ವಿಷಯದ ವಿವರಗಳಿಗೆ ದಾಟಿರಿ

Posts tagged ‘ರಾಘವೇಶ್ವರ ಸ್ವಾಮೀಜಿ’

1
ಜೂನ್

ಒಂದು ಹೊತ್ತು ಉಪವಾಸ ಮಾಡಿ, ಅದರ ಹಣದಲ್ಲಿ ಗೋವುಗಳನ್ನು ಉಳಿಸಿಕೊಳ್ಳುವ ವಿನೂತನ ಅಭಿಯಾನ #GiveUpAMeal ಹಿಂದಿನ ಕತೆ..

ಅಜಿತ್ ಶೆಟ್ಟಿ
ಹೆರಂಜೆ ದೊಡ್ಡಮನೆ.

ಗೋಹತ್ಯೆ ತಡೆಗಾಗಿನ ಕೂಗು ಭಾರತದಲ್ಲಿ ಬಹಳ ಹಿಂದಿನದು, ಇತ್ತೀಚಿನ ಡಿಜಿಟಲ್ ಇಂಡಿಯಾ ಯುಗದಲ್ಲಿ ಅದು ಸೋಷಿಯಲ್ ಮೀಡಿಯದಲ್ಲೂ ಸದ್ದು ಮಾಡುತ್ತಿದೆ.. ನಮ್ಮ ಯುವಕರು ಗೋಹತ್ಯೆ ನಿಲ್ಲಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಡಿದುಕೊಳ್ಳುವಾಗ ಸೋಕಾಲ್ಡ್ ಪ್ರಗತಿಪರರು ಸೋಷಿಯಲ್ ಮೀಡಿಯದಲ್ಲಿರುವ ಮಂದಿಗೆ ತಲೆ ಇಲ್ಲ, ಅವರಿಗೆ ಅಷ್ಟು ಪ್ರೀತಿ ಇದ್ದರೆ ಒಂದೆರಡು ಗೋವುಗಳನ್ನು ಸಾಕಲಿ, ಗೋಶಾಲೆ ನಡೆಸಲಿ ಹೀಗೆ ಹಲವಾರು ಪ್ರಶ್ನೆಗಳನ್ನೊಡ್ಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ನಮ್ಮ ಯುವಕರ ಕೂಗು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇದೆಯಾ ಅಥವಾ ನಿಜವಾಗಲೂ ಗೋವುಗಳನ್ನು ಉಳಿಸಿಕೊಳ್ಳುವ ಕಾಳಜಿ ಇದೆಯಾ, ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರ ಎಂದು ನೋಡಿದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಡೆದ ಒಂದು ಅಭಿಯಾನ ಯುವ ಜನತೆ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಭಾವಿಸುತ್ತೇನೆ. ಈ ಅಭಿಯಾನದ ಒಳಗೆ ಹೋಗುವ ಮೊದಲು ಅಭಿಯಾನದ ಪೂರ್ವ ಪ್ರೇರಣೆಯ ಕಡೆ ಒಮ್ಮೆ ಗಮನ ಹರಿಸೋಣ. ನಮ್ಮ ದೇಶದಲ್ಲಿ ಗೋವು ಪ್ರತಿ ರೈತನ ಬೆನ್ನೆಲುಬು, ದೇಶಿ ಗೋವುಗಳು ಅವನತಿ ಹೊಂದಿದರೆ ರಾಸಾಯನಿಕ ಮುಕ್ತ ಕೃಷಿ ಎನ್ನುವುದು ಕನಸಾಗುವುದು ನಿಶ್ಚಿತ. ಇಂತಹ ಸತ್ಯಗಳು ನಮ್ಮ ಸಮಾಜಕ್ಕೆ, ಜನನಾಯಕರಿಗೆ ಗೊತ್ತಿಲ್ಲ ಅಂತೇನು ಇಲ್ಲ.. ಆದರೂ ಓಲೈಕೆ ರಾಜಕಾರಣಕ್ಕಾಗಿ ಗೋಹತ್ಯೆಯನ್ನು ನಿಲ್ಲಿಸಲಾಗುತ್ತಿಲ್ಲ, ನಾವು ಗಾಂಧೀಜಿ ಅನುಯಾಯಿಗಳು ಎಂದವರೇ ದಶಕಗಳ ಕಾಲ ದೇಶವನ್ನು ಆಳಿದರೂ ಗಾಂಧಿ ಕನಸನ್ನು ನನಸು ಮಾಡದೆ ಹೊಣೆಗೇಡಿಗಳಂತೆ ವರ್ತಿಸಿದ್ದಾರೆ. ಇವೆಲ್ಲವುಗಳ ನಡುವೆ ಬರಗಾಲದಿಂದ ಸಾಯುತ್ತಿರುವ ಜಾನುವಾರುಗಳನ್ನು ಉಳಿಸಿ ರೈತನ ಬಾಳನ್ನು ಬಲಗೊಳಿಸುವ ಪ್ರಾಮಾಣಿಕ ಕಾರ್ಯವನ್ನಾದರೂ ಮಾಡುತ್ತಾರೆ ಎಂದುಕೊಂಡರೆ ಅದನ್ನು ಮಾಡದೇ ಅದರಲ್ಲೂ ಭ್ರಷ್ಟಾಚಾರ ಮಾಡಿಕೊಂಡು ಮಜ ಮಾಡುತ್ತಿದ್ದಾರೆ.. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಮಠಗಳು, ಸಂಘ ಸಂಸ್ಥೆಗಳು ರೈತರ ಬೆನ್ನಿಗೆ ನಿಂತು ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರ ಒಂದು ಭಾಗವಾಗಿ ರಾಮಚಂದ್ರ ಪುರ ಮಠವು ಸಹ ೧೪ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. Read more »

19
ಏಪ್ರಿಲ್

‘ಅಪರೇಷನ್ ಪೀಠತ್ಯಾಗ’ದ ಸೂತ್ರದಾರರು ಯಾರು?

– ಮಂಜುನಾಥ ಹೆಗಡೆ

FB_IMG_1460892892983ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, “ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಷಡ್ಯಂತ್ರ” ಎಂದು ಷರಾ ಬರೆದಿದ್ದಲ್ಲದೇ, CID ಮತ್ತು FSLಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ಯಾರು, ಯಾಕಾಗಿ ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಹಗೆ ಸಾಧಿಸಲು ಹೊರಟಿದ್ದಾರೆ ? ಯಾರು ಮಠವನ್ನು ಇನ್ನಿಲ್ಲವಾಗಿಸುವ “ಷಡ್ಯಂತ್ರ” ಮಾಡುತ್ತಿದ್ದಾರೆ? ಆಮೂಲಾಗ್ರವಾಗಿ ಎಲ್ಲವನ್ನೂ ಪರಿಶೀಲಿಸಬೇಕಾಗಿದೆ!

ಸುಮಾರು 1200 ವರ್ಷಗಳ ಹಿಂದೆ ಆದಿಶಂಕರಾಚಾರ್ಯರು ಗೋಕರ್ಣದ ಸಮೀಪದ ಅಶೋಕೆಯಲ್ಲಿನ ಸೌಮ್ಯ ಪ್ರಕೃತಿಯ ಮಡಿಲಲ್ಲಿ ಧರ್ಮಪಾಲನೆಗಾಗಿ ಮಠವೊಂದನ್ನು ಸ್ಥಾಪಿಸಿ ತಮ್ಮ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು ತಮ್ಮಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾನಂದರನ್ನು ಪೀಠಾಧಿಪತಿಯನ್ನಾಗಿ ಮಾಡಿ ಗೋಕರ್ಣ ದೇವಾಲಯದ ಆಡಳಿತವೂ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಕೊಡುತ್ತಾರೆ. ಇದು ರಾಜಗುರುಪೀಠವಾಗಿದ್ದು ಸಮಾಜದ ಅಂತರಂಗ ಮತ್ತು ಬಹಿರಂಗ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲಿಂದ ಇಲ್ಲಿನವರೆಗೂ ಶ್ರೀಮಠದ ಮಾರ್ಗದರ್ಶನದಲ್ಲಿ ಧರ್ಮಪಾಲನೆ ನಡೆಯುತ್ತಾ ಬಂದಿದೆ. ಶಂಕರರಿಂದ ಆರಂಭಿಸಿ 35 ತಲೆಮಾರುಗಳು ಕಳೆದಿವೆ. ಪ್ರಸ್ತುತ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು 36ನೇ ಪೀಠಾಧೀಶರಾಗಿರುತ್ತಾರೆ. ಶ್ರೀಗಳ ಪ್ರೇರಣೆಯಂತೆ ಬಿಂದು-ಸಿಂಧು, ಮುಷ್ಟಿಭಿಕ್ಷೆ, ವಿದ್ಯಾನಿಧಿ, ಕಾಮದುಘಾ, ಗುರುಕುಲ, ಭಾರತೀ ವಿದ್ಯಾಲಯಗಳು, ಗ್ರಾಮರಾಜ್ಯ, ವಿದ್ಯಾನಿಧಿ, ಜೀವನದಾನ ಮೊದಲಾದ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭಗೊಂಡವು. ಅಷ್ಟಾಗಿ ಮಠದ ಸಂಪರ್ಕ ಇಲ್ಲದವರೂ ಮಠಕ್ಕೆ ಬರಲಾರಂಭಿಸಿದರು! ಮಠದ ಪ್ರಸಿದ್ಧಿಯೂ ಜಾಸ್ತಿಯಾಗುತ್ತಾ ಬಂತು! ಬರೀ ಜಪ-ತಪ-ಅನುಷ್ಠಾನಗಳೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ! ಆದರೆ ಇದು ರಾಜಗುರು ಪೀಠ. ಇಲ್ಲಿ ಕಾವಿಯೂ ಇದೆ, ಕಿರೀಟ-ಶ್ವೇತಛತ್ರಗಳೂ ಇವೆ! ಸಮಾಜದಲ್ಲಿ ನಡೆಯುವ ಅಧರ್ಮ ಕಾರ್ಯಗಳ ನಿಗ್ರಹವೂ ಪೀಠದ ಹೊಣೆಯಾಗಿರುತ್ತದೆ! Read more »

6
ಏಪ್ರಿಲ್

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

– ಕೆ ಎಸ್ ರಾಘವೇಂದ್ರ ನಾವಡ

08-1444299163-raghaveshwaraswamijiಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ಮೊನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅಂತರಿಕ ಯುದ್ಧ” ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ ! ಹಿಂದೂಗಳು ಹಿಂದೂಗಳ ಬೆಳವಣಿಗೆಯನ್ನು ಸಹಿಸಲಾರರು ಎಂಬುದಕ್ಕೆ ಈ ಹಗರಣ ಮತ್ತೊಂದು ಉದಾಹರಣೆಯಷ್ಟೇ!! Read more »