ಆಡುವ ಮಾತು….!!
– ಗೀತಾ ಜಿ.ಹೆಗಡೆ
ಕಲ್ಮನೆ
ಕೆಲವೊಮ್ಮೆ ಮನುಷ್ಯರ ಮಾತು, ನಡವಳಿಕೆ ಎಷ್ಟೊಂದು ಇರುಸು ಮುರುಸು ತರಿಸುತ್ತದೆ. ಕೆಲವರು ಆಡುವ ಮಾತುಗಳು ಅದೆಷ್ಟು ಕಿರಿ ಕಿರಿ ಬೇಸರ ತರಿಸುವುದೆಂದರೆ ಕೇಳೋದಕ್ಕೇ ಆಗೋದಿಲ್ಲ. ಏನಾದರೂ ತಿರುಗಿ ಹೇಳೋದಕ್ಕೂ ಸ್ವಲ್ಪ ಕಷ್ಟ. ಅದರಲ್ಲೂ ಕೆಲವು ಹತ್ತಿರದ ಸಂಬಂಧಿಕರಾದರಂತೂ ಮುಗಿದೇ ಹೋಯಿತು. ಅವರ ವಾಕ್ ಚಾತುರ್ಯ ಸದಾ ಕಿವಿಗೆ ಬೀಳುತ್ತಲೇ ಇರುತ್ತದೆ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ರೀತಿಯ ಮಾತುಗಳು ಅವರಿಗೆ ಅದೇನೋ ಅಚ್ಚು ಮೆಚ್ಚು. ತಾನೇನೊ ಗಹನವಾಗಿ ಮಾತನಾಡುವವರೆಂಬ ಹುಸಿ ಭ್ರಮೆ ಮನೆ ಮಾಡಿರಬಹುದೇನೊ? ಏಕೆಂದರೆ ಕೇಳಿಸಿಕೊಳ್ಳುವ ಎದುರಾಳಿಯ ಕಡೆ ಕಿಂಚಿತ್ತೂ ಗಮನವಿಲ್ಲದೆ ತಮ್ಮದೇ ಮಾತಿನ ದಾಟಿ ಮುಂದುವರಿಸಿಕೊಂಡು ಹೋಗುತ್ತಿರುತ್ತಾರೆ. ಇದು ಅವರ ಹುಟ್ಟು ಗುಣವಾದರೂ ಇದು ಎಷ್ಟು ಸರಿ? ವಯಸ್ಸಾಗುತ್ತ ಮನುಷ್ಯನಿಗೆ ತಿಳಿವಳಿಕೆ ಬಂದಂತೆ ನಮ್ಮ ಮಾತು ನಡೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂಬ ಪರಿಜ್ಞಾನವೂ ಇದ್ದಂತೆ ಕಾಣುವುದಿಲ್ಲ. ಆನೆ ನಡೆದಿದ್ದೇ ದಾರಿ ಅನ್ನುವಂತೆ ಅವರ ಮಾತು ಮುಂದುವರಿದಿರುತ್ತದೆ. ಮತ್ತಷ್ಟು ಓದು
ಅನಾಥ ಪ್ರಜ್ಞೆಯ ಸ್ಥಿತಿ
ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ. ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ. ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ, ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು. ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ. ಯಾಕೆ ಹೀಗೆ ಈ ಮನಸ್ಸು. ಇದಕ್ಕಿನ್ನೇನು ಬೇಕು ? ಸುತ್ತ ಎಲ್ಲರೂ ಇದ್ದಾರಲ್ಲ! ಇನ್ನೂ ಯಾಕೆ ಈ ಕೊರಗು. ಹೀಗೆ ಎಷ್ಟು ಬುದ್ಧಿ ಹೇಳಿದರೂ ಕೇಳಲಾರದ ಮನಸ್ಸು ಪದೇ ಪದೇ ಈ ಸ್ಥಿತಿಗೆ ಬರುತ್ತದೆ. ಯೋಚಿಸಿ ಯೋಚಿಸಿ ಕಣ್ಣೀರು ಹೆಣ್ಣಾದರೆ, ಅದೇ ಗಂಡಾದರೆ ಸಾಮಾನ್ಯವಾಗಿ ದುಶ್ಚಟಕ್ಕೆ ದಾಸ. ಯಾಕೆ ಹೀಗೆ? ಮತ್ತಷ್ಟು ಓದು
ಸೆಕ್ಸ್ ಗುರುವಿನ ಸನ್ನಿಧಿಯಲ್ಲಿ….
