ವಿಷಯದ ವಿವರಗಳಿಗೆ ದಾಟಿರಿ

Posts tagged ‘ಯಡಿಯೂರಪ್ಪ’

2
ಆಗಸ್ಟ್

ಏನಾಗಿದೆ ಕರ್ನಾಟಕದಲ್ಲಿ ಬಿಜೆಪಿಗೆ?

– ಶಿವಾನಂದ ಹಿರೇಮಠ

ಬಿಜೆಪಿ ಕಾರ್ಯಕರ್ತನೊಬ್ಬನ ಮನದಾಳದ ಮಾತುಗಳು…

ವಿಶ್ವದ ಅತಿದೊಡ್ಡ ಪಕ್ಷ, ಕೋಟ್ಯಾಂತರ ಸದಸ್ಯರು, ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪೂರ್ಣಾವಧಿ ಕಾರ್ಯಕರ್ತರು, ನೂರಾರು ನೇತಾರರು…

ಶೂನ್ಯದಿಂದ ಮೇಲೆದ್ದು ರಾರಾಜಿಸುತ್ತಿರುವರು. ವಿಶ್ವಮಾನ್ಯತೆ ಪಡೆದ ರಾಜಕೀಯ ವಿಚಾರಧಾರೆ, ಧ್ಯೇಯ ಸಿದ್ಧಾಂತ… ಅಧಿಕಾರ ರಾಜಕೀಯದ ಆಸಕ್ತಿ ಇಲ್ಲ, ಆದರೂ ರಾಷ್ಟ್ರಹಿತ ರಾಜಕಾರಣಕ್ಕಾಗಿ ಬಿಜೆಪಿಯ ಬೆನ್ನಿಗೆ ಸದಾಕಾಲ ನಿಂತ ವಿಚಾರ ಪರಿವಾರದವರು.ಎಲ್ಲಕ್ಕಿಂತ ಮಿಗಿಲಾದ ಜನತಾ ಜನಾರ್ದನನ ಕೃಪೆ…

ಇಷ್ಟೆಲ್ಲ ಇದ್ದರೂ ನಾಶದ ಹಾದಿಯಲ್ಲಿ ಸಾಗುತ್ತಿರುವ ಉಳಿದ ರಾಜಕೀಯ ಪಕ್ಷದ ರೋಗಾಣುಗಳು ಬಿಜೆಪಿಯನ್ನು ಪ್ರವೇಶಿಸಿದ ಲಕ್ಷಣ ಗೋಚರವಾಗತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ಮನಸ್ಸಿಗೆ ಆತಂಕ ಮಾಡುವ ಲಕ್ಷಣಗಳಿವು.

Party with a difference…now party with Differences ಆಗುತ್ತಿದೆಯೇ? ಪ್ರಧಾನಿಯ ಪದವಿಯನ್ನು ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸದೇ ಶ್ರೇಷ್ಠತೆ ಮೆರೆದ ಪಕ್ಷ ಇತಿಹಾಸ ಮರೆಯಿತೇ?

ಮತ್ತಷ್ಟು ಓದು »
1
ಮೇ

ಯಾರು ಹಿತವರು ಯಡ್ಯೂರಪ್ಪನವರಿಗೆ..?

ರಾಕೇಶ್ ಶೆಟ್ಟಿ

“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!

ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ  ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?

ಮತ್ತಷ್ಟು ಓದು »

21
ಏಪ್ರಿಲ್

ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.!

– ಸಾಮಾನ್ಯ ಕಾರ್ಯಕರ್ತ.

ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ನನಗಿರುವ ಯೋಗ್ಯತೆಯಾದರು ಏನು ಎಂದು ನನ್ನ ಮನಸ್ಸು ಯಾವಾಗಲು ಪ್ರಶ್ನಿಸುತ್ತದೆ. ಯಡಿಯೂರಪ್ಪನವರು ನನ್ನ ಪಕ್ಷದ ಬೆಳವಣಿಗೆಗೆ ಸವೆಸಿರುವ ಕಾಲ ಚರ್ಮದ ಮೂಲೆಯಲ್ಲಿರುವ ದೂಳಿಗೆ ಸಮನಲ್ಲ ಎನ್ನುವ ಶ್ರದ್ದೆ ಇಂದಿಗೂ ಎಂದಿಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಒಂದಿಡೀ ಯುವ ಸಮೂಹ ತಾಯಿಭಾರತಿಯನ್ನು ವಿಶ್ವಗುರು ಸ್ಥಾನದಲ್ಲಿ ಕುಳ್ಳಿರಿಸಲು ಎಲ್ಲವನ್ನು ತೊರೆದು ದುಡಿಯುತ್ತಿರುವಾಗ, ಆ ಕಾರ್ಯ ಸಾಧನೆಗೆ ಪೂರಕವಾಗಿ ನೀವೊಂದಿಷ್ಟು ಜರೂರ್ ಕೆಲಸಗಳನ್ನು ಮಾಡಲೇಬೇಕಾಗಿರುವುದರಿಂದ ಹಾಗು ನೀವು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವುದರಿಂದ ನಿಮ್ಮ ಬಳಿ ದೇಶದ ಯುವ ಸಮೂಹದ ಪರವಾಗಿ ಈ ಕೆಲಸಗಳನ್ನು ದಯಮಾಡಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಹಾಗು ಬಿಜೆಪಿಯ ನಾಯಕ ಪಟ್ಟ ಅಲಂಕರಿಸಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿರುವ ಹಲವು ಮಹಾಶಯರಿಗೂ ಬದಲಾಗುತ್ತಿರುವ ಭಾರತದ ರಾಜಕಾರಣವನ್ನೊಮ್ಮೆ ಕಣ್ಣು ಬಿಟ್ಟು ನೋಡಿ ಎಂದು ಹೇಳಲು ಬಯಸುತ್ತೇನೆ. ಮತ್ತಷ್ಟು ಓದು »

