ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮಿಲಿಟರಿ’

3
ಡಿಸೆ

ಆ ಯೋಧನ ಸಾವೂ ಕೂಡಾ ಚಿಲ್ಲರೆ ಸಂಗತಿಯಲ್ಲಿ ಹೂತುಹೋಯಿತು..!

– ಸಂತೋಷ್ ತಮ್ಮಯ್ಯ

srinivas-kumar-sinha-3ಅಂದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದುನಡೆದುಹೋಗಿತ್ತು. ದೇಶಾದ್ಯಂತ ಅಚ್ಚರಿ, ಕೆಲವರಿಗೆ ಆಘಾತ. ಇದೇಕೆ ಹೀಗೆ ಎಂಬ ಉದ್ಗಾರ. ಆರ್ಮಿ ಕೇಂದ್ರಕಛೇರಿಯ ಸೌತ್‌ಬ್ಲಾಕ್‌ನಲ್ಲಿ ತಿಂಗಳುಗಟ್ಟಲೆ ಗಾಸಿಫ್‌ಗಳು. ಎಮರ್ಜೆನ್ಸಿ ಇನ್ನೂ ಹೋಗಿಲ್ಲವೇ? ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತ ಇನ್ನೇನು ಉದಾಹರಣೆ ಬೇಕು ಎಂದು ವಿರೋಧ ಪಕ್ಷಗಳ ಆರೋಪ.

ಅಂದು ನಡೆದಿದ್ದು ಇಷ್ಟು:
ಆರ್ಮಿಯ ೧೧ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಕೆ.ವಿ ಕೃಷ್ಣರಾವ್ ೧೯೮೩ರ ಮೇ ಕೊನೆಯಲ್ಲಿ ನಿವೃತ್ತರಾಗುವವರಿದ್ದರು. ಕೆಲವು ದಿನಗಳ ಹಿಂದಿನಿಂದಲೇ ಸೌತ್ ಬ್ಲಾಕ್ ಹೊಸ ಜನರಲ್‌ನ ನೇಮಕದ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ಹೊಸ ಜನರಲ್ ಯಾರೆಂಬ ಬಗ್ಗೆ ಆರ್ಮಿಗಾಗಲಿ, ಜನರಿಗಾಗಲೀ ಯಾವುದೇ ಗೊಂದಲಗಳಿರಲಿಲ್ಲ. ಏಕೆಂದರೆ ಕೃಷ್ಣರಾವ್ ಚೀಫ್ ಆಗಿದ್ದಾಗ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದವರು ಮಹಾ ಮೇಧಾವಿ ಯೋಧ ಶ್ರೀನಿವಾಸ್ ಕುಮಾರ್ ಸಿನ್ಹಾ. ಮಿಲಿಟರಿಯ ಸೇವಾರ್ಹತೆಯಲ್ಲಿ ಸದ್ಯಕ್ಕಿದ್ದ ಹಿರಿಯರು ಅವರೇ. ಅಲ್ಲದೆ ಅವರು ಪ್ರಥಮ ಮಹಾದಂಡನಾಯಕ ಜನರಲ್ ಕಾರ್ಯಪ್ಪನವರಿಗೆ adc-aide de corps ಅಗಿದ್ದ ಅನುಭವಸ್ಥರು. ಜನರಲ್ ಆಯ್ಕೆಗೆ ಇನ್ನು ಅಧಿಕೃತ ಪ್ರಕಟಣೆಯೊಂದು ಮಾತ್ರ ಉಳಿದಿತ್ತು. ಜ.ಕೃಷ್ಣರಾವ್ ನಿವೃತ್ತರಾಗುವ ಕೇವಲ ಮೂರು ದಿನಗಳ ಹಿಂದೆ ಆ ಅಧಿಕೃತ ಪ್ರಕಟಣೆ ಹೊರಬಿತ್ತು. ದೇಶವನ್ನು ಆಘಾತಕ್ಕೆ ದೂಡಿದ್ದು ಆ ಪ್ರಕಟಣೆಯೇ. ಏಕೆಂದರೆ ಎಸ್. ಕೆ. ಸಿನ್ಹಾ ಅವರಿಗಿಂತ ವಯಸ್ಸಿನಲ್ಲೂ, ಸೇವಾವಧಿಯಲ್ಲೂ ಕಿರಿಯರಾಗಿದ್ದ ಲೆ.ಜ ಎ.ಎಸ್. ವೈದ್ಯ ಅವರನ್ನು ಭೂಸೇನೆಯ ದಂಡನಾಯಕ ಎಂದು ಘೋಷಣೆ ಮಾಡಲಾಗಿತ್ತು. ಈ ಎ.ಎಸ್ ವೈದ್ಯ ಎಂಥ ಮಹಾ ಯೋಧರೆಂದರೆ ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದು mahavirachakra bar ಎಂದು ಹೆಸರು ಪಡೆದಿದ್ದವರು. ಅಂದರೆ ಎಸ್. ಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಲಾಗಿತ್ತು! ಮತ್ತಷ್ಟು ಓದು »

8
ಆಗಸ್ಟ್

ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ

– ಸಂತೋಷ್ ತಮ್ಮಯ್ಯ

9ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687

ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ. ಮತ್ತಷ್ಟು ಓದು »

6
ಆಗಸ್ಟ್

ಎಲ್ಲಿಯ ಹವಾಲ್ದಾರ್ ಜಪ್ಪು? ಎಲ್ಲಿಯ ಸದ್ದಾಂ ಹುಸೇನ್?

