ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮಾರುಕಟ್ಟೆ’

21
ಜನ

ಮೋದಿ ಸಾಲದ ಶೂಲ – ಗಂಜಿಗಿರಾಕಿಗಳ ಕೋಲಾಹಲ

– ರಾಘವೇಂದ್ರ ಸುಬ್ರಹ್ಮಣ್ಯ

ನಿನ್ನೆ-ಮೊನ್ನೆಯಿಂದಾ ನಮ್ಮ ಮಾಧ್ಯಮಗಳದ್ದು ಒಂದೇ ಗಲಾಟೆ, “ಮೋದಿ ಅಧಿಕಾರವಧಿಯಲ್ಲಿ ಭಾರತದ ಸಾಲದ ಹೊರೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ” ಅಂತಾ ಕೂಗಾಡ್ತಿವೆ. ಇಂಡಿಯಾಟುಡೇ “ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರ ಸಾಲವನ್ನು 50% ಏರಿಕೆಯಾಗಿದೆ” ಅಂತಾ ಶುರುಮಾಡಿದ ಈ ಅರಚಾಟದ ಕಸದಂತಾ ಸುದ್ಧಿಯನ್ನು, ಎಕನಾಮಿಕ್ ಟೈಮ್ಸ್ ಕೂಡಾ ತಾನು ಎರವಲು ಪಡೆದ ಹಾಗೇ ಹಂಚಿತು. ಇವರೆಲ್ಲರೂ ಈ ಸುದ್ಧಿಯನ್ನ ಪಡೆದದ್ದೆಲ್ಲೆಂದಾ? ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯದ “ಸರ್ಕಾರೀ ಸಾಲದ ಸ್ಥಿತಿಪತ್ರದ 8 ನೇ ಆವೃತ್ತಿ” ಬಿಡುಗಡೆಯಾಯಿತು. ಅದರಿಂದ ತಮಗೆ ಬೇಕಾದಷ್ಟೇ ಸುದ್ಧಿಯನ್ನ ಈ ಸುದ್ಧಿಮನೆಗಳು ಹೆಕ್ಕಿತೆಗೆದು, ತಮಗೆ ಬೇಕಾದಂತೆ ತಿರುಚಿ, “ಮೋದಿ ಹೇಗೆ ಭಾರತಕ್ಕೆ ಮಾರಕ” ಎನ್ನುವಂತಾ ತಮ್ಮ ಹಳೇ ಕಥೆಗಳ ದೀಪಕ್ಕೆ ಹೊಂದುವಂತಾ ನಿರೂಪಣೆಯ ಬತ್ತಿಯನ್ನ ಹೊಸೆದರು.

ಈ ಸುದ್ಧಿಗಳು ಬಂದದ್ದೇ ತಡ, ಮೋದಿ ವಿರೋಧಿ ಬಳಗಗಳು ತಮ್ಮ ಮನೆ-ಮನಗಳಲ್ಲಿ ಸದಾಕಾಲ ಉರಿಯುತ್ತಿರುವ ಮೋದಿ ದ್ವೇಷದ ಬೆಂಕಿಗೆ ಇನ್ನೂ ಎರಡು ಲೀಟರ್ ಪೆಟ್ರೋಲ್ ಹೆಚ್ಚೇ ಸುರಿದು, ಈ ಸುದ್ಧಿಯನ್ನು ಎಲ್ಲೆಡೆ ಹರಡಲು ಪ್ರಾರಂಭಿಸಿದರು. “ಮೋದಿನಾಮಿಕ್ಸ್ ನೆಲಕಚ್ಚಿದೆ, ದೇಶದಲ್ಲಿ ಕೆಲಸಗಳೇ ಇಲ್ಲ, ಕೈಗಾರಿಕಾ ಉತ್ಪಾದನೆ ಮೇಲೇಳದಂತೆ ಕುಸಿದಿದೆ, ಇಂತಾ ಸಮಯದಲ್ಲಿ ಮೋದಿ ದೇಶಕ್ಕೆ ಇನ್ನೂ 28ಲಕ್ಷ ಕೋಟಿ ಸಾಲ ಹೆಚ್ಚಿಸಿ ನಮ್ಮನ್ನೆಲ್ಲಾ ಕೊಂದೇಬಿಟ್ಟಿದ್ದಾನೆ. ಚುನಾವಣಾ ಜುಮ್ಲಾಗಳ ಕಾಲ ಮುಗಿಯಿತು, 2019ರಲ್ಲಿ ಜನ ಬಿಜೆಪಿಯನ್ನು ಕಿತ್ತೆಯಸಲಿದ್ದಾರೆ” ಅಂತಾ ಒಂದೇ ಸಮವೆ ಕಿರುಚಾಡುತ್ತಿದ್ದಾರೆ.

