ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮಠ’

12
ಫೆಬ್ರ

ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ – ಶ್ರೀ ಶಿವಕುಮಾರ ಸ್ವಾಮೀಜಿ.

– ಡಾ.ಸುದರ್ಶನ ಗುರುರಾಜರಾವ್

9e1bce87-ff5c-42f8-9dee-335621550861ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ ಈಶಸೇವೆ ಎಂದೆನ್ನುತ್ತಾ, ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?

ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.

ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ. Read more »

19
ಏಪ್ರಿಲ್

‘ಅಪರೇಷನ್ ಪೀಠತ್ಯಾಗ’ದ ಸೂತ್ರದಾರರು ಯಾರು?

– ಮಂಜುನಾಥ ಹೆಗಡೆ

FB_IMG_1460892892983ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, “ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಷಡ್ಯಂತ್ರ” ಎಂದು ಷರಾ ಬರೆದಿದ್ದಲ್ಲದೇ, CID ಮತ್ತು FSLಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ಯಾರು, ಯಾಕಾಗಿ ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಹಗೆ ಸಾಧಿಸಲು ಹೊರಟಿದ್ದಾರೆ ? ಯಾರು ಮಠವನ್ನು ಇನ್ನಿಲ್ಲವಾಗಿಸುವ “ಷಡ್ಯಂತ್ರ” ಮಾಡುತ್ತಿದ್ದಾರೆ? ಆಮೂಲಾಗ್ರವಾಗಿ ಎಲ್ಲವನ್ನೂ ಪರಿಶೀಲಿಸಬೇಕಾಗಿದೆ!

ಸುಮಾರು 1200 ವರ್ಷಗಳ ಹಿಂದೆ ಆದಿಶಂಕರಾಚಾರ್ಯರು ಗೋಕರ್ಣದ ಸಮೀಪದ ಅಶೋಕೆಯಲ್ಲಿನ ಸೌಮ್ಯ ಪ್ರಕೃತಿಯ ಮಡಿಲಲ್ಲಿ ಧರ್ಮಪಾಲನೆಗಾಗಿ ಮಠವೊಂದನ್ನು ಸ್ಥಾಪಿಸಿ ತಮ್ಮ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು ತಮ್ಮಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾನಂದರನ್ನು ಪೀಠಾಧಿಪತಿಯನ್ನಾಗಿ ಮಾಡಿ ಗೋಕರ್ಣ ದೇವಾಲಯದ ಆಡಳಿತವೂ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಕೊಡುತ್ತಾರೆ. ಇದು ರಾಜಗುರುಪೀಠವಾಗಿದ್ದು ಸಮಾಜದ ಅಂತರಂಗ ಮತ್ತು ಬಹಿರಂಗ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲಿಂದ ಇಲ್ಲಿನವರೆಗೂ ಶ್ರೀಮಠದ ಮಾರ್ಗದರ್ಶನದಲ್ಲಿ ಧರ್ಮಪಾಲನೆ ನಡೆಯುತ್ತಾ ಬಂದಿದೆ. ಶಂಕರರಿಂದ ಆರಂಭಿಸಿ 35 ತಲೆಮಾರುಗಳು ಕಳೆದಿವೆ. ಪ್ರಸ್ತುತ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು 36ನೇ ಪೀಠಾಧೀಶರಾಗಿರುತ್ತಾರೆ. ಶ್ರೀಗಳ ಪ್ರೇರಣೆಯಂತೆ ಬಿಂದು-ಸಿಂಧು, ಮುಷ್ಟಿಭಿಕ್ಷೆ, ವಿದ್ಯಾನಿಧಿ, ಕಾಮದುಘಾ, ಗುರುಕುಲ, ಭಾರತೀ ವಿದ್ಯಾಲಯಗಳು, ಗ್ರಾಮರಾಜ್ಯ, ವಿದ್ಯಾನಿಧಿ, ಜೀವನದಾನ ಮೊದಲಾದ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭಗೊಂಡವು. ಅಷ್ಟಾಗಿ ಮಠದ ಸಂಪರ್ಕ ಇಲ್ಲದವರೂ ಮಠಕ್ಕೆ ಬರಲಾರಂಭಿಸಿದರು! ಮಠದ ಪ್ರಸಿದ್ಧಿಯೂ ಜಾಸ್ತಿಯಾಗುತ್ತಾ ಬಂತು! ಬರೀ ಜಪ-ತಪ-ಅನುಷ್ಠಾನಗಳೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ! ಆದರೆ ಇದು ರಾಜಗುರು ಪೀಠ. ಇಲ್ಲಿ ಕಾವಿಯೂ ಇದೆ, ಕಿರೀಟ-ಶ್ವೇತಛತ್ರಗಳೂ ಇವೆ! ಸಮಾಜದಲ್ಲಿ ನಡೆಯುವ ಅಧರ್ಮ ಕಾರ್ಯಗಳ ನಿಗ್ರಹವೂ ಪೀಠದ ಹೊಣೆಯಾಗಿರುತ್ತದೆ! Read more »