ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮತಾಂತರ’

15
ಮೇ

ನನ್ನ ಮೇಲೂ ನಡೆದಿತ್ತು ಆಪರೇಷನ್ ಶಿಲುಬೆ!

– ಪ್ರವೀಣ್ ಕುಮಾರ್ ಮಾವಿನಕಾಡು

ಬೆಂಗಳೂರಿಗೆ ಕಾಲಿಟ್ಟು ಕೆಲವೇ ಸಮಯವಾಗಿತ್ತು. ಮಾರಾಟ ಪ್ರತಿನಿಧಿಯಾಗಿ ಮನೆ ಮನೆಮನೆಗಳ ಮೆಟ್ಟಿಲು ಹತ್ತಿಳಿಯುತ್ತಿದ್ದ ಸಮಯದಲ್ಲೇ ಪರಿಚಯವಾದವರು ರಾಜು ಮೆನನ್ ಎಂಬ ಕೇರಳ ಮೂಲದ ವ್ಯಕ್ತಿ. ಪರಿಚಯ ಸ್ನೇಹವಾಗಿ ಸ್ನೇಹ ವ್ಯವಹಾರಕ್ಕೆ ತಿರುಗಿದಾಗ ಪ್ರಾರಂಭವಾಗಿದ್ದೇ ಇಮೇಜ್ ಮೇಕರ್ಸ್ ಎನ್ನುವ ಕಲರ್ ವಿಸಿಟಿಂಗ್ ಕಾರ್ಡ್ ಮುದ್ರಿಸುವ ಸಣ್ಣದೊಂದು ವ್ಯವಹಾರ. ಕೇವಲ ಐದು ಸಾವಿರ ಮುಂಗಡದೊಂದಿಗೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಪ್ರಾರಂಭಿಸಿದ ಆ ನಮ್ಮ ವ್ಯವಹಾರ ನಾವಂದುಕೊಂಡಷ್ಟಲ್ಲದಿದ್ದರೂ ಒಂದು ಮಟ್ಟದ ಯಶಸ್ಸು ಕಾಣತೊಡಗಿತು. ಆದರೆ ಆ ವೇಳೆಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೊಂದಿದ್ದ ರಾಜು ಮೆನನ್ ಮಾಡಿಕೊಂಡ ಸಾಲ ವಿಪರೀತವಾಗಿ ವಿಸಿಟಿಂಗ್ ಕಾರ್ಡ್ಸ್ ಮುದ್ರಿಸಲು ಗಿರಾಕಿಗಳಿಂದ ನಾವು ಸಂಗ್ರಹಿಸಿದ್ದ ಮುಂಗಡ ಹಣವೂ ಸೇರಿದಂತೆ ಇದ್ದ ಬದ್ದ ಹಣವನ್ನೆಲ್ಲಾ ಎತ್ತಿಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದ. ಮತ್ತಷ್ಟು ಓದು »

18
ನವೆಂ

ಬ್ರಹ್ಮಚರ್ಯವೇ ಅಸಹಜವೆಂದ ದಾರ್ಶನಿಕ, ಸನ್ಯಾಸಿನಿಯನ್ನು ವಂಚಕಿ ಎಂದ….!!

