ಟಿಪ್ಪು ಜಯಂತಿ ಬೇಕಿರುವುದು ಯಾರಿಗೆ ?
– ರೋಹಿತ್ ಚಕ್ರತೀರ್ಥ
ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು ಸಂದಾಯವಾಗಿದ್ದವು. ಆ ಕಚೇರಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ; ಇದ್ದೊಂದು ಕೊಳ ಒಡೆದುಹೋಗಿ ಆರು ತಿಂಗಳ ಮೇಲಾಯಿತು; ಗೋಡೆಗೆ ಸುಣ್ಣಬಣ್ಣ ಹೊಡೆಸದೆ ನಾಲ್ಕು ವರ್ಷಗಳಾಗುತ್ತ ಬಂತು; ಊರಿನಲ್ಲೊಂದು ಸಣ್ಣ ಸಂಕ ಕಟ್ಟಿಸಬೇಕೆಂದು ಬೇಡಿಕೆ ಇಟ್ಟೂ ಇಟ್ಟೂ ಅರ್ಜಿ ಕೊಟ್ಟೂ ಕೊಟ್ಟೂ ಬೇಸತ್ತು ಕೊನೆಗೆ ಊರವರೇ ಒಂದಷ್ಟು ದುಡ್ಡು ಹಾಕಿ ಏನೋ ತಮ್ಮ ಸಂಕ ತಾವೇ ಕಟ್ಟಿಕೊಂಡಿದ್ದಾರೆ. ಆ ತಾಲೂಕಿನ ಕೆಲವು ರಸ್ತೆಗಳಿಗೆ ಒಂದೊಮ್ಮೆ ಓಬೀರಾಯನ ಕಾಲದಲ್ಲಿ ಜಲ್ಲಿ ಹೊಡೆಸಿದ್ದು, ಅದೀಗ ಡಾಂಬರಿಗೆ ಅನುದಾನ ಸಿಗದೆ ಮತ್ತೆ ಮಣ್ಣಿನ ರಸ್ತೆಯಾಗುವ ಸ್ಥಿತಿಗೆ ಬಂದಿದೆ. ಮತ್ತಷ್ಟು ಓದು
ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈಬಿಡಲಿದೆಯೋ…?
– ಸಂತೋಷಕುಮಾರ ಮೆಹೆಂದಳೆ. ಕೈಗಾ
( ನಾನು ನನ್ನ ಸಮಾಜ ಮತ್ತು ಧರ್ಮಾಧಾರಿತ ವೃತ್ತದಲ್ಲಿ ನನ್ನ ಹಿರಿಮೆಯನ್ನು ಸ್ಥಾಪಿಸಿಕೊಳ್ಳುವುದು ಹೇಗೆ..? ಇನ್ನೊಂದು ಧರ್ಮವನ್ನು ಮುಗಿಸಿ ಹಾಕುವುದರ ಮೂಲಕ. ಇದು ಸುಲಭದ ದಾರಿ ಮತ್ತು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಟಿಪ್ಪು ಮಾಡಿದ್ದೂ ಅದೇ. ಅನಾಮತ್ತಾಗಿ ಲಕ್ಷಗಟ್ಟಲೇ ಹಿಂದೂಗಳನ್ನು ವರ್ಷವಧಿಯೊಳಗೆ ಮುಗಿಸಿ ಹಾಕಿ, ಕೊಡವರ ಒಂದು ತಲೆಮಾರನ್ನೇ ನಿರ್ನಾಮ ಮಾಡಿ, ಅದನ್ನು ಸಾಧನೆ ಎಂಬಂತೆ ಪತ್ರಗಳ ಮೂಲಕ ಪ್ರಚುರಪಡಿಸಿದ ಕೂಡಾ. ಆದರೆ ಇವತ್ತಿಗೂ ಅವನ ಭಜನೆ ಮಾಡುತ್ತಿರುವ ಭಟ್ಟಂಗಿಗಳಿಗೆ ತಾವೂ ಮುಂದೊಮ್ಮೆ ಇಂತಹದ್ದೇ ಪರಿಸ್ಥಿತಿಗೆ ಈಡಾಗಲಿದ್ದೇವೆ ಎನ್ನುವ ಅರಿವಾದರೂ ಬೇಡವಾ…? ) ಮತ್ತಷ್ಟು ಓದು
ಟಿಪ್ಪು: ಸುಲ್ತಾನನೋ.. ಸೈತಾನನೋ?
– ರೋಹಿತ್ ಚಕ್ರತೀರ್ಥ
ಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ! ಇರಲಿ, ಈ ಜಯಂತಿಯಾದರೂ ಸುಸೂತ್ರವಾಗಿ ನಡೆದಿದ್ದರೆ; ಒಂದಷ್ಟು ಒಳ್ಳೆಯ ಕೆಲಸಗಳು ಆ ಮೂಲಕವಾದರೂ ಆಗಿದ್ದರೆ ರಾಜ್ಯದ ಜನ ನೆಮ್ಮದಿ ಕಾಣುತ್ತಿದ್ದರೋ ಏನೋ. ಆದರೆ, ಈ ಜಯಂತಿ ಜನರ ಕಾರ್ಯಕ್ರಮವಾಗದೆ ಕೇವಲ “ಸರಕಾರಿ ಆಚರಣೆ” ಮಾತ್ರವೇ ಆಗಿ ಉಳಿಯಿತು. ತನ್ನ ಸಮಸ್ತ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೆ ಮೆಚ್ಚಿಕೆಯಾಗುವ ಕೆಲಸ ಮಾಡುವ ಅವಕಾಶವನ್ನು ತಾನಾಗಿ ಕೈಚೆಲ್ಲಿ ಸರಕಾರ ಒಂದು ಗುಂಪಿನ ಮನಮೆಚ್ಚಿಸಲು ಹೋಗುವುದು ಅಗತ್ಯವಿತ್ತೆ ಎಂಬ ಪ್ರಶ್ನೆ ಎದ್ದಿತು. ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತ ಒಬ್ಬ ಬುದ್ಧಿಜೀವಿ, “ಈಗಾಗಲೇ ಹಲವು ಜಾತಿ-ಕೋಮುಗಳ ಜನರಿಗೆ ಬೇಕಾದ ಜಯಂತಿಗಳಿವೆ. ಆದರೆ ಮುಸ್ಲಿಮರಿಗೆ ಹೇಳಿಕೊಳ್ಳುವಂಥ ಯಾವುದೇ ಸರಕಾರೀ ಕಾರ್ಯಕ್ರಮ ಇರಲಿಲ್ಲ. ಈಗ ಶುರುಮಾಡಿರುವ ಜಯಂತಿಯನ್ನು ಆ ನಿಟ್ಟಿನಲ್ಲಿ ಯೋಚಿಸಿ ಸ್ವಾಗತಿಸಬೇಕು” ಎಂಬ ಮಾತುಗಳನ್ನು ಆಡಿದರು. ಜಯಂತಿಗಳನ್ನು ರಾಜ್ಯದಲ್ಲಿರುವ ವಿವಿಧ ಜಾತಿ-ಪಂಗಡಗಳನ್ನು ಮೆಚ್ಚಿಸಲಿಕ್ಕಾಗಿ ಆಚರಿಸಲಾಗುತ್ತದೆ ಎಂಬ ಸತ್ಯ ಅವರ ಈ ಮಾತುಗಳ ಮೂಲಕ ಹೊರಬಿದ್ದಿದೆ. ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ ಬಾಯಿತಪ್ಪಿ ಹೇಳಿಬಿಟ್ಟಿದ್ದಾರೆ! ಮತ್ತಷ್ಟು ಓದು