ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ
– ಪ್ರೇಮಶೇಖರ
ಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ! ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.
ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ. ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!
ಪರಿಹಾರಭಾಗ್ಯದ ಆಸೆಗೆ ಪ್ರಾಣ ಕಳೆದುಕೊಂಡ ಶಾಸಕ
– ಪ್ರವೀಣ್ ಕುಮಾರ್ ಮಾವಿನಕಾಡು
ಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುವುದು ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ!ಶೂನ್ಯ ವೇಳೆಯಲ್ಲಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮದ್ಯದಲ್ಲಿಯೇ ಅಸುನೀಗಿದ್ದಾನೆ.
ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು ಇತರ ಶಾಸಕರು ರಾಜ್ಯ ಹೆದ್ದಾರಿಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.ರೈತ ಸಂಘಟನೆಗಳ ರಾಜ್ಯ ಮುಖಂಡರು ಬಂದು ಪರಿಹಾರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಶಾಸಕರು,ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಒಯ್ಯಲೂ ಅವಕಾಶ ನೀಡದೇ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು.
ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?
– ಡಾ.ಅಶೋಕ್. ಕೆ. ಆರ್
‘ಯಥಾಸ್ಥಿತಿಗೋ ಬದಲಾವಣೆಗೋ ಸ್ಥಿರತೆಗೋ ಅಭಿವೃದ್ಧಿಗೋ ಸ್ಥಳೀಯ ಅನಿವಾರ್ಯತೆಗೋ ಮತ್ತೊಂದಕ್ಕೋ ಮಗದೊಂದಕ್ಕೋ ಒಟ್ಟಿನಲ್ಲಿ ಹೋಗಿ ವೋಟ್ ಮಾಡಿ!’
ಮೋದಿ ಜಪದ ಭಾಜಪ ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ.
ಕಾಂಗ್ರೆಸ್ಸಿಗರು ಮಾಡುವ ಭ್ರಷ್ಟಾಚಾರದಿಂದ ರೋಸಿ ಹೋಗಿ ಬೇರೊಂದು ಪಕ್ಷಕ್ಕೆ ಮತ ಹಾಕುವ ಜನರ ತೀರ್ಮಾನ ಬಹಳಷ್ಟು ಸಲ ಬೆಂಕಿಯಿಂದ ಬಾಣಲೆಗೆ ಹಾಕಿಸಿಕೊಂಡಂತೆ ಆಗುತ್ತಿದೆ. ಮತ್ತಷ್ಟು ಓದು
ಸುದ್ಧಿ ಮಾಡುವವರಲ್ಲಿ ಶುದ್ಧಿ ಇಲ್ಲವಾದರೆ. . .