– ಗುರುರಾಜ ಕೋಡ್ಕಣಿ. ಯಲ್ಲಾಪುರ

collage-2016-09-212“ನಾನು ಯಾರನ್ನೂ ಸಹ ಆದರ್ಶವ್ಯಕ್ತಿಯಾಗಿ ಸ್ವೀಕರಿಸಲಾರೆ. ನನ್ನನ್ನೂ ಸಹ ಯಾರೂ ಆದರ್ಶವಾಗಿ ಸ್ವೀಕರಿಸಬಾರದು. ಆದರ್ಶ ವ್ಯಕ್ತಿತ್ವಗಳಲ್ಲಿ ಮೇಲು ಕೀಳು ಎಂಬ ಭೇದವಿರಬಾರದು. ಮೊದಲು ಜನಿಸಿದ್ದ ಆದರ್ಶ ವ್ಯಕ್ತಿ, ನಂತರ ಜನಿಸಿದ ಮಹಾನ್ ವ್ಯಕ್ತಿಗಿಂತ ಶ್ರೇಷ್ಟವೆನ್ನುವುದು ಅರ್ಥಹೀನ. ವ್ಯಕ್ತಿತ್ವಗಳಲ್ಲಿನ ಮಹಾನತೆ ಸಮಾನಾಂತರ ರೇಖೆಯಂಥದ್ದು. ಮಹಾತ್ಮಾ ಗಾಂಧಿ, ಮದರ್ ತೆರೆಸಾರಂಥಹ ವ್ಯಕ್ತಿತ್ವಗಳ ಮೇಲೆ ನನಗೆ ತೀರ ಕಡಿಮೆ ಗೌರವವಿದೆ ಎಂಬುದು ಅನೇಕರ ಅಂಬೋಣ. ಅಂಥಹ ಅಭಿಪ್ರಾಯಗಳು ಸಂಪೂರ್ಣ ತಪ್ಪು. ಅಸಲಿಗೆ ನನಗೆ ಇಂಥವರ ಮೇಲೆ ಗೌರವವೇ ಇಲ್ಲ. ಅಂದ ಮೇಲೆ ಹೆಚ್ಚು ಗೌರವ, ಕಡಿಮೆ ಆದರ ಎನ್ನುವ ಪ್ರಶ್ನೆಯೇ ನಿರರ್ಥಕ. ಇವರೆಲ್ಲರೂ ಆದರ್ಶವಾದಿ ಅಪರಾಧಿಗಳು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಕಾನೂನು ಮರಣದಂಡನೆ ವಿಧಿಸುವ ದುಷ್ಕರ್ಮಿಗಳ ಅಪರಾಧಕ್ಕಿಂತಲೂ ಇಂಥಹ ಆದರ್ಶವಾದಿ ಅಪರಾಧಿಗಳ ಅಪರಾಧ ಘೋರವೆನ್ನುವುದು ನನ್ನ ವಾದ. ಒಂದರ್ಥದಲ್ಲಿ ನಿಜವಾದ ಅಪರಾಧಿಗಳೆಂದರೆ ಇಂಥವರೇ. ಮದರ್ ತೆರೆಸಾರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವದ ಹತ್ತಾರು ರಾಷ್ಟ್ರಗಳು ಆಕೆಯ ಸಾಧನೆಯನ್ನು ಮೆಚ್ಚಿ ಪ್ರಶಸ್ತಿಗಳ ಸುರಿಮಳೆಗೈದವು. ಇಂದಿಗೂ ವಿಶ್ವವಿದ್ಯಾಲಯಗಳು ಆಕೆಗೆ ಒಂದರ ಹಿಂದೊಂದರಂತೆ ಗೌರವ ಡಾಕ್ಟರೇಟ್ ನೀಡುತ್ತಲೇ ಇವೆ. ಇಷ್ಟಾಗಿಯೂ ಆಕೆಯ ಸಾಧನೆಯೇನು ಎಂಬುದು ನನಗರ್ಥವಾಗದ ವಿಷಯ. ಕೈಗೆ ಸಿಕ್ಕ ಅನಾಥರನ್ನೆಲ್ಲ ಎಳೆದುಕೊಂಡು ಹೋಗಿ ಅವರೆಲ್ಲರನ್ನು ಕ್ಯಾಥೋಲಿಕ್ಕರನ್ನಾಗಿ ಪರಿವರ್ತಿಸಿದ್ದೇ ಆಕೆಯ ಸಾಧನೆ. ಮತ್ತಷ್ಟು ಓದು »

17
ಆಗಸ್ಟ್

ಎನ್‍ಜಿಓ: ಪರದೆ ಹಿಂದಿನ ಕತೆ

– ರೋಹಿತ್ ಚಕ್ರತೀರ್ಥ

harvesting_souls_of_indiaನರೇಂದ್ರ ಮೋದಿಯ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನೆಂದರೆ ಅದುವರೆಗೆ ಭಾರತದಲ್ಲಿ ಬೇರುಬಿಟ್ಟು ಹೆಮ್ಮರಗಳೂ ಹೆಮ್ಮಾರಿಗಳೂ ಆಗಿ ವಿಜೃಂಭಿಸುತ್ತಿದ್ದ ಎನ್‍ಜಿಓಗಳಿಂದ ಅವುಗಳ ಹಣಕಾಸು ವ್ಯವಹಾರಗಳ ಲೆಕ್ಕ ಕೇಳಿದ್ದು ಮತ್ತು ಹಾಗೆ ಲೆಕ್ಕ ಕೊಡದೆ ಅಂಗಡಿ ತೆರೆದಿರುವ ಎಲ್ಲ ಎನ್‍ಜಿಓಗಳಿಗೂ ಬಾಗಿಲು ಹಾಕಿಸಿ ಬೀಗ ಜಡಿಯುತ್ತೇನೆಂದು ಖಡಕ್ ಸೂಚನೆ ಇತ್ತಿದ್ದು. ಯಾವ್ಯಾವುದೋ ಬೇನಾಮಿ ಹೆಸರು ಮತ್ತು ಖಾತೆಗಳಿಂದ ಧನಸಹಾಯ ಪಡೆಯುತ್ತ ಆರಾಮಾಗಿದ್ದ ಎನ್‍ಜಿಓಗಳಿಗೆ ಕೇಂದ್ರ ಸರಕಾರ ಹೀಗೆ ಚಾಟಿ ಬೀಸತೊಡಗಿದ್ದೇ ಕಣ್ಣುಕತ್ತಲೆ ಬಂದಂತಾಯಿತು. ಕೇಂದ್ರದ ಗೃಹಖಾತೆ 2015ರ ಎಪ್ರೀಲ್‍ನಲ್ಲಿ ಗ್ರೀನ್‍ಪೀಸ್ ಎಂಬ ಅಂತಾರಾಷ್ಟ್ರೀಯ ಎನ್‍ಜಿಓದ ಮಾನ್ಯತೆ ರದ್ದುಮಾಡಿದ್ದೇ ತಡ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬುಡಕ್ಕೂ ಕೊಡಲಿಯೇಟು ಬೀಳುವುದು ಖಚಿತವೆಂದು ತಿಳಿದ ಉಳಿದ ಎನ್‍ಜಿಓಗಳು ಚಿರೋಬರೋ ಅಳತೊಡಗಿದವು. ಬಿಲಕ್ಕೆ ಹೊಗೆ ಹಾಕಿದಾಗ ದಂಶಕಗಳು ದಿಕ್ಕಾಪಾಲಾಗಿ ಹೊರಗೋಡಿಬರುವುದು ಸಾಮಾನ್ಯವೇ ತಾನೇ? ಗ್ರೀನ್‍ಪೀಸ್ ಸಂಸ್ಥೆಗೆ ಬರೆ ಎಳೆದೊಡನೆ ಫೋರ್ಡ್ ಫೌಂಡೇಶನ್, ಆಮ್ನೆಸ್ಟಿ ಇಂಟರ್‍ನ್ಯಾಷನಲ್, ವಿಶ್ವಸಂಸ್ಥೆ ಎಲ್ಲವೂ ಕೋರಸ್‍ನಲ್ಲಿ ಕೂಗು ಹಾಕಿದವು. ಗ್ರೀನ್‍ಪೀಸ್ ಮತ್ತು ಉಳಿದ ದೇಶದ್ರೋಹಿಗಳ ನೆಟ್‍ವರ್ಕ್ ಹೇಗಿದೆ ಎಂಬುದನ್ನು ಯಾವ ತನಿಖೆಯೂ ಇಲ್ಲದೆ ಸರಕಾರಕ್ಕೆ ನೋಡಲು ಅವಕಾಶವಾಯಿತು. ನಂಬಿದರೆ ನಂಬಿ, ಆ ಕಾಲಕ್ಕೆ ಭಾರತದಲ್ಲಿ ಯಾರ ನಿಯಂತ್ರಣ ಇಲ್ಲದೆ ಸಿಕ್ಕಸಿಕ್ಕ ಮೂಲಗಳಿಂದ ಧನಸಹಾಯ ಪಡೆದುಕೊಂಡು ಆಯಾ ವ್ಯಕ್ತಿ/ಸಂಸ್ಥೆಗಳಿಗೆ ಬೇಕಾದಂತೆ ಕೆಲಸ ಮಾಡಿಕೊಡುತ್ತಿದ್ದ ಎನ್‍ಜಿಓಗಳ ಸಂಖ್ಯೆ ಒಟ್ಟು 42,273! ಮತ್ತಷ್ಟು ಓದು »

29
ಡಿಸೆ

ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?

– ರಾಕೇಶ್ ಶೆಟ್ಟಿ

Conversionಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!

ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.

ಮತ್ತಷ್ಟು ಓದು »

6
ಜನ

ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?

– ನರೇಂದ್ರ ಕುಮಾರ್ ಎಸ್.ಎಸ್

ಬೆನ್ನಿ ಹಿನ್ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?

ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!

ಮತ್ತಷ್ಟು ಓದು »

19
ಜನ

ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?

– ರಾಕೇಶ್ ಶೆಟ್ಟಿ

CTಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?

ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ,  ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು  ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?

ಮತ್ತಷ್ಟು ಓದು »

17
ಜನ

’ಟಿಪ್ಪು’ ಹೆಸರಿನಲ್ಲಿ ’ಕೈ’ ರಾಜಕೀಯ?

– ಅಶ್ವಿನ್ ಎಸ್. ಅಮೀನ್

Tppuಬಹುಶಃ ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು ಇತರ ಧರ್ಮೀಯರಿಗೆ ಕೊಡುವ ಸವಲತ್ತುಗಳು,ಸೌಕರ್ಯಗಳು ಇತರ ಯಾವ ದೇಶದಲ್ಲೂ ಇರಲಿಕ್ಕಿಲ್ಲ.. ನಮ್ಮ ರಾಜಕೀಯ ವ್ಯವಸ್ಥೆಯೇ ಅಂತಹುದು. ನಮ್ಮ ರಾಷ್ಟ್ರಪಿತರು ಬುನಾದಿ ಹಾಕಿದ ಈ ಸಂಸ್ಕೃತಿ ಇಂದಿನವರೆಗೂ ನಿಂತಿಲ್ಲ.. ಈಗ ಇಂತಹದೇ ಒಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವುದು ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ.

ಭಾರತದಲ್ಲಿರುವ ಒಂದು ಪ್ರತ್ಯೇಕ ಮುಸ್ಲಿಂ ವಿದ್ಯಾಲಯ ಅಲಿಘಡ. ಈಗ ಕೇಂದ್ರ ಸರ್ಕಾರ ಇನ್ನೊಂದು ಪ್ರತ್ಯೇಕ ಮುಸ್ಲಿಂ ವಿವಿ ಯನ್ನು ಕರ್ನಾಟಕದ ಶ್ರೀರಂಗಪಟ್ಟಣ ದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.ಈಗಾಗಲೇ ಒಂದು ಪ್ರತ್ಯೇಕ ವಿವಿ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ವಿವಿ ಯಾಕೆ? ಅದರಲ್ಲೂ ಧರ್ಮದ ಆಧಾರದ ಮೇಲೆ ವಿವಿ ವಿಂಗಡಣೆ ಸರಿಯೇ? ವಿಶ್ವವಿದ್ಯಾಲಯಗಳಿಗೆ ಧರ್ಮದ ಲೇಪ ಯಾಕೆ ಬೇಕು? ಭಾರತದಲ್ಲಿರುವ ಅಷ್ಟೂ ವಿವಿಗಳಲ್ಲಿ ಮುಸ್ಲಿಮರು ಓದಲಾರರೇ? ವಿವಿಗಳಲ್ಲಿ ಮುಸ್ಲಿಮರಿಗೆ ಅಂತಹ ತೊಂದರೆಗಳಿವೆಯೇ? ಹಾಗೆ ಹೀಗೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮಗೆ ಸಿಗುವ ಉತ್ತರ “ಹಾಗೇನೂ ಇಲ್ಲ, ಎಲ್ಲವೂ ಸರಿಯಾಗಿದೆ..” ಹಾಗಿದ್ದಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ಉದ್ಧೇಶ ರಾಜಕೀಯ ತಂತ್ರ ಅನ್ನುವುದು ಸ್ಪಷ್ಟವಾಗುತ್ತದೆ.

ಇನ್ನು ಮುಸ್ಲಿಮರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಕೊಟ್ಟರೆ ಏನಾಗುತ್ತದೆ ಅನ್ನುವುದು ಅಲಿಘಡ ವಿವಿಯಲ್ಲೇ ಗೊತ್ತಾಗಿದೆ. ಅಲ್ಲಿ ಹುಟ್ಟಿಕೊಂಡ ‘ಸಿಮಿ’ ಸಂಘಟನೆ ದೇಶವ್ಯಾಪಿ ಬೆಳೆದು ದೇಶ ವಿರೋಧಿ ಭಯೋತ್ಪಾದನಾ ಸಂಘಟನೆಯಾಗಿ ಮಾರ್ಪಟ್ಟು ದೇಶದಾದ್ಯಂತ ವಿದ್ವಂಸಕ ಹಾಗು ದೇಶ ದ್ರೋಹಿ ಕೃತ್ಯಗಳನ್ನು ನಡೆಸಿ ಇಂದು ಆ ಸಂಘಟನೆಯನ್ನು ನಿಷೇಧಿಸಿದ್ದಾರೆ ಅಂದರೆ ಅದರ ಭಯಂಕರತೆಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಕೇಂದ್ರ ಸರಕಾರ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿ ಮತ್ತೊಂದು ವಿವಿಗೆ ಕೈ ಹಾಕಿರುವುದು ನಮ್ಮ ದೇಶದ ದುರದೃಷ್ಟವೆನ್ನಬೇಕು.

ಮತ್ತಷ್ಟು ಓದು »