ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ
– ರೋಹಿತ್ ಚಕ್ರತೀರ್ಥ
“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.
ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.
ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು
ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ
– ರಾಕೇಶ್ ಶೆಟ್ಟಿ
ಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?
“ಮನುಸ್ಮೃತಿ!”
ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.
ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.
ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.
ಅಂಬೇಡ್ಕರ್ ರ ’ಹಿಂದುತ್ವ’ ವನ್ನು ಅರಸುತ್ತಾ-ಭಾಗ ೧
– ಬಾಲಚಂದ್ರ ಭಟ್
ಇಂದು ಡಾ. ಅಂಬೇಡ್ಕರರನ್ನು ಒಬ್ಬ ಹಿಂದೂ ದೇಶಭಕ್ತರೆಂದು ಕರೆದರೆ ಜನ ಹೇಗೆಪ್ರತಿಕ್ರಿಯಿಸಬಹುದು? ಖಂಡಿತ ಗಲಿಬಿಲಿಯಾಗುತ್ತಾರೆ. ಇದೊಂದು ಮನುವಾದಿಯ ಕುತಂತ್ರಎಂದು ಕೋಪಿಸಿಕೊಳ್ಳಬಹುದು. ಆದರೆ ಯಾವ ಮಟ್ಟಿಗೆ ಅಂಬೇಡ್ಕರರ ವ್ಯಕ್ತಿತ್ವ ನಮ್ಮಿಂದಮರೆಮಾಚಲ್ಪಟ್ಟಿದೆ ಎಂದರೆ, ಅಂಬೇಡ್ಕರ್ ಎಂದರೆ ಕೆಳಜಾತಿಗೆ ಮೀಸಲು ಎನ್ನುವ ಕೆಲವರ್ಗಗಳ ಧೋರಣೆಯಾದರೆ ಅವರೊಬ್ಬ ಬ್ರಾಹ್ಮಣ ವಿರೋಧಿ ಎಂದು ಅವರನ್ನು ಉಪೇಕ್ಷಿಸುವ ವರ್ಗ ಇನ್ನೊಂದು ಕಡೆ ಇದೆ.
ಆದರೆ ಇಂದಿನ ವರ್ತಮಾನ ರಾಜಕೀಯದಲ್ಲಿ ಅಂಬೇಡ್ಕರರ ಹಕ್ಕುಸ್ವಾತಂತ್ರ್ಯವನ್ನು ಹೊತ್ತವರೆಂಬಂತೆ ಅವರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವವರ ಹುಚ್ಚಾಟ, ತಿಕ್ಕಲುತನಗಳಿಂದ ಅದೇ ಸ್ಟೀರಿಯೋಟೈಪಿನಿಂದ ಅಂಬೇಡ್ಕರರನ್ನುನೋಡಬೇಕಾದ ಪರಿಸ್ಥಿತಿ ಬಂದಿರುವದರಿಂದ ಅವರಲ್ಲಿನ ಭವ್ಯ, ಗಂಭೀರ, ಪ್ರಭುದ್ಧವ್ಯಕ್ತಿತ್ವ ಹಾಗೂ ದಾರ್ಶನಿಕತೆ ಅಕ್ಷರಶಃ ಮರೆಯಾಗಿರುವದು ಅತ್ಯಂತ ದುರದೃಷ್ಟಕರ.ಅದೇ ಅವರ ಕನಸು ನನಸಾಗದಿರುವದಕ್ಕೂ ಕಾರಣ.
