ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ. ಮತ್ತಷ್ಟು ಓದು
ವೈಚಾರಿಕತೆಯ ಹೆಸರಿನಲ್ಲಿ ವಸಾಹತುಪ್ರಜ್ಞೆಯನ್ನು ನೆಕ್ಕುತ್ತಿರುವ ಬುದ್ಧಿಜೀವಿಗಳು
– ವಿನಾಯಕ ಹಂಪಿಹೊಳಿ
ವಿಶ್ವವಾಣಿಯಲ್ಲಿ ೮-ಮೇ-೨೦೧೬ ರಂದು ಪ್ರಕಟವಾದ ಕೆ. ಎಸ್. ಭಗವಾನ್ ಅವರ “ಯಜ್ಞದ ಹೆಸರಿನಲ್ಲಿ ಮುಗ್ಧರನ್ನು ಮುಕ್ಕುತ್ತಿರುವ ದೈವಜ್ಞರು” ಎಂಬ ಲೇಖನವು ಎರಡು ಭ್ರಮೆಗಳ ಆಧಾರದ ಮೇಲೆ ನಿಂತಿದೆ. ಮೊದಲನೆಯದು ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಪ್ರಾಣಿಬಲಿಯು ನಡೆದಿದೆ ಎಂಬ ಭ್ರಮೆ ಮತ್ತು ಎರಡನೆಯದು ಪಾಶ್ಚಿಮಾತ್ಯ ವಿದ್ವಾಂಸರು ವೈದಿಕ ಸಂಪ್ರದಾಯಗಳು ಹೊಂದಿರುವ ಸಾಹಿತ್ಯದ ಕುರಿತು ಕಟ್ಟಿಕೊಟ್ಟ ಚಿತ್ರಣವೇ ಸತ್ಯ ಎಂಬ ಭ್ರಮೆ. ಮತ್ತೂರಿನಲ್ಲಿ ಪ್ರಾಣಿಬಲಿ ನಡೆದಿಲ್ಲ ಎಂಬ ಪ್ರಾಥಮಿಕ ವರದಿಯನ್ನು ಸರ್ಕಾರೀ ಅಧಿಕಾರಿಗಳೇ ನೀಡಿರುವುದರಿಂದ ನೇರವಾಗಿ ಎರಡನೇ ಭ್ರಮೆಗೆ ಬರೋಣ. ಮತ್ತಷ್ಟು ಓದು