– ಚೇತನಾ ತೀರ್ಥಹಳ್ಳಿ
ಈ ಹೆಸರು ಕಿವಿಗೆ ಬಿದ್ದ ಕ್ಷಣಕ್ಕೆ ನೆನಪಾಗೋದು ಅಮ್ಮನ ಆ ಅವತ್ತಿನ ತಟವಟ. “ಆ ಹಾಳಾದ xyz ತಾನು ಕೆಡೋದಲ್ದೆ ಊರು ಹಾಳು ಮಾಡ್ತಾನೆ. ಆ ಮನುಷ್ಯನ್ನ ನೋಡಿದ್ರೆ ಸ್ವಾಮೀಜಿ ಥರ ಕಾಣ್ತಾನಾ?”
ಅಪ್ಪ ಸಹೋದ್ಯೋಗಿ ಬಳಿಯಿಂದ ಮನೆಯಲ್ಲಿ ತಂದಿಟ್ಟುಕೊಂಡಿದ್ದ ಓಶೋ ಪುಸ್ತಕವನ್ನ ನೋಡೀ ನೋಡೀ ಸಿಡುಕುತ್ತಿದ್ದಳು. ಯಾರಾದ್ರೂ ನೋಡಿದ್ರೆ ಏನು ತಿಳಿದಾರು! ಅನ್ನುವ ಆತಂಕ ಜೊತೆಗೆ. ನಾನು ಕೇಳೀಕೇಳೀ ರೇಜಿಗೆ ಬಿದ್ದು ಕೇಳಿದ್ದೆ, “ಯಾಕೆ?”
ಬಹಳಷ್ಟು ಜನ ಓಶೋ ಬಗ್ಗೆ ತಳೆದಿರುವ ಅಭಿಪ್ರಾಯವನ್ನೆ ನನ್ನ ಮುಗ್ಧ ಅಮ್ಮನೂ ಹೇಳಿದ್ದಳು. ಅದು ಎಂಭತ್ತರ ದಶಕ. ಓಶೋ ಎಂಬ ಮಹಾ ಸಂತನ ಬಗ್ಗೆ ಭಾರತ ಮಾತ್ರವೇನು, ಪಶ್ಚಿಮ ದೇಶಗಳಲ್ಲೂ ಸಾಕಷ್ಟು ಪುಕಾರು ಹಬ್ಬಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಅವಳ ಯೋಚನೆ ತಪ್ಪೇನೂ ಆಗಿರಲಿಲ್ಲ ಅನ್ನಿಸುತ್ತೆ. ಯಾಕಂದರೆ ಅದೇ ಅಮ್ಮ ಆಮೇಲೆ ನನ್ನ ಕಪಾಟಿನಿಂದ ಹಲವು ಓಶೋ ಪುಸ್ತಕಗಳನ್ನ ತೆಗೆದು ಕಣ್ಣಾಡಿಸಿದ್ದಾಳೆ; ಆಗೀಗ ಅದರ ಕೆಲವು ವಿಚಾರಗಳ ಉಲ್ಲೇಖವನ್ನೂ ಮಾಡುವಷ್ಟು ಬದಲಾಗಿದ್ದಾಳೆ.ಅದೇನೇ ಇರಲಿ, ನನಗೆ ಓಶೋ ಮೊದಲ ಬಾರಿ ಪರಿಚಯವಾಗಿದ್ದು ಹೀಗೆ. ಅದೇನು ತಿಕ್ಕಲುತನವೋ! ಅಮ್ಮ ಮಾಡಿದ್ದ ಆರೋಪವೇ ನನ್ನಲ್ಲಿ ಓಶೋ ಬಗ್ಗೆ ಕುತೂಹಲ ಹುಟ್ಟಿಸಿತ್ತು. ಇಷ್ಟೆಲ್ಲ ಬೈಸಿಕೊಳ್ಳುವ ಈ ಮನುಷ್ಯನ ಮಾತನ್ನ ಅಷ್ಟೊಂದು ಜನ ಕೇಳ್ತಾರೆ ಅಂದ್ರೆ ಸುಮ್ಮನೆನಾ? ಅನ್ನುವಂಥ ಕುತೂಹಲವದು. ಮುಂದೊಂದು ದಿನ ’ಶೂನ್ಯ ನಾವೆ’ ಏರಿ ಶುರುವಾದ ನನ್ನ ಓಶೋ ಯಾನ ಈ ಹೊತ್ತಿನವರೆಗೆ ಸೇರಿದೆ.