ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮೀಡಿಯಾ’

14
ಸೆಪ್ಟೆಂ

ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?

– ವಿನಾಯಕ ಹಂಪಿಹೊಳಿ

 imagesರಾಜ್ಯಾದ್ಯಂತ ಪ್ರತಿಭಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳುವಾಹನಗಳಿಗೆ ಬೆಂಕಿ ಹಚ್ಚುವದರ ಮೂಲಕ ಕಲ್ಲು ತೂರುವ್ರದರ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂಬ ಮಾತನ್ನು ಬಳಸಿದ್ದೇ ತಪ್ಪು ಎಂಬುದು ನನ್ನ ಅನಿಸಿಕೆ. ಏಕೆಂದರೆ ಇಂತಹ ಅನೈತಿಕ ಕಾರ್ಯಗಳನ್ನು, `ಆಕ್ರೋಶದ ಸಹಜ ಅಭಿವ್ಯಕ್ತಿ’ ಎಂಬಂತೆ ಬಿಂಬಿಸಿರುವದೇ ಕ್ರಿಯೆಯನ್ನು ಸಮರ್ಥಿಸಿದಂತೆ. ಉದಾಹರಣೆಗೆಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ಬಾಂಬು ಹಾಕುವದರ ಮೂಲಕ ಭಯೋತ್ಪಾದಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರುಎಂದು ಸುದ್ದಿ ಬಿತ್ತರಿಸಿದರೆ ಹೇಗಿರುತ್ತದೆ? ಭಯೋತ್ಪಾದಕರಂತೆ ಜೀವ ತೆಗೆದಿಲ್ಲ ಎನ್ನುವದನ್ನು ಒಪ್ಪಬಹುದು. ಆದರೆ ಸಾಲಸೋಲ ಮಾಡಿ ಪಡೆದ ಲಾರಿಗಳೇ, ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಲಾರಿ ಡ್ರೈವರು ಕ್ಲೀನರುಗಳಿಗೆ, ಅವರ ಸಂಸಾರಕ್ಕೆ ಇದ್ದ ಒಂದೇ ಜೀವನೋಪಾಯವನ್ನೇ, ಕಸಿದುಕೊಳ್ಳುವದು ಸರಿಯೇ? ಜೀವ ತೆಗೆಯುವದಕ್ಕಿಂತ ಜೀವನ ತೆಗೆಯುವದು ಕಡಿಮೆ ಅಪರಾಧವಾಯಿತೇ?

ಮತ್ತಷ್ಟು ಓದು »

6
ನವೆಂ

ಸುದ್ಧಿಮಾಧ್ಯಮ: ದೇಶ ಬೆನ್ನಿಗೆ ಕಟ್ಟಿಕೊಂಡ ಕೆಂಡ

– ಪ್ರೇಮಶೇಖರ

ಪೇಯ್ಡ್ ಮೀಡಿಯಾ26/11ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ ‘ಉಪದೇಶ’ ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ.  ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ.  ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.”  ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಆ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ.  ಈ ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ.  ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.

ಮತ್ತಷ್ಟು ಓದು »

28
ಆಕ್ಟೋ

ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ

– ಪ್ರೇಮಶೇಖರ

ಪೇಯ್ಡ್ ಮೀಡಿಯಾಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ!  ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.

ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ.  ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!

ಮತ್ತಷ್ಟು ಓದು »