– ಸಂತೋಷ್ ತಮ್ಮಯ್ಯ

jappuಮೂರು ವರ್ಷದ ಹಿಂದೆ ಇಂಥದ್ದೇ ಒಂದು ಮಳೆಗಾಲದಲ್ಲಿ ಹವಾಲ್ದಾರ್ ಜಪ್ಪು ಬೆಂಗಳೂರಿನಲ್ಲಿ ಸಿಕ್ಕಿದ್ದರು. ಅಂದು ಜಪ್ಪು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ತಮ್ಮ ಮೆಡಲುಗಳ ಸಮೇತ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅದಾದ ನಂತರ ಮತ್ತೆ ಮೊನ್ನೆ ಸಿಕ್ಕಿದ್ದರು. ಸಿಕ್ಕವರು ಈಗ ತಾನು ಊರಲ್ಲಿಲ್ಲವೆಂದೂ ದಕ್ಷಿಣ ಕೊಡಗಿನ ತಾವಳಗೇರಿ ಶೆಟ್ಟಿಗೇರಿ ಎಂಬ ಊರಲ್ಲಿರುವುದಾಗಿಯೂ ಬಾಡಿಗೆ ಮನೆಯೊಂದನ್ನು ಹಿಡಿದು ಮಗಳನ್ನು ಪ್ರೈಮರಿ ಓದಿಸುತ್ತಿದ್ದೇನೆಂದು ಹೇಳಿದ್ದರು. ಪುರುಸೋತ್ತಾದಾಗ ಒಮ್ಮೆ ಮನೆಗೆ ಬರಬೇಕೆಂದೂ ಹೇಳಿದ್ದರು. ಮೂರು ವರ್ಷಗಳ ಹಿಂದೆ ಇದ್ದ ಆ ದೊಡ್ಡ ಸ್ವರದ ರಭಸ ಕಿಂಚಿತ್ತೂ ಮಾಸಿರಲಿಲ್ಲ. ಗಡಸುತನ ಮಾಯವಾಗಿರಲಿಲ್ಲ. ಆದರೆ ಮಾತುಮಾತಿಗೆ ಆಕ್ರೋಶಗೊಳ್ಳುವ ಅವರ ಜಾಯಮಾನ ಮೂರು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಿದಂತೆ ಕಂಡುಬಂತು. ಮತ್ತಷ್ಟು ಓದು »

27
ಜುಲೈ

ಕಶ್ಮೀರಿಯತ್ – ಅಸ್ಮಿತೆಯೋ ವಿಸ್ಮೃತಿಯೋ

–  ಶೈಲೇಶ್ ಕುಲ್ಕರ್ಣಿ
12-kashmir-protest-2೮೦ರ ದಶಕದ ಸಮಯ, ಕಾಶ್ಮೀರದಲ್ಲಿ ಇಸ್ಲಾಮೀ ಉಗ್ರವಾದ ನಿಧಾನವಾಗಿ ತನ್ನ ಹೆಡೆ ಬಿಚ್ಚುತ್ತಿತ್ತು . ಆಗಷ್ಟೇ ಆಫ್ಘಾನಿಸ್ತಾನವನ್ನ ರಷ್ಯಾದ ಬಾಹುಗಳಿಂದ ಬೇರ್ಪಡಿಸುವಲ್ಲಿ  ನಂಬಿಕಸ್ಥ ಸಹಾಯಕನಾಗಿ ಒದಗಿಬಂದ ಪಾಕಿಸ್ತಾನ  ಸಹಜವಾಗಿ ಅಮೇರಿಕಾದ ಕಣ್ಮಣಿಯಾಗಿತ್ತು . ಕಾಶ್ಮೀರದಲ್ಲಿ ಭಾರತದ ದಬ್ಬಾಳಿಕೆ ವಿರೋಧಿಸಿ ತಮ್ಮ ನ್ಯಾಯೋಚಿತ ಸ್ವಾತಂತ್ರವನ್ನು ಕೇಳುತ್ತಿರುವ ಜನರಿಗೆ ತನ್ನದು ನೈತಿಕ ಸಮರ್ಥನೆ ಅಷ್ಟೇ ಎಂಬ ಪಾಕಿಸ್ತಾನದ ವಾದಕ್ಕೆ ಅಮೇರಿಕಾ ಮತ್ತು ಯೂರೋಪಿನ ರಾಷ್ಟ್ರಗಳ ಮೃದು ಪ್ರೋತ್ಸಾಹವೂ ಇತ್ತು . ಇಷ್ಟು ಸಾಕಿತ್ತು ಪಾಕಿಸ್ತಾನಕ್ಕೆ.  ಅಫ್ಘಾನಿಸ್ತಾನದಲ್ಲಿ ಐಎಸ್ಐ ಸಹಾಯದಿಂದ ಹುಟ್ಟಿಕೊಂಡಿದ್ದ ಬಾಡಿಗೆ ಯೋಧರೆಲ್ಲ ಭಾರತದೊಳಕ್ಕೆ ನುಸುಳಿಸಲು ಅದರ ಯೋಜನೆ ಸಿದ್ಧವಾಗಿತ್ತು. ದಿನಭತ್ಯೆಯ ಮೇಲೆ ದುಡಿಯುತ್ತಿದ್ದ ಈ ಕೂಲಿ ಉಗ್ರರಿಗೆ ತನ್ನ ದೇಶದ ಗಡಿಯಿಂದಲೇ ಭಾರತದೊಳಕ್ಕೆ ಕಳ್ಳಸಾಗಣಿಕೆಗೆ ಶುರುವಿಟ್ಟಿತ್ತು.

ಮತ್ತಷ್ಟು ಓದು »

6
ಜುಲೈ

ಜನರಲ್ ತಿಮ್ಮಯ್ಯ

– ಸಿ. ರವಿ ಕುಮಾರ್

gen_k_s_thimayyaಒಂದು ದಿನ ನನ್ನ ತಂದೆಯವರು ತಮ್ಮ ಬಳಿ ಇದ್ದ ಮಿಲಿಟರಿ ಇತಿಹಾಸ ಈ ಒಂದು ಘಟನೆಯನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ಬಹುಶಃ ನಮ್ಮ ಅಂದಿನ ಪ್ರಧಾನಿ ನೆಹರುರವರು ಈ ವ್ಯಕ್ತಿಯ ಅನುಭವವನ್ನು ಬಳಸಿಕೊಂಡಿದ್ದರೆ 1962ರ ಚೇನದೊಡನೆ ನಡೆದ ಯುದ್ಧದ ಗತಿ ಬದಲಾಗುತ್ತಿತ್ತೊ ಏನೊ? `ಅಪ್ಪಣೆ ಮೀರಿ ತಿಮ್ಮಯ್ಯ ಗೆದ್ದಾಗ’ ಎರಡನೇ ಮಹಾಯುದ್ಧದ ಮಧ್ಯಕಾಲ. ಜಪಾನಿ ಪಡೆಗಳು ಬರ್ಮಾ ದೇಶದಲ್ಲಿ ಹೊಕ್ಕು ಎತ್ತೆತ್ತಲೂ ಹಬ್ಬಿದ್ದವು. ಇರಾವತೀ ನದಿಯ ಕಣಿವೆ ಜಪಾನೀಯರ ವಶವಾಗಿ ಬ್ರಹ್ಮಪುತ್ರಾ ಕಣಿವೆಯೀಗ ಅವರ ತೋಪುಗಳ ಗರ್ಜನೆಯಿಂದ ಪ್ರತಿಧ್ವನಿಸುತ್ತಿತ್ತು. ಬ್ರಿಟಿಶ್ ಸಾಮ್ರಾಜ್ಯವಾದದ ಪರಕ್ರಮ ಸೂರ್ಯ ಅಕಾಲದಲ್ಲೇ ಅಸ್ತಂಗತನಾಗಿದ್ದ. ಬೆಟ್ಟದ ಒಂದು ಕೋಡಿನಲ್ಲಿ ಇನ್ನೂರೈವತ್ತು ಜಪಾನೀ ಸೈನಿಕರು ಕಂದಕ ತೋಡಿ ಬಲವಾಗಿ ತಳವೂರಿದ್ದರು. ಆ ಶೃಂಗದ ಕೆಳಗೆ ಕಡಿದಾದ ಬೆಟ್ಟದ ಗೋಡೆಗೆ ಅಂಟಿಕೊಂಡು ಭಾರತ ಸೈನ್ಯದ ಕುಮಾಂವ್ ರೆಜಿಮೆಂಟಿನ ಜವಾನರು ಟೆಂಟ್ ಹಾಕಿದ್ದರು. ಎರಡು ಸೈನ್ಯದ ಸೈನಿಕರು ತಮ್ಮ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡು ಮುನ್ನುಗುವ ದಾರಿಯನ್ನು ಯೋಚಿಸುತ್ತಿದ್ದವು. ಮತ್ತಷ್ಟು ಓದು »