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ಇಂದು ವಾರ್ತಾ ವಾಹಿನಿಗಳು ಯಥಾತ್‍ಶಿರ್ಘ ಸುದ್ಧಿಗಳನ್ನು ಜಗತ್ತಿನ ಮೂಲೆ ಮೂಲೆಗೂ ಅತಿ ವೇಗದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ಇದರಿಂದ ಉಪಯೋಗವಿದೆ ಎನ್ನುವುದು ನಿಜವೇ ಆದರೂ ಸುದ್ಧಿ ಹೇಳುವ ಮನಸ್ಸುಗಳ ಹಿಂದೆ ಶುದ್ಧಿ ಇಲ್ಲದಿರುವುದು ಗೋಚರವಾಗುತ್ತಿದೆ. ಹಾಗಾಗಿ ಅವುಗಳ ಹಿಂದಿರುವ ಉದ್ದೇಶ ಪ್ರಶ್ನಾರ್ಹವಾಗುತ್ತಿದೆ. ಒಂದು ಕಾಲವಿತ್ತು ಒಬ್ಬ ವ್ಯಕ್ತಿಗೆ ಅಪಮಾನವೆನಿಸುವ ಸುದ್ಧಿಯೊಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಬಂದರೆ ಅದರಿಂದ ವ್ಯಕ್ತಿಗೆ ಅದು ನಿಜವಿರಲಿ, ಸುಳ್ಳಿರಲಿ ಒಂದೋ ಅವನಿಗದು ಆಘಾತ ತರುವಂತಿತ್ತು ಅಥವಾ ಆತ ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಳಪಡಿಸುವ ಸಾಧನವಾಗಿರುತ್ತಿತ್ತು. ಅದು ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನದಲ್ಲಿರುವವನಾಗಿದ್ದರೆ ಕೂಡಲೇ ರಾಜೀನಾಮೆ ನೀಡಿ ಅದರಿಂದ ಬಿಡುಗಡೆ ಹೊಂದುವ ಸಾಕ್ಷಿಪ್ರಜ್ಞೆ ಆತನನ್ನು ಎಚ್ಚರಿಸುತ್ತಿತ್ತು. ಆದರೆ ಕಾಲ ಬದಲಾಗಿದೆ. ಅಕ್ಷರ ಮಾಧ್ಯಮಗಳಿಗಿಂತ ದೃಶ್ಯ ಮಾಧ್ಯಮಗಳು ಅದರಲ್ಲೂ ಸುದ್ಧಿ ವಾಹಿನಿಗಳು ಇನ್ನಿಲ್ಲದ ವೇಗದಲ್ಲಿ ಕಾರ್ಯಪ್ರವೃತ್ತವಾಗಿವೆ. ಕ್ಷಣಾರ್ಧದಲ್ಲಿ ಅದು ಅಸಲಿಯೋ ನಕಲಿಯೋ ಅಂತೂ ಸುದ್ಧಿಗಳು ಬಿತ್ತರವಾಗುತ್ತವೆ. ಆದರೆ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಮಾತ್ರ ಅದು ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಏಕೆಂದರೆ ಸುದ್ಧಿ ಮಾಡುವವನ ಮತ್ತು ಸುದ್ಧಿಯಾಗುವವನಲ್ಲಿ ಚಿತ್ತಶುದ್ಧಿಯಿಲ್ಲದಿರುವುದು! ಸುದ್ಧಿ ಮಾಡುವ ದಾವಂತದಲ್ಲಿ ಅದರಿಂದಾಗುವ ಪರಿಣಾಮವನ್ನು ಸುದ್ಧಿ ಮಾಡುವವ ಯೋಚಿಸುತ್ತಿಲ್ಲವೋ ಅಥವಾ ಅದು ತನಗೆ ಸಂಬಂದಿಸಿದ್ದಲ್ಲ ಎನ್ನುವ ತಾತ್ಸಾರ ಮನೋಭಾವವೋ ಗೊತ್ತಿಲ್ಲ ಅಂತೂ ಅನಾಹುತ ಮಾಡುವುದರಲ್ಲೇ ಆನಂದ ಕಾಣುತ್ತಿವೆ ನಮ್ಮ ಅನೇಕ ದೃಶ್ಯ ಮಾಧ್ಯಮಗಳು.
