ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮೀಸಲಾತಿ’

17
ಜೂನ್

ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)

praveenkumar mavina kadu

ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮತ್ತಷ್ಟು ಓದು »

14
ಏಪ್ರಿಲ್

ಬಾಬಾಸಾಹೇಬ್ ಅಂಬೇಡ್ಕರ್ : ಇದ್ದದ್ದು ಇದ್ದ ಹಾಗೆ

– ರೋಹಿತ್ ಚಕ್ರತೀರ್ಥ

images (2)ಇದು ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಸಪಾದ ಜನ್ಮಶತಮಾನೋತ್ಸವದ ವರ್ಷ. ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಹುಟ್ಟಿದ ಅಂಬೇಡ್ಕರ್ ಆ ಕಾಲದ ಅನಕ್ಷರತೆ, ಜಾತಿ ತಾರತಮ್ಯ, ಶೋಷಣೆ, ನಿರುದ್ಯೋಗ, ಸ್ವಾತಂತ್ರ್ಯ ಹೋರಾಟ ಮುಂತಾದ ಎಲ್ಲ ಪರಿಸ್ಥಿತಿಗಳನ್ನೂ ನೋಡಬೇಕಾಯಿತು, ಸ್ವತಃ ಅನುಭವಿಸಬೇಕಾಯಿತು. ಹುಡುಗ ಚೂಟಿ, ಬುದ್ಧಿವಂತ. ಜಾತಿಯ ಕಾರಣವೊಂದೇ ಮುಂದಾಗಿ ಆತನ ಭವಿಷ್ಯವನ್ನು ಕಮರಿಸಬಾರದೆಂಬ ಎಚ್ಚರದಿಂದ ಬ್ರಾಹ್ಮಣ ಗುರು ಮಹಾದೇವ ಅಂಬೇಡ್ಕರ್, ತನ್ನ ಈ ಪ್ರೀತಿಯ ಶಿಷ್ಯನಿಗೆ ಅಂಬಾವಾಡೇಕರ್ ಎಂಬ ಕುಲಸೂಚಕವನ್ನು ತಿದ್ದಿ ಅಂಬೇಡ್ಕರ್ ಎಂಬ ನಾಮಕರಣ ಮಾಡಿದರು. ಅಲ್ಲಿಂದ ಮುಂದಕ್ಕೆ ಹುಡುಗ, ಹುಟ್ಟಿದೂರು ಸತಾರದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಮುಂಬಯಿಯ ಪ್ರತಿಷ್ಠಿತ ಎಲ್ಫಿನ್‍ಸ್ಟನ್ ಹೈಸ್ಕೂಲು, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್ ಪ್ರವಾಸಗಳನ್ನು ಮಾಡಿದ್ದೆಲ್ಲ ನಂಬಲಸಾಧ್ಯವೆನಿಸುವ ವಾಸ್ತವ.ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪಡೆದಾಗ ಅಂಬೇಡ್ಕರರಿಗೆ 26 ವರ್ಷ. ನಂತರದ ಪ್ರಯಾಣ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಡೆಗೆ. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಬ್ಯಾರಿಸ್ಟರ್-ಎಟ್-ಲಾ ಎಂಬ ಕಾನೂನು ಪದವಿ ಪಡೆದು, ತನ್ನ 32ನೇ ವಯಸ್ಸಿಗೆ ಡಿಎಸ್‍ಸಿ ಗಳಿಸಿ ಭಾರತಕ್ಕೆ ಮರಳಿದರು. ದಲಿತರ ಹುಡುಗನೊಬ್ಬ ಹೀಗೆ ಅಖಂಡ 28 ವರ್ಷ ವ್ಯಾಸಂಗವೊಂದರಲ್ಲೇ ಮುಳುಗಿ, ವಿದೇಶದ ಹೆಸರುವಾಸಿ ಸಂಸ್ಥೆಗಳಲ್ಲಿ ಡಿಗ್ರಿಯ ಮೇಲೆ ಡಿಗ್ರಿಯನ್ನು ಸಂಪಾದಿಸಿದ ಕತೆ ರೋಮಾಂಚನಗೊಳಿಸುವಂಥಾದ್ದು. ಮತ್ತಷ್ಟು ಓದು »

11
ಏಪ್ರಿಲ್

ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?