12
ಜೂನ್

ಈಶಾನ್ಯ ಭಾರತದೆಡೆಗೂ ಕ್ಯಾಮೆರಾ ತಿರುಗಿಸಿ ಮಾಧ್ಯಮಗಳೇ

– ವಿದ್ಯಾ ಕಾಶೀಕರ

ಈಶಾನ್ಯ ಭಾರತೀಯರುಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುದುವರಿಯುತ್ತಿರುವ ದೇಶದಲ್ಲಿ ಭಾರತ ಒಂದು.ಐತಿಹಾಸಿಕ,ಸಾಂಸ್ಕೃತಿಕ,ಪರಂಪರೆ ಮತ್ತು ಉದಾರ ವ್ಯಕ್ತಿತ್ವಕ್ಕಾಗಿ ಈ ದೇಶ ಯಾವಗಲೂ ಬೇರೆ ದೇಶಗಳಿಂದ ಗೌರವ ಪಡೆದಿದೆ.ವಿಶ್ವಕ್ಕೆ ಶಾಂತಿ,ಸಹಬಾಳ್ವೆಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಬಾಳುತ್ತಿರುವ ಈ ದೇಶವನ್ನು ಎಷ್ಟೆಲ್ಲಾ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ವಿಶ್ವದಲ್ಲಿ ತನ್ನ ಛಾಪನ್ನುಮೂಡಿಸಿದೆ.ಶೋಚನೀಯ ಸಂಗತಿಯೆಂದರೆ, ಯಾವ ಕಾರಣಕ್ಕಾಗಿ ನಾವು ಗೌರವಿಸುವಿಸಲ್ಪಡುತ್ತಿದ್ದೇವೋ ಅದನ್ನು ತೊರೆದು,ಬೇರೊಂದು ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅಂಧಾನುಕರಣೆ ಮಾಡುವುದಲ್ಲದೇ, ನಮ್ಮ ಮೂಲವನ್ನೇ ಅವಹೇಳನ ಮಾಡುವ ಸ್ಥಿತಿಗೆ ಈಗಿನ ಯುವ ಜನಾಂಗ ತಲುಪಿರುವುದು. ನಮ್ಮ ಜನರ ಭಕ್ತಿಯು ಕೇವಲ ಮಂದಿರ-ಗುಡಿಗಳಲ್ಲಿ ಪ್ರಾರ್ಥಿಸುವಾಗ ಮಾತ್ರ ಉದ್ಭವವಾಗುತ್ತದೆ. ಅಲ್ಲಿಂದ ಹೊರಬಂದ ಮರುಕ್ಷಣದ ಸನ್ನಿವೇಶವೇ ಬೇರೆ.ನೈಜಭಕ್ತಿಯು,ನನ್ನ ದೇಶ, ನನ್ನ ನಾಡು-ಭಾಷೆ, ವಿಷಯಗಳಲ್ಲಿ ವ್ಯಕ್ತವಾಗಬೇಕು. ಮಂದಿರಗಳಲ್ಲಿ ಶುದ್ಧನಾಗಿ ಸೇವೆ ಸಲ್ಲಿಸಿ ,ಮಂದಿರದ ಸುತ್ತ ಹೊಲಸು ಮಾಡಿದರೆ ಮೆಚ್ಚನಾ ಪರಮಾತ್ಮನು, ಹಣ್ಣಿನ ಸಿಪ್ಪೆಯನ್ನೋ, ಇನ್ನಾವುದೋ ತ್ಯಾಜ್ಯವನ್ನೋ ಬೀದಿಯಲ್ಲಿ ಚೆಲ್ಲಿದರೆ, ಮಹಿಳೆಯರೊಂದಿಗೆ  ಅಸಭ್ಯವಾಗಿ ವರ್ತಿಸಿದರೆ, ಅದು ಅನಾಗರೀಕತೆಯ ಪರಮಾವಧಿಯಲ್ಲದೆ ಮತ್ತೇನು?