ಕೆಲ ವರ್ಷಗಳ ಹಿಂದೆ ಕನ್ನಡದ ಸುದ್ಧಿ ಮಾಧ್ಯಮವೊಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳು ತೀವ್ರ ಅಸ್ವಸ್ಥವೆಂದು ‘ಬ್ರೇಕಿಂಕ್ ನ್ಯೂಸ್’ ಹಾಕಿತು. ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರು ಆತಂಕದಿಂದ ಆಸ್ಪತ್ರೆ ಸುತ್ತ ಜಮಾವಣೆಗೊಂಡರು. ಜನರಿಗೆ ಅಲ್ಲಿನ ಆಸ್ಪತ್ರೆ ಮತ್ತು ಅದರ ಸಿಬ್ಬಂದಿ ದಾಳಿಯ ವಸ್ತುವಾದರು. ಆದರೆ ಅದರ ನೈಜ ವಿಚಾರವೆಂದರೆ ಅಸ್ವಸ್ಥಗೊಂಡ ಒಂದೆರಡು ಮಕ್ಕಳು ಸೇವಿಸಿದ ಆಹಾರ Food Poison ಅಗಿದ್ದು . ಆ ಸುದ್ಧಿ ಮಾಧ್ಯಮ ಮಾಡಿದ ಅವಾಂತರದ ಬಗ್ಗೆ ಅಂದಿನ ಗೃಹ ಸಚಿವರಾದ ವಿ.ಎಸ್. ಆಚಾರ್ಯರು ಗಮನ ಸೆಳೆದರೂ ಅದು ತನ್ನ ದುಡುಕುತನದ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ. ಹೀಗೆ ಸುದ್ಧಿ ಮಾಧ್ಯಮಗಳು ಸುದ್ಧಿ ಮಾಡುವ ಭರದಲ್ಲಿ ಅವುಗಳು ಮಾಡುವ ಅವಾಂತರಗಳೇ ದೊಡ್ಡ ಸುದ್ಧಿಯಾದರೂ ಅವುಗಳಿಗೇನು ಪಶ್ಚತ್ತಾಪವಾಗುವುದಿಲ್ಲ. ಜನರಿಗೆ ಉಚಿತ ಬುದ್ಧಿ ಹೇಳುವುದಷ್ಟೇ ಅವುಗಳ ಕೆಲಸ
ಲೋಕಾಯುಕ್ತ ಆಸ್ತಿ ವಿವರ ನೀಡುವುದೇ ಯುಕ್ತ!
– ತುರುವೇಕೆರೆ ಪ್ರಸಾದ್
ಈಚೆಗೆ ಪತ್ರಿಕೆಗಳಲ್ಲಿ ಹಲವು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ ಎಂಬ ಸಂಗತಿ ವರದಿಯಾಗಿತ್ತು. ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳು ಕಡ್ಡಾಯವಾಗಿ ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಲ್ಲಿಸಿರುವ ಆಸ್ತಿ ವಿವರವೂ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಾರ್ವಜನಿಕರು ತಿಳಿಯಲಾಗುತ್ತಿಲ್ಲ. ಏಕೆಂದರೆ ಲೋಕಾಯುಕ್ತ ಜನಪ್ರತಿನಿಧಿಗಳ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಲು ನಿರಾಕರಿಸುತ್ತದೆ.
ಕಳೆದ ಮಾರ್ಚ್ 18ರಂದು ನಾನು ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಕೆಲವು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡುವಂತೆ ಕೋರಿದ್ದೆ. ಆದರೆ ಲೋಕಾಯುಕ್ತ ಆ ಮಾಹಿತಿ ನೀಡಲು ನಿರಾಕರಿಸಿತು. ಅದಕ್ಕೆ ಲೋಕಾಯುಕ್ತ ಕೊಟ್ಟ ಕಾರಣ ಮಾಹಿತಿ ಹಕ್ಕು ಕಾಯಿದೆಯಡಿ ನಾಗರಿಕರಿಗೆ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಸಂಗತಿಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತದೆ. ನೀವು ಕೆಲವು ವ್ಯಕ್ತಿಗಳ ಖಾಸಗಿ ವಿವರಗಳ ಬಗ್ಗೆ ಮಾಹಿತಿ ಕೇಳಿದ್ದೀರಿ. ಇದು ಸಾರ್ವಜನಿಕ ಪ್ರಾಧಿಕಾರ ಅಥವಾ ಆಢಳಿತಕ್ಕೆ ಸಂಬಂಧಿಸಿದ ಸಾರ್ವಜನಿಕ ವಿಷಯವಲ್ಲ ಎಂಬುದು.(The intention of the legislation is to provide right to information of a citizen pertaining to public affairs of the public authority, but you have sought the information of an individual which is purely personal one and is not with respect to public affairs)
ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’
– ರಾಕೇಶ್ ಶೆಟ್ಟಿ
ಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.
೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!
ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,
“ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”
ಅವರು ಉಳಿಸಿದ್ದು ಒಂದೆರಡು ಕೋಟಿ ಮಾತ್ರವಲ್ಲ…
– ಗೋಪಾಲ್ ಕೃಷ್ಣ
ಓಡುವುದರಲ್ಲಿ ಹುಸೇನ್ ಬೋಲ್ಟ್ ತನ್ನ ದಾಖಲೆಯನ್ನು ತಾನೆ ಸರಿಗಟ್ಟುತ್ತಾನೆ. ಭ್ರಷ್ಟಾಚಾರದಲ್ಲಿ ನಮ್ಮ ನೇತಾರರು, ಅಧಿಕಾರಿಗಳು ಬೋಲ್ಟ್ ಗೆ ಅನುರೂಪ. ಆದರೆ ಭ್ರಷ್ಟಾಚಾರ ಪತ್ತೆ ಹಚ್ಚುವುದರಲ್ಲಿ! ಹೌದು, ಇಂತಹದ್ದೊಂದು ದಾಖಲೆಯೂ ಸೃಷ್ಟಿಯಾದಂತಿದೆ. ಅದು ನಮ್ಮ ಮಹಾಲೇಖಪಾಲರಿಂದ. ಎರಡನೆ ತಲೆಮಾರಿನ ತರಂಗಗುಚ್ಛ ಹಂಚಿಕೆಯಲ್ಲಾದದ್ದು 1.76 ಲಕ್ಷ ಕೋಟಿ ಅವ್ಯವಹಾರ. ಇದೇ ಐತಿಹಾಸಿಕ ದಾಖಲೆ ಎನ್ನುತ್ತಿದ್ದರು. ಅದನ್ನೂ ಮೀರಿಸಿದ್ದು 1.86 ಲಕ್ಷ ಕೋಟಿಯ ‘ಕೋಲ್’ಗೇಟ್ ಹಗರಣ. ಎರಡನ್ನೂ ಹೊರಚೆಲ್ಲಿದವರು ಮಹಾಲೇಖಪಾಲರೇ. ಅಂದ ಮೇಲೆ ಅವರದೇ ಹೊಸ ದಾಖಲೆ ಸೃಷ್ಟಿಯಾಗಿದೆ.
ದೆಹಲಿಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿನ ಹಗರಣ, ಎರಡನೆ ತಲೆಮಾರಿನ ತರಂಗಗುಚ್ಛ ಹಗರಣ ಮತ್ತು ಇದೀಗ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಲೋಪಗಳು ಕೇಂದ್ರ ಸರ್ಕಾರವನ್ನು ಬೆತ್ತಲುಗೊಳಿಸಿವೆ. ಭ್ರಷ್ಟಾಚಾರ ವಿರೋಧಿ ಹೋರಾಟವೆನ್ನುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಈ ಒಂದು ಎಳೆಯನ್ನು ಹಿಡಿದುಕೊಂಡು ಖ್ಯಾತಿ, ಪ್ರಖ್ಯಾತಿ, ಕುಖ್ಯಾತಿ ಗಳಿಸುವವರಿಗೇನೂ ಲೆಕ್ಕವಿಲ್ಲ. ಅಂತಹವರುಗಳ ಮಧ್ಯೆಯೇ ಬೆರಳಣಿಕೆಯಷ್ಟು ಜನರು ಮಾತ್ರ ಪ್ರಾಮಾಣಿಕತೆ, ದಿಟ್ಟತನವನ್ನು ತಮ್ಮ ಕಾರ್ಯದಲ್ಲಿ ತೋರಿಸುತ್ತಾರೆ. ಈ ಸಾಲಿನಲ್ಲಿ ಅಗ್ರಗಣ್ಯರೆನ್ನುವಂತೆ ಕಾಣುವವರು ವಿನೋದ್‍ರಾಯ್.
ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…
– ಡಾ.ಅಶೋಕ್ ಕೆ.ಆರ್
ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

ಗುಂಡು ಬಿಡದ ಬಂದೂಕುಗಳ ನಡುವೆ!
– ಸಂತೋಷ್ ಆಚಾರ್ಯ
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು