ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮೈಸೂರು’

14
ನವೆಂ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

– ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾಧಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ. Read more »

7
ನವೆಂ

ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ

– ಸಂತೋಷ್ ತಮ್ಮಯ್ಯ

ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ. Read more »

30
ಆಕ್ಟೋ

ಇವರಿಗೆ ಮೊದಲೇ ದೀಪಾವಳಿಯಿಲ್ಲ ; ಹತ್ತು ದಿನದಲ್ಲೇ ಅದನ್ನು ನಿಲ್ಲಿಸಿದ ಟಿಪ್ಪುವಿನ ಜಯಂತಿ!

– ಸಂತೋಷ್ ತಮ್ಮಯ್ಯ

dsc8476_tipu_sultan_mಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. Read more »

30
ಮೇ

ಪ್ಯಾಸೆಂಜರ್ ರೈಲು ….

– ಫಣೀಶ್ ದುದ್ದ

india_power_outage_07ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು. Read more »