ಒಮ್ಮಿಂದೊಮ್ಮೆಲೇ ಸಮಾಜದಲ್ಲಿ ಇಂತಹ ಆಚರಣೆಗಳು ಕಾಲಿಡುವುದಿಲ್ಲ. ಇದಕ್ಕೆ, ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಮನೋರಂಜನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಟಿ.ಆರ್.ಪಿ. ಹೆಚ್ಚಿಸಲು ವಿಧ-ವಿಧದ ಕಾರ್ಯಕ್ರಮಗಳನ್ನು ನೀಡುತ್ತವೆ. ಹಲವು ಮೂಲಭೂತ ಸಮಸ್ಯೆಗಳು ನಮ್ಮ ಸುತ್ತಲೂ ತಲೆ ಎತ್ತಿ ನರ್ತಿಸುತ್ತಿದ್ದರೂ, ಅದನ್ನು ಮೂಲೆಗುಂಪಾಗಿಸಿ,ಮಹಿಳಾ ಸ್ವಾತಂತ್ರದ  ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದವನ್ನು ,ಜಾತಿ,ಧರ್ಮಗಳನ್ನ ನಿಂದಿಸಿದವರನ್ನು ಪುಕ್ಕಟೆ ಪ್ರಚಾರ ಕೊಟ್ಟು, ಬುದ್ದಿಜೀವಿಗಳೆಂದು ನಾಮಕರಣ ಮಾಡಿ ಜನಪ್ರಿಯ ವ್ಯಕ್ತಿಯನ್ನಾಗಿ ಮಾಡುತ್ತವೆ.ಕಟ್ಟಡದ ಆಧಾರವೇ ಕುಸಿಯುತಿರುವಾಗ, ಬಣ್ಣ ಬಳಿದು ಚಂದವಾಗಿಸುವುದು ಸರಿಯೇ?”
ಮತ್ತಷ್ಟು ಓದು »

28
ನವೆಂ

ಅಭಿವ್ಯಕ್ತಿ ಸ್ವಾತಂತ್ರವೆಂಬ ಕಪಟ ನಾಟಕ

– ಹೃಷಿಕೇಶ್ ಚಿಕ್ಕಮಗಳೂರು

tv9ಇತ್ತೀಚೆಗೆ ಕಳೆದ ಸೋಮವಾರದಿಂದ ಟಿ.ವಿ9 ವಾಹಿನಿಯನ್ನು ಪ್ರಸಾರ ಮಾಡದಂತೆ ಘನ ಸರ್ಕಾರದ ಮುಖ್ಯಸ್ಥರು ಕೇಬಲ್ ಆಪರೇಟರ್ ಗಳಿಗೆ ಫತ್ವಾವನ್ನು ಹೊರಡಿಸಿದ್ದರು.ಅದರನ್ವಯ ಬಹುತೇಕ ಪ್ರದೇಶಗಳಲ್ಲಿ ಆ ವಾಹಿನಿಯು ಕೇಬಲ್ ವಾಹಿನಿಗಳ ಲಿಸ್ಟ್ ನಿಂದ ಮಾಯವಾಗಿತ್ತು.(ನಂತರ ಕೇಬಲ್ ಆಪರೇಟರುಗಳ ಜೊತೆ ಮತುಕತೆಯೆಂಬ ಕಾರ್ಯಕ್ರಮದ ನೆಪದಲ್ಲಿ ಈ ಫತ್ವಾವನ್ನು ಹಿಂಪಡೆದು,ವಾಹಿನಿಯ ಪ್ರಸಾರಕ್ಕೆ ಅವಕಾಶಕೊಡಲಾಯಿತು)ಆ ವಾಹಿನಿಯನ್ನು ನೋಡದೆ ಊಟ ನಿದ್ದೆ ಬಿಟ್ಟು ಯಾರೂ ಸಾಯದೇ ಇದ್ದರೂ ಸಹ ಒಂದು ಆಸಕ್ತದಾಯಕ ಬೆಳವಣಿಗೆಯೊಂದು ಕಂಡುಬರುತ್ತದೆ. ಅದೆಂದರೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿ, ಹಾಗೂ ಸರ್ಕಾರದ ನಾಲ್ಕನೇ ಅಂಗ ಎಂದೇ ಖ್ಯಾತಿ ಗಳಿಸಿದ ಮಾಧ್ಯಮದ ಮೇಲೆ ಒಂದು ಸುತ್ತಿನ ಬಿಗಿಹಿಡಿತ ಸಾಧಿಸಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿರುವುದು ಗೋಚರವಾಗುತ್ತಿದೆ.

ಹಾಲಿ ಸಚಿವರೊಬ್ಬರ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಈ ವಾಹಿನಿಗೆ ವಕ್ರದೃಷ್ಟಿ ಬಿದ್ದಂತಾಗಿದೆ. ವಿಷಯ ಏನೇ ಇದ್ದಿರಿಲಿ, ಆದರೆ ಸರ್ಕಾರದ ವಿರುದ್ಧ ಕಾರ್ಯಕ್ರಮಗಳನ್ನು ಮಾಡಲೇಬಾರದು ಎಂಬುದು ದಾಷ್ಟ್ಯದ ಪರಮಾವಧಿ ಎಂದೇ ಹೇಳಬೇಕು. ಬ್ರಿಟೀಷರ ನಂತರ ಪತ್ರಿಕಾ ಸ್ವಾತಂತ್ಯದ ಮೇಲೆ ನಿರ್ಬಂಧವನ್ನು ಹೇರಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ತದ ನಂತರ ಆ ಕೀರ್ತಿ ಪ್ರಸ್ತುತ ಸರ್ಕಾರಕ್ಕೆ ಸಲ್ಲುತ್ತದೆ. ಎಲ್ಲಾ ಮಾಧ್ಯಮದ ಮೇಲೂ ನಿರ್ಬಂಧ ಹೇರದಿದ್ದರೂ ನಿರ್ದಿಷ್ಟವಾಗಿ ತನಗೆ ಆಗದವರ ಮೇಲೆ ನಿರ್ಬಂಧ ಹೇರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಯಲ್ಲದೆ ಮತ್ತೇನೂ ಅಲ್ಲ.

ಮತ್ತಷ್ಟು ಓದು »

25
ಜುಲೈ

ಅತ್ಯಾಚಾರ: ಹುಯಿಲೆಬ್ಬಿಸುವುದೇಕೆ?

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

Stop Rapeಕಳೆದ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. 2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?

ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.

ಮತ್ತಷ್ಟು ಓದು »

25
ನವೆಂ

ಧರ್ಮವನ್ನು ಅಫೀಮು ಎಂದವರಿಂದ ಮತ್ತೇನು ನಿರೀಕ್ಷಿಸಲಾದೀತು?

– ನರೇಂದ್ರ ಕುಮಾರ ಎಸ್.ಎಸ್

Tarun Tejpalತೆಹಲ್ಕಾ’ದ ತರುಣ್ ತೇಜಪಾಲ್ ಅವರು ನಡೆಸಿರುವರೆನ್ನಲಾದ ಲೈಂಗಿಕ ಹಲ್ಲೆ ಪ್ರಕರಣ, ಮಾಧ್ಯಮದ ಮುಖವಾಡವನ್ನು ಕಿತ್ತೆಸೆದಿದೆ. ಇದೇ ’ತೆಹಲ್ಕಾ’ವು, ಆಗಾಗ “ಕುಟುಕು ಕಾರ್ಯಾಚರಣೆ”ಯ ಮೂಲಕ ರಾಜಕಾರಣಿಗಳನ್ನು ಸಿಕ್ಕಿಹಾಕಿಸುತ್ತಿತ್ತು. ಒಂದು ಗುಪ್ತ ಕ್ಯಾಮೆರಾ ಜೊತೆಗೆ ತೆರಳುವ ಈ “ಕುಟುಕು ಕಾರ್ಯಾಚರಣೆ ಪಡೆ”, ರಾಜಕಾರಣಿಗಳಿಗೆ ತಿಳಿಯದಂತೆ ಬಲೆ ಬೀಸುತ್ತಿತ್ತು. ಅವರಿಗೆ ಆಮಿಷವನ್ನು ತೋರಿಸಿ, ಆಗ ನಡೆಯುವ ಪೂರ್ಣ ಸಂಭಾಷಣೆಯನ್ನು ಕ್ಯಾಮೆರಾ ಮೂಲಕ ಸೆರೆಹಿಡಿದು, ಆ ನಂತರ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿತ್ತು. ಆ ವಿಡಿಯೋ ನೋಡಿದ ಜನ, ಅದರಲ್ಲಿರುವ ರಾಜಕಾರಣಿ ಭ್ರಷ್ಟಾಚಾರಿಯೇ ಎಂದು ನಿರ್ಧಾರಕ್ಕೆ ಬರುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತಿತ್ತು. ನ್ಯಾಯಾಂಗ ವಿಚಾರಣೆಯ ಬದಲು ಮಾಧ್ಯಮಗಳೇ ವಿಚಾರಣೆ ನಡೆಸಿ, ರಾಜಕಾರಣಿಯನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿಬಿಡುತ್ತಿತ್ತು.

ವ್ಯಕ್ತಿಯೊಬ್ಬ ಭ್ರಷ್ಟಾಚಾರಿ ಅಲ್ಲದಿದ್ದರೂ, ಆಮಿಷಕ್ಕೊಳಗಾಗಿ ಕೆಲವು ತಪ್ಪುಗಳನ್ನು ಮಾಡುವನು. ಉದಾಹರಣೆಗೆ, ಮನೆಗೆಲಸಕ್ಕೆ ಬರುವ ಹುಡುಗ/ಹುಡುಗಿ ಕಳ್ಳರಾಗಿರುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಿ ಸಂಪಾದಿಸುವ ಉದ್ದೇಶ ಹೊಂದಿಯೇ ಕೆಲಸಕ್ಕೆ ಬಂದಿರುತ್ತಾರೆ. ಆದರೆ, ಅವರು ಕೆಲಸ ಮಾಡುವ ಮನೆಯಲ್ಲಿ, ಈ ಹುಡುಗ/ಹುಡುಗಿಯ ಕಣ್ಣಿಗೆ ಕಾಣಿಸುವಂತೆ ಹಣವನ್ನೋ ಇಲ್ಲವೇ ಆಭರಣಗಳನ್ನೋ ಇಟ್ಟಿದ್ದರೆ, ಅವರು ಆಮಿಷಕ್ಕೆ ಒಳಗಾಗಿಬಿಡುತ್ತಾರೆ. ಅಲ್ಲಿ ಇಟ್ಟಿರುವ ಹಣ/ಆಭರಣವನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದಾಗ, ಅದನ್ನು ತೆಗೆದುಕೊಳ್ಳೋಣ ಎಂದೆನ್ನಿಸಿಬಿಡಬಹುದು. ಆಮಿಷದಿಂದ ಉಂಟಾದ ಆಸೆಯಿಂದ ತಪ್ಪಿಸಿಕೊಳ್ಳಲಾಗದೆ “ಕಳ್ಳತನ” ನಡೆದುಬಿಡುತ್ತದೆ. ಇಲ್ಲಿ ಕಳ್ಳತನ ಮಾಡಿದ ಹುಡುಗ/ಹುಡುಗಿಯದು ಎಷ್ಟು ತಪ್ಪೋ, ಅಷ್ಟೇ ತಪ್ಪು ಆ ಹಣ/ಆಭರಣಗಳನ್ನು ಇವರ ಕಣ್ಣಿಗೆ ಕಾಣುವಂತೆ ಇಟ್ಟು ಆಮಿಷ ಕೊಟ್ಟವರದೂ ಆಗಿರುತ್ತದೆ, ಅಲ್ಲವೆ?

ಮತ್ತಷ್ಟು ಓದು »

14
ಆಕ್ಟೋ

ಸೌಜನ್ಯ ಹಂತಕರು ನೇಣಿಗೇರುವುದೆಂತು?

– ರಾಕೇಶ್ ಶೆಟ್ಟಿ

Justice for Kumari Soujanya“ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರೂ ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…” ಅಂತ ’ನಿರ್ಭಯ’ ಅತ್ಯಾಚಾರದ ಪ್ರಕರಣದ ಸಮಯದಲ್ಲಿ ಬರೆದಿದ್ದೆ. ಮತ್ತೆ ಅದೇ ಸಾಲುಗಳನ್ನು ನಮ್ಮ ಧರ್ಮಸ್ಥಳದ ’ಸೌಜನ್ಯ’ ಅನ್ನುವ ಹೆಣ್ಣುಮಗಳ ಬಗ್ಗೆ ಬರೆಯುವಾಗಲೂ ಬಳಸಬೇಕಾಗಿ ಬಂದಿದೆ.ಆಗ ಕೃಷ್ಣನೇನೋ ಕರೆದಾಗ ಬಂದಿದ್ದ.ಆದರೆ ಇಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾಕೋ ವರುಷ ಕಳೆದರೂ ಇನ್ನು ಕರುಣೆ ತೋರಲಿಲ್ಲ …! ನನಗೆ ಈ ದೇವರುಗಳ ಮೇಲೆ ಒಮ್ಮೊಮ್ಮೆ ಕೋಪಬರುವುದು ಇದೇ ಕಾರಣಕ್ಕಾಗಿ, ಏನೆಲ್ಲಾ ಪಾಪಗಳನ್ನು ಮಾಡಿ ಒಂದು ನೇಮ,ಒಂದು ಹರಕೆ,ಒಂದು ಹೋಮ,ಒಂದು ಹವನ,ತಪ್ಪು ಕಾಣಿಕೆ ಸಲ್ಲಿಸಿ ಸುಮ್ಮನಾಗಿಬಿಡಬಹುದೇ? ಹಾಗಿದ್ದರೆ ’ಧರ್ಮ’ವೆಲ್ಲಿದೆ?

ದಿಲ್ಲಿಯಲ್ಲಿ ಕಳೆದ ಡಿಸೆಂಬರಿನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ’ನಿರ್ಭಯ’ ಅತ್ಯಾಚಾರ ಪ್ರಕರಣದಲ್ಲಿ ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದರು.ಅದು ದೇಶವ್ಯಾಪಿಯೂ ಹಬ್ಬಿತ್ತು. ಖುದ್ದು ಕೇಂದ್ರ ಸರ್ಕಾರವನ್ನೇ ಮಂಡಿಯೂರುವಂತೆ ಮಾಡಿದ್ದು ಯುವಶಕ್ತಿಗೆ ಸಂದ ಜಯವಾಗಿತ್ತು.ಈಗ ನಿರ್ಭಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ.ಆದರೆ ನಮ್ಮ ಸೌಜನ್ಯ ಪ್ರಕರಣದ ಆರೋಪಿಗಳೇ ಇನ್ನೂ ಸಿಕ್ಕಿಲ್ಲ…! ಅತ್ಯಾಚಾರದ ಆರೋಪಿಗಳನ್ನು ವರ್ಷವಾದರೂ ಬಂಧಿಸಲಾಗದಷ್ಟು ನಿಷ್ಕ್ರಿಯರಾಗಿದ್ದಾರೆಯೇ ನಮ್ಮ ಕರ್ನಾಟಕ ಪೋಲಿಸರು? ಅಥವಾ ಪೋಲಿಸರನ್ನು ನಿಷ್ಕ್ರಿಯಗೊಳಿಸುವಲ್ಲಿ ಕಾಣದ ’ಕೈ’ ಗಳು ಕೆಲಸ ಮಾಡುತ್ತಿವೆಯೇ? ಪ್ರಕರಣ ನಡೆದಾಗ ಇದ್ದಿದ್ದು ಬಿಜೆಪಿ ಸರ್ಕಾರ.ಈಗ ಇರುವುದು ಕಾಂಗ್ರೆಸ್ಸ್ ಸರ್ಕಾರ.ಹಾಗಿದ್ದರೆ ಆ ಕಾಣದ ಕೈಗಳು ಸರ್ಕಾರದ ಕೈಗಳನ್ನೇ ಕಟ್ಟಿಹಾಕಬಲ್ಲಷ್ಟು ಬಲಿಷ್ಟವಾಗಿವೆಯೇ?

ಮತ್ತಷ್ಟು ಓದು »

12
ಆಕ್ಟೋ

ಸುದ್ಧಿ ಮಾಡುವವರಲ್ಲಿ ಶುದ್ಧಿ ಇಲ್ಲವಾದರೆ. . .

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

Paid Media       ಇಂದು ವಾರ್ತಾ ವಾಹಿನಿಗಳು ಯಥಾತ್‍ಶಿರ್ಘ ಸುದ್ಧಿಗಳನ್ನು ಜಗತ್ತಿನ ಮೂಲೆ ಮೂಲೆಗೂ ಅತಿ ವೇಗದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ಇದರಿಂದ ಉಪಯೋಗವಿದೆ ಎನ್ನುವುದು ನಿಜವೇ  ಆದರೂ ಸುದ್ಧಿ ಹೇಳುವ ಮನಸ್ಸುಗಳ ಹಿಂದೆ ಶುದ್ಧಿ ಇಲ್ಲದಿರುವುದು ಗೋಚರವಾಗುತ್ತಿದೆ. ಹಾಗಾಗಿ ಅವುಗಳ ಹಿಂದಿರುವ ಉದ್ದೇಶ ಪ್ರಶ್ನಾರ್ಹವಾಗುತ್ತಿದೆ.  ಒಂದು ಕಾಲವಿತ್ತು ಒಬ್ಬ ವ್ಯಕ್ತಿಗೆ  ಅಪಮಾನವೆನಿಸುವ  ಸುದ್ಧಿಯೊಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಬಂದರೆ ಅದರಿಂದ ವ್ಯಕ್ತಿಗೆ ಅದು ನಿಜವಿರಲಿ, ಸುಳ್ಳಿರಲಿ  ಒಂದೋ ಅವನಿಗದು ಆಘಾತ ತರುವಂತಿತ್ತು ಅಥವಾ ಆತ ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಳಪಡಿಸುವ ಸಾಧನವಾಗಿರುತ್ತಿತ್ತು. ಅದು ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನದಲ್ಲಿರುವವನಾಗಿದ್ದರೆ ಕೂಡಲೇ ರಾಜೀನಾಮೆ ನೀಡಿ ಅದರಿಂದ ಬಿಡುಗಡೆ ಹೊಂದುವ ಸಾಕ್ಷಿಪ್ರಜ್ಞೆ ಆತನನ್ನು ಎಚ್ಚರಿಸುತ್ತಿತ್ತು. ಆದರೆ ಕಾಲ ಬದಲಾಗಿದೆ. ಅಕ್ಷರ ಮಾಧ್ಯಮಗಳಿಗಿಂತ ದೃಶ್ಯ ಮಾಧ್ಯಮಗಳು ಅದರಲ್ಲೂ ಸುದ್ಧಿ ವಾಹಿನಿಗಳು ಇನ್ನಿಲ್ಲದ ವೇಗದಲ್ಲಿ ಕಾರ್ಯಪ್ರವೃತ್ತವಾಗಿವೆ.  ಕ್ಷಣಾರ್ಧದಲ್ಲಿ ಅದು ಅಸಲಿಯೋ ನಕಲಿಯೋ ಅಂತೂ ಸುದ್ಧಿಗಳು ಬಿತ್ತರವಾಗುತ್ತವೆ. ಆದರೆ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಮಾತ್ರ ಅದು ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ.  ಏಕೆಂದರೆ ಸುದ್ಧಿ ಮಾಡುವವನ ಮತ್ತು ಸುದ್ಧಿಯಾಗುವವನಲ್ಲಿ  ಚಿತ್ತಶುದ್ಧಿಯಿಲ್ಲದಿರುವುದು! ಸುದ್ಧಿ ಮಾಡುವ ದಾವಂತದಲ್ಲಿ ಅದರಿಂದಾಗುವ ಪರಿಣಾಮವನ್ನು ಸುದ್ಧಿ ಮಾಡುವವ ಯೋಚಿಸುತ್ತಿಲ್ಲವೋ ಅಥವಾ ಅದು ತನಗೆ ಸಂಬಂದಿಸಿದ್ದಲ್ಲ ಎನ್ನುವ ತಾತ್ಸಾರ ಮನೋಭಾವವೋ ಗೊತ್ತಿಲ್ಲ ಅಂತೂ ಅನಾಹುತ ಮಾಡುವುದರಲ್ಲೇ ಆನಂದ ಕಾಣುತ್ತಿವೆ ನಮ್ಮ ಅನೇಕ ದೃಶ್ಯ ಮಾಧ್ಯಮಗಳು.

ಕೆಲ ವರ್ಷಗಳ ಹಿಂದೆ ಕನ್ನಡದ ಸುದ್ಧಿ ಮಾಧ್ಯಮವೊಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳು ತೀವ್ರ ಅಸ್ವಸ್ಥವೆಂದು ‘ಬ್ರೇಕಿಂಕ್ ನ್ಯೂಸ್’ ಹಾಕಿತು. ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರು ಆತಂಕದಿಂದ ಆಸ್ಪತ್ರೆ ಸುತ್ತ ಜಮಾವಣೆಗೊಂಡರು. ಜನರಿಗೆ ಅಲ್ಲಿನ ಆಸ್ಪತ್ರೆ ಮತ್ತು ಅದರ ಸಿಬ್ಬಂದಿ ದಾಳಿಯ ವಸ್ತುವಾದರು. ಆದರೆ ಅದರ ನೈಜ ವಿಚಾರವೆಂದರೆ ಅಸ್ವಸ್ಥಗೊಂಡ ಒಂದೆರಡು ಮಕ್ಕಳು ಸೇವಿಸಿದ ಆಹಾರ Food Poison ಅಗಿದ್ದು .  ಆ ಸುದ್ಧಿ ಮಾಧ್ಯಮ ಮಾಡಿದ ಅವಾಂತರದ ಬಗ್ಗೆ ಅಂದಿನ  ಗೃಹ ಸಚಿವರಾದ ವಿ.ಎಸ್. ಆಚಾರ್ಯರು ಗಮನ ಸೆಳೆದರೂ ಅದು ತನ್ನ ದುಡುಕುತನದ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ. ಹೀಗೆ ಸುದ್ಧಿ ಮಾಧ್ಯಮಗಳು ಸುದ್ಧಿ ಮಾಡುವ ಭರದಲ್ಲಿ ಅವುಗಳು ಮಾಡುವ ಅವಾಂತರಗಳೇ ದೊಡ್ಡ ಸುದ್ಧಿಯಾದರೂ ಅವುಗಳಿಗೇನು ಪಶ್ಚತ್ತಾಪವಾಗುವುದಿಲ್ಲ. ಜನರಿಗೆ ಉಚಿತ ಬುದ್ಧಿ ಹೇಳುವುದಷ್ಟೇ ಅವುಗಳ ಕೆಲಸ

ಮತ್ತಷ್ಟು ಓದು »

5
ಆಗಸ್ಟ್

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

– ಪ್ರೇಮಶೇಖರ
Terrorismತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ.
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.