ಈ ವಿಚಾರವನ್ನು ಎರಡು ರೀತಿಯಲ್ಲಿ ನಿಭಾಯಿಸಬಹುದು. ಒಂದನೇ ದಾರಿ: “ಜನಕ್ಕೆ ಇದೆಲ್ಲಾ ಅರ್ಥವಾಗೇ ಆಗುತ್ತೆ. ಈ ಕಿರುಚಾಟಗಳೆಲ್ಲಾ ಅರ್ಥಹೀನ ಅಂತಾ ಇವತ್ತಲ್ಲಾ ನಾಳೆ ತಿಳಿದುಕೊಂಡು ಇವನ್ನೆಲ್ಲಾ ನಿವಾಳಿಸಿ ಬದಿಗಿಡ್ತಾರೆ” ಅಂತಾ ಸುಮ್ಮನಾಗುವುದು. ಆದರೆ ಇದನ್ನು ಹಿಂಗೇ ಬಿಟ್ಟರೆ, ಏನೂ ಗೊತ್ತಿಲ್ಲದವರೂ ಇದನ್ನೇ ನಿಜವೆಂದು ನಂಬಿ ಕೂತರೇನು ಕಥೆ? ಇಂಗ್ಲೀಷ್ ಪತ್ರಿಕೆಗಳೇನೋ ಗಾಂಧಿ ಪರಿವಾರದ ಸಂಬಳದಲ್ಲಿವೆ. ತೀರಾ ಉದಯವಾಣಿಯವರೂ ಇದನ್ನೇ ಸತ್ಯವೆಂದು ಬಿಂಬಿಸಿ ಸುದ್ಧಿಪ್ರಕಟಿಸುತ್ತಿದ್ದಾರಲ್ಲಾ! ಅದೂ ದೇಶ ಚುನಾವಣೆಯ ಹೊಸ್ತಿಲಲ್ಲಿರುವಾಗ!! ಆ ಅರ್ಥವಾಗುವ “ಇವತ್ತಲ್ಲಾ ನಾಳೆ” ಅನ್ನೋ ಕಾಲ, ಚುನಾವಣೆ ಮುಗಿದಮೇಲೆ ಬಂದರೇನು ಸುಖ!? ನಾವೇ ದೇಶವನ್ನು ಅವಸಾನದೆಡೆಗೆ ತಳ್ಳಿದಂತಾಯ್ತಲ್ಲಾ! ಹೀಗಿದ್ದಾಗ ಎರಡನೇ ದಾರಿಯೇ ಬೇಕು. ಎರಡನೆಯ ದಾರಿ: “ಇದನ್ನು ಸಾಮಾನ್ಯರಿಗೂ ಅರ್ಥವಾಗುವ ಪದಗಳಲ್ಲಿ ಬಿಡಿಸಿ ಬರೆದು, ಸರಿದಾರಿಗೆಳೆಯುವುದು”. ಈ ಲೇಖನ ಆ ಎರಡನೆಯ ದಾರಿ.

  • ಹಾಗಾದರೆ ಹಣಕಾಸು ಸಚಿವಾಲಯದ ಸಾಲಪತ್ರದಲ್ಲಿ ಹೇಳಿರುವ ವಿಚಾರಗಳು ಸುಳ್ಳೇ?
  • ಈ ಪತ್ರಿಕೆಗಳು ಹೇಳುತ್ತಿರುವ ವಿಚಾರಗಳು ಸುಳ್ಳೇ?
  • ಮೋದಿಯನ್ನು ಸಮರ್ಥಿಸುವ ಭರದಲ್ಲಿ, ನಾನು ಈ ದೇಶದ ಮೇಲೆ ಸಾಲವೇ ಇಲ್ಲ ಅಂತಾ ಹೇಳುತ್ತಿದ್ದೇನೆಯೇ?

ಮತ್ತಷ್ಟು ಓದು »