ಹಿಂದೂ ಸಂಪ್ರದಾಯದಲ್ಲಿನ ಜಾತಿಗಳ ಬಗ್ಗೆ ಅವರ ಸಂಶೋಧನೆ ನಮಗೆ ತಿಳಿದದ್ದುಅತ್ಯಲ್ಪ.ಅರವಿಂದನ್ ನೀಲಕಂದನ್ ಅವರ ’Bodhisattva’s hindutva(part 1-6 )’ ವನ್ನು ಓದಿದಾಗ ಅಂಬೇಡ್ಕರರಲ್ಲಿದ್ದ ಸಮಗ್ರ ಹಿಂದುತ್ವ ನನ್ನ ತಿಳುವಳಿಕೆಗೆಬಂದಿದ್ದು. ಅದನ್ನು ಆಯ್ದು, ಸಂಕ್ಷಿಪ್ತವಾಗಿ ಈ ಲೇಖನವನ್ನು ಬರೆದಿದ್ದೇನೆ.
ಜಾತಿ ಪದ್ದತಿಗಳ ವಿರುದ್ಧ ಅಂಬೇಡ್ಕರರು ಹೋರಾಡಿದರು ಎಂಬುದು ಎಲ್ಲರಿಗೂ ತಿಳಿದ ಸತ್ಯ.ಆದರೆ ಜಾತಿಗಳ ವಿರುದ್ಧ ಅವರ ಹೋರಾಟವು ಅವರ ಕನಸಿನ ಹಿಂದೂ ಧರ್ಮವೇ ಆಗಿತ್ತು ಎಂಬುದುನಿರ್ವಿವಾದ. ತಮ್ಮ ‘Annihilation of caste'(page no.30) ಯಲ್ಲಿ ಅವರುಹೇಳಿದ್ದು ಹೀಗೆ “ಎಲ್ಲಿಯವರೆಗೆ ಜಾತಿಗಳು ಇರುವದೊ ಅಲ್ಲಿಯವರೆಗೆ ಸಂಘಟನೆಸಾಧ್ಯವಿಲ್ಲ.ಎಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮವು ದುರ್ಬಲವಾಗಿಯೇ ಇರುವದು”.
೧೯೨೭ ರಲ್ಲಿ ದಲಿತರಿಗೆ ದೇವಾಲಯದ ಪ್ರವೇಶದ ಹಕ್ಕಿನ ಬಗ್ಗೆಪ್ರಸ್ತಾಪಿಸಿ ಅವರು ಹೇಳಿದ್ದು ಹೀಗಿದೆ “ಹಿಂದುತ್ವವು ಸ್ಪಶ್ಯೃ ಹಾಗೂ ಅಸ್ಪಶ್ಯೃಎಲ್ಲರಿಗೂ ಸೇರಿದುದಾಗಿದೆ. ಕೇಳಜಾತಿಗೆ ಸೇರಿದ್ದ ವಾಲ್ಮಿಕಿ, ವ್ಯಾಧಗೀತ, ಚೋಕಮೇಳಮತ್ತು ರೋಹಿದಾಸರುಗಳು ಹಿಂದು ಧರ್ಮಕ್ಕೆ ನೀಡಿದ ಕೊಡುಗೆಯು, ಬ್ರಾಹ್ಮಣರಾದ ವಸಿಷ್ಟ,ಕ್ಷತ್ರಿಯರಾಗಿದ್ದ ಕೃಷ್ಣ, ವೈಶ್ಯರಾಗಿದ್ದ ಹರ್ಷ, ಹಾಗೂ ಶೂದ್ರರಾಗಿದ್ದತುಕಾರಮರುಗಳು ನೀಡಿದ ಕೊಡುಗೆಯಷ್ಟೆ ಮಹತ್ವಪೂರ್ಣವಾದುದು” ( ’ಬಹಿಷ್ಕೃತ್ ಭಾರತ್’ದಲ್ಲಿ). ಇಲ್ಲಿ ಅವರ ಆಧುನಿಕ ಹಿಂದೂ ಧರ್ಮವನ್ನು ಕಟ್ಟುವ ಮನೋಭಾವ ಹಾಗೂ ಸಂಘಟನೆಯಬಗೆಗಿನ ಆಸ್ಥೆಯನ್ನು ಗುರುತಿಸಬಹುದು.