ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಾರತ ಚೀನಾ ಯುದ್ಧ’

12
ಸೆಪ್ಟೆಂ

ಲಡಾಖ್ ಹಾಗು ಭಾರತೀಯ ಸೇನೆ

– ಪಲ್ಲವಿ ಭಟ್
ಬೆಂಗಳೂರು

ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್‌’ನಲ್ಲಿ ಭಾರತ, ಚೀನಾ ಯೋಧರ ಸಂಘರ್ಷ: ಭಾರತದೊಳಗೆ ನುಗ್ಗಲು ಚೀನಾ ಸೈನಿಕರ ಯತ್ನ” ಎಂಬುದಾಗಿತ್ತು ಶೀರ್ಷಿಕೆ. ಲಡಾಖ್ ಪ್ರವಾಸ ಮುಗಿಸಿ ಇನ್ನೂ ೧೦ ದಿನಗಳಾಗಿಲ್ಲ. ಅಷ್ಟರಲ್ಲೇ ಇಂತಹ ವಾರ್ತೆಯನ್ನು ಓದಬೇಕಾಗಿ ಬಂತು. ಮತ್ತಷ್ಟು ಓದು »

18
ಆಗಸ್ಟ್

ಭಾರತದ ಮುಂದಿರುವ ಡೊಕ್ಲಮ್ ಸವಾಲು…

– ಶ್ರೇಯಾಂಕ ಎಸ್ ರಾನಡೆ

ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ. ಮತ್ತಷ್ಟು ಓದು »

17
ಆಗಸ್ಟ್

ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?

– ಶ್ರೇಯಾಂಕ ಎಸ್ ರಾನಡೆ

ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ-ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಭಾರತೀಯರ ಆಸೆಯೂ ಕೂಡ. ಮತ್ತಷ್ಟು ಓದು »

22
ಆಗಸ್ಟ್

ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!

– ವಿಕಾಸ್ ಪುತ್ತೂರು

Mouna -China‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ  ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು  ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ,  ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ  ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ  ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ,  ಚಿಂಗಿಯರ ಕುತಂತ್ರಗಳನ್ನಂತೂ  ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು  ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ  ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ  ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ,  ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.

ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ  ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ  ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು  ಬಿಟ್ಟರೆ, ಉಳಿದ  8 ದೇಶಗಳೊಡನೆಯೂ  ಭಾರತದ  ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ  ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.

ಮತ್ತಷ್ಟು ಓದು »

5
ಏಪ್ರಿಲ್

ಗುಂಡು ಬಿಡದ ಬಂದೂಕುಗಳ ನಡುವೆ!

– ಸಂತೋಷ್ ಆಚಾರ್ಯ

೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು »