ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮರಾಠ’

4
ನವೆಂ

ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರೇ?

ಮೂಲ ಲೇಖಕ : ಉದಯ್ ಕುಲಕರ್ಣಿ

ಅನುವಾದ : ರಾಕೇಶ್ ಶೆಟ್ಟಿ

ಹೈದರಾಲಿ,ಟಿಪ್ಪು ಸುಲ್ತಾನನಿಂದ ದೇವಾಲಯಗಳ ನಾಶದ ಬಗ್ಗೆ ಮಾತನಾಡಿದ ತಕ್ಷಣ ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರು, ಟಿಪ್ಪು ಸ್ವಾಮೀಜಿಯವರ ಸಹಾಯಕ್ಕೆ ಬಂದಿದ್ದ ಎಂದು ಕಮ್ಯುನಿಸ್ಟರು ಮುಂದೆ ನಿಲ್ಲುತ್ತಾರೆ.ಹಾಗಿದ್ದರೆ ಈ ದುರ್ಘಟನೆಯ ಸತ್ಯವೇನು? ಈ ಘಟನೆಯ ಇನ್ನೊಂದು ಮಗ್ಗುಲನ್ನು ತಿಳಿಸುವ ಇತಿಹಾಸ ತಜ್ಞ ಉದಯ್ ಕುಲಕರ್ಣಿಯವರು ಸ್ವರಾಜ್ಯ ಮ್ಯಾಗಜಿನ್ನಿನಲ್ಲಿ ಬರೆದ ಲೇಖನ ನಿಲುಮಿಗರಿಗಾಗಿ – ನಿಲುಮೆ

ಟಿಪ್ಪುವಿನ ಮತಾಂಧತೆಯನ್ನು ತಮ್ಮ ರೆಡ್ ಕಾರ್ಪೆಟಿನ ಅಡಿಯಲ್ಲಿ ತೂರಿಸುವ ಅಭ್ಯಾಸವುಳ್ಳ ಕಮ್ಯುನಿಸ್ಟ್ ಇತಿಹಾಸಕಾರರು ಆತ ಸೆಕ್ಯುಲರ್ ಆಗಿದ್ದ ಎಂದು ತೋರಿಸಲು ಪದೇ ಪದೇ ಬಳಸುವದು ಮರಾಠರ ಸೈನ್ಯ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದ ನಂತರ ಟಿಪ್ಪು ಅದರ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ ಎನ್ನುವುದಾಗಿದೆ. ಆದರೆ ಆ ದಿನ ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ‘Solstice at Panipat’ ಪುಸ್ತಕ ಲೇಖಕರು ಮತ್ತು ಇತಿಹಾಸಕಾರರಾದ ಉದಯ್ ಕುಲಕರ್ಣಿಯವರು ಲಭ್ಯವಿರುವ ಪುರಾವೆಗಳ ಸಹಿತ ವಿವರಿಸುತ್ತಾರೆ. 

“ಟಿಪ್ಪುವಿನ ನಡೆಗಳು ಸರಿಯಿಲ್ಲ. ಅಹಂಕಾರವೇ ತುಂಬಿರುವ ಆತ ಇತ್ತೀಚಿಗೆ ನೂರ್ ಮುಹಮ್ಮದನಿಗೆ ಬರೆದ ಪಾತ್ರದಲ್ಲಿ ತಾನು 50,000 ಹಿಂದುಗಳನ್ನು, ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಇಸ್ಲಾಮ್ ಗೆ ಮತಾಂತರಿಸಿದ್ದೇನೆ. ಹಿಂದಿನ ಯಾವುದೇ ಪಡಿಶಾಹ್ ಅಥವಾ ವಜೀರ್ ಮಾಡಲಾಗದ್ದನ್ನು ನಾನು ಅಲ್ಲಾಹ್ ಕೃಪೆಯಿಂದ ಮಾಡಿದ್ದೇನೆ . ಹಳ್ಳಿಗೆ ಹಳ್ಳಿಯನ್ನೇ ಮತಾಂತರಿಸಿದ್ದೇನೆ ಎನ್ನುತ್ತಾನೆ” – ನಾನಾ ಫಡ್ನವಿಸ್ ಅವರು ಮಹಾಡ್ಜಿ ಸಿಂಧಿಯಾಗೇ ಬರೆದ ಪತ್ರ 5 September 1784.

ಥಾಮಸ್ ಡೇನಿಯಲ್ ಮತ್ತು  ಜೇಮ್ಸ್ ವೇಲ್ಸ್ ಅವರು ಬಿಡಿಸಿರುವ ಚಿತ್ರವೊಂದು ಪುಣೆಯ ಶನಿವಾರ್ ವಾಡದಲ್ಲಿ ಗಮನ ಸೆಳೆಯುತ್ತದೆ.ಬ್ರಿಟಿಷರ ಚಾರ್ಲ್ಸ್ ಎಂ ಮಾಲೆಟ್  ಮತ್ತು ಮರಾಠರ ನಡುವಿನ ಒಪ್ಪಂದದ ಚಿತ್ರವದು.  ಮಾಲೆಟ್ ವಿಶೇಷ ಆಸಕ್ತಿಯಿಂದ ಮಾಡಿಸಿದ ಈ ಚಿತ್ರವು, ಮರಾಠರು,ನಿಜಾಮರನ್ನು ಬ್ರಿಟಿಷ್ ಪಡೆಯೊಂದಿಗೆ ಸೇರಿಕೊಳ್ಳುವಂತೆ ಆತ ನಡೆಸಿದ ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಹತ್ತು ವರ್ಷಗಳ ಹಿಂದೆ ಬ್ರಿಟಿಷರು ಹೊಂದಿದ್ದ ಮಿತ್ರ ಪಡೆಯನ್ನು ನೋಡುವ ಮೂಲಕ ಗಮನಿಸಬೇಕು. ಆ ಸಮಯದಲ್ಲಿ ಹೈದರಾಲಿಯ ಮರಾಠರ ಮಿತ್ರನಾಗಿದ್ದ. 1790 ರ ಸಮಯಕ್ಕಾಗಲೇ ಟಿಪ್ಪು ತನ್ನ ತಂದೆಯ ಹಳೆಯ ಮಿತ್ರಪಡೆಗಳಲ್ಲಿ ಅದೆಷ್ಟು ಆಕ್ರೋಶ ಮೂಡಿಸಿದ್ದನೆಂದರೆ ಅವರು ಬ್ರಿಟಿಷರೊಂದಿಗೆ ಕೈ ಜೋಡಿಸಿಬಿಟ್ಟಿದ್ದರು.

1790-1792ರ ನಡುವೆ ಟಿಪ್ಪುವಿನ ಮೇಲೆ ನಡೆದ ಯುದ್ಧದ ಸಮಯದಲ್ಲಿ, ಮರಾಠರ ಸೇನಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದ್ವಾಡ್ಕರ್ ಅವರ ಮೇಲ್ವಿಚಾರಣೆಯಲ್ಲಿದ್ದ ಸೇನೆಯ ತುಕಡಿಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿ, ಲೂಟಿಗೈದು ಹಾಳುಗೆಡವಿತ್ತು. ಇಂದಿಗೂ ಮಾಗದ ಗಾಯದಂತಿರುವ ಈ ದಾಳಿಯ ಹೊಣೆಯನ್ನು ಮರಾಠರು ಮತ್ತು ಪರಶುರಾಮ್ ಭಾವ್ ಪಟವರ್ಧನ್ ಅವರ ಮೇಲೆಯೇ ಹೊರಿಸಲಾಗಿದೆ.1791ರ ಸಮಯದಲ್ಲಿ ಮರಾಠರ ನಡುವೆ ಈ  ಅನಾಹುತದ ಸುತ್ತ  ನಡೆದಿರುವ ಪತ್ರ ವಿನಿಮಯಗಳ ಮೇಲೆ ಭಾಷಾ ಸಮಸ್ಯೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಬೆಳಕು ಚೆಲ್ಲಲಾಗಿಲ್ಲ.

Read more »

5
ಆಕ್ಟೋ

ಒಂದು ಪ್ರೇತದ ಕತೆ! (ಭಾಗ 6)

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಪ್ರೇತದ ಆತ್ಮ ಚರಿತೆ! (ಭಾಗ ೫)

14195962_1082397995189142_6175616879255697664_oಒಂದೆಡೆ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಬಂಡೇಳುತ್ತಿರುವ ಪಾಳೇಗಾರರು, ಪ್ರಧಾನರ ಒಳಜಗಳ… ನಾಲ್ದಿಕ್ಕುಗಳಲ್ಲೂ ಮರಾಠಾ ಸಾಮ್ರಾಜ್ಯವನ್ನು ಕುಟಿಲನೀತಿಯ ಮೂಲಕ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಕೆಂಪು ಮುಸುಡಿಗಳ ಈಸ್ಟ್ ಇಂಡಿಯಾ ಕಂಪನಿ. ಅದರಿಂದ ಬಿಡಿಸಿಕೊಳ್ಳಲು ಬಾಜಿರಾವ್ ಪಂಡರಾಪುರದಲ್ಲಿ ಸಾಕಷ್ಟು ಧರ್ಮ ಕಾರ್ಯಗಳನ್ನು ನಡೆಸಿದ. ಭೀಮಾ ನದಿಯ ತೀರದಲ್ಲಿ ಭಾರಿ ಹೋಮಗಳನ್ನಿಟ್ಟು ನಾರಾಯಣನ ಪ್ರೇತವನ್ನು ಉಚ್ಛಾಟನೆ ಮಾಡಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ಕೇವಲ ಪೇಶ್ವಾಗಳ ಸಾಮ್ರಾಜ್ಯ ನಾಶವಾಗಲಿ… ಪೇಶ್ವಾಗಳಿಗೆ ಸಂತಾನವಿಲ್ಲದೆ ಹೋಗಲಿ… ಪೇಶ್ವಾಗಳು ಕೈ ಹಿಡಿದ ಮಡದಿಯರನ್ನು ಮುಟ್ಟಿದರೆ ಸಾಕು ಅವರು ಸತ್ತು ಹೋಗುವಂತಾಗಲಿ… ಪೇಶ್ವಾಗಳ ಅರಮನೆಗೆ ಬೆಂಕಿ ಬೀಳಲಿ. ಇದು ನಾರಾಯಣನ ಪ್ರೇತ ಬಾಜಿರಾಯನ ಕಿವಿಯಲ್ಲಿ ಪ್ರತೀ ದಿನ ಉಸುರುತ್ತಿದ್ದ ಮಾತುಗಳು.. ಬಾಜಿರಾಯ ಮದುವೆಯಾದ. ಮಕ್ಕಳನ್ನು ಪಡೆಯಬೇಕು ಎಂದು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿ ನಿಗೂಡವಾಗಿ ಸಾವನ್ನಪ್ಪಿದಳು.!! ಮತ್ತೊಬ್ಬಳನ್ನು ಮದುವೆಯಾದ ಅವಳೂ ಇದೇ ರೀತಿ ನಿಗೂಢವಾಗಿ ಸತ್ತು ಹೋದಳು. ಹೀಗೆ ನಾಲ್ಕು ಜನರನ್ನು, ನಾರಾಯಣ ಪೇಶ್ವೆಯ ಪ್ರೇತ ಬಲಿ ಪಡೆದುಕೊಂಡಿತು. ಬಾಜಿರಾಯನಿಗೆ ಹೆಣ್ಣು ಕೊಡಲು ಜನ ಹಿಂದೇಟು ಹಾಕತೊಡಗಿದರು. Read more »

26
ಮಾರ್ಚ್

ಬಾಜಿರಾಯನ ಉತ್ತರದ ದಂಡಯಾತ್ರೆ

-ರಂಜನ್ ಕೇಶವ

3542284598_ea990137ddಏಪ್ರಿಲ್ 9, 1737

ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆ ತೋರುವಲ್ಲೇ ಡೇರೆ ಹಾಕಿತ್ತು. ಮರಾಠರ ಖಡ್ಗಗಳನ್ನು ಹೊತ್ತ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೇ ಯಾವ ಮುನ್ಸೂಚನೆಯಿಲ್ಲದೇ ಒಂದೇ ರಭಸಕ್ಕೆ ದೆಹಲಿಯ ಸರಹದ್ದನ್ನು ತಲುಪಿತ್ತು. ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು. ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು. ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ. ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ. ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ. Read more »