ ಕ್ರಿಷ್ಣನ್ ಮೋಹನ್, ರೈಫಲ್ ಮ್ಯಾನ್ ದೀಪ್ ಚಂದ್, ರೈಫಲ್ ಮ್ಯಾನ್ ಪ್ರವೀಣ್ ಕುಮಾರ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮ್ಯಾನ್ ಅಬ್ದುಲ್ ನಜ಼ಾರ್.

ಒಂದು ರಾಷ್ಟ್ರ, ಒಂದು ಕಾನೂನು, ಒಂದು ತೆರಿಗೆ ಎಂದು ಕನವರಿಸುತ್ತಿರುವ ದೇಶಕ್ಕೆ ಮೇಲೆ ಕಾಣಿಸುವ ೧೭ ಹೆಸರುಗಳನ್ನು ನೆನಪಿಸಿಕೊಳ್ಳುವ ಧಾವಂತ ಎಲ್ಲಿದೆ? ಸೈನಿಕರನ್ನು ಹೊರತುಪಡಿಸಿ. ಮತ್ತಷ್ಟು ಓದು »

15
ಜನ

ಶಿಲೆಯೊಂದು ಶಿಲ್ಪವಾಗಿ, ಪರಕಾಯ ಪ್ರವೇಶವಾಗಿ, ಸಮರಭೂಮಿಗೆ ಸಿದ್ಧವಾಗುವ ರಾಷ್ಟ್ರಶಕ್ತಿ

– ಸಂತೋಷ್ ತಮ್ಮಯ್ಯ

military_static-image೧೯೪೯ರ ಜನವರಿ ೧೫ ರಂದು ಫಿಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ‘ಭಾರತೀಯ ಸೈನ್ಯ ದಿನಾಚರಣೆ ಎಂದು ಆಚರಿಸಲಾಗುತ್ತವೆ. ‘ಭಾರತದ ಗೌರವವನ್ನು ರಕ್ಷಿಸಿದ, ವಿದೇಶಗಳಿಂದಲೂ ಹೊಗಳಿಸಿಕೊಂಡ, ಬೃಹತ್ ಪಡೆಗಳನ್ನ್ನು ಹೊಂದಿರುವ ‘ಭಾರತೀಯ ಸೇನೆ ವಿಶ್ವದ ಹಲವು ದೇಶಗಳ ಮಿಲಿಟರಿಗೆ ಮಾರ್ಗದರ್ಶನ ನೀಡಿದ ಹಿರಿಮೆಯಿದೆ. ವಿಶ್ವದ ಹಲವು ಸವಾಲುಗಳನ್ನು ‘ಭಾರತೀಯ ಸೇನೆ ಎದುರಿಸಿದೆ. ವಿಶ್ವ ಶಾಂತಿಗೆ ಭಾರತೀಯ ಸೇನೆಯ ಕೊಡುಗೆಯನ್ನು ವಿಶ್ವಸಂಸ್ಥೆ ಇಂದಿಗೂ ಕೊಂಡಾಡುತ್ತಿದೆ. ಅವೆಲ್ಲಕ್ಕೂ ಕಾರಣ ಸೈನ್ಯದ ಅಸಲಿ ಶಕ್ತಿಯಾದ ‘ಭಾರತೀಯ ಯೋಧ‘ರು. ಅವರಿಗೆ ನಮ್ಮ ನಮನ. ಮತ್ತಷ್ಟು ಓದು »

16
ಏಪ್ರಿಲ್

ಬ್ಯಾಟಲ್ ಆಫ್ ಅಸಲ್ ಉತ್ತರ್

– ರಂಜನ್ ಕೇಶವ

a13bb3246cdeb67b1c52ef54fd147bb6ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್, ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ. ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿ ಮುಖಾಂತರ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದರೂ ಸೇತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೂಹವನ್ನು ಪುನರ್ ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬಂದು ಸೇರಿದರು. ಮತ್ತಷ್ಟು ಓದು »