26
ಸೆಪ್ಟೆಂ

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||

– ರಾಘವೇಂದ್ರ ನಾವಡ
ki28lotus_jpg_g_ki_2599608fಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!! ಮತ್ತಷ್ಟು ಓದು »

4
ಜುಲೈ

ಯಡಿಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದೇನು?

– ರಾಕೇಶ್ ಶೆಟ್ಟಿ

800x480_IMAGE55065639ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಪ್ರಧಾನಿ ಮೋದಿಯವರ ಭಾಷಣದಿಂದ ಪ್ರೇರಿತರಾಗಿ, ತಾನು ಸ್ವಇಚ್ಚೆಯಿಂದ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡು ೨೦೧೪ರ ಮೇ ೨೨ನೇ ತಾರೀಖಿನಂದು ಯಡ್ಯೂರಪ್ಪನವರು ಮೋದಿಯವರಿಗೊಂದು ಪತ್ರ ಬರೆದಿದ್ದರು.

ಆ ಪತ್ರ ಬರೆದು ಸುಮಾರು ೨ ವರ್ಷಗಳ ನಂತರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಯಡ್ಯೂರಪ್ಪನವರಿಗೆ ಒಲಿಯಿತು. ಈ ಬೆಳವಣಿಗೆಗೆ ಪಕ್ಷದೊಳಗೆ ಹಾಗೂ ಹೊರಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಅಧ್ಯಕ್ಷರಾಗುತ್ತಿದ್ದಂತೆ ‘ಎಲ್ಲರನ್ನೂ ವಿಶ್ವಾಸಕ್ಕೆ’ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದಿದ್ದರು ಯಡ್ಯೂರಪ್ಪ. ಮುಖ್ಯಮಂತ್ರಿಯಾಗಿದ್ದಾಗ ಸ್ವಯಂಕೃತಾಪರಾಧದ ಜೊತೆಗೆ, ಬೆನ್ನಿಗಂಟಿಕೊಂಡಿದ್ದ ಭಟ್ಟಂಗಿಗಳು, ಕಿಂಕರರಂತೆ ಆಜೂ-ಬಾಜೂ ಕಾಣಿಸಿಕೊಳ್ಳುತ್ತಿದ್ದವರು, ಪಕ್ಷದೊಳಗಿನ ಮೀರ್ ಸಾಧಿಖರ ಕುತಂತ್ರವೂ ಸೇರಿ ಅಧಿಕಾರವನ್ನೂ ಕಳೆದುಕೊಂಡು, ಕಾನೂನಿನ ಪೆಟ್ಟನ್ನು ತಿಂದು, ಕಡೆಗೆ ನ್ಯಾಯಾಲಯದಲ್ಲಿ ಜಯಿಸಿ ಸಾಕು ಸಾಕೆನಿಸುವಷ್ಟು ಹೈರಾಣಾದ ನಂತರ ದೊರೆತ ರಾಜ್ಯಾಧಕ್ಷ್ಯ ಹುದ್ದೆಯನ್ನು ಯಡ್ಯೂರಪ್ಪನವರು ಸರಿಯಾಗಿ ನಿರ್ವಹಿಸಿದ್ದಾರೆಯೇ? ಮತ್ತಷ್ಟು ಓದು »

26
ಮಾರ್ಚ್

ಕಾಲದ ಕನ್ನಡಿ: ನೈತಿಕತೆಗೆ ಇ೦ಬು ನೀಡದ,ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

– ಕೆ.ಎಸ್ ರಾಘವೇಂದ್ರ ನಾವಡ

ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ … ಈಗ ಈ ಲೇಖನ..

ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

ಮತ್ತಷ್ಟು ಓದು »