– ರಾಜಕುಮಾರ.ವ್ಹಿ.ಕುಲಕರ್ಣಿ,

ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation2012-13 ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಂಪರ್ಕಿಸಿದ್ದುಂಟು. ಕಳೆದ ವರ್ಷ ಸುಮಾರು ಇಪ್ಪತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿತ್ತು.ಆ ಎಲ್ಲ ವಿದ್ಯಾರ್ಥಿಗಳ ಪಾಲಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ವಿದ್ಯಾರ್ಥಿಗಳ ಪಾಲಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈಹಿಡಿದೆತ್ತಿ ಮುಖ್ಯವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು.

ಮತ್ತಷ್ಟು ಓದು »

2
ಜುಲೈ

ಸೂಪರ್ ನ್ಯೂಮರರಿ ಕೋಟಾ: ಪ್ರಾಮಾಣಿಕತೆಗೆ ಟಾಟಾ?

– ತುರುವೇಕೆರೆ ಪ್ರಸಾದ್

studentsಎಐಸಿಟಿಯು 2011-12ನೇ ಸಾಲಿನಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರೂ.2.5ಲಕ್ಷ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳಿಗೆ ಪ್ರತಿ ಕೋರ್ಸ್‍ಗಳ ಒಟ್ಟು ಪ್ರವೇಶಾತಿಯ ಮೇಲೆ ಶೇ.5ರಷ್ಟು ಸಂಖ್ಯಾಧಿಕ ಸೀಟುಗಳನ್ನು  ಬೋಧನಶುಲ್ಕ ವಿನಾಯಿತಿ ಯೋಜನೆಯಡಿ(ಸೂಪರ್ ನ್ಯೂಮರರಿ ಕೋಟಾ) ಹಂಚಿಕೆ ಮಾಡುವ ಯೋಜನೆಯನ್ನು ಜಾರಿಗೆ ತಂದಿತ್ತು. 2013-14ನೇ ಸಾಲಿಗೆ ಈ ಯೋಜನೆಯಡಿ ಆದಾಯ ಮಿತಿಯನ್ನು ರೂ.4.5ಲಕ್ಷಕ್ಕೆ ಏರಿಸಲಾಗಿತ್ತು. ಸದರಿ ವಾರ್ಷಿಕ ಆದಾಯವನ್ನು ಎಐಸಿಟಿಯು ರೂ.6 ಲಕ್ಷಕ್ಕ ಏರಿಸಿದ್ದು ರೂ.6 ಲಕ್ಷ ಆದಾಯದಡಿ ಹೆಚ್ಚಿನ ವಿದ್ಯಾರ್ಥಿಗಳು ಇರುವುದರಿಂದ ವಾರ್ಷಿಕ ಆದಾಯ ರೂ.2.5 ಲಕ್ಷ ಆದಾಯ ಮಿತಿಯೊಳಗಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೀಟು ಸಿಗುವ ಸಂಭವ ಕಡಿಮೆ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಹಿನ್ನಲೆಯಲ್ಲಿ  ಕರ್ನಾಟಕ ಸರ್ಕಾರ 2014-15ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಫೆ.26ರಂದು ನಡೆದ ಪರೀಕ್ಷಾ ಪ್ರಾಧಿಕಾರದ ಆಢಳಿತ ಮಂಡಳಿಯ ಸಭೆಯಲ್ಲಿ ಬೋಧನಾ ಶುಲ್ಕದ ವಿನಾಯಿತಿ ನೀಡಲು ಕೇಂದ್ರ ಸರ್ಕಾರದ ಸೂಪರ್ ನ್ಯೂಮರರಿ ಕೋಟಾ ಅಡಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪೋಷಕರ ಆದಾಯ ಮಿತಿಯನ್ನು ಪರಿಷ್ಕರಿಸಿ 5 ವರ್ಗಗಳಾಗಿ (ರೂ.1-2ಲಕ್ಷ, 2-3 ಲಕ್ಷ, 3-4 ಲಕ್ಷ, 4-5 ಲಕ್ಷ, 5-6ಲಕ್ಷ) ವಿಂಗಡಿಸಲಾಗಿದೆ. ಒಟ್ಟಾರೆ ಲಭ್ಯವಿರುವ ತಾಂತ್ರಿಕ ಕಾಲೇಜು ಸೀಟುಗಳ ಶೇ.5ರಷ್ಟು ಸೀಟುಗಳಲ್ಲಿ ಈ ಯೋಜನೆಯಡಿ ಮೊದಲು 1-2 ಲಕ್ಷ ಆದಾಯ ಮಿತಿ ಇರುವ ವಿದ್ಯಾರ್ಥಿಗಳಿಗೆ  ಆದ್ಯತೆಯ ಮೇಲೆ ಸೀಟು ಹಂಚಿಕೆ ಮಾಡಿ ಉಳಿದ ಸೀಟುಗಳನ್ನು ಹಂಚಲು ಇದೇ ಕ್ರಮವನ್ನು ಇತರೆ 4 ವರ್ಗಗಳಿಗೆ ಅನುಸರಿಸಲಾಗುತ್ತದೆ. ಇದು ಎಲ್ಲಾ ಸರ್ಕಾರಿ, ವಿಶ್ವವಿದ್ಯಾಲಯ, ಅನುದಾನಿತ, ಖಾಸಗಿ ಅನುದಾನರಹಿತ( ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತವಲ್ಲದ)ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಈ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 90 ಸಾವಿರ ಎಂಜಿನಿಯರಿಂಗ್ ಸೀಟುಗಳಲ್ಲಿ ಪ್ರತಿ ಕೋರ್ಸ್‍ನ ಶೇ.5 ಅಂದರೆ ಸುಮಾರು 4500 ಸೀಟುಗಳು ಸೂಪರ್ ನ್ಯೂಮರರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಆದಾಯವನ್ನು  ಪ್ರಮಾಣೀಕರಿಸುವ ಸಂಬಂಧಿಸಿದ ಪ್ರಾಧಿಕಾರ ( ತಹಸೀಲ್ದಾರ್, ನಗರಪಾಲಿಗೆ ಅಧಿಕಾರಿ) ನೀಡಿದ ಅಧಿಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಮತ್ತಷ್ಟು ಓದು »

27
ಮೇ

ನಮಗೆಂಥ ಮೀಸಲಾತಿ ಬೇಕು?

– ವಲವಿ ಬಿಜಾಪೂರ

Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation Policy India Reservationಶ್ರೀ ಹೋ.ಬ ರಘೋತ್ತಮ ಅವರ “ಅಸ್ಪೃಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ” ಎಂಬ ಲೇಖನವನ್ನು ಓದಿ ಪ್ರತಿಕ್ರಿಯಿಸುವದು ನನಗೆ ಅನಿವಾರ್ಯವಾಗಿದ್ದರಿಂದ ಈ ಲೇಖನ ಬರೆಯುತ್ತಿದ್ದೇನೆ.ಅವರು ಲೇಖನ ಬರೆದಲ್ಲೇ ಪ್ರತಿಕ್ರಿಯೆ ಬರೆಯಬಹುದಾಗಿತ್ತು. ಆದರೆ ತಮ್ಮ ವಿಚಾರಗಳಿಗೆ ವಿರುದ್ಧವಾಗಿ ಏನೇ ಬರೆದರೂ ಕೆಲವು ಬ್ಲಾಗಿನಲ್ಲಿ ಪ್ರಕಟವಾಗುವುದಿಲ್ಲ.ವಿರುದ್ಧ ಕಮೆಂಟುಗಳನ್ನೂ ಪ್ರಕಟಿಸುವದಿಲ್ಲ. ಯಾಕೆಂದರೆ ಅವರು ಪ್ರಗತಿಪರರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಬೆಲೆ ಕೊಡುವವರೂ ಆಗಿದ್ದಾರೆ. !? ಅದಕ್ಕಾಗಿ ನಿಲುಮೆಯಲ್ಲಿ ನನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸುತ್ತಿದ್ದೇನೆ.

ಲೇಖನದ ಮೊದಲಿಗೆ ಹೇಳುತ್ತಿದ್ದೇನೆ. ನಾನು ಮೀಸಲಾತಿ ವಿರೋಧಿಯಲ್ಲ. ಮೀಸಲಾತಿ ಹೇಗಿದ್ದರೆ ಸರ್ವರಿಗೂ ಒಳಿತಾಗುತ್ತದೆ ಎಂಬ ಕುರಿತು ಮಾತ್ರ ಹೇಳುತ್ತಿದ್ದೇನೆ.

ಶ್ರೀ ರಘೋತ್ತಮ ಅವರು ಹೇಳುತ್ತಾರೆ. ” ಕೆದರಿದ ತಲೆಯ, ಗಲೀಜು ಬಟ್ಟೆಯ, ಎಣ್ಣೆ ಕಾಣದ ಹಳ್ಳಿ ಹೆಂಗಸೊಬ್ಬಳು ಅವರಿಗೆ {ಗರಿಗರಿಯಾಗಿ ಇಸ್ತ್ರೀ ಮಾಡಿದ ನೀಟಾದ ಬಟ್ಟೆ ಉಟ್ಟುಕೊಂಡು ನಾಗರೀಕರು ನೌಕರರು ಆಗಿರುವ] ಏಕವಚನದಲ್ಲಿ ಮಾತನಾಡಿಸಿದಳಂತೆ ಕಾರಣ ಆಕೆ ರಘೋತ್ತಮರ ಊರಿನ ಮೇಲ್ಜಾತಿಯವಳಾಗಿದ್ದರಿಂದ ಮತ್ತು ಇವರು ದಲಿತರಾಗಿದ್ದರಿಂದ ಕಡಲೆಕಾಯಿ ಮಾರುವ ಹೆಂಗಸಾದ ಅವಳು ಮೇಲಿರಿಮೆಯ ಸೊಕ್ಕಿನಿಂದ ಹೀಗೆ ಮಾತನಾಡಿದಳೆಂಬ ಧ್ವನಿ ಬರುವಂತೆ ಬರೆದಿದ್ದಾರೆ. ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರನೆ ತಲೆಮಾರಿನ ದಲಿತರಿಗೆ ಮೀಸಲಾತಿ ಕೊಡದಿರುವಂತೆ ಚಿಂತಿಸುತ್ತಿದೆ. ಎಂದು ಆಂಗ್ಲ ಪತ್ರಿಕೆಯೊಂದರ ಸುದ್ದಿಯನ್ನೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳು ದಲಿತರಿಗೆ ಒಳ್ಳೆಯ ದಿನಗಳಲ್ಲ ಎಂಬ ಆತಂಕವನ್ನು ಸಹ ತೋಡಿಕೊಂಡಿದ್ದಾರೆ. ಗೋಧ್ರೋತ್ತರ ಮಾರಣಹೋಮದಂತೆ ಮೋದಿ ಇನ್ನೋಂದು ಮಾರಣಹೋಮಕ್ಕೆ ಸಜ್ಜಾದರೆ ಎಂದೂ ಸೇರಿಸುತ್ತಾರೆ.

ಆದರೆ ನನ್ನ ಅಭಿಪ್ರಾಯವೆಂದರೆ ಶ್ರೀ ರಘೋತ್ತಮರು ದಲಿತರಲ್ಲಿ ವಿನಾಕಾರಣ ಮೋದಿ ವಿರುದ್ಧ ಭಯ ಮೂಡಿಸುತ್ತಿದ್ದಾರೆ.ಎನಿಸುತ್ತದೆ. ಇರಲಿ, ನಾನೂ ಸಹ ನಮ್ಮೂರಿಗೆ ಹೋದಾಗ ನಮ್ಮ ಹಳ್ಳಿಯ ಜನ ನನ್ನನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ನಾನು ಇಡೀ ಭಾರತ ದೇಶವೇ ತಿಳಿದುಕೊಂಡಂತೆ ಮೇಲು ಜಾತಿಯಲ್ಲಿ [??] ಜನಿಸಿದವಳು. ಆದರೂ ನಮ್ಮೂರಿನ ಜನ ನನ್ನನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅನೇಕರು “ಯಾಕವ್ವಾ ಮಗಳ… ಎಂದ ಬಂದ್ಯವಾ? ಎಲ್ಲಾ ಪಾಡ [ಚನ್ನಾಗಿ] ಅದೀರಾ? ಎಲ್ಲಿ ಯಾವೂರಾಗ ಅದಿಯವಾ ? ಕುರುಸಾಲ್ಯಾ ನನ್ನ ಅಳ್ಯಾ ಬಂದಿಲ್ಲೇನ? [ನಮ್ಮ ಮನೆಯವರಿಗೆ ಹೀಗೆ ಸಂಬೋಧಿಸುತ್ತಾರೆ. ಊರ ಅಳಿಯನಿಗೆ ಹೀಗೆ ಸಂಬೋಧಿಸಬೇಕೆಂಬ ಅಲಿಖಿತ ನಿಯಮ. ] ನಮ್ಮ ಚಾಜಗಾರ ಕುಳ [ನಮ್ಮಿಂದ ಸನ್ಮಾನ ಕಾಣಿಕೆ ಪಡೆಯುವ ಹೆಣ್ಣು ಮಕ್ಕಳ ಮಗ] ಬಂದಿಲ್ಲೇನ??” ಹೀಗೆ ಮಾತನಾಡಿಸುತ್ತಾರೆ. ನಾನೂ ಸಹ ಸರಕಾರಿ ನೌಕರಿಯಲ್ಲಿ ನಮ್ಮ ಮನೆಯವರು ಸಹ ಸರಕಾರಿ ನೌಕರಿಯಲ್ಲಿ ಇದ್ದೇವೆ. ಮೇಲುಜಾತಿಯವರಾಗಿದ್ದೆವೆ. ಉತ್ತಮ ಗರಿಗರಿಯಾದ ಬಟ್ಟೆಗಳನ್ನು ಧರಿಸಿಯೇ ನಮ್ಮೂರಿಗೆ ಹೋಗಿರುತ್ತೇವೆ. ಆ ಹಳ್ಳಿಗರಿಗಿಂತ ಸಾವಿರ ಪಾಲು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಆದರೆ ನಾವೆಂದೂ ಅವರು ನಮ್ಮನ್ನು ಬಹುವಚನದಲ್ಲಿ ಮಾತನಾಡಿಲ್ಲವೆಂದು ಸಿಟ್ಟಿಗೆ ಬಂದಿಲ್ಲ. ನಾನೂ ಕೂಡ ಹೌಂದ ಕಾಕಾ, ದೊಡ್ಡಪ್ಪ, ಮುತ್ಯಾ ಆಯಿ, ಚಿಗವ್ವ, ದೊಡ್ಡವ್ವ, ಅತ್ತಿ, ಮಾಮಾ ಹೀಗೆ ಹೇಳಿ ನಾನು ಕ್ಷೇಮವಾಗಿದ್ದನ್ನು ಹೇಳುತ್ತೇನೆ. ಇಲ್ಲಿ ಅವರ ಪ್ರೀತಿ ತಮ್ಮ ಮನೆಯ ಮಗಳೇ ನಮ್ಮೂರಿಗೆ ಬಂದಳೆಂದು ತಿಳಿಯುವ ಅವರ ಆತ್ಮೀಯತೆ ಗಮನಿಸಬೇಕೆ ಹೊರತು ಅವರ ಭಾಷೆಯಲ್ಲ. ನಾವು ಭಾರತದ ರಾಷ್ಟ್ರಪತಿಯಾಗಿ ನಮ್ಮೂರಿಗೆ ಹೋದರೂ ನಮ್ಮ ಜನಗಳು “ಏನವಾ ತಂಗೀ ಏನೋ ದೊಡ್ಡ ಸಾಬ್ತಿ ಆಗೀಯಂತಲ್ಲವಾ? ಶಿವಾ ಚಲೂ ಮಾಡಿದ ಬಿಡೂ… ನನ್ನ ಆಶೀ [ಆಯುಷ್ಯ] ಎಲ್ಲ ನಿನಗಾಗಲಿ. ಚಂದಾಗಿ ಸಿವಾ ನಿನ್ನ ಇಡಲಿ”. ಎಂದಾರೇ ವಿನಃ ಅವರಿಗೆ ರಾಷ್ಟ್ರಪತಿಗೆ ಗೌರವ ಕೊಡಬೇಕೆಂಬ ಇರಾದೆ ಇರುವದಿಲ್ಲ. ಅವರಿಗೆ ನಾವು ಅವರೂರಿನ ಮಗ , ಮಗಳು ಅಷ್ಟೇ.

ಇರಲಿ, ನಮ್ಮೂರಿನ ಜನರ ಪುರಾಣವಾಯಿತು. ನಾನೀಗ ಹೇಳ ಹೊರಟಿರುವದು ಮೀಸಲಾತಿ ಹೇಗಿರಬೇಕೆಂಬ ಕುರಿತು. ಅದಕ್ಕೂ ಮುನ್ನ ಒಂದು ರೂಪಕದ ಉದಾಹರಣೆ ಹೇಳಿ ಮುಂದುವರಿದರೆ ಓದುಗರಾದ ನಿಮಗೆ ಹೆಚ್ಚು ಅರ್ಥವಾಗುತ್ತದೆಂದು ಅಂದುಕೊಳ್ಳುತ್ತೇನೆ.
ಮತ್ತಷ್ಟು ಓದು »

10
ಮಾರ್ಚ್

ಜಾತೀಯತೆ: ಏನು? ಎತ್ತ?

– ಡಾ. ಶ್ರೀಪಾದ ಭಟ್

ಜಾತಿ ರಾಜಕಾರಣಸೆಪ್ಟೆಂಬರ್ 13, 2007ರಂದು 11 ನೇ ಪಂಚವಾರ್ಷಿಕ ಯೋಜನೆ ಕುರಿತ ಯೋಜನಾ ಆಯೋಗದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ “ಸ್ಪೆಶಲ್ ಅಟೆನ್ಷನ್ ವುಡ್ ನೀಡ್ ಟು ಬಿ ಪೇಯ್ಡ್ ಟು ಡಿಸ್ಟ್ರಿಕ್ಟ್ಸ್ ವಿತ್ ಎಸ್‍ಸಿ, ಎಸ್‍ಟಿ, ಒಬಿಸಿ ಆಂಡ್ ಮೈನಾರಿಟಿ ಕಾನ್ಸನ್‍ಟ್ರೇಶನ್’’ ಎಂದು ಭಾಷಣ ಮಾಡಿದ್ದರು. ಅಲ್ಪ ಸಂಖ್ಯಾತರಿಗೆ ಸರ್ಕಾರಿ ಯೋಜನೆಯಲ್ಲಿ ಸಿಂಹಪಾಲು ದೊರೆಯಬೇಕು ಎಂದೂ ಅವರು ಹೇಳಿದ್ದರು. ಸಿಂಗ್ ಮೂಲತಃ ಅರ್ಥಶಾಸ್ತ್ರಜ್ಞರು, ರಾಜಕಾರಣಿಯಲ್ಲ. ಆದರೆ ಅವರ ಧಾಟಿ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಯಾವ ರಾಜಕಾರಣಿಗೂ ಕಡಿಮೆ ಇರಲಿಲ್ಲ. ಅಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಎಲ್ಲ ಹಾಜರಿದ್ದರು. ಸರ್ಕಾರದ ಯೋಜನೆಯ ಲಾಭ ಬಡವರಿಗೆ ದೊರೆಯಬೇಕು ಎಂದು ಹೇಳುವ ಬದಲು ಅಲ್ಪ ಸಂಖ್ಯಾತರಿಗೆ ದೊರೆಯಬೇಕು ಎಂದು ಅವರು ಹೇಳಿದ್ದರಲ್ಲಿ ಅಭಿವೃದ್ಧಿಗಿಂತಲೂ ಮತಗಳಿಕೆಯ ವಾಸನೆ ಢಾಳಾಗಿ ರಾಚಿದರೆ ಅದರಲ್ಲಿ ಅವರ ತಪ್ಪಿಲ್ಲ. ಕರ್ನಾಟಕದಲ್ಲಿ ಶಾದಿ ಭಾಗ್ಯ ಯೋಜನೆ ಕುರಿತ ಸರ್ಕಾರದ ನಿಲುವನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡಬಹುದು. ಆ ಸರ್ಕಾರ, ಈ ಸರ್ಕಾರ ಎಂದಲ್ಲ ಎಲ್ಲ ಸರ್ಕಾರಗಳ ಯೋಜನೆಗಳೂ ಮತಗಳಿಕೆಯತ್ತ ನೆಟ್ಟಿರುವುದರಿಂದ ಅವರ ಘೋಷಣೆಗಳು ಹೀಗಾಗಿಬಿಡುತ್ತವೆ ಅಷ್ಟೆ.

ಮತ್ತಷ್ಟು ಓದು »

19
ಜೂನ್

ಮೀಸಲಾತಿ ಕೇವಲ ಉಳ್ಳವರಿಗೆ ಮಾತ್ರನಾ?

– ಮುರುಳಿಧರ್ ದೇವ್

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಒಬ್ಬ ದಲಿತ ಹೆಂಗಸು ತನ್ನ ಮಗ ಕರ್ನಾಟಕ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ೧೨೦೦೦ ರ್‍ಯಾಂಕ್ ಬಂದಿರೋದನ್ನ ತುಂಬಾ ಖುಷಿಯಿಂದ ಹೇಳ್ಕೋತ ಇದ್ಲು. ಇದೇನು ೧೨೦೦೦ ರ್‍ಯಾಂಕ್ ಬಂದಿರೋದು ಅಂತ ದೊಡ್ಡ ವಿಷಯ ಅಂತ ಅನ್ಕೋಬೇಡಿ. ಅವಳು ಮನೆ ಮನೆಗಳಲ್ಲಿ ಪಾತ್ರೆ ತೊಳೆದು ತನ್ನ ಮಗನನ್ನು ಓದುಸ್ತ ಇರೋದು. ಅವರ ಕುಟುಂಬದಲ್ಲಿರೋದು ನಾಲ್ಕು ಜನ, ಗಂಡ ದಿನ ಕುಡಿದು ಬಂದು ಇವಳನ್ನು ಹೊಡೆಯೋದು, ಮಗಳು ಈಗ ೯ನೆ ತರಗತಿ ಓದ್ತಾ ಇರೋದು. ಸಂಪೂರ್ಣ ಮನೆಯ ಜವಾಬ್ದಾರಿ ಇವಳ ಹೆಗಲಿಗೆ. ಆದರೆ ಆ ಹುಡುಗನ ಮುಖದಲ್ಲಿ ಸಂತಸಕ್ಕಿಂತ ಮುಂದೇನು ಅನ್ನೋ ಚಿಂತೆಯೇ ಬಹುವಾಗಿ ಕಾಡ್ತಾ ಇತ್ತು. ಮಾತಿನ ಮಧ್ಯೆ ಯಾಕಿಷ್ಟು ಚಿಂತೆ ಪಡ್ತಿಯ, ಹೇಗಿದ್ರು ಸರಕಾರದವರು ದಲಿತರಿಗಾಗಿ ಶೈಕ್ಷಣಿಕ ಸೌಲಭ್ಯ ಕೊಡುತ್ತೆ, ನಿನ್ನ ಫೀಸ್ ಬಗ್ಗೆನು ಯೋಚಿಸಬೇಡ ಅಂತ ಹೇಳ್ತಾ ಇದ್ದೆ. ಆದ್ರೆ ಇದ್ಯಾವುದರಿನ್ದಾನು ಆತನ ಮುಖದಲ್ಲಿನ ಚಿಂತೆ ಕಡಮೆ ಆಗ್ಲಿಲ್ಲ.

ಕೊನೆಗೆ ಆತನೇ, ಸರಕಾರದವರೆನೋ ಶುಲ್ಕ ತುಂಬುತ್ತಾರೆ, ಆದರೆ ಮಿಸಲಾತಿ ಇದ್ದರು ಒಳ್ಳೆಯ ಕಾಲೇಜ್ ನಲ್ಲಿ ಸೀಟು ದೊರಕೋದು ಕಷ್ಟ ಅಂದ. ನಾನೋ ಅದ್ಯಾಕೆ ಮಿಸಲಾತಿ ಇರೋದು ಹಿಂದುಳಿದ ಜನಾಂಗ ಮುಂದೆ ಬರಲಿ ಅಂತ ಹೇಳಿದ್ರೆ ಎಲ್ಲಿತ್ತೋ ಕೋಪ ಎಲ್ಲ ಸೇರ್ಸಿ ಹೇಳ್ದ, ನಂಗೆ ಮನೇಲಿ ಕಷ್ಟ ಇದೆ ಅದ್ಕೆ ೧೨೦೦೦ ರ್‍ಯಾಂಕ್ ಬಂದಿದೆ ಸ್ವಲ್ಪ ಮಟ್ಟಿಗೆ ತೀರ ಒಳ್ಳೇದು ಅಲ್ಲದೆ ಇದ್ರುನು ಉತ್ತಮ ಕಾಲೇಜ್ ನಲ್ಲಿ ಸೀಟು ಸಿಗಬಹುದು, ಆದರೆ ನಮ್ಮ ಅಮ್ಮ ಕೆಲಸಕ್ಕೆ ಹೋಗೋ ಮನೆಯ ಯಜಮಾನ ಸರಕಾರದಲ್ಲಿ ಉನ್ನತ ಹುದ್ದೆಲಿ ಇದ್ದಾರೆ, ಅವರ ಮಗನಿಗೆ ಖಾಸಗಿಯಾಗಿ ಕೋಚಿಂಗ್ ಕೊಡ್ಸಿದಾರೆ, ಇಷ್ಟಾಗಿಯೂ ಅವನಿಗೂ ನನಗು ಇರೋ ರ್‍ಯಾಂಕ್ ವ್ಯತ್ಯಾಸ ಕೇವಲ ೫೦೦.

ಮತ್ತಷ್ಟು ಓದು »